Asianet Suvarna News Asianet Suvarna News

ಜನಪ್ರಿಯ ನಾಯಕರ ಪಟ್ಟಿ: ವಿಶ್ವದಲ್ಲೇ ಮೋದಿ ನಂ. 1!

* ವಿಶ್ವದ 13 ನಾಯ​ಕ​ರಲ್ಲಿ ಮೋದಿ ಅತಿ ಹೆಚ್ಚು ಜನ​ಪ್ರಿ​ಯ

* ಜನ​ಪ್ರಿ​ಯ​ತೆ: ವಿಶ್ವ​ದಲ್ಲೇ ಮೋದಿ ನಂ.1

* ನಮೋ ರೇಟಿಂಗ್‌ ಶೇ.70: ಸಮೀ​ಕ್ಷೆ

PM Modi approval rating is 70pc highest among 13 global leaders pod
Author
Bangalore, First Published Sep 5, 2021, 9:36 AM IST

ನವ​ದೆ​ಹ​ಲಿ(ಸೆ.05): ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ವಿಶ್ವ​ದಲ್ಲೇ ನಂ.1 ನಾಯ​ಕ​ರಾಗಿ ಶನಿ​ವಾ​ರ ಹೊರ​ಹೊ​ಮ್ಮಿ​ದ್ದಾರೆ. ಅಮೆ​ರಿ​ಕದ ‘ಮಾ​ರ್ನಿಂಗ್‌ ಕನ್ಸ​ಲ್ಟ್‌’ ಎಂಬ ಟೆಕ್‌ ಇಂಟೆ​ಲಿ​ಜೆಂಟ್‌ ಕಂಪನಿ ನಡೆ​ಸಿದ ಸಮೀಕ್ಷೆಯಲ್ಲಿ ಅವ​ರಿಗೆ ಶೇ.70ರಷ್ಟುರೇಟಿಂಗ್‌ ಲಭ್ಯವಾಗಿದ್ದು, ವಿಶ್ವದ ಇತರ 13 ನಾಯ​ಕ​ರನ್ನು ಮೀರಿ​ಸಿ​ದ್ದಾ​ರೆ.

ಅಮೆ​ರಿಕ ಅಧ್ಯಕ್ಷ ಜೋ ಬೈಡೆನ್‌, ಜರ್ಮ​ನಿಯ ಚಾನ್ಸ​ಲರ್‌ ಏಂಜೆಲಾ ಮರ್ಕೆಲ್‌, ಬ್ರಿಟನ್‌ ಪ್ರಧಾನಿ ಬೊರಿಸ್‌ ಜಾನ್ಸನ್‌, ಬ್ರೆಜಿಲ್‌ ಅಧ್ಯಕ್ಷ ಜೈರ್‌ ಬೋಲ್ಸೋ​ನಾರೊ, ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡ್ಯು ಸೇರಿ​ದಂತೆ 13 ನಾಯ​ಕ​ರನ್ನು ಜನ​ಪ್ರಿ​ಯ​ತೆ​ಯನ್ನು ಅದು ಸಮೀಕ್ಷೆಗೆ ಒಳ​ಪ​ಡಿ​ಸಿತ್ತು.

ಮೇ 2020ರಲ್ಲಿ ಶೇ.84 ಇದ್ದ ಮೋದಿ ರೇಟಿಂಗ್‌, ಈ ವರ್ಷ ಕೊರೋನಾ ತಾರ​ಕ​ಕ್ಕೇ​ರಿದ್ದ ಜೂನ್‌​ನಲ್ಲಿ ಶೇ.66ಕ್ಕೆ ಇಳಿ​ದಿತ್ತು. ಆದರೆ ಈಗ ಮತ್ತೆ ಸುಧಾ​ರಿ​ಸಿದ್ದು, ಶೇ.70ರಷ್ಟುಶ್ರೇಯಾಂಕ ಲಭ್ಯ​ವಾ​ಗಿ​ದೆ.

ಯಾರ ರೇಟಿಂಗ್‌ ಎಷ್ಟು?

ನರೇಂದ್ರ ಮೋದಿ ​ಶೇ.70

ಏಂಜೆಲಾ ಮರ್ಕೆ​ಲ್‌ ​ಶೇ.52

ಜೋ ಬೈಡೆ​ನ್‌ ಶೇ.48

ಜಸ್ಟಿನ್‌ ಟ್ರುಡ್ಯು ​ಶೇ.45

ಬೊರಿಸ್‌ ಜಾನ್ಸ​ನ್‌ ​ಶೇ.41

Follow Us:
Download App:
  • android
  • ios