ಮಾಸ್ಕ್ ಎತ್ತಿ ಮುಖಕ್ಕೆ ಧರಿಸಿ ಕೋತಿ ನೋಡಿ ಕಲಿತುಕೊಳ್ರಪ್ಪಾ ಅಂತಿದ್ದಾರೆ ನೆಟ್ಟಿಗರು

ಮಾಸ್ಕ್ ಧರಿಸಿ ಎಂದು ಜನರಿಗೆ ಹೇಳಬೇಕು. ಜನ ಮಾಸ್ಕ್ ಧರಿಸಬೇಕಾದರೆ ಸರ್ಕಾರ ದಂಡ ವಿಧಿಸಬೇಕು. ಆದರೆ ಇದ್ಯಾವುದರ ಅರಿವಿಲ್ಲದ ಕೋತಿಯೊಂದು ಎಷ್ಟು ಶಿಸ್ತಾಗಿ ಎತ್ತಿ ಮಾಸ್ಕ್ ಹಾಕಿದೆ ನೋಡಿ. ಈ ವಿಡಿಯೋ ಈಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು ಕೋತಿನ ನೋಡಿ ಕಲಿತುಕೊಳ್ರಪ್ಪಾ ಅಂತಿದ್ದಾರೆ ನೆಟ್ಟಿಗರು.

ಜಗತ್ತನ್ನು ಕೊರೋನಾ ವೈರಸ್ ವ್ಯಾಪಿಸಿದ ಮೇಲೆ ಮಾಸ್ಕ್ ಜನರ ನಿತ್ಯೋಪಯೋಗಿ ಬಳಕೆಯ ವಸ್ತುವಾಗಿ ಬದಲಾಗಿದೆ. ನಮ್ಮ ಸುತ್ತಲಿನ ಪ್ರಾಣಿಗಳು ಸಹ ಇದನ್ನು ನೋಡಿ ತಿಳಿದುಕೊಂಡಿವೆ ಎಂಬುದಕ್ಕೆ ಉದಾಹರಣೆಯೊಂದು ಸಿಕ್ಕಿದೆ. ಕಪ್ಪು ಬಣ್ಣದ ಮಾಸ್ಲಕ್ ಧರಿಸಿ ಸುತ್ತಾಡುತ್ತಿರುವ ಕೋತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಗಾಯಗೊಂಡು ಖುದ್ದು ಆಸ್ಪತ್ರೆಗೆ ಬಂದ ಕೋತಿ, ಹಠ ಹಿಡಿದು ಚಿಕಿತ್ಸೆ ಪಡೆದೇ ಹೋಯ್ತು!

22 ಸೆಕೆಂಡುಗಳ ವಿಡಿಯೋ ಕ್ಲಿಪ್‌ನಲ್ಲಿ, ಮಾಸ್ಕ್ ಹಾಕಲು ಪ್ರಯತ್ನಿಸುತ್ತಿರುವ ಕೋತಿಯನ್ನು ನೋಡಿ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ. ಮಂಗ ತನ್ನ ಸಂಪೂರ್ಣ ಮುಖವನ್ನು ಮಾಸ್ಕ್‌ನಿಂದ ಮುಚ್ಚಿಕೊಂಡು ಮುಂದೆ ನಡೆಯಲು ಪ್ರಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಸ್ವಲ್ಪ ದೂರ ನಡೆದ ನಂತರ, ಕೋತಿಯ ಮಾಸ್ಕ್ ಕೆಳಗೆ ಬೀಳುತ್ತದೆ. ಇದು ಪ್ರಾಣಿಗಳನ್ನು ಗೊಂದಲಕ್ಕೀಡು ಮಾಡುತ್ತದೆ. ಪ್ರತಿಯೊಬ್ಬರೂ ಮಾಸ್ಕ್ ಧರಿಸಲು ಬಯಸುತ್ತಾರೆ ಎಂದು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಸಂತಾ ವೈರಲ್ ಕ್ಲಿಪ್ ಶೇರ್ ಮಾಡಿ ಬರೆದಿದ್ದಾರೆ.

Scroll to load tweet…

ವೀಡಿಯೊದ ಮೂಲವನ್ನು ದೃಢಪಡಿಸಲಾಗಿಲ್ಲವಾದರೂ ಟ್ವಿಟರ್‌ನಲ್ಲಿ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಮಾಜಿ ಅಮೆರಿಕನ್ ಬ್ಯಾಸ್ಕೆಟ್‌ಬಾಲ್ ಆಟಗಾರ ರೆಕ್ಸ್ ಚಾಪ್‌ಮನ್ ಟ್ವಿಟರ್‌ನಲ್ಲಿ ಮರುಹಂಚಿಕೊಂಡ ನಂತರ ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Scroll to load tweet…

ಆನ್‌ಲೈನ್‌ನಲ್ಲಿ ಶೇರ್ ಆದಾಗಿನಿಂದ ಈ ಕ್ಲಿಪ್ 1.9 ಮಿಲಿಯನ್ ವ್ಯೂಸ್ ಪಡೆದಿದೆ. ಕೆಲವು ಬಳಕೆದಾರರು ಪ್ರಾಣಿಗಳ ವೀಕ್ಷಣಾ ಶಕ್ತಿಯನ್ನು ಶ್ಲಾಘಿಸಿದರೆ, ಇತರರು ಮಾಸ್ಕ್‌ನ ಅಸಮರ್ಪಕ ವಿಲೇವಾರಿಯನ್ನು ಟೀಕಿಸಿದ್ದಾರೆ.

Scroll to load tweet…