Asianet Suvarna News Asianet Suvarna News

ಜಪಾನ್ ಇಂಟರ್‌ನೆಟ್ ಸ್ಪೀಡ್‌ ವಿಶ್ವ ದಾಖಲೆ: 1 ಸೆಕೆಂಡ್‌ನಲ್ಲಿ 57 ಸಾವಿರ ಸಿನಿಮಾ ಡೌನ್‌ಲೋಡ್

  • ಇಂಟರ್‌ನೆಟ್ ಸ್ಪೀಡ್‌ನಲ್ಲಿ ವಿಶ್ವ ದಾಖಲೆ ಬರೆದ ಜಪಾನ್
  • ಒಂದೇ ಸೆಕೆಂಡ್‌ನಲ್ಲಿ 57 ಸಾವಿರ ಸಿನಿಮಾ ಡೌನ್‌ಲೋಡ್ ಮಾಡ್ಬೋದು
Japan sets new Internet speed world record with data transfers at 319Tbps can download 57 thousand full movies in a second dpl
Author
Bangalore, First Published Sep 24, 2021, 5:56 PM IST

ಇಂಟರ್‌ನೆಟ್ ಜನಜೀವನವನ್ನು ಆವರಿಸಿಬಿಟ್ಟಿದೆ. ಶಾಪಿಂಗ್, ಫುಡ್ ಆರ್ಡರ್, ಗೇಮ್, ಸಿನಿಮಾ, ಮೀಟಿಂಗ್, ಕೆಲಸ ಎಲ್ಲದಕ್ಕೂ ಇಂಟರ್‌ನೆಟ್. ಕ್ಷಣಕಾಲ ಇಂಟರ್‌ನೆಟ್ ಸ್ವಲ್ಪ ನಿಧಾನವಾದರೆ ಆಗುವ ಅನುಭವ ಎಷ್ಟು ಕೆಟ್ಟದಿರುತ್ತೆ ಅಲ್ವಾ ? ಹಾಗಾಗಿ ಸ್ಪೀಡ್ ಇಂಟರ್‌ನೆಟ್ ಇದ್ರೆ ಪ್ರಪಂಚವೇ ಅಂಗೈಲಿ. ಎಲ್ಲವೂ ಲೀಲಾಜಾಲ, ಸುಸೂತ್ರ.

ಪ್ರಪಂಚದಾದ್ಯಂತದ ವರ್ಕ್‌ಫ್ರಂ ಹೋಂ ಸಾಮಾನ್ಯವಾಗಿರುವುದರಿಂದ ಹೆಚ್ಚಿನ ಇಂಟರ್ನೆಟ್ ವೇಗವು ಇಂದಿನ ಅಗತ್ಯವಾಗಿದೆ. ಇದರ ಮೇಲೆ ಕೆಲಸ ಮಾಡುತ್ತಾ, ಟೆಕ್ನಾಲಜಿ ಅಭಿವೃದ್ಧಿಪಡಿಸುವ ಪ್ರಯತ್ನ ನಡೆಯುತ್ತಲೇ ಇರುತ್ತದೆ. ಈಗ ಜಪಾನ್‌ನ(Japan) ಎಂಜಿನಿಯರ್‌ಗಳ ತಂಡವು ಅತಿ ವೇಗದ ಡೇಟಾ ವರ್ಗಾವಣೆಯನ್ನು ಸಾಧಿಸಿದೆ. ಅವರ ದಾಖಲೆಯು ಇಂಟರ್‌ನೆಟ್ ವೇಗದಲ್ಲಿ ವಿಶ್ವ ದಾಖಲೆ.

ಜಪಾನಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಅಂಡ್ ಕಮ್ಯೂನಿಕೇಶನ್ ಟೆಕ್ನಾಲಜಿ (NICT) ಯ ಎಂಜಿನಿಯರ್ ಗಳು ಈ ಅದ್ಭುತ ಸಾಧನೆಯನ್ನು ಸಾಧಿಸಿದ್ದಾರೆ. ಈಗ ಜೂನ್ 6-11 ರಿಂದ ನಡೆದ ಆಪ್ಟಿಕಲ್ ಫೈಬರ್ ಕಮ್ಯುನಿಕೇಶನ್ ಕುರಿತ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಸಂಶೋಧನಾ ಪ್ರಬಂಧವಾಗಿ ಪ್ರಕಟಿಸಲಾಗಿದೆ.

ಆಪಲ್‌ನಿಂದ ಹೊಸ ಟೆಕ್ನಾಲಜಿ; ಬಳಕೆದಾರರ ಆತಂಕ, ಖಿನ್ನತೆ ಗುರುತಿಸಲಿದೆ ಐಫೋನ್?

ಸಂಶೋಧನೆಯಲ್ಲಿ ಉಲ್ಲೇಖಿಸಿರುವಂತೆ, NICT ತಂಡವು ಸುಮಾರು 3,000 ಕಿಲೋಮೀಟರ್ ದೂರದಲ್ಲಿ ಡೇಟಾ ವರ್ಗಾವಣೆಗಾಗಿ ಪ್ರತಿ ಸೆಕೆಂಡಿಗೆ 319 ಟೆರಾಬಿಟ್ಸ್ (Tb/s) ವೇಗವನ್ನು ದಾಖಲಿಸಿದೆ. ಸಾಮಾನ್ಯ ತಾಮ್ರದ ಕೇಬಲ್‌ಗಳ ಬದಲಿಗೆ ಬೆಳಕನ್ನು ಬಳಸಿ ಡೇಟಾವನ್ನು ವರ್ಗಾಯಿಸಲು 0.125 ಮಿಮೀ ಸ್ಟ್ಯಾಂಡರ್ಡ್ ಹೊರ ವ್ಯಾಸದ 4-ಕೋರ್ ಆಪ್ಟಿಕಲ್ ಫೈಬರ್ ಅನ್ನು ಬಳಸುವ ಮೂಲಕ ಹೊಸ ತಂತ್ರಜ್ಞಾನವು ಹಳೆಯ ಇಂಟರ್ನೆಟ್ ವೇಗವನ್ನು ಮೀರಿಸಿದೆ. ಅಂದರೆ ಒಂದು ಸೆಕೆಂಡ್‌ನಲ್ಲಿ ಬರೋಬ್ಬರಿ 57 ಸಾವಿರ ಫುಲ್ ಮೂವಿಗಳನ್ನು ಡೌನ್‌ಲೋಡ್ ಮಾಡಬಹುದು.

ತಂಡವು 552-ಚಾನೆಲ್ ಲೇಸರ್ ಅನ್ನು ಬಳಸಿದ್ದು ಅದು ವಿವಿಧ ತರಂಗಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಎರಡು ರೀತಿಯ ಡೋಪ್ಡ್ ಫೈಬರ್ ಆಂಪ್ಲಿಫೈಯರ್‌ಗಳನ್ನು ಬಳಸಿದ ಮರುಬಳಕೆಯ ಪ್ರಸರಣ ಲೂಪ್‌ನ ಪ್ರಾಯೋಗಿಕ ಸೆಟಪ್ ಇದು. ವಿಶೇಷ ಆಂಪ್ಲಿಫೈಯರ್‌ಗಳು ಅಂತರ್ಜಾಲದ ವ್ಯಾಪ್ತಿ ಮತ್ತು ವೇಗವನ್ನು ಹೆಚ್ಚಿಸಲು ಸಹಾಯ ಮಾಡಿದೆ.

3000 ಕಿಲೋಮೀಟರ್ ದೂರದಲ್ಲಿ ಯಾವುದೇ ಕಾರ್ಯಕ್ಷಮತೆಯ ಕುಸಿತವಿಲ್ಲದೆ ತಂಡವು ವೇಗವಾಗಿ ಡೇಟಾ ವರ್ಗಾವಣೆಯನ್ನು ದಾಖಲಿಸಿದೆ. ಕುತೂಹಲಕಾರಿಯಾಗಿ, ನಮ್ಮ ಮನೆಗಳಲ್ಲಿ ವೈ-ಫೈಗಾಗಿ ನಿಯಮಿತವಾದ ಆಪ್ಟಿಕಲ್ ಫೈಬರ್ ಕೇಬಲ್‌ಗಳು ಈ ತಂತ್ರಜ್ಞಾನವನ್ನು ಬೆಂಬಲಿಸಬಹುದು ಎಂದು ಎಂಜಿನಿಯರ್‌ಗಳು ಹೇಳುತ್ತಾರೆ. ಆದರೂ ಕೆಲವು ಮಾರ್ಪಾಡುಗಳು ಬೇಕಾಗಬಹುದು.

Follow Us:
Download App:
  • android
  • ios