ಪ್ರಧಾನಿ ಮೋದಿ ಮಾಲ್ಡೀವ್ಸ್ ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸಿ, ದ್ವಿಪಕ್ಷೀಯ ಸಂಬಂಧ ವೃದ್ಧಿಸಿದರು. ಈ ಭೇಟಿ ಚೀನಾಗೆ ಕಿರಿಕಿರಿ ಉಂಟುಮಾಡಿದ್ದು, ಭಾರತ-ಮಾಲ್ಡೀವ್ಸ್ ಸಂಬಂಧದಲ್ಲಿ ಹೊಸ ತಿರುವು ನೀಡಿದೆ.

ಮಾಲೆ (ಜುಲೈ.26): ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮಾಲ್ಡೀವ್ಸ್‌ನ 60ನೇ ಸ್ವಾತಂತ್ರ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಭಾರತ-ಮಾಲ್ಡೀವ್ಸ್ ಸಂಬಂಧಕ್ಕೆ ಹೊಸ ಆಯಾಮ ನೀಡಿದ್ದಾರೆ.

ರಾಜಧಾನಿ ಮಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷ ಮೊಹಮ್ಮದ್ ಮುಯಿಝು ಜೊತೆಗಿನ ಮೋದಿಯವರ ಚಿತ್ರ ವೈರಲ್ ಆಗಿದ್ದು, ಚೀನಾಕ್ಕೆ ಕಿರಿಕಿರಿಯನ್ನುಂಟು ಮಾಡಿದೆ. ಮೋದಿಯವರು ಉಪಾಧ್ಯಕ್ಷ ಹುಸೇನ್ ಮೊಹಮ್ಮದ್ ಲತೀಫ್, ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್ ಹಾಗೂ ಸಂಸತ್ತಿನ ಸ್ಪೀಕರ್ ಅಬ್ದುಲ್ ರಹೀಮ್ ಅಬ್ದುಲ್ಲಾ ಅವರನ್ನು ಭೇಟಿಯಾಗಿ, ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸಿದ್ದಾರೆ..

ಪ್ರಧಾನಿ ಮೋದಿ ಭೇಟಿ ನೀಡಿದ ಸಂಬಂಧ ಮುಯಿಝು ಅವರು, ಪ್ರಧಾನಿ ಮೋದಿಯವರ ಭೇಟಿಯು ಪ್ರವಾಸೋದ್ಯಮವನ್ನು ಉತ್ತೇಜಿಸಲಿದ್ದು, ಭಾರತ ಮಾಲ್ಡೀವ್ಸ್‌ನ ಪ್ರಮುಖ ಪಾಲುದಾರವಾಗಲಿದೆ ಎಂದು ಹೇಳಿದರು. ಮಾಲ್ಡೀವ್ಸ್ ಪ್ರವಾಸೋದ್ಯಮ ಮತ್ತು ಪರಿಸರ ಸಚಿವ ಥೋರಿಕ್ ಇಬ್ರಾಹಿಂ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಮಾಲ್ಡೀವ್ಸ್‌ಗೆ ಸರಿಯಾದ ಸಮಯದಲ್ಲಿ ಭೇಟಿ ನೀಡಿದ್ದಾರೆ. ಮಾಲ್ಡೀವ್ಸ್ ಸ್ವಾತಂತ್ರ್ಯ ದಿನದಂದು ಪ್ರಧಾನಿ ಮೋದಿ ಮುಖ್ಯ ಅತಿಥಿಯಾಗಿ ಬಂದಿದ್ದಾರೆ. ಇದು ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಬಲವಾದ ವ್ಯಾಪಾರ ಪಾಲುದಾರಿಕೆ ಸಂಕೇತವಾಗಿದೆ ಎಂದು ಹೇಳಿದ್ದಾರೆ.

Scroll to load tweet…

ಚೀನಾ ಅಸಮಾಧಾನ:

ಆದರೆ, 'ಇಂಡಿಯಾ ಔಟ್' ಘೋಷಣೆಯೊಂದಿಗೆ ಚೀನಾದತ್ತ ಮುಖ ಮಾಡಿದ್ದ ಮುಯಿಝು ಸರ್ಕಾರದ ಈ ತಿರುವು ಚೀನಾವನ್ನು ಕೆರಳಿಸಿದೆ. ಜನವರಿ 2025ರಲ್ಲಿ ಚೀನಾ-ಮಾಲ್ಡೀವ್ಸ್ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿಯಾದ ಬೆನ್ನಲ್ಲೇ, ಮೋದಿಯವರ ಈ ಭೇಟಿಯು ರಾಜತಾಂತ್ರಿಕ ಚೀನಾಕ್ಕೆ ತಿರುಗುಬಾಣವಾಗಿದೆ. ಈ ಘಟನೆಯು ಭಾರತ-ಮಾಲ್ಡೀವ್ಸ್ ಸಂಬಂಧದಲ್ಲಿ ಹೊಸ ಅಧ್ಯಾಯವನ್ನು ತೆರೆಯಲಿದೆಯೇ ಎಂಬ ಕುತೂಹಲವನ್ನು ಮೂಡಿಸಿದೆ.