ಭಾರತ- ಯುಎಇ ಸಂಬಂಧ ಬಲಪಡಿಸುವ ಅಹ್ಲಾನ್ ಮೋದಿ ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅಬುಧಾಬಿಯಲ್ಲಿ ಆಯೋಜಿಸಲಾಗಿದೆ. ಫೆ.13ರಂದು ನಡೆಯುವ ಈ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದು, ಈಗಾಗಲೇ 60,000ಕ್ಕೂ ಹೆಚ್ಚು ಜನ ಕಾರ್ಯಕ್ರಮಕ್ಕೆ ನೋಂದಾಯಿಸಿಕೊಂಡಿದ್ದಾರೆ. 

ಅಬುಧಾಬಿ, ಯುಎಇ : ಯುಎಇಯಲ್ಲಿರುವ ಭಾರತೀಯ ಸಮುದಾಯವು ಭವ್ಯವಾದ ಸಾಂಸ್ಕೃತಿಕ ಸಂಭ್ರಮವನ್ನು ಆಯೋಜಿಸಲು ಸಿದ್ಧವಾಗಿದ್ದು, ಫೆಬ್ರವರಿ 13ರಂದು ನಡೆಯಲಿರುವ ಈ 'ಅಹ್ಲಾನ್ ಮೋದಿ' ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ.

ಭಾರತ ಮತ್ತು ಯುಎಇ ನಡುವಿನ ಏಕತೆ ಮತ್ತು ಸ್ನೇಹಕ್ಕೆ ಸಾಕ್ಷಿಯಾಗಲಿರುವ ಸಮಾರಂಭವನ್ನು ಫೆಬ್ರವರಿ 13ರ ಸಂಜೆ ಅಬುಧಾಬಿಯ ಜಾಯೆದ್ ಸ್ಪೋರ್ಟ್ಸ್ ಸಿಟಿ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ. 

ಈ ಕಾರ್ಯಕ್ರಮವು ಭಾರತದ 'ವಸುದೈವ ಕುಟುಂಬ' ದೃಷ್ಟಿಕೋನ ಹೊಂದಿದ್ದು, ಜಾಗತಿಕ ಸಹೋದರತ್ವವನ್ನು ಪ್ರತಿಪಾದಿಸುವ ಹಾಗೂ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಒಳಗೊಳ್ಳುವಿಕೆಯನ್ನು ಪ್ರಚುರಪಡಿಸುತ್ತದೆ. 

ಈ ಬೃಹತ್ ಸಮಾರಂಭಕ್ಕಾಗಿ ಈಗಾಗಲೇ 60,000ಕ್ಕೂ ಹೆಚ್ಚು ಜನರು ನೋಂದಾಯಿಸಿಕೊಂಡಿದ್ದು, ಸಂಘಟನಾ ಸಮಿತಿಯು ಅಬುಧಾಬಿ ಅಧಿಕಾರಿಗಳೊಂದಿಗೆ ನಿಖರವಾದ ಸಮನ್ವಯದಲ್ಲಿ ತೊಡಗಿಸಿಕೊಂಡಿದೆ. ಇದು ಯುಎಇಯಲ್ಲಿ ಪ್ರಧಾನಿ ಮೋದಿಗೆ ಇರುವ ಆಳವಾದ ಬೆಂಬಲವನ್ನು ತೋರಿಸುತ್ತದೆ. 

ಈ ಈವೆಂಟ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳು ಕ್ರಿಯಾತ್ಮಕವಾಗಿ ಭಾಗವಹಿಸುತ್ತಿದ್ದು, ಯುವಕರಿಗೆ ಭಾರತೀಯ ಪರಂಪರೆಯಲ್ಲಿ ಹೆಚ್ಚು ಆಸಕ್ತಿ ಮೂಡಿಸುವ ಉದ್ದೇಶ ಹೊಂದಲಾಗಿದೆ. 

ಈವೆಂಟ್‌ನ ಪ್ರಮುಖ ಮುಖ್ಯಾಂಶಗಳು ಹೀಗಿವೆ:

- 700 ಕ್ಕೂ ಹೆಚ್ಚು ಸಾಂಸ್ಕೃತಿಕ ಕಲಾವಿದರಿಂದ ಭಾರತೀಯ ಕಲೆಗಳ ಪ್ರದರ್ಶನ.
- ಭಾರತದ ಪ್ರಾದೇಶಿಕ ವೈವಿಧ್ಯತೆ ತೋರುವ 150ಕ್ಕೂ ಹೆಚ್ಚು ಭಾರತೀಯ ಸಮುದಾಯ ಗುಂಪುಗಳಿಂದ ಸಕ್ರಿಯ ಭಾಗವಹಿಸುವಿಕೆ.
- ಎಮಿರೇಟ್‌ಗಳಾದ್ಯಂತ ಸಾವಿರಾರು ಬ್ಲೂ ಕಾಲರ್ ಕೆಲಸಗಾರರ ಏಕೀಕರಣ.

ಈ ಕಾರ್ಯಕ್ರಮಕ್ಕೆ ಹೆಚ್ಚು ಹೆಣ್ಣುಮಕ್ಕಳು ನೋಂದಾಯಿಸಿಕೊಂಡಿದ್ದು ವಿಶೇಷ. ಅವರು ಮಹಿಳಾ ಸಬಲೀಕರಣ, ಕೋಮು ಸೌಹಾರ್ದತೆ ಮತ್ತು ಭಾಗವಹಿಸುವಿಕೆಯ ಮನೋಭಾವವನ್ನು ಸಾಕಾರಗೊಳಿಸುವ ಈವೆಂಟ್ ಅನ್ನು ಸಕ್ರಿಯವಾಗಿ ಪ್ರಚಾರ ಮಾಡುತ್ತಿದ್ದಾರೆ.

ಶೋಭಾ ರಿಯಾಲ್ಟಿಯ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಶ್ರೀ ಪಿಎನ್‌ಸಿ ಮೆನನ್ ಅವರು ಕಾರ್ಯಕ್ರಮದ ಬಗ್ಗೆ ವಿವರಿಸಿ, 'ಅಹ್ಲಾನ್ ಮೋದಿ ಕೇವಲ ಒಂದು ಕಾರ್ಯಕ್ರಮವಲ್ಲ, ಇದು ವಿವಿಧತೆಯಲ್ಲಿ ಏಕತೆಯ ಆಚರಣೆಯಾಗಿದೆ, ಗಡಿಯುದ್ದಕ್ಕೂ ಪ್ರತಿಧ್ವನಿಸುತ್ತದೆ. ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ತೋರಿಸುವ ಇಂತಹ ಸಮಾರಂಭದಲ್ಲಿ ಭಾರತದ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗಿಯಾಗುತ್ತಿದ್ದಾರೆ. ಈ ಸ್ಮರಣೀಯ ಸಂದರ್ಭದ ಯಶಸ್ಸಿಗೆ ಹಾರೈಸುವೆ' ಎಂದಿದ್ದಾರೆ. 

'ಏಕತೆ, ಸೌಹಾರ್ದತೆ ಮತ್ತು ಭಾರತೀಯ ಸಂಸ್ಕೃತಿಯ ಉಲ್ಲಾಸಕ್ಕೆ ಸಾಕ್ಷಿಯಾಗಲಿರುವ ಈ ಸಂಜೆಯ ಈ ವೈಭವದ ಆಚರಣೆಯಲ್ಲಿ ಪಾಲ್ಗೊಳ್ಳಲು ನಾವು ಎಲ್ಲರನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇವೆ' ಎಂದವರು ಹೇಳಿದ್ದಾರೆ.

ಸಂಘಟನಾ ಸಮಿತಿಯ ಬಗ್ಗೆ:
ಸಂಘಟನಾ ಸಮಿತಿಯು ಸಮರ್ಪಿತ ಸ್ವಯಂಸೇವಕರು ಮತ್ತು ಸಮುದಾಯದ ನಾಯಕರನ್ನು ಒಳಗೊಂಡಿದೆ, ಭಾರತೀಯ ಸಂಸ್ಕೃತಿಯನ್ನು ಬೆಳೆಸುವ ಮತ್ತು ಭಾರತ ಮತ್ತು ಯುಎಇ ನಡುವಿನ ಬಾಂಧವ್ಯವನ್ನು ಬಲಪಡಿಸುವ ಧ್ಯೇಯ ಅವರದಾಗಿದೆ.

ಸಂಪರ್ಕ ಮಾಹಿತಿ:
ಡಾ ನಿಶಿ ಸಿಂಗ್
ನಿರ್ದೇಶಕ, ಸಂವಹನ.
ಅಹ್ಲಾನ್ ಮೋದಿ ತಂಡ
056 385 8056
ahlanmodi2024@gmail.com