ಸಿದ್ದರಾಮಯ್ಯಗೆ ಕುಂಕುಮ ಹಚ್ಚಿದ್ರೆ ಅಳಿಸಿಕೊಳ್ತಾರೆ, ಮುಸ್ಲಿಮರಿಂದ ತಾವೇ ಟೋಪಿ ಹಾಕಿಸ್ಕೋತಾರೆ: ಆರ್.ಅಶೋಕ್
ಹೆಸರಲ್ಲಿಯೇ ರಾಮ ಹೊಂದಿರುವ ಸಿದ್ದರಾಮಯ್ಯ ಅವರು ಕುಂಕುಮವನ್ನು ಬೇಡ ಎನ್ನುತ್ತಾರೆ. ಆದರೆ, ತಾವೇ ಹೋಗಿ ಮುಸ್ಲಿಮರ ಟೋಕಿ ಹಾಕೊಳ್ತಾರೆ.
ಬೆಂಗಳೂರು (ಫೆ.03): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕುಂಕುಮ ಹಚ್ಚಲು ಮುಂದಾದರೆ ಅವರೇ ಬೇಡ ಅಂತಾರೆ. ಒಂದು ವೇಳೆ ದೇವಸ್ಥಾನದಲ್ಲಿ ಕುಂಕುಮ ಹಚ್ಚಿದರೆ ಅವರೇ ಅಳಿಸಿಕೊಳ್ತಾರೆ. ಆದರೆ, ಮುಸ್ಲಿಮರು ಸುಮ್ಮನಿದ್ದರೂ ಅವರಿಂದ ಇಸ್ಲಾಂ ಟೋಪಿಯನ್ನು ಹಾಕಿಸಿಕೊಳ್ಳುತ್ತಾರೆ. ಸಿದ್ದರಾಮಯ್ಯನವರ ಹೆಸರಲ್ಲಿ ರಾಮ ಇದ್ದರೂ, ಹೃದಯದಲ್ಲಿ ಟಿಪ್ಪು ಸಿದ್ದಾಂತವನ್ನು ತುಂಬಿಕೊಂಡಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಟೀಕೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಆವರ ಹೆಸರಲ್ಲೆ ರಾಮ ಇದ್ದಾನೆ. ಅವರು ಕುಂಕುಮ ಇಟ್ರೆ ಅಳಿಸಿಕೊಳ್ತಾರೆ. ಆದರೆ, ಮುಸ್ಲಿಮರು ಟೋಪಿ ಹಾಕದಿದ್ದರೂ ಅವರೇ ಹೋಗಿ ಟೋಪಿ ಹಾಕಿಸಿಕೊಳ್ಳುತ್ತಾರೆ. ಟಿಪ್ಪು ಸಿದ್ದಾಂತ ಹೃದಯದಲ್ಲಿ ತುಂಬಿಕೊಂಡಿದ್ದಾರೆ. ಟಿಪ್ಪು ಮೈಮೇಲೆ ಬಂದ ಹಾಗೆ ಆಡುತ್ತಾರೆ. ಸಿದ್ದರಾಮಯ್ಯ ಕುಂಕುಮ ಇಟ್ಟುಕೊಳ್ಳಲಿಲ್ಲಾ ಅಂದ್ರೆ ಏನು ಲಾಸ್ ಇಲ್ಲ. ಆದರೆ, ಕೇಸರಿ ಬಣ್ಣ ಹಾಗೂ ಕುಂಕುಮಕ್ಕೆ ಗೌರವ ಕೊಡುವವರು ಹನುಮ ಧ್ವಜ ಹಾರಿಸುತ್ತಾರೆ. ಹೀಗಾಗಿ, ಸಿದ್ದರಾಮಯ್ಯ ಅವರು ಹಾರಿಸೋದು ಅವಶ್ಯಕತೆ ಇಲ್ಲ. ಮೊದಲು ಹೃದಯದಲ್ಲಿ ರಾಮನನ್ನ ಇಟ್ಟಕೊಳ್ಳಲಿ. ಆಮೇಲೆ ರಾಮಮಂದಿರಕ್ಕೆ ಹಣ ಬಿಡುಗಡೆ ಮಾಡಿ ಎಂದು ಕಿಡಿ ಕಾರಿದರು.
ಬಿಜೆಪಿಯವರ ಸುಳ್ಳುಗಳನ್ನು ನಂಬಿ ಮೋಸ ಹೋಗಬೇಡಿ: ಸಿಎಂ ಸಿದ್ದರಾಮಯ್ಯ
ರಾಜ್ಯದಲ್ಲಿ ಲೂಟಿ ಮಾಡೋದಕ್ಕೆ ಕಾಂಗ್ರೆಸ್ ಸರ್ಕಾರ ಇದೆ ಎಂದು ಸ್ವತಃ ಶಿವರಾಮ್ ಅವರೇ ಹೇಳಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ.40 ಪರ್ಸೆಂಟ್ ಲೂಟಿ ಇತ್ತು. ಆದರೆ, ಕಾಂಗ್ರೆಸ್ ಸರ್ಕಾರದಲ್ಲಿ ಶೇ.80 ಪರ್ಸೆಂಟ್ ಕಮಿಷನ್ ಪಡೆಯಲಾಗುತ್ತಿದೆ ಎಂದು ಅವರೇ ಹೇಳುತ್ತಾರೆ. ಇದು ನಾನು ಆಪಾದನೆ ಮಾಡಿಲ್ಲ. ಅವರ ಪಾರ್ಟಿಯವರೇ ಮಾಜಿ ಸಚಿವರು ಹಿರಿಯ ನಾಯಕ ಬಿ ಶಿವರಾಮ್ ಅವರೆ ಹೇಳಿದ್ದಾರೆ. ಈ ಮೂಲಕ ತಮ್ಮದು ಲೂಟಿ ಕೋರ ಪಾರ್ಟಿ ಎಂದು ಹೇಳಿದ್ದಾರೆ. ಇಂತಹ ಹೇಳಿಕೆ ನೀಡಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೋಟಿಸ್ ಕೊಟ್ಟಿದ್ದಾರೆ. ಏನೇ ಆದರೂ ಶಿವರಾಮ್ ಹೇಳಿದ್ದನ್ನ ನಾನು ಒಪ್ಪಿಕೊಳ್ತಿನಿ ಎಂದು ಹೇಳಿದರು.
ಇನ್ನು ಮೇಕೆದಾಟು ವಿಸ್ತೃತ ಯೋಜನಾವರದಿಯಲ್ಲಿ (ಡಿಪಿಆರ್) ಅನ್ನು ವಾಪಾಸ್ ಕಳಿಸಲಾಗಿದೆ. ಇದಕ್ಕೆ ತಮಿಳುನಾಡು ಸರ್ಕಾರ ಆಕ್ಷೇಪ ಸಲ್ಲಿಸಿದ್ದರಿಂದ ಅದಕ್ಕೆ ಹಿನ್ನಡೆಯಾಗಿದೆ. ತಮಿಳುನಾಡಿನವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬ್ರದರ್ಸ್ ಅಂತಾರೆ. ಹೋಟೆಲಿನಲ್ಲಿ ಶಿವಕುಮಾರ್ ಅವರಿಗೆ ತುಪ್ಪದ ಅನ್ನ ತಿನಿಸಿದ್ದಾರೆ. ಈಗ ಬ್ರದರ್ಸ್ ಹತ್ತಿರ ಮಾತಾಡಿ ಮೇಕೆದಾಟು ಯೋಜನೆಗೆ ಅನುಮತಿಯನ್ನು ಕೊಡಿಸಲಿ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.
ಸಂಬಂಧದಲ್ಲಿ ಅಣ್ಣ ತಂಗಿಯಾದ್ರೂ ಲವ್ ಮಾಡಿದ್ರು, ಮನೆಯವರು ವಿರೋಧಿಸಿದ್ದಕ್ಕೆ ಸಾವಿಗೆ ಶರಣಾದ್ರು!
ಕೇಂದ್ರದಿಂದ ರಾಜ್ಯಕ್ಕೆ ಬರ ಪರಿಹಾರ ನೀಡುವ ವಿಚಾರದ ಬಗ್ಗೆ ರಾಜ್ಯ ಸರ್ಕಾರ ಆರೋಪ ಮಾಡುತ್ತಿರುವ ಬಗ್ಗೆ ಮಾತನಾಡಿ, ಇದ್ರಲ್ಲಿ ಅನ್ಯಾಯವಾಗಿದೆ ಅಂತ ಮಾತ್ರ ಸಿದ್ದರಾಮಯ್ಯನರವೇ ಹೇಳೋಕೆ ಹೋಗಬೇಡಿ. ನಾನು ಕಂದಾಯ ಸಚಿವನಾಗಿದ್ದಾಗ ಎಷ್ಟು ಹಣ ಬಿಡುಗಡೆ ಮಾಡಿದ್ದೆ ಅಷ್ಟು ಬಿಡುಗಡೆ ಮಾಡಿ ಸಾಕು. ನಾವು ಸ್ಲ್ಯಾಬ್ ಮಾಡಿ ರೈತರಿಗೆ ಪರಿಹಾರವಾಗಿ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರ ಕೊಡ್ಲಿ ಅಂತ ನಾವು ಕಾಯಲಿಲ್ಲ. ನಮ್ಮ ಅವಧಿಯಲ್ಲಿ ನಾನು ಮೊದಲು ಹಣ ಬಿಡುಗಡೆ ಮಾಡಿದೆ. ನಾ ಎಷ್ಟು ಬಿಡುಗಡೆ ಮಾಡಿದ್ದೆನೋ ಕನಿಷ್ಠ ಅಷ್ಟಾದರೂ ಬಿಡುಗಡೆ ಮಾಡಿ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಕಿಡಿಕಾರಿದರು.