Asianet Suvarna News Asianet Suvarna News

ಬೈಡೆನ್ ನಿರ್ಗಮನ ಮೊದಲೇ ಹೇಳಿದ ಜ್ಯೋತಿಷಿಯಿಂದ ಅಮೆರಿಕ ಮುಂದಿನ ಅಧ್ಯಕ್ಷ ಕುರಿತು ಭವಿಷ್ಯ!

ಅಮೆರಿಕದ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿ ಯಾರು? ಈ ಕುರಿತು ಖ್ಯಾತ ಜ್ಯೋತಿಷಿ ಭವಿಷ್ಯ ನುಡಿದಿದ್ದಾರೆ. ಜೋ ಬೈಡೆನ್ ಈ ಬಾರಿಯ ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಮೊದಲೇ ನಿಖರವಾಗಿ ಭವಿಷ್ಯ ನುಡಿದಿದ್ದ ಈಕೆಯ ಸ್ಫೋಟಕ ಮಾತು ಭಾರಿ ಚರ್ಚೆಯಾಗುತ್ತಿದೆ.
 

Astrologer Amy Tripp predicts Donald trump would be next American president ckm
Author
First Published Jul 28, 2024, 9:35 PM IST | Last Updated Jul 28, 2024, 9:35 PM IST

ವಾಶಿಂಗ್ಟನ್(ಜು.28) ಅಮೆರಿಕ ಅಧ್ಯಕ್ಷೀಯ ಚುನಾವಣೆ ಇದೀಗ ಭಾರಿ ಕುತೂಹಲ ಕೆರಳಿಸಿದೆ. ಜೋ ಬೈಡೆನ್ ಸ್ಪರ್ಧೆಯಿಂದ ಹಿಂದೆ ಸರಿದ ಬೆನನಲ್ಲೇ ಇದೀಗ ಕಮಲಾ ಹ್ಯಾರಿಸ್ ಅಧಿಕೃತ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಮಾಜಿ ಅಧ್ಯಕ್ಷ ಬರಾಕ್ ಒಬಾಮ ಸೇರಿದಂತೆ ಹಲವು ಗಣ್ಯರು ಕಮಲಾ ಹ್ಯಾರಿಸ್‌ಗೆ ಬೆಂಬಲ ನೀಡಿದ್ದಾರೆ. ಇತ್ತ ಡೋನಾಲ್ಡ್ ಟ್ರಂಪ್ ಮತ್ತೆ ಅಧ್ಯಕ್ಷ ಪಟ್ಟಕ್ಕೇರಲು ಕಸರತ್ತು ನಡೆಯುತ್ತಿದೆ. ಇದರ ಬೆನ್ನಲ್ಲೇ ಅಮೆರಿಕದ ಖ್ಯಾತ ಜ್ಯೋತಿಷಿ ಆ್ಯಮಿ ಟ್ರಿಪ್ ಅಮೆರಿಕ ಮುಂದಿನ ಅಧ್ಯಕ್ಷ ಯಾರು ಅನ್ನೋ ಭವಿಷ್ಯ ನುಡಿದಿದ್ದಾರೆ. ಕಮಲಾ ಹ್ಯಾರಿಸ್ ಅಧ್ಯಕ್ಷೆಯಾಗಿ ಆಯ್ಕೆಯಾಗುವುದಿಲ್ಲ, ಈ ಬಾರಿ ಡೋನಾಲ್ಡ್ ಟ್ರಂಪ್ ಮತ್ತೆ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ ಎಂದ ಆ್ಯಮಿ ಭವಿಷ್ಯ ನುಡಿದಿದ್ದಾರೆ.

ಕೆಲ ತಿಂಗಳ ಹಿಂದೆ ಜೋ ಬೈಡೆನ್ ಕುರಿತು ಆ್ಯಮಿ ನುಡಿದ ಭವಿಷ್ಯ ಪಕ್ಕಾ ಆಗಿತ್ತು. ಜೋ ಬೈಡೆನ್ ಈ ಬಾರಿ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಭವಿಷ್ಯ ನುಡಿದಿದ್ದರು. ಇದರಂತೆ ಜೋ ಬೈಡೆನ್ ಈಗಾಗಲೇ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಇದನ್ನು ನಿಖರವಾಗಿ ಆ್ಯಮಿ ಹೇಳಿದ್ದರು. ಹೀಗಾಗಿ ಇದೀಗ ಟ್ರಂಪ್ ಮತ್ತೆ ಅಧ್ಯಕ್ಷರಾಗಲಿದ್ದಾರೆ ಅನ್ನೋ ಭವಿಷ್ಯ ಭಾರಿ ಚರ್ಚೆಯಾಗುತ್ತಿದೆ.

ಈ ಚುನಾವಣೆಗೆ ಟ್ರಂಪ್ V/S ಕಮಲಾ ಹ್ಯಾರಿಸ್ ಫೈಟ್..? ಸ್ಪರ್ಧೆಯಿಂದ ಹಿಂದೆ ಸರಿಯುತ್ತಾರಾ ಜೋ ಬೈಡನ್..?

ಇತ್ತೀಚೆಗೆ ಜೋ ಬೈಡೆನ್ ಹೊಸ ತಲೆಮಾರಿಗೆ ಅಧಿಕಾರ ಹಸ್ತಾಂತರಿಸುವ ನಿಟ್ಟಿನಲ್ಲಿ ಅಧ್ಯಕ್ಷೀಯ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದರು. ರಾಜಕೀಯದಲ್ಲಿ ಸುದೀರ್ಘ ಅವಧಿ ಮತ್ತು ಅನುಭವಕ್ಕೆ ಅವಕಾಶವಿದೆ. ಆದರೆ ಇದೇ ವೇಳೆ ಹೊಸ ಮುಖ, ಯುವ ಮುಖಕ್ಕೆ ಅವಕಾಶ ಕೊಡುವುದಕ್ಕೂ ಇದು ಸೂಕ್ತ ಸಮಯ. ಹೀಗಾಗಿಯೇ ಹೊಸ ತಲೆಮಾರಿಗೆ ಅಧಿಕಾರ ಹಸ್ತಾಂತರ ಮಾಡುವುದು ಸೂಕ್ತ ಎಂಬ ಕಾರಣಕ್ಕೆ ನಾನು ಅಧ್ಯಕ್ಷೀಯ ಹುದ್ದೆ ರೇಸ್‌ನಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದೆ. ದೇಶವನ್ನು ಒಗ್ಗೂಡಿಲು ಇದು ಅತ್ಯುತ್ತಮ ನಿರ್ಧಾರ. ನನ್ನ ಅಭಿಪ್ರಾಯ ಎಲ್ಲರಿಗೂ ಹೇಳಿದ್ದೇನೆ. ಇದೀಗ ಆಯ್ಕೆ ವಿಷಯ ನಿಮ್ಮದು ಎಂದಿದ್ದರು. 

ಇತ್ತೀಚೆಗೆ ಡೋನಾಲ್ಡ್ ಟ್ರಂಪ್ ಚುನಾವಣಾ ಭಾಷಣದಲ್ಲಿ ಕಮಲಾ ಹ್ಯಾರಿಸ್ ವಿರುದ್ದ ಹರಿಹಾಯ್ದಿದ್ದರು. ಬುದ್ಧಿಭ್ರಮಿತ ನಾಯಕಿ ಎಂದು ಜರೆದಿದ್ದರು. ಕಳೆದ ಮೂರೂವರೆ ವರ್ಷಗಳಿಂದ ಬೈಡೆನ್‌ ಅವರ ಪ್ರತಿ ವಿನಾಶಕಾರಿ ನೀತಿಯ ಹಿಂದೆಯೂ ಕಮಲಾ ಹ್ಯಾರಿಸ್‌ ಕೈವಾಡವಿದೆ. ಅವರೊಬ್ಬಬುದ್ಧಿ ಭ್ರಮಣೆಒಳಗಾದ ಎಡಪಂಥೀಯ ನಾಯಕಿ. ಒಂದು ವೇಳೆ ಅವರಿಗೆ ಎಂದಾದರೂ ದೇಶ ಮುನ್ನಡೆಸುವ ಅವಕಾಶ ಸಿಕ್ಕಿದರೆ ಅವರು ನಮ್ಮ ದೇಶವನ್ನು ನಾಶಪಡಿಸುತ್ತಾರೆ. ಅದಕ್ಕೆ ನಾವು ಎಂದೂ ಅವಕಾಶ ನೀಡುವುದಿಲ್ಲ’ ಎಂದು ಕಿಡಿಕಾರಿದ್ದಾರೆ.

ಅಮೆರಿಕ ಅಧ್ಯಕ್ಷೀಯ ರೇಸ್‌ನಿಂದ ಹಿಂದೆ ಸರಿದ ಜೋ ಬೈಡೆನ್; ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್ ಆಯ್ಕೆ
 

Latest Videos
Follow Us:
Download App:
  • android
  • ios