ಬಾಂಗ್ಲಾದಲ್ಲಿ ನಿಲ್ಲದ ಹಿಂದೂ ನರಮೇಧ: ಅರ್ಚಕನ ಬರ್ಬರ ಕೊಲೆ!

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ಸಾವಿರಾರು ದೌರ್ಜನ್ಯ ಪ್ರಕರಣದ ಹೊರತಾಗಿಯೂ ಈ ಕುರಿತು ಅಂತಾ ರಾಷ್ಟ್ರೀಯ ಸಮುದಾಯದ ಮೌನಕ್ಕೆ ಶರಣಾಗಿರುವುದರೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. 

Hindu Priest Killed in Bangladesh grg

ಕೋಲ್ಕತಾ(ಡಿ.22): ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂಗಳ ನರಮೇಧ ಮುಂದುವರೆದಿದ್ದು, ಇದೀಗ ರಾಜಧಾನಿ ಢಾಕಾದಿಂದ 200 ಕಿ.ಮೀ. ದೂರದ ನಟೋರ್ ಎಂಬಲ್ಲಿ ಇಸ್ಲಾಂ ಮೂಲಭೂತವಾದಿಗಳು ಅರ್ಚಕರೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಘಟನೆಯನ್ನು ಕೋಲ್ಕತಾದಲ್ಲಿನ ಇಸ್ಕಾನ್ ಸಂಘಟನೆ ತೀವ್ರವಾಗಿ ಖಂಡಿಸಿದೆ. 

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ಸಾವಿರಾರು ದೌರ್ಜನ್ಯ ಪ್ರಕರಣದ ಹೊರತಾಗಿಯೂ ಈ ಕುರಿತು ಅಂತಾ ರಾಷ್ಟ್ರೀಯ ಸಮುದಾಯದ ಮೌನಕ್ಕೆ ಶರಣಾಗಿರುವುದರೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. 

ವಿಮೋಚನೆ ಕುರಿತ ಮೋದಿ ಹೇಳಿಕೆಗೆ ಬಾಂಗ್ಲಾ ಟಾಂಗ್: ಭಾರತದ ಗೆಲುವೆಂಬ ಪ್ರಧಾನಿ ಹೇಳಿಕೆಗೆ ಕಿಡಿ

ಭೀಕರ ಹತ್ಯೆ: 

ನಟೋರ್ ನಗರದ ಸ್ಮಶಾನವೊಂದರ ದೇಗುಲದಲ್ಲಿ ಅರ್ಚಕರಾಗಿದ್ದ ತರುಣ್ ಚಂದ್ರದಾಸ್ ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ದೇಗುಲದ ಆವರಣದಲ್ಲಿ ಕೈ ಕಾಲು ಕಟ್ಟಿದ ಸ್ಥಿತಿಯಲ್ಲಿ ದಾಸ್ ಅವರ ಶವ ಪತ್ತೆಯಾಗಿದೆ. ಜೊತೆಗೆ ದೇಗುಲದಲ್ಲಿನ ಹುಂಡಿ ಒಡೆದು ಹಣ ದೋಚಲಾಗಿದೆ. 

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೋಲ್ಕತಾದಲ್ಲಿನ ಇಸ್ಕಾನ್ ವಕ್ತಾರ ರಾಧಾರಮಣ್ ದಾಸ್, 'ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ಕ್ರೌರ್ಯ ಹೆಚ್ಚುತ್ತಲೇ ಇದೆ. ಆದರೆ ಮಧ್ಯಂತರ ಸರ್ಕಾರ ಸುಮ್ಮನೆ ಕುಳಿತಿದೆ. ಅರ್ಚಕ ತರುಣ್ ಚಂದ್ರದಾಸ್‌ರನ್ನು ಬರ್ಬರವಾಗಿ ಹತ್ಯೆಗೈದು, ದೇಗುಲ ಹಾನಿಗೊಳಿಸಿ, ಅಮೂಲ್ಯ ವಸ್ತು ಲೂಟಿ ಮಾಡಲಾಗಿದೆ. ಆದರೆ ಅಲ್ಲಿನ ಪೊಲೀ ಸರು ಮಾತ್ರ ಡಕಾಯಿತಿ ಎಂದು ಕೇಸು ದಾಖಲಿಸಿದ್ದಾರೆ' ಎಂದು ಕಿಡಿಕಾರಿದ್ದಾರೆ. 

ಬಾಂಗ್ಲಾದೇಶದಲ್ಲಿ ಸಾವಿರಾರು ಜನರ ಅಪಹರಣದಲ್ಲಿ ಶೇಖ್‌ ಹಸೀನಾ ಭಾಗಿ ಆರೋಪ

ನರಮೇಧ: 

ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಪದಚ್ಯುತಿ ಬಳಿಕ ಆರಂಭವಾದ ಹಿಂಸಾಚಾರದಲ್ಲಿ ಅವಾಮಿ ಲೀಗ್ ಪಕ್ಷದ ನಾಯಕರು, ಹಿಂದೂಗಳು ಸೇರಿದಂತೆ 600ಕ್ಕೂ ಹೆಚ್ಚು ಜನರನ್ನು ಹತ್ಯೆಗೈಯಲಾಗಿದೆ. ಜೊತೆಗೆ ಹಿಂದೂಗಳ ಮೇಲೆ ದಾಳಿಯ 2000ಕ್ಕೂ ಹೆಚ್ಚು ಘಟನೆಗಳು ನಡೆದಿದ್ದು, 50ಕ್ಕೂ ಹೆಚ್ಚು ದೇಗುಲಗಳನ್ನು ಧ್ವಂಸ ಮಾಡಲಾಗಿದೆ.

• ಬಾಂಗ್ಲಾದೇಶದ ರಾಜಧಾನಿ ಢಾಕಾದಿಂದ 200 ಕಿ.ಮೀ. ದೂರದ ನಟೋರ್‌ನಲ್ಲಿ ಕೃತ್ಯ 
• ಸ್ಮಶಾನವೊಂದರಲ್ಲಿರುವ ಹಿಂದೂ ದೇಗುಲದ ಅರ್ಚಕ ರಾಗಿದ್ದ ತರುಣ್ ದಾಸ್ ಕೊಲೆ . ಅರ್ಚಕನ ಹತ್ಯೆ ಮಾಡಿದ ಬಳಿಕ ದೇಗುಲದ ಹುಂಡಿ ಒಡೆದು ಹಣ ದೋಚಿರುವ ದುರುಳರು 
• ಪ್ರಧಾನಿ ಶೇಖ್ ಹಸೀನಾ ಪದಚ್ಯುತಿ ಬಳಿಕ ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ . ಅವಾಮಿ ಲೀಗ್ ನಾಯಕರು, ಹಿಂದೂಗಳು ಸೇರಿ ಈವರೆಗೆ 600ಕ್ಕೂ ಹೆಚ್ಚು ಜನರ ಕೊಲೆ 
• ಹಿಂದೂಗಳ ಮೇಲೆ 200ಕ್ಕೂ ಹೆಚ್ಚು ದಾಳಿ. 50ಕ್ಕೂ ಅಧಿಕ ದೇಗುಲಗಳು ಧ್ವಂಸ . ಇದರ ವಿರುದ್ದ ಪ್ರತಿಭಟನೆ ನಡೆಸಿದ ಕಾರಣಕ್ಕೆ ಇಸ್ಕಾನ್ ಸನ್ಯಾಸಿ ಬಂಧನ, ಜೈಲಿಗೆ

Latest Videos
Follow Us:
Download App:
  • android
  • ios