ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್‌ಗೆ ಒಂದೇ ವಾರದಲ್ಲಿ ದಾಖಲೆಯ 1650 ಕೋಟಿ ರೂ ದೇಣಿಗೆ!
ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರೆಟ್ ಪಕ್ಷದ ಅಭ್ಯರ್ಥಿಯಾಗುವ ಮುಂಚೂಣಿ ನಾಯಕಿ ಕಮಲಾ ಹ್ಯಾರಿಸ್‌ಗೆ ದಾಖಲೆ ಪ್ರಮಾಣದ ದೇಣಿಗೆ ಹರಿದುಬಂದಿದೆ.
ವಾಷಿಂಗ್ಟನ್ (ಜು.29): ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರೆಟ್ ಪಕ್ಷದ ಅಭ್ಯರ್ಥಿಯಾಗುವ ಮುಂಚೂಣಿ ನಾಯಕಿ ಕಮಲಾ ಹ್ಯಾರಿಸ್‌ಗೆ ದಾಖಲೆ ಪ್ರಮಾಣದ ದೇಣಿಗೆ ಹರಿದುಬಂದಿದೆ. ರೇಸ್‌ನಿಂದ ಹಿಂದೆ ಸರಿದಿದ್ದ ಹಾಲಿ ಅಧ್ಯಕ್ಷ ಜೋ ಬೈಡೆನ್ ಕಳೆದ ಭಾನುವಾರವಷ್ಟೇ ಕಮಲಾ ಹೆಸರನ್ನು ಅನುಮೋದಿಸಿದ್ದರು. ಅದಾದ ಒಂದು ವಾರದಲ್ಲಿ ದಾಖಲೆ ಎನ್ನಬಹುದಾದ 1650 ಕೋಟಿ ರು.ಗಿಂತಲೂ ಹೆಚ್ಚಿನ ಹಣ ಚುನಾವಣಾ ದೇಣಿಗೆಯಾಗಿ ಸಂಗ್ರಹವಾಗಿದೆ. ಈ ಪೈಕಿ ಮೊದಲ ಬಾರಿಗೆ ದೇಣಿಗೆ ನೀಡಿದವರ ಪ್ರಮಾಣವೇ ಹೆಚ್ಚಿದೆ. ಇದು ತಳ್ಳಮಟ್ಟದಿಂದಲೂ ಕಮಲಾಗೆ ಉತ್ತಮ ಬೆಂಬಲ ಇದೆ ಎನ್ನುವುದುನ್ನು ತೋರಿಸುತ್ತದೆ ಎಂದು ಕಮಲಾರ ಚುನಾವಣಾ ತಂಡ ಹೇಳಿದೆ.
ಕಮಲಾ ಗೆದ್ದರೆ ಅಮೆರಿಕದ ಸಾವು, ಮೂರನೇ ವಿಶ್ವಯುದ್ಧ ಖಚಿತ: ಅಧ್ಯಕ್ಷ ಅಭ್ಯರ್ಥಿ ಸ್ಫೋಟಕ ಹೇಳಿಕೆ
ಟ್ರಂಪ್ ವಿರುದ್ಧ ಸ್ಪರ್ಧೆಗೆ ಕಮಲಾಗೆ ಭೀಮಬಲ, ಒಬಾಮಾ ದಂಪತಿ ಬೆಂಬಲ
ಅಟ್ಲಾಂಟಾ: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರೆಟಿಕ್ ಪಕ್ಷದಿಂದ ಕಮಲಾ ಹ್ಯಾರಿಸ್ ಸ್ಪರ್ಧೆಗೆ ಅಮೆರಿಕದ ಮಾಜಿ ಅಧ್ಯಕ್ಷ ನಾಯಕ ಬರಾಕ್ ಒಬಾಮಾ ಮತ್ತು ಅವರ ಪತ್ನಿ ಮಿಶೆಲ್ ಒಬಾಮಾ ಅನುಮೋದಿಸಿದ್ದಾರೆ. ಈ ಮೂಲಕ ರಿಪಬ್ಲಿಕನ್ ಪಾರ್ಟಿ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿರುದ್ಧ ಸ್ಪರ್ಧಿಸಲು ಕಮಲಾಗೆ ಭೀಮಬಲ ಬಂದಂತಾಗಿದೆ.
ಕಳೆದ ಶುಕ್ರವಾರ ಬರಾಕ್ ಒಬಾಮಾ ಮತ್ತು ಮಿಶೆಲ್ ದಂಪತಿಗಳು ಕಮಲಾ ಹ್ಯಾರಿಸ್ ಸ್ಪರ್ಧೆಗೆ ದೂರವಾಣಿ ಕರೆ ಮಾಡಿ ಅನುಮೋದಿಸಿದ್ದರು. ಅಲ್ಲದೇ‘ನಿಮ್ಮ ಬಗ್ಗೆ ಹೆಮ್ಮೆ ಪಡುತ್ತೇವೆ. ಚುನಾವಣೆಗೆ ಬೇಕಾದ ಬೆಂಬಲ ನೀಡುತ್ತೇವೆ. ಇದು ಐತಿಹಾಸಿಕವಾಗಲಿದೆ’ ಎಂದು ಇಬ್ಬರು ಕೂಡ ಹೇಳಿಕೊಂಡಿದ್ದಾರೆ. ಕಮಲಾ ಹಾಗೂ ಒಬಾಮಾ ದಂಪತಿ ಫೋನ್‌ನಲ್ಲಿ ಮಾತಾಡುವ ವಿಡಿಯೋ ವೈರಲ್ ಆಗಿತ್ತು.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಐತಿಹಾಸಿಕ ಮೈಲಿಗಲ್ಲು!
ಇತ್ತೀಚಗೆ ಸ್ಪರ್ಧೆ ಕಣದಿಂದ ಹಿಂದೆ ಸರಿದ ಜೋ ಬೈಡನ್ ಕಮಲಾಗೆ ಹ್ಯಾರಿಸ್‌ಗೆ ಬೆಂಬಲವನ್ನು ಸೂಚಿಸಿದ್ದರು. ಆದರೆ ಒಬಾಮಾ ಮಾತ್ರ ಮೌನ ವಹಿಸಿ ಕುತೂಹಲಕ್ಕೆ ಕಾರರಣರಾಗಿದ್ದರು. ಅಲ್ಲದೆ, ಕಮಲಾ ಪರ ಒಬಾಮಾಗೆ ಮನಸ್ಸಿಲ್ಲ ಎಂಬ ಸುದ್ದಿಗಳೂ ಹರಿದಾಡಿದ್ದವು. ಆದರೆ ಇದೀಗ ಒಬಾಮಾ ಕಮಲಾಗೆ ಬೆಂಬಲ ಘೋಷಿಸಿರುವ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರು ಟ್ರಂಪ್ ಎದುರು ಚುನಾವಣೆಗೆ ನಿಂತಿದ್ದಾರೆ
ಒಂದು ವೇಳೆ ಚುನಾವಣೆಯಲ್ಲಿ ಆಯ್ಕೆಯಾದರೆ ಮೊದಲ ಮಹಿಳೆ ಮತ್ತು ಅಮೆರಿಕದ ಅಧ್ಯಕ್ಷೆಯಾದ ಭಾರತ ಮೂಲದ ಮಹಿಳೆ ಎಂಬ ಗೌರವ ಒಲಿಯಲಿದೆ. ಈ ವರ್ಷ ನವೆಂಬರ್ 5 ರಂದು ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಈ ಚುನಾವಣೆಗಳಲ್ಲಿ 16 ಕೋಟಿ ನೋಂದಾಯಿತ ಮತದಾರರು ಅಮೆರಿಕದ 60ನೇ ಅಧ್ಯಕ್ಷರನ್ನು ಆಯ್ಕೆ ಮಾಡಲಿದ್ದಾರೆ.
ಭಾರತದ ನಂಟು ಹೇಗೆ? ಕಮಲಾ ಹ್ಯಾರಿಸ್ ಅವರ ತಾಯಿ ಚೆನ್ನೈ ಅವರು ತಂದೆ ಜಮೈಕಾ ಮೂಲದವರು. ಕಮಲಾಗೆ 7 ವರ್ಷದವರಿದ್ದಾಗ ಇಬ್ಬರೂ ವಿಚ್ಚೇದನ ಪಡೆದರು. ಕಮಲಾ ಹ್ಯಾರಿಸ್ ಅವರ ಅಜ್ಜ ಭಾರತದ ಸರ್ಕಾರದಲ್ಲಿ ಉನ್ನತ ಹುದ್ದೆಯಲ್ಲಿದ್ದರು ಮತ್ತು ಸ್ವಾತಂತ್ಯ ಹೋರಾಟಗಾರರಾಗಿದ್ದರು.