ಜೀವ ಮತ್ತು ಆರೋಗ್ಯ ವಿಮಾಗಳ ಮೇಲಿನ ತೆರಿಗೆ ಕಡಿತದ ಕುರಿತು ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವುದನ್ನು ಮುಂದೂಡಲಾಗಿದೆ. ಹೆಚ್ಚಿನ ಚರ್ಚೆಗಾಗಿ ಜಿಒಎಂಗೆ ಜವಾಬ್ದಾರಿ ವಹಿಸಲಾಗಿದ್ದು, ಜನವರಿಯಲ್ಲಿ ಮತ್ತೊಂದು ಸಭೆ ನಿಗದಿಯಾಗಿದೆ.
ನವದೆಹಲಿ: ಇಂದು ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಜೀವ ಮತ್ತು ಆರೋಗ್ಯ ವಿಮಾಗಳ ಮೇಲಿನ ತೆರಿಗೆ ಕಡಿತಗೊಳಿಸುವ ನಿರ್ಧಾರವನ್ನು ಮುಂದೂಡಲಾಗಿದೆ. ಇಂದಿನ 55ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ, ಜೀವ ಮತ್ತು ಆರೋಗ್ಯ ವಿಮಾಗಳ ಮೇಲಿನ ತೆರಿಗೆ ಕಡಿತಗೊಳಿಸುವ ಚರ್ಚೆಗಳು ನಡೆಯಲಿವೆ ಎಂದು ವರದಿಯಾಗಿತ್ತು. ಈ ಬಗ್ಗೆ ಹೆಚ್ಚಿನ ಚರ್ಚೆ ಮತ್ತು ಪರಿಶೀಲನೆಯ ಜವಾಬ್ದಾರಿಯನ್ನು ಜಿಒಎಂಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ನೇತೃತ್ವದಲ್ಲಿ ಜಿಎಸ್‌ಟಿ ಕೌನ್ಸಿಲ್ ಸಭೆ ನಡೆದಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ಬಿಹಾರ ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ, ಕುಟುಂಬ, ವೈಯಕ್ತಿಕ ಮತ್ತು ಹಿರಿಯ ನಾಗರಿಕರ ಆರೋಗ್ಯ ವಿಮಾ ಮೇಲಿನ ತೆರಿಗೆ ಕಡಿತದ ಕುರಿತು ಜಿಓಎಂ ನೇತೃತ್ವದಲ್ಲಿ ಮತ್ತೊಂದು ಸಭೆ ನಡೆಯಲಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಾಮ್ರಾಟ್ ಚೌಧರಿ, ಕೆಲವು ಸದಸ್ಯರು ಈ ಕುರಿತು ಚರ್ಚೆಯ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾವು ಜನವರಿಯಲ್ಲಿ ಮತ್ತೊಮ್ಮೆ ಜಿಓಎಂ ನೇತೃತ್ವದಲ್ಲಿ ಸೇರಿ ಸಭೆ ನಡೆಸಲಿದ್ದೇವೆ ಎಂದು ಹೇಳಿದರು.
ನವೆಂಬರ್‌ನಲ್ಲಿ ಸಲ್ಲಿಸಿದ ಪ್ರಸ್ತಾವನೆ?
ಜಿಎಸ್‌ಟಿ ಕೌನ್ಸಿಲ್ ಸಾಮ್ರಾಟ್ ಚೌಧರಿ ಅವರ ಅಧ್ಯಕ್ಷತೆಯಲ್ಲಿ ಜಿಓಎಂ (Group of Ministers) ರಚಿಸಿದೆ. ನವೆಂಬರ್‌ನಲ್ಲಿ ನಡೆದ ಸಭೆಯಲ್ಲಿ ಟರ್ಮ್ ಜೀವ ವಿಮಾ ಪಾಲಿಸಿಗಳ ವಿಮಾ ಪ್ರೀಮಿಯಂ ಅನ್ನು GST ಯಿಂದ ವಿನಾಯಿತಿ ನೀಡಲು ಒಪ್ಪಿಕೊಂಡಿತು. ಅಲ್ಲದೆ, ಹಿರಿಯ ನಾಗರಿಕರು ಆರೋಗ್ಯ ವಿಮಾ ರಕ್ಷಣೆಗಾಗಿ ಪಾವತಿಸುವ ಪ್ರೀಮಿಯಂಗೆ ತೆರಿಗೆಯಿಂದ ವಿನಾಯಿತಿ ನೀಡಲು ಪ್ರಸ್ತಾಪಿಸಲಾಗಿತ್ತು. ಇದೀಗ ಈ ಕುರಿತು ಪ್ರಕಟಿಸುವ ನಿರ್ಧಾರವನ್ನು ಜನವರಿಗೆ ಮುಂದೂಡಿಕೆ ಮಾಡಿದೆ. ಜನವರಿಯಲ್ಲಿ ಮತ್ತೊಮ್ಮೆ ಈ ಸಂಬಂಧ ಸಭೆ ನಡೆಯಲಿದೆ.
ಇದನ್ನೂ ಓದಿ: ಕಾಡಲ್ಲಿ ನಿಂತಿದ್ದ ಕಾರಲ್ಲಿತ್ತು ₹40 ಕೋಟಿಯ 52 ಕೆಜಿ ಚಿನ್ನ, ₹11 ಕೋಟಿ ನಗದು! ಯಾರದು ಈ ಸಂಪತ್ತು?
ಹಿರಿಯ ನಾಗರಿಕರನ್ನು ಹೊರತುಪಡಿಸಿ ಇತರ ವ್ಯಕ್ತಿಗಳಿಗೆ 5 ಲಕ್ಷ ರೂ.ವರೆಗಿನ ಆರೋಗ್ಯ ವಿಮೆಗೆ ಪಾವತಿಸುವ ಪ್ರೀಮಿಯಂ ಅನ್ನು ಜಿಎಸ್‌ಟಿಯಿಂದ ವಿನಾಯಿತಿ ನೀಡುವ ಪ್ರಸ್ತಾಪವೂ ಇದೆ. 5 ಲಕ್ಷ ರೂ.ಗಿಂತ ಹೆಚ್ಚಿನ ಆರೋಗ್ಯ ವಿಮಾ ರಕ್ಷಣೆಯೊಂದಿಗೆ ಪಾಲಿಸಿಗಳಿಗೆ ಪಾವತಿಸಿದ ಪ್ರೀಮಿಯಂಗಳು ಶೇಕಡಾ 18 ಜಿಎಸ್‌ಟಿ ಮುಂದುವರಿಯಲಿದೆ.
ಇದನ್ನೂ ಓದಿ: ರಾಹುಲ್ ಗಾಂಧಿ ಶೂ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆ; ಬೆಲೆ ಎಷ್ಟು?
