ಅಜ್ಜಿ ಅಲ್ಲ ಕಳ್ಳ : ಸ್ಟೈಲಿಶ್ ಅಜ್ಜಿ ವೇಷದಲ್ಲಿ ಬಂದು ಬ್ಯಾಂಕ್ ರಾಬರಿ: ಕಳ್ಳನ ಕೈಚಳಕಕ್ಕೆ ಪೊಲೀಸರೇ ದಂಗು
ಕಳ್ಳರು ದಿನೇ ದಿನೇ ಸ್ಮಾರ್ಟ್ ಆಗುತ್ತಿದ್ದಾರೆ. ತಮ್ಮ ಕೈ ಚಳಕ ತೋರಲು ಹೊಸ ಹೊಸ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಹಾಗೆಯೇ ಈಗ ಅಮೆರಿಕಾದಲ್ಲಿ ಕಳ್ಳನೋರ್ವನ ಕೈ ಚಳಕ ಪೊಲೀಸರೇ ಬೆಚ್ಚಿ ಬೀಳುವಂತೆ ಮಾಡಿದೆ.
ಕಳ್ಳರು ದಿನೇ ದಿನೇ ಸ್ಮಾರ್ಟ್ ಆಗುತ್ತಿದ್ದಾರೆ. ತಮ್ಮ ಕೈ ಚಳಕ ತೋರಲು ಹೊಸ ಹೊಸ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಸಣ್ಣದಾದ ಕಿಟಕಿ ಸರಳುಗಳ ನಡುವೆ ಕಳ್ಳನೋರ್ವ ತನ್ನ ದೇಹದಲ್ಲಿ ಮೂಳೆಯೇ ಇಲ್ಲವೆಂಬ ರೀತಿಯಲ್ಲಿ ತೂರಿಕೊಂಡು ಮನೆ ಕಳವಿಗೆ ಇಳಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಹಾಗೆಯೇ ಈಗ ಅಮೆರಿಕಾದಲ್ಲಿ ಕಳ್ಳನೋರ್ವನ ಕೈ ಚಳಕ ಪೊಲೀಸರೇ ಬೆಚ್ಚಿ ಬೀಳುವಂತೆ ಮಾಡಿದೆ.
ಕಳ್ಳನೋರ್ವ ಮಾಡರ್ನ್ ಅಜ್ಜಿಯಂತೆ ಸ್ಟೈಲ್ ಆಗಿ ವೇಷ ಧರಿಸಿ ಬ್ಯಾಂಕ್‌ಗೆ ಬಂದು ದರೋಡೆ ಮಾಡಿ ತೆರಳಿದ್ದಾನೆ. ಪೊಲೀಸರು ಈಗ ಈ ಚಾಣಾಕ್ಷ ಕಳ್ಳನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅಮೆರಿಕಾದ ಜಾರ್ಜಿಯಾದಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಚಾರ ಹಂಚಿಕೊಂಡಿರುವ ಮೆಕ್ಡೊನೊಫ್ ಪೊಲೀಸರು, ಆಗ್ನೇಯ ಅಟ್ಲಾಂಟಾದ ಹೆನ್ರಿ ಕೌಂಟಿಯಲ್ಲಿ ಸೋಮವಾರ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಂಕಿತ ಆರೋಪಿಯ ಬಗ್ಗೆ ಪೊಲೀಸರು ವಿವರ ನೀಡಿದ್ದು, ಆರು ಅಡಿ ಎತ್ತರದ ಸ್ಲಿಮ್ ಆಗಿದ್ದ ಮನುಷ್ಯ ಹೂವುಗಳ ಚಿತ್ರವಿರುವ (floral dress) ಬಟ್ಟೆ ಧರಿಸಿದ್ದು, ಬಿಳಿ ಬಣ್ಣದ ಶೂ ತೊಟ್ಟಿದ್ದಾನೆ, ಜೊತೆಗೆ ಕೈಗಳಿಗೆ ಕಿತ್ತಳೆ ಬಣ್ಣದ ಕೈಗವಸುಗಳನ್ನು (orange latex gloves) ಹಾಕಿದ್ದಣೆ. ತಲೆಗೆ ಬಿಳಿ ಬಣ್ಣದ ವಿಗ್ ಧರಿಸಿದ್ದು, ಮುಖಕ್ಕೆ ಕಡು ಬಣ್ಣದ ಮುಖಗವಸನ್ನು ಧರಿಸಿ (dark face mask) ಬ್ಯಾಂಕ್‌ಗೆ ಬಂದು ಕೈ ಚಳಕ ತೋರಿದ್ದಾನೆ ಎಂದು ವಿವರಿಸಿದ್ದಾರೆ.
ಪೊಲೀಸರು ಫೇಸ್‌ಬುಕ್ ಪೋಸ್ಟ್‌ನಲ್ಲಿ ನೀಡಿರುವ ವಿವರದಂತೆ, ಕಳ್ಳ ಮೆಕ್ಡೊನೊಫ್ ನಗರದಲ್ಲಿರುವ ಚೇಸ್ ಬ್ಯಾಂಕ್‌ನಲ್ಲಿ ಈ ಕೃತ್ಯವೆಸಗಿದ್ದಾನೆ. ಈತ ಹಣ ನೀಡುವಂತೆ ಒತ್ತಾಯಿಸಿ ಬ್ಯಾಂಕ್ ಸಿಬ್ಬಂದಿಯೊಬ್ಬರಿಗೆ ಪತ್ರ ನೀಡಿದ್ದಾನೆ ಅಲ್ಲದೇ ತನ್ನ ಬಳಿ ಬಂದೂಕು ಇರುವುದಾಗಿ ಬ್ಯಾಂಕ್ ಅಧಿಕಾರಿಗೆ ಆತ ತಿಳಿಸಿದ್ದಾನೆ ಎನ್ನಲಾಗಿದೆ. ಇದಾದ ಬಳಿಕ ಬ್ಯಾಂಕ್‌ನವರು ಬೆದರಿ ಎಲ್ಲವನ್ನು ಆತನಿಗೆ ಬಿಟ್ಟುಕೊಟ್ಟಿದ್ದಾರೆ. ನಂತರ ಹಣ ದೋಚಿಕೊಂಡು ಆತ ಬ್ಯಾಂಕ್ ತೊರೆದು ನೋಂದಣಿ ಸಂಖ್ಯೆ ಇಲ್ಲದ ಬಿಳಿ ಬಣ್ಣದ ಎಸ್‌ಯುವಿ ಕಾರಿನೊಂದಿಗೆ ಪರಾರಿಯಾಗಿದ್ದಾನೆ.
ಬೆಂಗಳೂರು: ಹಾಡಹಗಲೇ ಜ್ಯೋತಿಷಿ ಮನೆ ರಾಬರಿ: ನಗದು, ಚಿನ್ನಾಭರಣ ಎಗರಿಸಿ ಎಸ್ಕೇಪ್
ಇತ್ತ ಅಜ್ಜಿಯಂತೆ ವೇಷ ಧರಿಸಿ ಪರಾರಿಯಾಗಿರುವ ಕಳ್ಳನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈತನ ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಚಿತ್ರ ಘಟನೆಗೆ ತಕ್ಷಣದಲ್ಲೇ ಇಂಟರ್‌ನೆಟ್ ಬಳಕೆದಾರರು ಪ್ರತಿಕ್ರಿಯೆ ನೀಡದ್ದಾರೆ. ತಮಾಷೆ ಎಂದರೆ ಈ ವಿಚಿತ್ರ ವೇಷವನ್ನು ಯಾರೊಬ್ಬರು ಗುರುತಿಸಿಲ್ಲ. ಇದು ಅಟ್ಲಾಂಟದಲ್ಲಿ ಸಾಮಾನ್ಯ ವಿಚಾರ. ಆದರೆ ಸಮಾಧಾನದ ವಿಚಾರ ಎಂದರೆ ಈ ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ ಎಂಬುದು ಎಂದು ಕಾಮೆಂಟ್ ಮಾಡಿದ್ದಾರೆ.
ಸಾಲ ತೀರಿಸಲು ನೈಟಿ ಧರಿಸಿ ಕಳ್ಳತನಕ್ಕೆ ಯತ್ನ: ಬಾಯ್ ಫ್ರೆಂಡ್ ಜತೆ ಸೇರಿ ಯುವತಿಯಿಂದ ರಾಬರಿ
ಕೆಲ ದಿನಗಳ ಹಿಂದೆ ಪ್ಯಾರಿಸ್‌ನ ಲೌರ್ವ್ ಮ್ಯೂಸಿಯಂನಲ್ಲಿ ಇದೇ ರೀತಿಯ ವಿಚಿತ್ರ ಘಟನೆಯೊಂದು ಕಲಾಭಿಮಾನಿಗಳನ್ನು ಬೆಚ್ಚಿ ಬೀಳಿಸಿತ್ತು. ಮುದುಕಿ ವೇಷದಲ್ಲಿದ್ದ ವ್ಯಕ್ತಿಯೊಬ್ಬರು ಗಾಲಿಕುರ್ಚಿಯಿಂದ ಹಾರಿ ಬಂದು ಮೊನಾಲಿಸಾ ಪೈಂಟಿಂಗ್ ಮೇಲೆ ಕೇಕ್ ಮೆತ್ತಿದ್ದರು. ಅಲ್ಲದೇ ಈತ ಲೌರ್ವ್ ಮ್ಯೂಸಿಯಂನಲ್ಲಿರುವ ಲಿಯೊನಾರ್ಡೊ ಡಾ ವಿನ್ಸಿ ಅವರ ಕಲಾಕೃತಿಯನ್ನು ರಕ್ಷಿಸಲು ಇಟ್ಟಿದ್ದ ಗುಂಡು ನಿರೋಧಕ ಗಾಜನ್ನು ಒಡೆದು ಹಾಕಲು ಯತ್ನಿಸಿದ್ದರು ಎಂದೂ ವರದಿಯಾಗಿತ್ತು.