Asianet Suvarna News Asianet Suvarna News

Bhutan Honours Narendra Modi: ಪ್ರಧಾನಿಗೆ ಭೂತಾನ್‌ನ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿ


ಪ್ರಧಾನಿ ನರೇಂದ್ರ ಮೋದಿಯವರಿಗೆ ಭೂತಾನ್ ಗೌರವ
ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಪ್ರಧಾನಿ ಆಯ್ಕೆ
ಕೊರೋನಾ ಸಂದರ್ಭದಲ್ಲಿ ನೀಡಿದ ನೆರವಿಗೆ ಪುರಸ್ಕಾರ

Prime Minister Narendra Modi has been conferred with the highest civilian honour of Bhutan akb
Author
Bangalore, First Published Dec 17, 2021, 11:27 AM IST

ನವದೆಹಲಿ(ಡಿ.17): ಸಕಾರಾತ್ಮಕ ಬೆಳವಣಿಗೆಯೊಂದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಭೂತಾನ್‌ನ ಅತ್ಯುನ್ನತ ನಾಗರಿಕ ಗೌರವವಾದ ನ್ಗಡಾಗ್ ಪೆಲ್ ಗಿ ಖೋರ್ಲೋ (Ngadag Pel gi Khorlo) ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ಭೂತಾನ್ ಸರಕಾರ ಇಂದು (ಡಿ.17) ಪ್ರಕಟಣೆಯಲ್ಲಿ ತಿಳಿಸಿದೆ. ಟ್ವಿಟರ್‌ನಲ್ಲಿ ಭೂತಾನ್ ಪ್ರಧಾನಿಯವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.  ಅತ್ಯುತ್ತಮ ನಾಗರಿಕ ಸೇವೆಗಾಗಿ ನಮ್ಮ ದೇಶದಲ್ಲಿ ನೀಡುವ ಈ ಪ್ರಶಸ್ತಿಗೆ ಮಹಿಮಾನ್ವಿತ ನರೇಂದ್ರ ಮೋದಿಯವರ ಹೆಸರನ್ನು ಉಚ್ಚರಿಸುವುದನ್ನು ಕೇಳಲು ತುಂಬಾ ಸಂತೋಷವಾಯಿತು ಎಂದು ಅವರು ಹೇಳಿದ್ದಾರೆ. COVID-19 ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ ಭೂತಾನ್‌ಗೆ  ನೀಡಿದ ಬೇಷರತ್ತಾದ ಬೆಂಬಲಕ್ಕಾಗಿ ಧನ್ಯವಾದಗಳನ್ನು ಅರ್ಪಿಸಲು ದೇಶವು ಪ್ರಧಾನಿ ಮೋದಿಯವರಿಗೆ ನ್ಗಡಾಗ್ ಪೆಲ್ ಗಿ ಖೋರ್ಲೋ (Ngadag Pel gi Khorlo) ಪ್ರಶಸ್ತಿ ನೀಡಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ. 

ಭಾರತದ ಪ್ರಧಾನಿ ನರೇಂದ್ರ ಮೋದಿಯವರು,  ಹಲವು ವರ್ಷಗಳಿಂದ ವಿಶೇಷವಾಗಿ ಸಾಂಕ್ರಾಮಿಕ ಸಮಯದಲ್ಲಿ ಯಾವುದೇ ಷರತ್ತು ಇಲ್ಲದ ಸ್ನೇಹ ಹಾಗೂ ಬೆಂಬಲವನ್ನು ವಿಸ್ತರಿಸಿದ್ದಕ್ಕಾಗಿ ಈ ಪ್ರಶಸ್ತಿಗೆ ಅತ್ಯುತ್ತಮ ಅರ್ಹತೆ ಉಳ್ಳವರು. ಭೂತಾನ್‌ ಜನರಿಂದ ಅವರಿಗೆ ಧನ್ಯವಾದ. ನಿಮ್ಮ ಎಲ್ಲಾ ಸಂವಾದಗಳಲ್ಲಿ ನಿಮ್ಮ ಶ್ರೇಷ್ಠತೆ ಎದ್ದು ಕಂಡಿದೆ. ನೀವೊಬ್ಬರು ಆಧ್ಯಾತ್ಮಿಕ ಮಾನವ. ಈ ಗೌರವವನ್ನು ನಿಮ್ಮೊಂದಿಗೆ ಆಚರಿಸಲು ಎದುರು ನೋಡುತ್ತಿದ್ದೇವೆ ಎಂದು  ಫೇಸ್‌ಬುಕ್‌ ಫೋಸ್ಟ್‌ನಲ್ಲಿ ಭೂತಾನ್‌ ಪ್ರಧಾನಿ ಸಚಿವಾಲಯ ಬರೆದುಕೊಂಡಿದೆ. 

Modi In Varanasi: ಕಾಶಿ ಹಾದಿಯಲ್ಲಿ ಕಾರು ನಿಲ್ಲಿಸಿ ಸ್ಥಳೀಯರು ಕೊಟ್ಟ ಪಗಡಿ, ಶಾಲು ಧರಿಸಿದ ಮೋದಿ!

ಪ್ರಧಾನಿ ನರೇಂದ್ರ ಮೋದಿಯವರಿಗೆ ವಿದೇಶದ ಪ್ರಶಸ್ತಿಗಳು ಒಲಿದು ಬಂದಿರುವುದು ಇದೇ ಮೊದಲೇನಲ್ಲ. ಈಗಾಗಲೇ ಸುಮಾರು ಪ್ರಶಸ್ತಿಗಳು ಪ್ರಧಾನಿಯವರನ್ನು ಅರಸಿ ಬಂದಿದೆ. ಅವುಗಳ ವಿವರ ಇಲ್ಲಿದೆ. 

1. ಆರ್ಡರ್ ಆಫ್ ಅಬ್ದುಲಜೀಜ್ ಅಲ್ ಸೌದ್ (Order of Abdulaziz Al Saud) ಈ ಪ್ರಶಸ್ತಿಯನ್ನು 2016 ರಲ್ಲಿ ಪ್ರಧಾನಿಯವರಿಗೆ ನೀಡಲಾಗಿತ್ತು. ಇದು ಸೌದಿ ಅರೇಬಿಯಾದ ಅತ್ಯುನ್ನತ ಗೌರವವಾಗಿದ್ದು, ಇದನ್ನು ಮುಸ್ಲಿಮೇತರ ಗಣ್ಯರಿಗೆ ನೀಡಲಾಗುತ್ತದೆ.

2. ಸ್ಟೇಟ್ ಆರ್ಡರ್ ಆಫ್ ಘಾಜಿ ಅಮೀರ್ ಅಮಾನುಲ್ಲಾ ಖಾನ್  ಈ ಪ್ರಶಸ್ತಿಯನ್ನು 2016ರಲ್ಲಿ ನೀಡಲಾಗಿದ್ದು, ಇದು ಅಫ್ಘಾನಿಸ್ತಾನದ ಅತ್ಯುನ್ನತ ನಾಗರಿಕ ಗೌರವವಾಗಿದೆ.

3. ಗ್ರ್ಯಾಂಡ್ ಕಾಲರ್ ಆಫ್ ದಿ ಸ್ಟೇಟ್ ಆಫ್ ಪ್ಯಾಲೆಸ್ತೈನ್ ಪ್ರಶಸ್ತಿ ಈ ಪ್ರಶಸ್ತಿ 2018ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅರಸಿ ಬಂದಿದ್ದು, ಇದು ವಿದೇಶಿ ಗಣ್ಯರಿಗೆ ಪ್ಯಾಲೆಸ್ತೈನ್‌ ನೀಡುವ ಅತ್ಯುನ್ನತ ಗೌರವವಾಗಿದೆ.

4. ಆರ್ಡರ್ ಆಫ್ ಜಾಯೆದ್ ಪ್ರಶಸ್ತಿ, ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅತ್ಯುನ್ನತ ನಾಗರಿಕ ಗೌರವ ಇದಾಗಿದ್ದು, 2019ರಲ್ಲಿ ಈ ಪ್ರಶಸ್ತಿಗೆ ಪ್ರಧಾನಿ ಭಾಜನರಾಗಿದ್ದರು.

 

5. ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ಪ್ರಶಸ್ತಿ ರಷ್ಯಾದ ಅತ್ಯುನ್ನತ ನಾಗರಿಕ ಗೌರವ ಇದಾಗಿದ್ದು, 2019 ರಲ್ಲಿ ಇದು ನಮ್ಮ ಪ್ರಧಾನಿ ಮುಡಿಗೇರಿತ್ತು.

6. ಆರ್ಡರ್ ಆಫ್ ದಿ ಡಿಸ್ಟಿಂಗ್ವಿಶ್ಡ್ ರೂಲ್ ಆಫ್ ನಿಶಾನ್ ಇಝುದ್ದೀನ್ ಇದು ಮಾಲ್ಡೀವ್ಸ್‌ನ ಅತ್ಯುನ್ನತ ಗೌರವವಾಗಿದ್ದು, ಇದನ್ನು ವಿದೇಶಿ ಗಣ್ಯರಿಗೆ ನೀಡಲಾಗುತ್ತದೆ ಈ ಪ್ರಶಸ್ತಿಗೆ ಕೂಡ 2019ರಲ್ಲಿ ನಮ್ಮ ಪ್ರಧಾನಿ ಅರ್ಹರಾಗಿದ್ದರು. 

 

7. ಕಿಂಗ್ ಹಮದ್ ಆರ್ಡರ್ ಆಫ್ ದಿ ರಿನೈಸಾನ್ಸ್  ಇದು ಈ ಬಹ್ರೇನ್ ನೀಡುವ ಪ್ರಶಸ್ತಿಯಾಗಿದ್ದು, ಗಲ್ಫ್ ದೇಶದ ಉನ್ನತ ಗೌರವವಾಗಿದೆ  2019ರಲ್ಲಿ ಇದು ಪ್ರಧಾನಿಯವರನ್ನು ಅರಸಿ ಬಂದಿತ್ತು.

8. ಅಮೆರಿಕಾ ಸರ್ಕಾರದಿಂದ ಲೀಜನ್ ಆಫ್ ಮೆರಿಟ್ ಪ್ರಶಸ್ತಿ. ಇದು ಉತ್ತಮ ಸೇವೆಗಳು ಮತ್ತು ಸಾಧನೆಗಳ ಕಾರ್ಯಕ್ಷಮತೆಯಲ್ಲಿ ಅಸಾಧಾರಣವಾದ ಅರ್ಹತೆಯ ನಡವಳಿಕೆಗಾಗಿ ಅಮೆರಿಕಾದ ಸಶಸ್ತ್ರ ಪಡೆಗಳಿಂದ ಸಿಗುವ ಗೌರವವಾಗಿದ್ದು, 2020ರಲ್ಲಿ ಈ ಪ್ರಶಸ್ತಿಗೆ ಮೋದಿ ಪಾತ್ರರಾಗಿದ್ದರು. 


Banaras Station ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ತಡ ರಾತ್ರಿ ರೈಲು ನಿಲ್ದಾಣ ಕಾಮಗಾರಿ ಪರಿಶೀಲಿಸಿದ ಮೋದಿ!

ಸಂಸ್ಥೆಗಳು ಹಾಗೂ ಪ್ರತಿಷ್ಠಾನಗಳು ನೀಡುವ ಪ್ರಶಸ್ತಿಗಳು

1. ಸಿಯೋಲ್ ಶಾಂತಿ ಪ್ರಶಸ್ತಿ (ಮನುಕುಲದ ಸಾಮರಸ್ಯ, ರಾಷ್ಟ್ರಗಳ ನಡುವಿನ ಸಮನ್ವಯ ಮತ್ತು ವಿಶ್ವ ಶಾಂತಿಗೆ ಕೊಡುಗೆಗಳ ಮೂಲಕ ವಿಶ್ವದಲ್ಲಿ ತಮ್ಮ ಛಾಪು ಮೂಡಿಸಿದ್ದಕ್ಕಾಗಿ ಸಿಯೋಲ್ ಶಾಂತಿ ಪ್ರಶಸ್ತಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಎರಡು ವರ್ಷಗಳಿಗೊಮ್ಮೆ ಈ ಪ್ರಶಸ್ತಿ ನೀಡಲಾಗುತ್ತಿದ್ದು, 2018ರಲ್ಲಿ ಈ ಪ್ರಶಸ್ತಿಗೆ ನರೇಂದ್ರ ಮೋದಿ ಭಾಜನರಾಗಿದ್ದರು. 

2. ಚಾಂಪಿಯನ್ಸ್ ಆಫ್ ದಿ ಅರ್ಥ್ ಅವಾರ್ಡ್. ಇದು ವಿಶ್ವಸಂಸ್ಥೆಯಿಂದ ನೀಡುವ  ಅತ್ಯುನ್ನತ ಪರಿಸರ ಗೌರವ ಪ್ರಶಸ್ತಿಯಾಗಿದ್ದು, 2018ರಲ್ಲಿ ಇದು ನರೇಂದ್ರ ಮೋದಿಯವರಿಗೆ ಒಲಿದು ಬಂದಿತ್ತು.

3. ಫಿಲಿಪ್ ಕೋಟ್ಲರ್ ಅಧ್ಯಕ್ಷೀಯ ಪ್ರಶಸ್ತಿ ಇದು ರಾಷ್ಟ್ರದ ನಾಯಕನಿಗೆ ವಾರ್ಷಿಕವಾಗಿ ನೀಡಲಾಗುವ ಪ್ರಶಸ್ತಿಯಾಗಿದ್ದು, ಇದನ್ನು ಮೊದಲ ಬಾರಿಗೆ 2019ರಲ್ಲಿ ಪ್ರಧಾನಿಯವರಿಗೆ ನೀಡಲಾಗಿತ್ತು.

4. ಸ್ವಚ್ಛ ಭಾರತ ಅಭಿಯಾನಕ್ಕಾಗಿ ಬಿಲ್ ಮತ್ತು ಮಿಲಿಂಡಾ ಗೇಟ್ಸ್ ಪ್ರತಿಷ್ಠಾನದಿಂದ 2019 ರಲ್ಲಿ ಗ್ಲೋಬಲ್ ಗೋಲ್‌ಕೀಪರ್ ಪ್ರಶಸ್ತಿ ನೀಡಲಾಗಿತ್ತು. 

5. ಕೇಂಬ್ರಿಡ್ಜ್ ಎನರ್ಜಿ ರಿಸರ್ಚ್ ಅಸೋಸಿಯೇಟ್ಸ್( CERA)ನಿಂದ ಜಾಗತಿಕ ಶಕ್ತಿ ಮತ್ತು ಪರಿಸರ ನಾಯಕತ್ವಕ್ಕಾಗಿ  2021ರಲ್ಲಿ ಅಂದರೆ ಈ ವರ್ಷ ಈ ಪ್ರಶಸ್ತಿ ನೀಡಲಾಗಿದೆ ಈ ಪ್ರಶಸ್ತಿಯೂ ಜಾಗತಿಕ ಶಕ್ತಿ ಮತ್ತು ಪರಿಸರ ಭವಿಷ್ಯದ ಕಡೆಗೆ ನಾಯಕತ್ವದ ಬದ್ಧತೆಯನ್ನು ಗುರುತಿಸಿ ನೀಡಲಾಗಿದೆ. 

Follow Us:
Download App:
  • android
  • ios