Asianet Suvarna News Asianet Suvarna News

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಕಮಲಾಗೆ ಕೈಕೊಡ್ತಾರಾ ಮುಸ್ಲಿಮರು ?

ಈ ಬಾರಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ತೀವ್ರ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ. ಒಂದೆಡೆ ಡೆಮಾಕ್ರಟಿಕ್ ಪಕ್ಷದ ವಿರುದ್ದ ಮುಸ್ಲಿಮರು ಸಿಟ್ಟಾಗಿದ್ದಾರೆ. ಇದು ಕಮಲಾ ಹ್ಯಾರಿಸ್ ತಲೆನೋವಿಗೆ ಕಾರಣವಾಗಿದೆ. ಈ ಬಾರಿ ಮುಸ್ಲಿಮ್ ಸಮುದಾಯ ಕಮಲಾ ಹ್ಯಾರಿಸ್‌ ಬೆಂಬಲಿಸುವುದು ಅನುಮಾನವಾಗಿದೆ. ಆದರೆ ಭಾರತೀಯರ ಬೆಂಬಲ ಯಾರಿಗೆ?

President election 2024 American Muslims anti Biden stand may severely hit kamala Harris ckm
Author
First Published Sep 4, 2024, 6:46 PM IST | Last Updated Sep 4, 2024, 6:46 PM IST

ಡೆಮಾಕ್ರೆಟಿಕ್ ಪಕ್ಷದ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ ಕಮಲಾ ಹ್ಯಾರಿಸ್ ಗೆ ಹೊಸ ತಲೆನೋವು ಶುರುವಾಗಿದೆ. ಕಾರಣ. ಡೆಮಾಕ್ರೆಟಿಕ್ ಪಕ್ಷದ ವಿರುದ್ಧ ಮುಸ್ಲಿಮರು ಸಿಟ್ಟಾಗಿರುವುದು. ಇದಕ್ಕೆ ಕಾರಣ ಡೆಮಾಕ್ರೆಟಿಕ್ ಪಕ್ಷದ ಹಾಲಿ  ಅಧ್ಯಕ್ಷ ಜೋ ಬೈಡನ್ ನಿಲುವು. ಪ್ಯಾಲಸ್ತೀನ್ ದೇಶದ ಭಾಗವಾದ ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಸೇನೆ ಕಳೆದ 10 ತಿಂಗಳಿಂದ ಬಾಂಬ್‌ಗಳ ಮಳೆಯನ್ನೇ ಸುರಿಸಿದೆ. ಹಮಾಸ್ ಉಗ್ರರು, ಜನ ಸಾಮಾನ್ಯರು, ಮಹಿಳೆಯರು ಹಾಗೂ ಮಕ್ಕಳೂ ಸೇರಿದಂತೆ 40 ಸಾವಿರಕ್ಕೂ ಹೆಚ್ಚು ಮಂದಿ ಉಸಿರು ಚೆಲ್ಲಿದ್ದಾರೆ. ಈ ಯುದ್ಧ ನಿಲ್ಲಿಸಿ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ತಾಕೀತು ಮಾಡುತ್ತಿದ್ರೂ ಕ್ಯಾರೆ ಎಂದಿಲ್ಲ. ಜತೆಗೆ, ಬಿಲಿಯನ್‌ಗಟ್ಟಲೆ ಡಾಲರ್ ಹಣ ಹಾಗೂ ಶಸ್ತ್ರಾಸ್ತ್ರಗಳನ್ನೂ ಪೂರೈಕೆ ಮಾಡುತ್ತಿದ್ದಾರೆ. ಇದು ಮುಸ್ಲಿಂ ಮತದಾರರ ಕೆಂಗಣ್ಣಿಗೆ ಗುರಿಯಾಗಿದೆ.

ಅಮೆರಿಕ ದೇಶದ ಮಿಚಿಗನ್ ರಾಜ್ಯ ಮುಸ್ಲಿಂ ಸಮುದಾಯದ ಬಾಹುಳ್ಯ ಹೊಂದಿದೆ. ಈ ರಾಜ್ಯದಲ್ಲಿ ಅರಬ್ ಹಾಗೂ ಮಧ್ಯ ಪ್ರಾಚ್ಯ ಪ್ರಾಂತ್ಯದ ಮೂಲದ ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅದರಲ್ಲೂ ಮಿಚಿಗನ್ ರಾಜ್ಯದ ಡಿಯರ್‌ಬಾರ್ನ್‌ ನಗರದಲ್ಲಿ ಬರೋಬ್ಬರಿ 1 ಲಕ್ಷದ 10 ಸಾವಿರ ಮುಸ್ಲಿಮರ ಮನೆಗಳಿವೆ. ಅರಬ್ ಅಮೆರಿಕನ್ನರ ಸಾಂಸ್ಕೃತಿಕ ಕೇಂದ್ರವಾಗಿಯೂ ಈ ನಗರದ ಮುಸ್ಲಿಮರು, ಕಮಲಾಗೆ ಕೈ ಕೊಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

 ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್‌ಗೆ ಒಂದೇ ವಾರದಲ್ಲಿ ದಾಖಲೆಯ 1650 ಕೋಟಿ ರೂ ದೇಣಿಗೆ!

ಅಮೆರಿಕ ಅಧ್ಯಕ್ಷೀಯ ಚುನಾವಣೆ ವೇಳೆ ಮುಸ್ಲಿಂ ಸಮುದಾಯದ ಮತಗಳು ಕೈ ತಪ್ಪುವ ಭೀತಿ ಅರಿತಿದ್ದ ಕಮಲಾ,  ಇಸ್ರೇಲ್ - ಹಮಾಸ್ ಯುದ್ಧವನ್ನು ನಿಲ್ಲಿಸುವ ಹಾಗೂ ಕದನ ವಿರಾಮ ಘೋಷಣೆಯ ಭರವಸೆ ನೀಡಿದ್ದರು. ತನ್ನನ್ನು ತಾನು ರಕ್ಷಿಸಿಕೊಳ್ಳುವ ಇಸ್ರೇಲ್‌ನ ಹಕ್ಕನ್ನೂ ರಕ್ಷಿಸೋದಾಗಿ ಹೇಳಿದ್ದರು. ಇಷ್ಟಾದರೂ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮುಸ್ಲಿಂ ಮತದಾರರ ಮನ ಗೆಲ್ಲಲು ಕಮಲಾ ಹ್ಯಾರಿಸ್ ಹರಸಾಹಸಪಡುವಂತಾಗಿದೆ. 

ಕಮಲಾ ಬೆನ್ನಿಗೆ ನಿಂತ ಭಾರತೀಯರು 
ಈ ಮಧ್ಯೆ, ಕಮಲಾ ಪರ ಭಾರತ ಮೂಲದ ಅಮೆರಿಕನ್ನರು ಬೆನ್ನಿಗೆ ನಿಂತಿದ್ದಾರೆ. ಕಮಲಾ ಪರ ಮತಯಾಚನೆಗೆ ಅಭಿಯಾನವನ್ನೂ ಆರಂಭಿಸಿದ್ದಾರೆ. ಅಮೆರಿಕವನ್ನು ಮುನ್ನಡೆಸುವ ಭಾರತೀಯ ಪರಂಪರೆಯ ಮೊದಲ ವ್ಯಕ್ತಿಯಾಗಿ ಕಮಲಾರನ್ನು ಆಯ್ಕೆ ಮಾಡಿ, ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಇತಿಹಾಸ ನಿರ್ಮಿ ಸುವ ಗುರಿಯನ್ನು ಹೊಂದಿರುವುದಾಗಿ ಪ್ರಚಾರ ಕೈಗೊಂಡಿದ್ದಾರೆ.
‘ಇದೇ ಮೊದಲು ಬಾರಿಗೆ ಭಾರತಮೂಲದ ತಾಯಿಯನ್ನು ಹೊಂದಿರುವ ಅಭ್ಯರ್ಥಿ ಚುನಾವಣಾ ಕಣದಲ್ಲಿದ್ದಾರೆ. ಕಮಲಾ,  ಭಾರತೀಯ ಪರಂ ಪರೆ ಮತ್ತು ಸಂಸ್ಕೃತಿ  ಅರಿತವರು. ಕಮಲಾ ಎಂ ಬ ಹೆಸರಿನವರು ಈ ದೇ ಶದ ಅತ್ಯುನ್ನತ ಹುದ್ದೆಗೆ ಸ್ಪರ್ಧಿ ಸುವುದು ಅಮೆರಿಕದ ಇತಿಹಾಸದಲ್ಲಿ ಎಂದಿಗೂ ಸಂಭವಿಸಿಲ್ಲ. ಹೀ ಗಾಗಿ ನಾವು ಭಾರತೀ ಯ ಅಮೆರಿಕನ್ನರು ಪಕ್ಷದ ಗೆರೆಯನ್ನು ಮೀರಿ ಕಮಲಾರನ್ನು  ಬೆಂಬಲಿಸುತ್ತೇವೆ ಎನ್ನುತ್ತಿದೆ ಪ್ರಚಾರಕಾರರ ತಂಡ. 

ಉತ್ತರ ಕೆರೊಲಿನಾ, ವಿಸ್ಕಾನ್ಸಿನ್, ಮಿಷಿಗನ್, ಪೆನ್ಸಿಲ್ವೇ ನಿಯಾ, ಅರಿಜೊನಾ ಮತ್ತು ಜಾರ್ಜಿ ಯಾ ರಾಜ್ಯಗಳನ್ನು ಪ್ರಮುಖವಾಗಿ ಗುರುತಿಸಲಾಗಿದ್ದು, ಅಲ್ಲಿ ಭಾರತೀ ಯ ಅಮೆರಿಕನ್ನರನ್ನು ಚುನಾವಣೆಯಲ್ಲಿ ಭಾಗಿಯಾಗುವಂ ತೆ ಪ್ರೇರೇಪಿಸಿ, ಭಾರತೀ ಯ ಮೂಲದ ಕಮಲಾರನ್ನು ಅಮೆರಿಕ ಅಧ್ಯಕ್ಷರನ್ನಾಗಿಸಲು ಮತ ಹಾಕುವಂತೆ ಅಭಿಯಾನ ನಡೆಸಲು ಯೋಜಿಸಲಾಗಿದೆ.

ಬೈಡೆನ್ ನಿರ್ಗಮನ ಮೊದಲೇ ಹೇಳಿದ ಜ್ಯೋತಿಷಿಯಿಂದ ಅಮೆರಿಕ ಮುಂದಿನ ಅಧ್ಯಕ್ಷ ಕುರಿತು ಭವಿಷ್ಯ!
 

Latest Videos
Follow Us:
Download App:
  • android
  • ios