Asianet Suvarna News Asianet Suvarna News

ಕೋವಿನ್‌ ಯಶಸ್ಸಿನ ಬಗ್ಗೆ 20 ದೇಶಕ್ಕೆ ಮೋದಿ ಪಾಠ!

* ಇಂದು ಲಸಿಕೆ ಅಭಿಯಾನ ಆ್ಯಪ್‌ ಕುರಿತು ವಿವರಣೆ

* ಕೋವಿನ್‌ ಯಶಸ್ಸಿನ ಬಗ್ಗೆ 20 ದೇಶಕ್ಕೆ ಮೋದಿ ಪಾಠ

* ಭಾರತದ ಆ್ಯಪ್‌ ಬಳಕೆಗೆ ವಿವಿಧ ದೇಶಗಳಿಗೆ ಆಸಕ್ತಿ

PM Modi to share his thoughts at CoWIN Global Conclave pod
Author
Bangalore, First Published Jul 5, 2021, 7:22 AM IST

ನವದೆಹಲಿ(ಜು.05): ಕೋವಿಡ್‌ ಲಸಿಕೆ ಅಭಿಯಾನಕ್ಕೆಂದು ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿರುವ ಮತ್ತು ಅಭಿಯಾನದ ಯಶಸ್ಸಿಗೂ ಕಾರಣವಾಗಿರುವ ಕೋ-ವಿನ್‌ ಆ್ಯಪ್‌ ಅಥವಾ ವೆಬ್‌ಸೈಟ್‌ನ ಯಶೋಗಾಥೆಯನ್ನು ಭಾರತ ಸೋಮವಾರ ಜಗತ್ತಿನ ಮುಂದೆ ತೆರೆದಿಡಲಿದೆ. ಆನ್‌ಲೈನ್‌ ಮೂಲಕ ನಡೆಯುವ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹ ಭಾಗಿಯಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲಿದ್ದಾರೆ.

ವಿಯೆಟ್ನಾಂ, ಪೆರು, ಮೆಕ್ಸಿಕೋ, ಇರಾಕ್‌, ಪನಾಮಾ, ಉಕ್ರೇನ್‌, ನೈಜೀರಿಯಾ, ಯುಎಇ, ಮತ್ತು ಉಗಾಂಡ ಸೇರಿದಂತೆ 20 ದೇಶಗಳು ಈ ಆ್ಯಪ್‌ಅನ್ನು ತಮ್ಮ ದೇಶದ ಲಸಿಕಾ ಅಭಿಯಾನದಲ್ಲಿ ಅಳವಡಿಸಿಕೊಳ್ಳಲು ಮುಂದೆ ಬಂದಿದ್ದು, ಈ ಸಮಾವೇಶದಲ್ಲಿ ಭಾಗಿಯಾಗಲಿವೆ.

2021ರ ಜ.16ರ ನಂತರ ಭಾರತದಲ್ಲಿ ಕೋವಿಡ್‌ ಲಸಿಕೆ ಅಭಿಯಾನದ ನೋಂದಣಿಗೆಂದು ಅಭಿವೃದ್ಧಿಪಡಿಸಲಾಗಿರುವ ಈ ಆ್ಯಪ್‌ನಲ್ಲಿ ಸದ್ಯ ಸುಮಾರು 20 ಕೋಟಿ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಖಾಸಗಿತನ, ಹ್ಯಾಕಿಂಗ್‌ನಂಥ ಅಪವಾದಗಳನ್ನು ಎದುರಿಸಿ ಯಶಸ್ವಿಯಾಗಿರುವ ಕೋ-ವಿನ್‌ ಭಾರತದ ಲಸಿಕಾ ಅಭಿಯಾನದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.

 

Follow Us:
Download App:
  • android
  • ios