Asianet Suvarna News Asianet Suvarna News

ಶ್ರೀ ಸಾಮಾನ್ಯನನ್ನು ವರಿಸಿದ ಜಪಾನ್ ರಾಣಿ : ರಾಯಲ್ ಲೈಫಿಗೆ ಗುಡ್ ಬೈ!

*ಪ್ರೀತಿಗಾಗಿ ರಾಯಲ್ಟಿ ಬಿಟ್ಟ ರಾಜಕುಮಾರಿ
*ಹಣಕಾಸಿನ ವಿವಾದಕ್ಕೆ ಮದುವೆ ವಿಳಂಬ 
*ಹತ್ತು ಕೋಟಿ ಬೇಡವೆಂದ ಮಾಕೊ!

Princess Mako of Japan marries common man loses royal status
Author
Bengaluru, First Published Oct 26, 2021, 4:18 PM IST

ಟೋಕಿಯೋ (ಅ. 26) : ಜಪಾನ್‌ನ ರಾಜಕುಮಾರಿ ಮಾಕೊ (Mako) ಮಂಗಳವಾರ ತನ್ನ ವಿಶ್ವವಿದ್ಯಾನಿಲಯದ ಪ್ರಿಯತಮ ಕೆಯಿ ಕೊಮುರೊ (Kei Komuro) ಜತೆ ವಿವಾಹವಾಗಿದ್ದಾರೆ. ಈ ಮೂಲಕ ತನ್ನ ರಾಜಮನೆತನದ ಸ್ಥಾನಮಾನವನ್ನು ರಾಜಕುಮಾರಿ ಕಳೆದುಕೊಂಡಿದ್ದಾರೆ. ಮದುವೆಯ ನಂತರ ದಂಪತಿಗಳು ಅಮೆರಿಕಾಗೆ (United states) ತೆರಳಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಜಪಾನ್ ಇಂಟರ್‌ನೆಟ್ ಸ್ಪೀಡ್‌ ವಿಶ್ವ ದಾಖಲೆ: 1 ಸೆಕೆಂಡ್‌ನಲ್ಲಿ 57 ಸಾವಿರ ಸಿನಿಮಾ ಡೌನ್‌ಲೋಡ್

ರಾಜ ಕುಟುಂಬದ ಹೊರಗಿನವರನ್ನು ಮದುವೆಯಾಗುವ ರಾಜ ಕುಟುಂಬದ ಸ್ತ್ರೀಯರಿಗೆ ರಾಜಮನೆತನದಿಂದ ನೀಡಲಾಗುವ ರಾಯಲ್ಟಿ ನೀಡಲಾಗುವುದಿಲ್ಲ. ಜಪಾನ್‌ನ (Japan) ಅಂದಿನ ಚಕ್ರವರ್ತಿ ಅಕಿಹಿಟೊ ರವರ 29 ವರ್ಷದ ಮರಿ ಮೊಮ್ಮಗಳಾದ ಮಕೊ ಮತ್ತು ಆಕೆಯ ಕಾಲೇಜಿನ ಸಹಪಾಠಿಯಾಗಿದ್ದ ಕೆಯಿ ಕೊಮುರೊ 2017ರಲ್ಲಿ ತಾವು ಎಂಗೇಜ್‌ಮೆಂಟ್‌  ಮಾಡಿಕೊಂಡಿದ್ದೇವೆ ಎಂದಿದ್ದರು.  ಕೊಮುರೊ ಅವರ ತಾಯಿ ಮತ್ತು ಆಕೆಯ ಮಾಜಿ ಪ್ರಿಯತಮನ  ನಡುವಿನ ಹಣಕಾಸಿನ ವಿವಾದದ ಕಾರಣಕ್ಕೆ ಮದುವೆ ಮುಂದಕ್ಕೆ ಹಾಕಿಕೊಂಡು ಬರಲಾಗಿತ್ತು. ಈಗ ಯಾವುದೇ ಸಭೆ ಸಮಾರಂಭ ಅಥವಾ ಔತಣಕೂಟ ಇಲ್ಲದೇ ಮದುವೆ ಮಾಡಿಕೊಂಡಿದ್ದಾರೆ ಮಾಕೊ.

10 ಕೋಟಿ ಬೇಡವೆಂದ ರಾಜಕುಮಾರಿ!

ಮಾಕೊ ಅವರು ರಾಜಮನೆತನದ ಮಹಿಳೆಯರಿಗೆ ತಾವು ಹೊರಹೋಗುವ ಸಮಯದಲ್ಲಿ ಸಾಮಾನ್ಯವಾಗಿ ನೀಡಲಾಗುವ ದೊಡ್ಡ ಪಾವತಿಯನ್ನು ತಿರಸ್ಕರಿಸಿದ್ದಾರೆ. ವರದಿಯ ಪ್ರಕಾರ ಈ ಮೊತ್ತವು ಸುಮಾರು ಹತ್ತು ಕೋಟಿ ರೂಪಾಯಿ (153 ಮಿಲಿಯನ್ ಯೆನ್) - 153 million Japanese yen ಎಂದು ಹೇಳಲಾಗಿದೆ. ವರದಿಯ ಪ್ರಕಾರ ಮಾಕೊ ಬಗೆಗಿನ ಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡಿದ್ದರಿಂದ ಅವರ ಮೇಲೆ ಮಾನಸಿಕ ಒತ್ತಡ ಬಿದ್ದಿದ್ದು ಈಗ ಈ ಒತ್ತಡದಿಂದ ಹೊರಬಂದಿದ್ದಾರೆ ಎಂದು ಹೇಳಲಾಗಿದೆ. ಈ ಮೂಲಕ ತನ್ನ ಸಹಪಾಠಿಯನ್ನು ಮದುವೆಯಾಗಲು ತನ್ನ  ರಾಜಮನೆತನದ ಸ್ಥಾನಮಾನವನ್ನು ಬಿಟ್ಟು ಕೊಡುವುದಾಗಿ ಹೇಳಿದ್ದಾರೆ.

ಇಂಡೋನೇಷ್ಯಾ ಅಧ್ಯಕ್ಷರ ಪುತ್ರಿ ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರ!

ರಾಜಕುಮಾರಿ ಮಾಕೊ ಗುಲಾಬಿ ಹೂವುಗಳ ಸಣ್ಣ ಪುಷ್ಪಗುಚ್ಛವನ್ನು ಹಿಡಿದುಕೊಂಡು, ತನ್ನ ಕುಟುಂಬಕ್ಕೆ ವಿದಾಯ ಹೇಳಿದಳು. ತನ್ನ ಸಹೋದರಿಯನ್ನು ತಬ್ಬಿಕೊಂಡು ಮಾಧ್ಯಮ ಮತ್ತು ತನ್ನ ಪಾಲಕರಾದ ರಾಜ ಅಕಿಶಿನೊ ಮತ್ತು ರಾಣಿ ಕಿಕೊರಿಗೆ ನಮಸ್ಕರಿಸಿ ಹೊರ ನಡೆದಿದ್ದಾಳೆ. ನಕಾರಾತ್ಮಕ ಪತ್ರಿಕಾ ವರದಿಯ ಹೊರತಾಗಿಯೂ, ಅನೇಕ ಜಪಾನಿಗಳು  ಮದುವೆಯನ್ನು ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ. ಯುವರಾಜ ಆಕಿಶಿನೋ ಕಳೆದ ವರ್ಷ, ತಾನು ಮಗಳ ಮದುವೆಯನ್ನು ಬೆಂಬಲಿಸುತ್ತೇನೆ , ಆದರೆ  ಆಕೆ ಯಾವ  ರೀತಿಯಲ್ಲಾದರೂ ಜನರ ಪ್ರೀತಿ ಪಡೆದುಕೊಂಡರೆ  ಒಳ್ಳೆಯದು ಎಂದು ಹೇಳಿದ್ದರು.

ಬೆಂಗಳೂರಿನ ರಮ್ಯಾಗೆ ನ್ಯೂಯಾರ್ಕಲ್ಲಿ ಗೌರವ!

ಈ ಮದುವೆಗೆ ರಾಷ್ಟ್ರೀಯ ಮಟ್ಟದಲ್ಲಿ ವಿರೋಧ ಕೇಳಿ ಬಂದಿದ್ದರೂ ರಾಜಕುಮಾರಿ ಮಾತ್ರ ಹಿಂದೆ ಸರಿದಿರಲಿಲ್ಲ. ಗೆಳೆಯನನ್ನೇ ಮದುವೆಯಾಗುತ್ತೇನೆ ಎಂದು ಹೇಳಿದ್ದರು. ಈಗ ರಾಜಕುಮಾರಿ ಹೇಳಿದಂತೆ ಮಾಡಿ ತೋರಿಸಿದ್ದಾರೆ. ಸಾಮಾನ್ಯ ಹುಡಗನನ್ನು ಮದುವೆಯಾಗುವ ಮೂಲಕ ತಮ್ಮ ರಾಜಮನೆತನದ ಸ್ಥಾನಮಾನ ಕಳೆದುಕೊಂಡಿದ್ದಾರೆ. 

Follow Us:
Download App:
  • android
  • ios