Asianet Suvarna News Asianet Suvarna News

Order of the Druk Gyalpo: ಪ್ರಧಾನಿ ನರೇಂದ್ರ ಮೋದಿಗೆ ಭೂತಾನ್‌ನ ಅತ್ಯುನ್ನತ ನಾಗರೀಕ ಪ್ರಶಸ್ತಿ


ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತೊಂದು ದೇಶ ತನ್ನ ನೆಲದ ಶ್ರೇಷ್ಠ ನಾಗರೀಕ ಪ್ರಶಸ್ತಿ ನೀಡಿ ಗೌರವಿಸಿದೆ. ಎರಡು ದಿನಗಳ ಕಾಲ ಭೂತಾನ್‌ ಪ್ರವಾಸದಲ್ಲಿರುವ ಪ್ರಧಾನಿ ಮೋದಿಗೆ ಆರ್ಡರ್‌ ಆಫ್‌ ಡ್ರುಕ್ ಗ್ಯಾಲ್ಪೋ ಗೌರವ ನೀಡಲಾಗಿದೆ.
 

PM Modi becomes the first foreign Head of Government to receive Bhutan highest civilian honour san
Author
First Published Mar 22, 2024, 3:58 PM IST

ನವದೆಹಲಿ (ಮಾ.22): ಫ್ರಾನ್ಸ್‌, ಅಮೆರಿಕ, ಇಂಗ್ಲೆಂಡ್‌, ಯುಎಇ, ಸೌದಿ ಅರೇಬಿಯಾ ಸೇರಿದಂತೆ ವಿಶ್ವದ ಪ್ರಮುಖ ದೇಶಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತನ್ನ ದೇಶದ ಶ್ರೇಷ್ಠ ನಾಗರೀಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಈ ಸಾಲಿಗೆ ಈಗ ಭಾರತದ ನೆರೆಯ ದೇಶ ಭೂತಾನ್‌ ಕೂಡ ಸೇರಿಕೊಂಡಿದೆ.  ಪಿಎಂ ಮೋದಿ ಅವರು ಭೂತಾನ್‌ನ ಅತ್ಯುನ್ನತ ನಾಗರಿಕ ಗೌರವವನ್ನು ಪಡೆದ ಮೊದಲ ವಿದೇಶಿ ಸರ್ಕಾರದ ಮುಖ್ಯಸ್ಥರಾಗಿದ್ದಾರೆ. ಭೂತಾನ್‌ನ ರಾಜ ಶುಕ್ರವಾರ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭೂತಾನ್‌ನ ಸರ್ವಶ್ರೇಷ್ಠ ನಾಗರೀಕ ಪುರಸ್ಕಾರವಾದ ಆರ್ಡರ್‌ ಆಫ್‌ ಡ್ರುಕ್ ಗ್ಯಾಲ್ಪೋ ಪ್ರದಾನ ಮಾಡಿದ್ದಾರೆ.

ಪ್ರಶಸ್ತಿ ಸ್ಥಾಪಿತವಾದ ಪ್ರಾಶಸ್ತ್ಯದ ಪ್ರಕಾರ, ಆರ್ಡರ್ ಆಫ್ ದ ಡ್ರುಕ್ ಗ್ಯಾಲ್ಪೋ ಅನ್ನು ಜೀವಮಾನದ ಸಾಧನೆ ಸಮಾರ್ಥವಾಗಿ ನೀಡಲಾಗುತ್ತಿತ್ತು. ಭೂತಾನ್‌ನ ಸರ್ವಶ್ರೇಷ್ಠ ಪ್ರಜೆಗೆ ಈ ಗೌರವವನ್ನು ನೀಡಲಾಗುತ್ತದೆ.  ಇದು ಭೂತಾನ್‌ನ ಎಲ್ಲಾ ಆರ್ಡರ್‌ಗಳು, ಗೌರವಗಳು ಹಾಗೂ ಪದಕಗಳಿಂದ ಉಚ್ಛ ಸ್ಥಾನದಲ್ಲಿ ನಿಲ್ಲುತ್ತದೆ. ಇಲ್ಲಿಯವರೆಗೂ ಈ  ಪ್ರಶಸ್ತಿಯನ್ನು ಕೇವಲ ನಾಲ್ಕು ಗಣ್ಯ ವ್ಯಕ್ತಿಗಳಿಗೆ ಮಾತ್ರ ನೀಡಲಾಗಿದೆ. ಭೂತಾನ್‌ನ ಅತ್ಯುನ್ನತ ನಾಗರಿಕ ಗೌರವವನ್ನು ಪಡೆದ ಮೊದಲ ವಿದೇಶಿ ಸರ್ಕಾರದ ಮುಖ್ಯಸ್ಥ ಪ್ರಧಾನಿ ಮೋದಿ ಎನಿಸಿಕೊಂಡಿದೆ. 

ಫಿಜಿ, ಪಪುವಾ ನ್ಯೂ ಗಿನಿ ದೇಶಗಳ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿ ಪಡೆದ ಪ್ರಧಾನಿ ಮೋದಿ

ಇದಕ್ಕೂ ಮುನ್ನ ಈ ಗೌರವವನ್ನು ರಾಯಲ್‌ ಕ್ವೀನ್‌ ಅವರ ಅಜ್ಜಿ ಆಶಿ ಕೆಸಾಂಗ್ ಚೋಡೆನ್ ವಾಂಗ್‌ಚುಕ್ ಅವರಿಗೆ 208ರಲ್ಲಿ ನೀಡಲಾಗಿತ್ತು. ಆ ಬಳಿಕ,  ಜೆ ತ್ರಿಜೂರ್ ಟೆಂಜಿನ್ ಡೆಂಡಪ್ (68 ನೇ ಭೂತಾನ್ ನ ಜೆ ಖೆನ್ಪೋ) ಅವರಿಗೂ ಅದೇ ವರ್ಷದಲ್ಲಿ ನೀಡಲಾಗಿತ್ತು.  2018 ರಲ್ಲಿ ಅವರ ಜೆ ಖೆನ್ಪೋ ಟ್ರುಲ್ಕು ನ್ಗಾವಾಂಗ್ ಜಿಗ್ಮೆ ಚೋಡ್ರಾ ಅವರಿಗೆ ನೀಡಲಾಗಿತ್ತು.  ಜೆ ಖೆನ್ಪೋ ಎನ್ನುವುದು ಭೂತಾನ್‌ನ ಕೇಂದ್ರ ಸಂನ್ಯಾಸಿಗಳ ಮುಖ್ಯ ಮಠಾಧೀಶರಾಗಿದ್ದಾರೆ.

Bhutan Honours Narendra Modi: ಪ್ರಧಾನಿಗೆ ಭೂತಾನ್‌ನ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿ

ಪ್ರಧಾನಿ ಮೋದಿಗಾಗಿ ಭೂತಾನ್‌ನಿಂದ 3 ವಿಶೇಷತೆಗಳು: ಹೌದು ಪ್ರಧಾನಿ ನರೇಂದ್ರ ಮೋದಿಗಾಗಿ ಭೂತಾನ್‌ ಈ ಬಾರಿ ಮೂರು ವಿಶೇಷ ಕ್ರಮ ವಹಿಸಿತ್ತು. ಈ ಹಿಂದೆ ಯಾವುದೇ ಭಾರತೀಯ ಪ್ರಧಾನಿಗೆ ರಾಜನಿಂದ ಖಾಸಗಿ ಭೋಜನವನ್ನು ನೀಡಲಾಗಿರಲಿಲ್ಲ.  ಪ್ರಧಾನಿ ಮೋದಿ ಅವರಿಗೆ ಈ ಸವಲತ್ತು ನೀಡಲಾಗುತ್ತಿದೆ.  ಅದರೊಂದಿಗೆ ಕೆ5 ರೆಸಿಡೆನ್ಸ್ ಲಿಂಗಕಾನ ಪ್ಯಾಲೇಸ್‌ನಲ್ಲಿ ಭಾರತದ ಪ್ರಧಾನಿಯೊಬ್ಬರಿಗೆ ಆತಿಥ್ಯ ನೀಡುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಮೊದಲ ಬಾರಿಗೆ ಭೂತಾನ್, ದೇಶದ ಪ್ರಧಾನಿಯೊಬ್ಬರಿಗೆ ಅತ್ಯುನ್ನತ ಪ್ರಶಸ್ತಿ ನೀಡುತ್ತಿದೆ. ವಾಸ್ತವವಾಗಿ, ಪ್ರಧಾನಿ ಮೋದಿ ಅವರು ಭೂತಾನ್ ಪ್ರಶಸ್ತಿಯನ್ನು ಪಡೆದ ಮೊದಲ ವಿದೇಶಿ ಪ್ರಜೆಯಾಗಿದ್ದಾರೆ.

 

 

Follow Us:
Download App:
  • android
  • ios