Asianet Suvarna News Asianet Suvarna News

ಗುಂಪಲ್ಲಿ ಗೋವಿಂದ ಅಂದ್ರೆ ಇದೇನಾ... ದರೋಡೆಕೋರರೆಂದು ತಪ್ಪಾಗಿ ತಿಳಿದು ಹೊಟೇಲ್‌ನಿಂದ ಓಟಕಿತ್ತ ಜನ

ಗುಂಪಲ್ಲಿ ಗೋವಿಂದ ಎಂಬ ಗಾದೆಯನ್ನು ಕೇಳಿರಬಹುದು ಅದರರ್ಥ ವಿಷಯ ಏನು ಎಂದು ತಿಳಿಯದೇ ಬೇರೆಯವರು ಮಾಡಿದಂತೆ ನಾವು ಮಾಡುವುದು. ಈ ಗಾದೆ ಈಗ್ಯಾಕೆ ಅಂತೀರಾ ಕಾರಣ ಇದೇರಿ. ಇಲ್ಲೊಂದು ಕಡೆ ಓಟಗಾರರನ್ನು ಕಳ್ಳರೆಂದು ತಿಳಿದು ರೆಸ್ಟೋರೆಂಟ್‌ನಲ್ಲಿ ಊಟಕ್ಕೆ ಕುಳಿತಿದ್ದ ಮಂದಿಯೆಲ್ಲಾ ಎದ್ದು ಓಡಿದ್ದಾರೆ. ಬ್ರೆಜಿಲ್‌ನಲ್ಲಿ ಈ ನಗು ತರಿಸುವ ಘಟನೆ ನಡೆದಿದೆ.

people starts running after misunderstanding runner as robbers akb
Author
First Published Sep 27, 2022, 1:48 PM IST

ಬ್ರೆಜಿಲ್: ಗುಂಪಲ್ಲಿ ಗೋವಿಂದ ಎಂಬ ಗಾದೆಯನ್ನು ಕೇಳಿರಬಹುದು ಅದರರ್ಥ ವಿಷಯ ಏನು ಎಂದು ತಿಳಿಯದೇ ಬೇರೆಯವರು ಮಾಡಿದಂತೆ ನಾವು ಮಾಡುವುದು. ಈ ಗಾದೆ ಈಗ್ಯಾಕೆ ಅಂತೀರಾ ಕಾರಣ ಇದೇರಿ. ಇಲ್ಲೊಂದು ಕಡೆ ಓಟಗಾರರನ್ನು ಕಳ್ಳರೆಂದು ತಿಳಿದು ರೆಸ್ಟೋರೆಂಟ್‌ನಲ್ಲಿ ಊಟಕ್ಕೆ ಕುಳಿತಿದ್ದ ಮಂದಿಯೆಲ್ಲಾ ಎದ್ದು ಓಡಿದ್ದಾರೆ. ಬ್ರೆಜಿಲ್‌ನಲ್ಲಿ ಈ ನಗು ತರಿಸುವ ಘಟನೆ ನಡೆದಿದೆ.

ನಮ್ಮಲ್ಲಿ ಸ್ಟ್ರೀಟ್ ಫುಡ್‌ಗಳ ಸಾಲುಗಳಿರುವಂತೆ ಬ್ರೆಜಿಲ್‌ನಲ್ಲಿ(Brazil) ಫುಟ್‌ಪಾತ್ ಅತ್ತಿತ್ತ ಸಾಲು ಸಾಲು ದೊಡ್ಡದಾದ ಕೊಡೆಗಳನ್ನು ಇರಿಸಿ ಅದರ ಕೆಳಗೆ ಟೇಬಲ್‌ಗಳನ್ನು ಇರಿಸಿ ಊಟ ತಿಂಡಿ ನೀಡುವ ವ್ಯವಸ್ಥೆ ಇದೆ. ಹಾಗೆಯೇ ಇಲ್ಲಿ ಜನ ತಿನಿಸು ತಿನ್ನಲು ಟೇಬಲ್‌ಗಳ ಮೇಲೆ ಕುಳಿತು ತಿನ್ನುತ್ತಿದ್ದರು. ಅಷ್ಟೊತ್ತಿಗೆ ಆ ಫುಟ್‌ಪಾತ್ (Footpath) ಮೇಲೆ ಓಟಗಾರರು ಓಡುತ್ತಾ ಬಂದಿದ್ದಾರೆ. ಇವರನ್ನು ನೋಡಿ ಊಟ ತಿನ್ನುತ್ತಿದ್ದವರು ಒಬ್ಬೊಬ್ಬರಾಗಿ ಓಡಲು ಶುರು ಮಾಡಿದ್ದಾರೆ. ಏನೆಂದು ವಿಚಾರಿಸಿಕೊಳ್ಳದೇ ಒಬ್ಬರನ್ನು ನೋಡಿ ಮತ್ತೊಬ್ಬರು ಸ್ಥಳದಿಂದ ಕಾಲ್ಕಿತ್ತಿದ್ದು, ಇದರಿಂದ ರೆಸ್ಟೋರೆಂಟ್(restaurant) ಸಂಪೂರ್ಣ ಖಾಲಿಯಾಗಿದೆ. ಜೊತೆಗೆ ರೆಸ್ಟೋರೆಂಟ್‌ ಮಂದಿ ದಂಗಾಗಿ ಏನಾಗುತ್ತಿದೆ ಎಂದು ನೋಡುತ್ತಿದ್ದಾರೆ.

 

ಇದರ ವಿಡಿಯೋ ಅಲ್ಲಿನ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಓಟಗಾರರನ್ನು(Runners) ನೋಡಿ ಜನ ತಿನ್ನುವುದನ್ನು ಬಿಟ್ಟು ಎದ್ನೋಬಿದ್ನೋ ಎಂದು ಓಡಿ ಹೋಗುತ್ತಿರುವುದು ಕಾಣಿಸುತ್ತಿದೆ. ಜನ ಓಡುವ ರಭಸಕ್ಕೆ ಚೇರುಗಳನ್ನು ಎಗ್ಗರಿ ಅವುಗಳ ಜೊತೆ ತಾವು ಬಿದ್ದರು ಅಲ್ಲಿಂದ ಎದ್ದು ಬದುಕಿದೆನೋ ಬಡ ಜೀವ ಎಂದು ಕಾಲಿಗೆ ಬುದ್ದಿ ಹೇಳಿದ್ದಾರೆ. ಈ ವಿಡಿಯೋವನ್ನು 9 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ.

ಬೀಚ್‌ನಲ್ಲಿದ್ದ ಸೆಕ್ಸ್‌ ಟಾಯ್‌: ಹೆಣ ಎಂದು ತಿಳಿದು ಪೊಲೀಸರಿಗೆ ಫೋನ್ ಮಾಡಿದ ಜನ

ಶುಕ್ರವಾರ ರಾತ್ರಿ ಬ್ರೆಜಿಲ್‌ನ Cervejaria Alphaiate ಬಾರ್ ಹಾಗೂ ರೆಸ್ಟೋರೆಂಟ್‌ನಲ್ಲಿ ಈ ಘಟನೆ ನಡೆದಿದೆ. ಮೂವರು ರನ್ನರ್‌ಗಳು ಈ ರೆಸ್ಟೋರೆಂಟ್ ಪಾಸಾಗಿ ಹೋಗುವ ಮೊದಲು ಎಲ್ಲವೂ ಸಹಜ ಎಂಬಂತಿತ್ತು. ಆದರೆ ಅವರು ಅಲ್ಲೇ ಓಡುತ್ತಾ ಪಾಸಾಗಿ ಹೋದ ಸೆಕೆಂಡುಗಳ ನಂತರ ಇಡೀ ರೆಸ್ಟೋರೆಂಟ್‌ನ ಚಿತ್ರಣವೇ ಬದಲಾಗಿದೆ. ಊಟಕ್ಕೆ ಕುಳಿತಿದ್ದ ಒಬ್ಬ ಊಟ ಬಿಟ್ಟು ಓಡುತ್ತಿದ್ದಂತೆ ಎಲ್ಲರೂ ಜೊತೆಯಲ್ಲಿ ಓಡಲು ಶುರು ಮಾಡಿದ್ದಾರೆ. ಆದರೆ ನಂತರ ಓಟಗಾರರನ್ನು ದರೋಡೆಕೋರರು ಎಂದು ತಪ್ಪಾಗಿ ತಿಳಿದು ಹೀಗಾಗಿದೆ ಎಂದು ತಿಳಿದು ಬಂದಿದೆ ಎಂದು ಬ್ರೆಜಿಲ್‌ ಮಾಧ್ಯಮಗಳು ವರದಿ ಮಾಡಿವೆ.

ಗೂಗಲ್‌ ಕಿವಿಗೆ ಹೂವಿಟ್ಟ ಕಲಾವಿದ, ನಕಲಿ ಟ್ರಾಫಿಕ್ ಜಾಮ್ ಸೃಷ್ಟಿಸಿದ!

ಇದೇ ರೆಸ್ಟೋರೆಂಟ್‌ನಲ್ಲಿ ಊಟಕ್ಕೆ ಕುಳಿತಿದ್ದ ವೃತ್ತಿಯಲ್ಲಿ ವೈದ್ಯರಾಗಿರುವ ಅಮಿರ್ ಕೆಲ್ನರ್ ಎಂಬವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಜನರು ಓಟಗಾರರ ಗುಂಪನ್ನು ದರೋಡೆಕೋರರು ಎಂದು ತಪ್ಪಾಗಿ ತಿಳಿದು ಓಡಲು ಶುರು ಮಾಡಿದರು ಎಂದು ಹೇಳಿದ್ದಾರೆ.

ಈ ಓಟಗಾರರ ಗುಂಪು ನಿಧಾನವಾಗಿ ನಮ್ಮತ್ತ ಬರುತ್ತಿತ್ತು. ಅವರು ನಮ್ಮ ಟೇಬಲ್ ಸಮೀಪ ಬಂದಾಗ ಅವರು ಒಮ್ಮೆಲೆ ತಮ್ಮ ವೇಗ ಹೆಚ್ಚಿಸಿ ಓಡಲು ಶುರು ಮಾಡಿದರು. ಈ ವೇಳೆ ನಾನು ಸ್ನೇಹಿತನಿಗೆ ಫೋನ್‌ನಲ್ಲಿ ಮಾತನಾಡುತ್ತಾ ಅವಳ ಬ್ಯಾಗ್ ಅನ್ನು ಹಿಡಿದುಕೋ ಎಂದು ಹೇಳಿದೆ. ಈ ವೇಳೆ ಅಲ್ಲಿದ್ದ ಒಬ್ಬಳು ಎದ್ದು ನಿಂತಳು. ಅದೇ ಸಮಯಕ್ಕೆ ಯಾರೋ ದರೋಡೆ ಆಗ್ತಿದೆ ಎಂದು ಜೋರಾಗಿ ಕೂಗಿದರು. ಈ ವೇಳೆ ನಾನು ಎದ್ದು ನಿಂತಾಗ ಕೂಡ ಎಲ್ಲರೂ ದರೋಡೆಕೋರ ಎಂದು ಬೊಬ್ಬೆ ಹೊಡೆಯಲು ಶುರು ಮಾಡಿದರು. ಅಲ್ಲದೇ ತಮ್ಮ ಸ್ಥಳದಿಂದ ಎದ್ದು ಓಡಲು ಶುರು ಮಾಡಿದರು ಆದರೆ ಸ್ವಲ್ಪ ಹೊತ್ತಿನ ನಂತರ ಎಲ್ಲರೂ ಮರಳಿ ಬಂದು ತಮ್ಮ ತಮ್ಮ ಟೇಬಲ್ ಮೇಲೆ ಕುಳಿತು ಏನೂ ಆಗಿಲ್ಲ ಎಂಬಂತೆ ನಗಲು ಶುರು ಮಾಡಿದ್ದರು ಎಂದು ಅವರು ವಿವರಿಸಿದ್ದಾರೆ. @RuidoEnLaRed ಎಂಬುವವರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು 8 ಮಿಲಿಯನ್ ಗೂ ಹೆಚ್ಚು ಜನ ಈ ವಿಡಿಯೋ ವೀಕ್ಷಿಸಿದ್ದಾರೆ.

Follow Us:
Download App:
  • android
  • ios