ಮಹಿಳೆಗೆ ಕೊಟ್ಟ ಮಾತು ಉಳಿಸಿಕೊಂಡ ಮೋದಿ; ಹಿರಿ ಹಿರಿ  ಹಿಗ್ಗಿದ 101ರ ಅಜ್ಜ

ಪ್ರಧಾನಿ ನರೇಂದ್ರ ಮೋದಿ ಕುವೈತ್‌ನಲ್ಲಿ 101 ವರ್ಷದ ಮಾಜಿ ಐಎಫ್‌ಎಸ್ ಅಧಿಕಾರಿ ಮಂಗಲ್ ಸೈನ್ ಹಂಡಾ ಅವರನ್ನು ಭೇಟಿಯಾದರು. ಮೊಮ್ಮಗಳ ಟ್ವೀಟ್ ಮನವಿಗೆ ಸ್ಪಂದಿಸಿದ ಪ್ರಧಾನಿಗಳು ಈ ಭೇಟಿ ನಡೆಸಿದರು.

PM Narendra Modi meets 101 year old Former IFS Officer Mangal Sain Handa at Kuwait mrq

ನವದೆಹಲಿ:  ಪ್ರಧಾನ ಮಂತ್ರಿ  ನರೇಂದ್ರ ಮೋದಿ  ಕುವೈತ್ ಮಹಿಳೆಗೆ ನೀಡಿದ ಮಾತು  ಈಡೇರಿಸಿದ್ದಾರೆ.  ಪ್ರಧಾನಿಗಳು ಸದ್ಯ ಕುವೈತ್ ಪ್ರವಾಸದಲ್ಲಿದ್ದು, ಶನಿವಾರ 101 ವರ್ಷದ  ಮಾಜಿ ಐಎಫ್‌ಎಸ್ ಅಧಿಕಾರಿಯಾದ ಮಂಗಲ್ ಸೈನ್ ಹಂಡಾ ಅವರನ್ನು ಭೇಟಿಯಾಗಿದ್ದಾರೆ. ಮಂಗಲ್ ಸೈನ್ ಅವರ ಮೊಮ್ಮಗಳು ಶ್ರೇಯಾ ಜುನೇಜಾ, ತಮ್ಮ ಅಜ್ಜನಿಗೆ ನಿಮ್ಮನ್ನು ಭೇಟಿ  ಮಾಡುವ ಅವಕಾಶ ನೀಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿಕೊಂಡಿದ್ದರು. 

ಪ್ರಧಾನಿ ಮೋದಿ ಅವರಭ ಭೇಟಿ ಬಳಿಕ  ಮಾತನಾಡಿರುವ ಮಂಗಲ್ ಸೈನ್ ಪುತ್ರ ದಿಲೀಪ್ ಹಂಡಾ, ಇದು ಜೀವನದ ಮರೆಯಲಾಗದ ದಿನ. ಪ್ರಧಾನಿಗಳನ್ನು ಭೇಟಿಯಾಗಲು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದ್ದಾರೆ. ಶ್ರೇಯಾ ಜುನೇಜಾ, ಶುಕ್ರವಾರ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದರು. ಕುವೈತ್‌ಗೆ ಭೇಟಿ ನೀಡಿದಾಗ ತನ್ನ 101 ವರ್ಷದ ಅಜ್ಜನನ್ನು ಭೇಟಿಯಾಗುವಂತೆ ಮನವಿ ಮಾಡಿದ್ದರು. ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ಪ್ರಧಾನಿ ಮೋದಿ, ಇಂದು ಕುವೈತ್‌ನಲ್ಲಿ 101 ವರ್ಷದ ಮಂಗಲ್ ಸೈನ್ ಹಂಡಾ  ಅವರನ್ನು ಭೇಟಿಯಾಗಲು ಕಾತುರನಾಗಿದ್ದೇನೆ ಎಂದಿದ್ದರು. 

ಇದನ್ನೂ ಓದಿ: ರಷ್ಯಾದ ಬೇಹುಗಾರಿಕಾ ಪ್ರಪಂಚ: ರಹಸ್ಯ ಯುದ್ಧಕ್ಕೆ ಬಲಿಯಾದರೇ ಜನರಲ್ ಕಿರಿಲೊವ್?

ಇದೇ  ವೇಳೆ  ಪ್ರಧಾನಿ ಮೋದಿ ಅವರು ಕುವೈತ್‌ನಲ್ಲಿ, ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳನ್ನು ಅರೇಬಿಕ್ ಭಾಷೆಯಲ್ಲಿ ಭಾಷಾಂತರಗೊಳಿಸಿ ಪ್ರಕಟಿಸಿರುವ ಅನುವಾದಕ ಅಬ್ದುಲ್ಲಾ ಬ್ಯಾರನ್‌ ಅವರನ್ನು ಭೇಟಿಯಾದರು. ಭೇಟಿ ಬಳಿಕ ಸುದ್ದಿಸಂಸ್ಥೆ ಜೊತೆ ಮಾತನಾಡಿರುವ ಅಬ್ದುಲ್ಲಾ,  ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದು ಸಂತೋಷವನ್ನುಂಟು ಮಾಡಿದೆ. ಈ ಎರಡೂ ಮಹಾಕಾವ್ಯಗಳು  ತುಂಬಾ ಪ್ರಮುಖ ಪುಸ್ತಕಗಳಾಗಗಿದ್ದು, ಎರಡರಲ್ಲಿಯೂ ಮೋದಿ ಅವರು ಸಹಿ ಮಾಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಜಿಎಸ್‌ಟಿ ಕೌನ್ಸಿಲ್: ವಿಮಾ ತೆರಿಗೆ ಕಡಿತದ ನಿರ್ಧಾರ ಮುಂದೂಡಿಕೆ

Latest Videos
Follow Us:
Download App:
  • android
  • ios