Asianet Suvarna News Asianet Suvarna News

ಬ್ಯಾಂಕ್ ದರೋಡೆಗೆ ಕೊರೆದ ಸುರಂಗ ಕುಸಿತ, ಕಳ್ಳನ ರಕ್ಷಿಸಿ ಜೈಲಿಗಟ್ಟಿದ ಪೊಲೀಸ್!

ಐವರು ದರೋಡೆಕೋರರು ಸೇರಿ ಬ್ಯಾಂಕ್ ಕಳ್ಳತನಕ್ಕೆ ಬಹುದೊಡ್ಡ ಪ್ಲಾನ್ ಮಾಡಿದ್ದಾರೆ. ಬಳಿಕ ಬ್ಯಾಂಕ್ ಪ್ರವೇಶಿಸಲು ಸುರಂಗ ಕೊರೆದಿದ್ದಾರೆ. ಆದರೆ ಸುರಂಗ ಕುಸಿತಗೊಂಡ ಕಾರಣ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪೊಲೀಸರ ಹರಸಾಹಸದಿಂದ ಕಳ್ಳನ ರಕ್ಷಿಸಿದ ಘಟನೆ ನಡೆದಿದೆ.

Police Rescue Rome bank robbery man after tunnel Collapse in italy ckm
Author
Bengaluru, First Published Aug 13, 2022, 5:25 PM IST

ಇಟಲಿ(ಆ.13): ಬ್ಯಾಂಕ್ ದರೋಡೆ ಮಾಡಿ ಒಂದೇ ಬಾರಿ ಶ್ರೀಮಂತರಾಗುವ ಕನಸು ಕಂಡ ಐವರು ದರೋಡೆಕೋರರು ಕಳ್ಳತನಕ್ಕೆ ಯಾವ ಮಾರ್ಗ ಸೂಕ್ತ ಎಂದು ಸತತ ಒಂದು ತಿಂಗಳ ಕಾಲ ಚರ್ಚಿಸಿದ್ದಾರೆ. ಬಳಿಕ ಬ್ಯಾಂಕ್ ದರೋಡೆಗೆ ಸುರಂಗ ಮಾರ್ಗ ಕೊರೆಯಲು ನಿರ್ಧರಿಸಿದ್ದಾರೆ. ಐವರು ಯಾರಿಗೂ ತಿಳಿಯದಂತೆ ಸುರಂಗ ಮಾರ್ಗ ಕೊರೆದಿದ್ದಾರೆ. 6 ಮೀಟರ್ ಹೆಚ್ಚು ಆಳದಲ್ಲಿ ಯಾರಿಗೂ ತಿಳಿಯದಂತೆ ಐವರು ಕಳ್ಳರು ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಸುರಂಗ ಬ್ಯಾಂಕ್ ಹತ್ತಿರ ಬರುತ್ತಿದ್ದಂತೆ ಕುಸಿತ ಕಂಡಿದೆ. ದಿಢೀರ್ ಕುಸಿತದಿಂದ ಒಂದೇ ಸಮನೆ ಸುರಂಗದೊಳಗೆ ಮಣ್ಣು ಬಿದ್ದಿದೆ. ಐವರು ದರೊಡೆಕೋರರ ಪೈಕಿ ನಾಲ್ವರು ಎಸ್ಕೇಪ್ ಆಗಿದ್ದಾರೆ. ಆದರೆ ಸುರಂಗ ಕೊರೆಯುತ್ತಿದ್ದ ದರೋಡೆಕೋರ ಈ ಸುರಂದೊಳಗೆ ಸಿಲುಕಿದ್ದಾನೆ. ಎಸ್ಕೇಪ್ ಆದ ನಾಲ್ವರು ಮತ್ತೋರ್ವನ ರಕ್ಷಿಸಲು ನೋಡಿದ್ದಾರೆ. ಆದರೆ ಅದು ಸುಲಭದ ಕೆಲಸ ಆಗಿರಲಿಲ್ಲ. ಹೀಗಾಗಿ ರಕ್ಷಣಾ ತಂಡಕ್ಕೆ ಮಾಹಿತಿ ನೀಡಿ ಎಸ್ಕೇಪ್ ಆಗಿದ್ದಾರೆ. ಪೊಲೀಸರು ಹಾಗೂ ರಕ್ಷಣಾ ತಂಡ ಆಗಮಿಸಿ ಸುರಂಗದಲ್ಲಿ ಸಿಲುಕಿದ್ದ ಕಳ್ಳನ ರಕ್ಷಿಸಿ ಆಸ್ಪತ್ರೆ ದಾಖಲಿಸಿದ ಘಟನೆ ಇಟಲಿಯಲ್ಲಿ ನಡೆದಿದೆ.

ರೋಮ್ ನಗರದಲ್ಲಿರುವ ಬ್ಯಾಂಕ್ ದರೋಡೆ ಮಾಡಲು ಐವರು ದರೋಡೆಕೋರರು ರಸ್ತೆಯ ಕಳಭಾಗದಿಂದ ಸುರಂಗ ಕೊರೆದು ನೇರವಾಗಿ ಬ್ಯಾಂಕ್ ಪ್ರವೇಶಿಸುವ ಪ್ಲಾನ್ ರೂಪಿಸಿದ್ದರು. ಬ್ಯಾಂಕ್ ಮುಂಭಾಗದ ರಸ್ತೆಯ ಪಕ್ಕದಲ್ಲೇ  ತಾವು ಬಾಡಿಗೆಗೆ ತಂಗಿದ್ದ ಮನೆಯ ಬದಿಯಿಂದ ಸುರಂಗ ಕೊರೆದಿದ್ದಾರೆ. ಆದರೆ ವ್ಯಾಟಿಕನ್ ರಸ್ತೆಯ ತಲಭಾಗದಲ್ಲಿ ಸುರಂಗ ಕುಸಿತ ಕಂಡಿದೆ. ದರೋಡೆಕೋರರು ಆಮ್ಲಜನಕ ಸಿಲಿಂಡರ್ ಸೇರಿದಂತೆ ಇತರ ಸಾಮಾಗ್ರಿಗಳನ್ನು ಹಿಡಿದುಕೊಂಡೇ ಸುರಂಗ ಕೊರೆದಿದ್ದಾರೆ. ರಸ್ತೆಯೇ ಕುಸಿತಗೊಂಡ ಕಾರಣ ಸುರಂಗದ ಅಂಚಿನಲ್ಲಿದ್ದ ಕಳ್ಳ ಸಿಲುಕಿಕೊಂಡಿದ್ದಾನೆ.

ಬ್ಯಾಂಕ್‌ ಗ್ರಾಹಕರನ್ನು ಹಿಂಬಾಲಿಸಿ ಹಣ ದೋಚುತ್ತಿದ್ದವರ ಬಂಧನ

ಇತ್ತ ಸುರಂದೊಳಗಿನ ಮಣ್ಣು ಹೊರಗೆ ಹಾಕುತ್ತಿದ್ದ ಇತರ ನಾಲ್ವರು ಯಾವುದೇ ಅಪಾಯವಿಲ್ಲದೆ ಹೊರಗಡೆ ಬಂದಿದ್ದಾರೆ. ಆದರೆ ಕೊರೆಯುತ್ತಿದ್ದ ವ್ಯಕ್ತಿ ಹೊರಬರಲಾಗದೆ ಪರದಾಡಿದ್ದಾನೆ. ಅದೆಷ್ಟೇ ಪ್ರಯತ್ನ ಪಟ್ಟರೂ ರಾತ್ರಿ ವೇಳೆ ಸುರಂಗದೊಳಗಿಂದ ಮತ್ತೋರ್ವನ ರಕ್ಷಿಸಲು ಸಾಧ್ಯವಾಗಿಲ್ಲ. ಹೀಗಾಗಿ ಇನ್ನುಳಿದ ನಾಲ್ವರು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಇತ್ತ ಓರ್ವ ಮಾತ್ರ ಸಿಲುಕಿ ಸಂಕಷ್ಟಕ್ಕೆ ಸಿಲುಕಿದ್ದಾನೆ. ಬೇರೆ ದಾರಿ ಕಾಣದ ನಾಲ್ವರು ಪೊಲೀಸರಿಗೆ ಕರೆ ಮಾಹಿತಿ ಮಾಹಿತಿ ನೀಡಿದ್ದಾರೆ. ಈ ವೇಳೆ ರೋಮ್ ನಗರದ ಬ್ಯಾಂಕ್ ಸನಿಹದಲ್ಲಿ ಯಾವುದೇ ಸುರಂಗ ಇಲ್ಲ, ಸುಳ್ಳು ಮಾಹಿತಿ ನೀಡಬೇಡಿ ಎಂದು ಗದರಿಸಿದ್ದಾರೆ. ಈ ವೇಳೆ ನಡೆದ ಸತ್ಯವನ್ನು ಬಾಯ್ಬಿಟ್ಟಿದ್ದಾರೆ.

ಈ ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿದ್ದಾರೆ.  ಸುರಂಗ ಮಾರ್ಗದೊಳಗೆ ಸಿಲುಕಿರುವ ಕಳ್ಳನ ರಕ್ಷಿಸಲು ಜೆಸಿಬಿ ಮೂಲಕ ಮಾರ್ಗ ಸೇರಿದಂತೆ ಕೆಲ ಸ್ಥಳಗಳಲ್ಲಿ ಗುಂಡಿ ತೋಡಿದ್ದಾರೆ. ಸತತ 8 ಗಂಟೆಗಳ ಕಾರ್ಯಾಚರಣೆ ಬಳಿಕ ಕಳ್ಳನ ರಕ್ಷಿಸಿ ಆಸ್ಪತ್ರೆ ದಾಖಲಿಸಿದ್ದಾರೆ. ಈತನಿಂದ ಮಾಹಿತಿ ಪಡೆದ ಪೊಲೀಸರು ಎಸ್ಕೇಪ್ ಆಗಿದ್ದ ಇತರ ನಾಲ್ವರನ್ನೂ ಇಟಲಿ ಪೊಲೀಸರು ಬಂಧಿಸಿದ್ದಾರೆ. ಬ್ಯಾಂಕ್ ದರೋಡೆಗೆ ಪ್ರಯತ್ನಿಸಿ ಇದೀಗ ಜೈಲು ಪಾಲಾಗಿದ್ದಾರೆ. ಆದರೆ ಕಳ್ಳರು ನಾವು ಬದುಕಿದ್ದೆ ಅದೃಷ್ಠ, ಜೈಲಾದರೂ ಪರ್ವಾಗಿಲ್ಲ ಎಂದಿದ್ದಾರೆ.

ಅಜ್ಜಿ ಅಲ್ಲ ಕಳ್ಳ : ಸ್ಟೈಲಿಶ್ ಅಜ್ಜಿ ವೇಷದಲ್ಲಿ ಬಂದು ಬ್ಯಾಂಕ್‌ ರಾಬರಿ: ಕಳ್ಳನ ಕೈಚಳಕಕ್ಕೆ ಪೊಲೀಸರೇ ದಂಗು

Follow Us:
Download App:
  • android
  • ios