Asianet Suvarna News Asianet Suvarna News

ನಾಯಿ ಮರಿ ಕಿಡ್ನಾಪ್ ಮಾಡಿದ ಕೋತಿ, 3 ದಿನದ ಸತತ ಕಾರ್ಯಾಚರಣೆ ಬಳಿಕ ರಕ್ಷಣೆ!

  • 2 ವಾರದ ಪುಟ್ಟ ನಾಯಿಮರಿಯನ್ನು ಅಪಹರಿಸಿದ ಕೋತಿ
  • ನಾಯಿ ಮರಿ ರಕ್ಷಿಸಲು ಸ್ಥಳೀಯರ ಹರಸಾಹಸ
  • 3 ದಿನಗಳ ಬಳಿಕ ನಾಯಿ ಮರಿ ರಕ್ಷಣೆ, ಹಸಿವಿನಿಂದ ಬಳಲಿದ ನಾಯಿ
Puppy rescued after wild monkey kidnapped it and held it hostage for 3 days Malaysia ckm
Author
Bengaluru, First Published Sep 23, 2021, 3:46 PM IST

ಮಲೇಷಿಯಾ(ಸೆ.23):  ನಾಯಿ ಮರಿಗಳನ್ನು(Puppy) ಅಪಹರಿಸಿದ ಹಲವು ಪ್ರಕರಣಗಳು ವರದಿಯಾಗಿದೆ. ಆದರೆ ಇಂದೊಂದು ವಿಚಿತ್ರ ಅಪಹರಣ ಪ್ರಕರಣ. ಕಾರಣ ಇಲ್ಲಿ ನಾಯಿ ಮರಿಯನ್ನು ಕಿಡ್ನಾಪ್ ಮಾಡಿರುವುದು ಕಾಡು ಕೋತಿ(Wild Monkey). ಕೇವಲ 2 ವಾರದ ಪುಟ್ಟ ನಾಯಿ ಮರಿಯನ್ನು ಕೋತಿ ಅಪಹರಿಸಲಾಗಿದೆ. ಸತತ 3 ದಿನಗಳ ಕಾರ್ಯಾಚರಣೆಯಿಂದ ನಾಯಿ ಮರಿಯನ್ನು ರಕ್ಷಿಸಿದ ಘಟನೆ ಮಲೇಷಿಯಾದಲ್ಲಿ(Malaysia) ನಡೆದಿದೆ.

ಸಮುದ್ರದಲ್ಲಿ ಮುಳುಗುತ್ತಿದ್ದ ಮಗುವನ್ನು ರಕ್ಷಿಸಿದ ನಾಯಿ, ಪ್ರಾಮಾಣಿಕತೆಗಿಲ್ಲ ಸರಿಸಾಟಿ!

ಮಲೇಷಿಯಾದ ತಮನ ಲೆಸ್ತಾರಿ ಪುತ್ರ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ. ಈ ಪ್ರಾಂತ್ಯದಲ್ಲಿ ಕಳೆದ ಎರಡು ತಿಂಗಳಿನಿಂದ ಕಾಡು ಕೋತಿಗಳ ಕಾಟ  ವಿಪರೀತವಾಗಿದೆ. ಆದರೆ ಆಹಾರಕ್ಕಾಗಿ ಅಲೆದಾಡುವ ಕೋತಿ, ಮನೆಯಲ್ಲಿ ಹಾಯಾಗಿ ಮಲಗಿದ್ದ 2 ವಾರದ ಸಾರು ಎಂಬ ನಾಯಿ ಮರಿಯನ್ನು ಕೋತಿ ಅಪಹರಿಸಿದೆ.

ಕೋಳಿ ಮರಿಗೆ ಸಿಹಿ ಮುತ್ತು ನೀಡಿ ಬಿಗಿದಪ್ಪಿದ ಕೋತಿ ಮರಿ; ಹೃದಯಸ್ಪರ್ಶಿ ವಿಡಿಯೋ ವೈರಲ್!

ತಕ್ಷಣೆ ಮಾಲೀಕರು ಕೋತಿಯಿಂದ ನಾಯಿ(Dog) ಮರಿಯನ್ನು ರಕ್ಷಿಸಲು ಹರಸಾಹಸ ಮಾಡಿದ್ದಾರೆ. ಇತ್ತ ಸ್ಥಳೀಯರು ಸೇರಿಕೊಂಡಿದ್ದಾರೆ. ಗಾಬರಿಗೊಂಡ ಕೋತಿ, ವಿದ್ಯುತ್ ಕಂಬ ಏರಿದೆ. ಇದರಿಂದ ಮಾಲೀಕ ಮತ್ತಷ್ಟು ಚಿಂತಾಕ್ರಾಂತನಾಗಿದ್ದಾನೆ. ಸ್ಥಳೀಯರು ನಾಯಿ ಮರಿ ರಕ್ಷಿಸಲು ತಿಂಡಿ, ಹಣ್ಣುಗಳನ್ನು ಕೋತಿಯತ್ತ ಎಸೆದಿದ್ದಾರೆ. ಆದರೆ ಪ್ರಯೋಜನವಾಗಿಲ್ಲ. ಕೋತಿ ನಾಯಿ ಮರಿಯನ್ನು ಬಿಟ್ಟುಕೊಡುವ ಯಾವುದೇ ಲಕ್ಷಣಗಳು ಗೋಚರಿಸಲಿಲ್ಲ. ಅರಣ್ಯಾಧಿಕಾರಿಗಳಿಗೆ ಕರೆ ಮಾಡಿದ ಸ್ಥಳೀಯರು ನೆರವು ಕೇಳಿದ್ದಾರೆ. ಇತ್ತ ಅರಣ್ಯಾಧಿಕಾರಿಗಳು ಕೂಡ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಆದರೆ ಕೋತಿ ಮಾತ್ರ ನಾಯಿ ಮರಿಯನ್ನು ಮರಳಿ ನೀಡಲಿಲ್ಲ.

ನಾಯಿಗಾಗಿ ಇಡೀ ಏರ್ ಇಂಡಿಯಾ ಬ್ಯುಸಿನೆಸ್ ಕ್ಲಾಸ್ ಕ್ಯಾಬಿನ್ ಬುಕ್ ಮಾಡಿದ ಮಾಲೀಕ

ಸ್ಥಳೀಯರು ಹೆಚ್ಚಾಗಿ ಜಮಾಯಿಸಿದ್ದಾರೆ. ಈ ವೇಳೆ ಕೋತಿ, ನಾಯಿ ಮರಿಯನ್ನು ಎತ್ತಿಕೊಂಡು ಕಾಡಿನೊಳಕ್ಕೆ(Forest) ಹೋಗಿದೆ. ನಾಯಿ ಮರಿಯೂ ಗಾಬರಿಗೊಂಡಿದೆ. ಕಾರ್ಯಾಚರಣೆ(rescue operation) ಎರಡನೇ ದಿನಕ್ಕೆ ಸಾಗಿದೆ. ಆದರೆ ನಾಯಿ ಮರಿಯನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಇತ್ತ ನಾಯಿ ಮರಿ ಹಸಿವಿನಿಂದ(Food) ಬಳಲಿ ಹೋಗಿದೆ. 3ನೇ ದಿನ ನಾಯಿಯನ್ನು ಹೇಗಾದರು ಮಾಡಿ ರಕ್ಷಿಸಲು ಮುಂದಾದ ಸ್ಥಳೀಯರು ಕೋತಿಯತ್ತ ಕೋಲು, ಕಲ್ಲುಗಳನ್ನು ಎಸೆದು ಗಾಬರಿಗೊಳಿಸಿದ್ದಾರೆ.

ಮಾಸ್ಕ್ ಧರಿಸಿದ ಕೋತಿ: ನೋಡಿ ಕಲಿತುಕೊಳ್ಳಿ ಎಂದ ನೆಟ್ಟಿಗರು

ಇದರಿಂದ ಕೋತಿ, ನಾಯಿ ಮರಿಯನ್ನು ಕೆಳಕ್ಕೆ ಎಸೆದಿದೆ. ಪೊದೆಯ ಮೇಲೆ ಬಿದ್ದ ನಾಯಿ ಮರಿ ಯಾವುದೇ ಅಪಾಯವಿಲ್ಲದೆ ಮಾಲೀಕರ ಕೈಸೇರಿದೆ. ತಕ್ಷಣವೇ ನಾಯಿ ಮರಿಗೆ ಆರೈಕೆ ಮಾಡಲಾಗಿದೆ. ಸದ್ಯ ನಾಯಿ ಮರಿ ಆರೋಗ್ಯವಾಗಿದೆ. ಇತ್ತ ಕೋತಿ ಕಾಡಿನತ್ತ ಓಡಿ ಹೋಗಿದೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ಕೋತಿ ಹಾಗೂ ನಾಯಿ ಮರಿಗೆ ಯಾವುದೇ ಗಾಯಗಳಾಗಿಲ್ಲ. ಇತ್ತ 3 ದಿನ ಒತ್ತೆಯಾಳಾಗಿ(Hostage) ಇಟ್ಟುಕೊಂಡಿದ್ದ ನಾಯಿ ಮರಿಗೆ ಕೋತಿ ಯಾವುದೇ ಗಾಯ(Injury) ಮಾಡಿಲ್ಲ. ಆದರೆ ಹಸಿವಿನಿಂದ ಬಳಲಿದ ನಾಯಿ ಮರಿ ಸಂಪೂರ್ಣ ವಾಗಿ ಅಸ್ವಸ್ಥಗೊಂಡಿತ್ತು. 

ಅಂತಿಮ ದರ್ಶನಕ್ಕೂ ಬಂದಿದ್ದ ವಾನರ ಅಸ್ಥಿ ವಿಸರ್ಜನಾ ಕಾರ್ಯದಲ್ಲೂ ಭಾಗಿ..!

ಕೋತಿಗಳ ಉಪಟಳ ಹೆಚ್ಚಾಗಿರುವ ಕಾರಣ ಲೆಸ್ತಾರಿ ಪುತ್ರ ಪ್ರಾಂತ್ಯದ ಜನ ದೂರು ನೀಡಿದ್ದಾರೆ.  ದೂರಿಗೆ ಸ್ಪಂದಿಸಿದ ಸ್ಥಳೀಯ ಆಡಳಿತ ಕೋತಿಗಳ ಉಪಟಳ ತಡೆಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ. ಆದರೆ ಇನ್ನೂ ಸ್ಥಳೀಯ ಆಡಳಿತದ ಕೆಲ ಪ್ರಯತ್ನ ನಡೆಸಿದರೂ ಕೋತಿಗಳ ಕಾಟ ಕಡಿಮೆಯಾಗಿಲ್ಲ. 

ಜಾಲಿಯಾಗಿ ಪಾರಾಗ್ಲೈಡಿಂಗ್ ಮಾಡಿದ ನಾಯಿ: ವಿಡಿಯೋ ವೈರಲ್

Follow Us:
Download App:
  • android
  • ios