Asianet Suvarna News Asianet Suvarna News

ಉಕ್ರೇನ್-ರಷ್ಯಾ ಶಾಂತಿಗೆ ನೆರವು: ಪ್ರಧಾನಿ ಮೋದಿ

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಪಾರ್ಶ ದಲ್ಲಿ ಜೆಲೆನ್‌ಸ್ಕಿ ಅವರನ್ನು ಮೋದಿ ಭೇಟಿ ಮಾಡಿದರು. 'ಜೆಲೆನ್‌ಸ್ಕಿ ಅವರನ್ನು ಭೇಟಿ ಮಾಡಿದೆ. ರಾಜತಾಂತ್ರಿಕ ವಿಧಾನಗಳು, ಮಾತುಕತೆ ಮೂಲಕ ಸಂಘರ್ಷ ಕೊನೆಗಾಣಿಸಬೇಕು ಎಂಬ ವಿಷಯದಲ್ಲಿ ಭಾರತ ಸ್ಪಷ್ಟವಾಗಿದೆ. ಈ ಬಗ್ಗೆ ಎಲ್ಲ ನೆರವು ನೀಡಲು ನಾವು ಸಿದ್ಧ ಎಂಬ ಭರವಸೆ ನೀಡಿದ್ದೇನೆ' ಎಂದು ಮಾತುಕತೆಯ ಬಳಿಕ ತಿಳಿಸಿದ ಮೋದಿ 

PM Narendra Modi Talks Over Ukraine-Russia peace grg
Author
First Published Sep 25, 2024, 6:28 AM IST | Last Updated Sep 25, 2024, 6:28 AM IST

ನ್ಯೂಯಾರ್ಕ್‌(ಸೆ.25): ಉಕ್ರೇನ್-ರಷ್ಯಾ ಯುದ್ಧ ನಿಲ್ಲಿಸುವ ಸಂಬಂಧ ಮಧ್ಯಸ್ಥಿಕೆ ವಹಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿ ಸೂಕ್ತ ವ್ಯಕ್ತಿ' ಎಂದು ರಷ್ಯಾ ಅಧ್ಯಕ್ಷ ಪ್ಲಾದಿಮಿರ್ ಪುಟಿನ್ ಹೇಳಿಕೆ ನೀಡಿದ ಕೆಲವು ದಿನಗಳ ಬಳಿಕ ಮೋದಿ ಅವರು ಈ ವಿಷಯದಲ್ಲಿ ಪುನಃ ಶಾಂತಿ ಮಂತ್ರ ಪಠಿಸಿದ್ದಾರೆ. 

ಸೋಮವಾರ 3 ದಿನಗಳ ಅಮೆರಿಕ ಪ್ರವಾಸ ಮುಗಿಸಿದ ಮೋದಿ, ಉಕ್ರೇನ್ ಅಧ್ಯಕ್ಷ ವೊಲೊಡಿಮಿ‌ರ್ ಜೆಲೆನ್‌ಸ್ತಿ ಅವರನ್ನು ಭೇಟಿ ಮಾಡಿ ಶಾಂತಿ ಸ್ಥಾಪನೆಗೆ ನೆರವು ನೀಡುವುದಾಗಿ ಹೇಳಿದ್ದಾರೆ. ಇದು ಕಳೆದ 3 ತಿಂಗಳಲ್ಲಿ ಉಭಯ ನಾಯಕರ 3ನೇ ಭೇಟಿ ಆಗಿದೆ. ಕಳೆದ ತಿಂಗಳು ಮೋದಿ ಅವರು ಪುಟಿನ್ ಹಾಗೂ ಜೆಲೆನ್‌ಸ್ಥಿ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಶಾಂತಿ ಸ್ಥಾಪನೆಗೆ ಕರೆ ನೀಡಿದ್ದರು.

ವಿಶ್ವಸಂಸ್ಥೆಯಲ್ಲೂ ಈಗ ಮೋದಿ ಶಾಂತಿ ಮಂತ್ರ..!

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಪಾರ್ಶ ದಲ್ಲಿ ಜೆಲೆನ್‌ಸ್ಕಿ ಅವರನ್ನು ಮೋದಿ ಭೇಟಿ ಮಾಡಿದರು. 'ಜೆಲೆನ್‌ಸ್ಕಿ ಅವರನ್ನು ಭೇಟಿ ಮಾಡಿದೆ. ರಾಜತಾಂತ್ರಿಕ ವಿಧಾನಗಳು, ಮಾತುಕತೆ ಮೂಲಕ ಸಂಘರ್ಷ ಕೊನೆಗಾಣಿಸಬೇಕು ಎಂಬ ವಿಷಯದಲ್ಲಿ ಭಾರತ ಸ್ಪಷ್ಟವಾಗಿದೆ. ಈ ಬಗ್ಗೆ ಎಲ್ಲ ನೆರವು ನೀಡಲು ನಾವು ಸಿದ್ಧ ಎಂಬ ಭರವಸೆ ನೀಡಿದ್ದೇನೆ' ಎಂದು ಮಾತುಕತೆಯ ಬಳಿಕ ಮೋದಿ ತಿಳಿಸಿದ್ದಾರೆ. 

"ಕಳೆದ ತಿಂಗಳ ನನ್ನ ಉಕ್ರೇನ್ ಭೇಟಿಯ ವೇಳೆ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ಸಲುವಾಗಿ ಕೈಗೊಂಡ ನಿರ್ಧಾರಗಳನ್ನು ಜಾರಿಗೊಳಿಸಲು ನಾವು ಬದ್ಧ. ಉಕ್ರೇನ್ ಸಂಘರ್ಷವನ್ನು ಆದಷ್ಟು ಬೇಗ ಕೊನೆಗೊಳಿಸುವ ನಿಟ್ಟಿನಲ್ಲಿ ಎಲ್ಲಾ ನೆರವು ನೀಡಲು ಸಿದ್ದ' ಎಂದೂ ಹೇಳಿದ್ದಾರೆ. ಕೇಂದ್ರ ಸರ್ಕಾರದ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ರಷ್ಯಾ ಅಧ್ಯಕ್ಷ ಪುಟಿನ್‌ರನ್ನು ಭೇಟಿ ಮಾಡಿ ಯುದ್ಧ ಸಂಬಂಧಿ ಚರ್ಚೆ ನಡೆಸಿದ್ದರು. ಸೋಮವಾರ ಮಾಡಿದ ವಿಶ್ವಸಂಸ್ಥೆ ಸಾಮಾನ್ಯ ಸಭೆ ಭಾಷಣದಲ್ಲೂ ಮೋದಿ ಯುದ್ಧ ನಿಲ್ಲಿಸುವ ಬಗ್ಗೆ ಕರೆ ನೀಡಿದ್ದರು.

ಇಸ್ರೇಲ್‌- ಪ್ಯಾಲೆಸ್ತೀನ್‌ ಕದನ ವಿರಾಮಕ್ಕೆ ಮೋದಿ ಆಗ್ರಹ

ನ್ಯೂಯಾರ್ಕ್‌: ಈಗಾಗಲೇ ವರ್ಷ ಪೂರೈಸಿರುವ ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌ ಸಮರಕ್ಕೆ ಕೂಡಲೇ ಕದನ ವಿರಾಮ ಘೋಷಿಸಬೇಕು. ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು ಮತ್ತು ಉಭಯ ದೇಶಗಳು ಮಾತುಕತೆ ಮತ್ತು ರಾಜತಾಂತ್ರಿಕತೆ ಹಾದಿಗೆ ಮರಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಆಗ್ರಹಿಸಿದ್ದಾರೆ.

ಸೋಮವಾರ ಇಲ್ಲಿ ಪ್ಯಾಲೆಸ್ತೀನ್‌ ಅಧ್ಯಕ್ಷ ಮಹಮೂದ್‌ ಅಬ್ಬಾಸ್‌ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಪ್ರಧಾನಿ, ಗಾಜಾ ಪಟ್ಟಿ ಪ್ರದೇಶದಲ್ಲಿನ ಮಾನವೀಯ ಬಿಕ್ಕಟ್ಟು ಮತ್ತು ವಲಯದಲ್ಲಿನ ಭದ್ರತಾ ಪರಿಸ್ಥಿತಿ ಕುಸಿಯುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಜೊತೆಗೆ ಪ್ಯಾಲೆಸ್ತೀನ್‌ ಜನರಿಗೆ ಭಾರತದ ಅಚಲ ಬೆಂಬಲ ವ್ಯಕ್ತಪಡಿಸಿದರಲ್ಲದೆ, ಮಾನವೀಯ ನೆರವು ಮುಂದುವರೆಸುವ ಭರವಸೆ ನೀಡಿದರು.

ಜೊತೆಗೆ, ಇಸ್ರೇಲ್‌- ಪ್ಯಾಲೆಸ್ತೀನ್‌ ಬಿಕ್ಕಟ್ಟು ಇತ್ಯರ್ಥ ಪಡಿಸಿ ಶಾಂತಿ ಪುನರ್‌ಸ್ಥಾಪನೆಯಲ್ಲಿ ಎರಡು- ದೇಶ ರಚನೆಗಳ ತತ್ವವನ್ನು ಭಾರತ ಈಗಲೂ ಬೆಂಬಲಿಸುತ್ತದೆ. ಜೊತೆಗೆ ಕೂಡಲೇ ಕದನ ವಿರಾಮಕ್ಕೆ ಆಗ್ರಹಿಸುತ್ತದೆ. ಸಂಘರ್ಷದ ವೇಳೆ ಒತ್ತೆಯಾಳಾಗಿರುವವರನ್ನು ಕೂಡಲೇ ಬಿಡುಗಡೆ ಮಾಡಬೇಕು, ಸಂವಾದ ಮತ್ತು ರಾಜತಾಂತ್ರಿಕ ಮಾರ್ಗಕ್ಕೆ ಮರಳಬೇಕು ಎಂದು ಒತ್ತಾಯಿಸುತ್ತದೆ ಎಂದು ಮೋದಿ ಹೇಳಿದ್ದಾರೆ.

ಜೊತೆಗೆ ಪ್ರತ್ಯೇಕ ಪ್ಯಾಲೆಸ್ತೀನ್‌ ದೇಶಕ್ಕೆ ಮಾನ್ಯತೆ ನೀಡಿದ ಮೊದಲಿಗ ದೇಶಗಳ ಪೈಕಿ ಭಾರತ ಕೂಡಾ ಒಂದು. ಅಲ್ಲದೆ, ವಿಶ್ವಸಂಸ್ಥೆಯಲ್ಲಿ ಪ್ಯಾಲೆಸ್ತೀನ್‌ ಸದಸ್ಯತ್ವಕ್ಕೆ ಭಾರತ ತನ್ನ ಬೆಂಬಲ ಮುಂದುವರೆಸುತ್ತದೆ ಎಂದು ಇದೇ ವೇಳೆ ಮೋದಿ ನೆನಪಿಸಿಕೊಂಡರು.

ಭಾರತಕ್ಕೆ ಗತವೈಭವ ತರಲು ಮೋದಿ ಮಹಾ ಹೆಜ್ಜೆ; ಅಮೆರಿಕದಿಂದ ಮರಳಿ ಬರಲಿರೋ ವಸ್ತುಗಳ ಮಹತ್ವವೇನು?

ಮೋದಿಗೆ ಅಮೆರಿಕ ಸಿಖ್ಖರ ಧನ್ಯವಾದ: ರಾಹುಲ್‌ಗೆ ಟಾಂಗ್‌

ವಾಷಿಂಗ್ಟನ್‌: ‘ಭಾರತದಲ್ಲಿ ಸಿಖ್ಖರ ಧಾರ್ಮಿಕ ಸ್ವಾತಂತ್ರ್ಯ ಕಸಿದುಕೊಳ್ಳಲಾಗಿದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಇತ್ತೀಚೆಗೆ ಅಮೆರಿಕದ ಭೇಟಿ ವೇಳೆ ಆರೋಪ ಮಾಡಿದ್ದರೆ, ಅಮೆರಿಕದ ಸಿಖ್‌ ಸಮುದಾಯದ ನಿಯೋಗವೊಂದು ಸೋಮವಾರ ಇಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಅವರಿಗೆ ಧನ್ಯವಾದ ಸಮರ್ಪಿಸಿತು.

ಮೋದಿ ಅವರು ಹಿಂದಿನ ಯಾವುದೇ ಪ್ರಧಾನಿ ಮಾಡದಷ್ಟು ಕೆಲಸವನ್ನು ಸಿಖ್‌ ಸಮುದಾಯಕ್ಕೆ ಮಾಡಿದ್ದಾರೆ. ಅದು ಕರ್ತಾರ್‌ಪುರ ಕಾರಿಡಾರ್ ನಿರ್ಮಾಣ ಇರಬಹುದು, ಗುರುನಾನಕ್‌ರ 550 ಜನ್ಮದಿನಾಚರಣೆ ಇರಬಹುದು, ಕಪ್ಪುಪಟ್ಟಿಯಿಂದ ಸಿಖ್ಖರ ಹೆಸರು ತೆಗೆದು ಹಾಕುವ ಕ್ರಮವಿರಬಹುದು, 1984ರ ಸಿಖ್‌ ವಿರೋಧಿ ಹತ್ಯಾಕಾಂಡದಲ್ಲಿ ಮಡಿದವರಿಗೆ ನೆರವಾಗುವುದರಿರಬಹುದು. ಅವರು ಸಿಖ್ ಸಮುದಾಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ’ ಎಂದು ನಿಯೋಗದ ಭಾಗವಾಗಿದ್ದ ಹಲವು ನಾಯಕರು ಕೃತಜ್ಞತೆ ಸಲ್ಲಿಸಿದ್ದಾರೆ.

Latest Videos
Follow Us:
Download App:
  • android
  • ios