Asianet Suvarna News Asianet Suvarna News

ಭಾರತಕ್ಕೆ ತನ್ನ ನಾಯಕನ ಮೇಲೆ ನಂಬಿಕೆ ಇದೆ: ಮೋದಿ ಬೆಂಬಲಕ್ಕೆ ನಿಂತ ಅಮೆರಿಕನ್ ಸಿಂಗರ್ ಮೇರಿ

ಈಶಾನ್ಯ ರಾಜ್ಯ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಅಮೆರಿಕಾದ ಗಾಯಕಿ ಮೇರಿ ಮೆಲ್ಬಿನ್ ಮತ್ತೆ ಪ್ರಧಾನಿ ನರೇಂದ್ರ ಮೋದಿ ಬೆಂಬಲಕ್ಕೆ ನಿಂತಿದ್ದಾರೆ. ನಿಮ್ಮ (ಮಹಿಳೆಯರ) ಸ್ವಾತಂತ್ರ್ಯಕ್ಕಾಗಿ ಮೋದಿ ಸದಾ ಹೋರಾಡುತ್ತಾರೆ ಹಾಗೂ ಭಾರತದ ಜನರಿಗೆ ತನ್ನ ನಾಯಕನ ಮೇಲೆ ನಂಬಿಕೆ ಇದೆ ಎಂದು ಅವರು ಹೇಳಿದ್ದಾರೆ.

People of India have faith in their leader American singer Mary again stands in support of Prime Minister Narendra Modi akb
Author
First Published Aug 11, 2023, 10:45 AM IST

ನ್ಯೂಯಾರ್ಕ್‌: ಈಶಾನ್ಯ ರಾಜ್ಯ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಅಮೆರಿಕಾದ ಗಾಯಕಿ ಮೇರಿ ಮೆಲ್ಬಿನ್ ಮತ್ತೆ ಪ್ರಧಾನಿ ನರೇಂದ್ರ ಮೋದಿ ಬೆಂಬಲಕ್ಕೆ ನಿಂತಿದ್ದಾರೆ. ನಿಮ್ಮ (ಮಹಿಳೆಯರ) ಸ್ವಾತಂತ್ರ್ಯಕ್ಕಾಗಿ ಮೋದಿ ಸದಾ ಹೋರಾಡುತ್ತಾರೆ ಹಾಗೂ ಭಾರತದ ಜನರಿಗೆ ತನ್ನ ನಾಯಕನ ಮೇಲೆ ನಂಬಿಕೆ ಇದೆ ಎಂದು ಅವರು ಹೇಳಿದ್ದಾರೆ. ಕಳೆದ ಜುಲೈನಲ್ಲಿ ಮಹಿಳೆಯರ ವಿರುದ್ಧದ ಅಮಾನವೀಯ ವರ್ತನೆ ಬಗ್ಗೆ  ಸಾರ್ವಜನಿಕ ಕಾರ್ಯಕ್ರಮದಲ್ಲಿ ಮೋದಿ ಮಾತನಾಡಿದ್ದಾಗಲೂ ಮೇರಿ ಮಿಲ್ಬೆನ್ ಪ್ರಧಾನಿಗೆ ಕೃತಜ್ಞತೆ ಅರ್ಪಿಸಿದ್ದರು. 

ಸಾಮಾಜಿಕ ಜಾಲತಾಣ ಎಕ್ಸ್‌(ಟ್ವಿಟ್ಟರ್‌)ನಲ್ಲಿ  ಈ ಬಗ್ಗೆ ಟ್ವಿಟ್‌ ಮಾಡಿದ ಅಮೆರಿಕಾದ ಖ್ಯಾತ ಗಾಯಕಿ ಮೇರಿ ಮಿಲ್ಬೆನ್, ಸತ್ಯವೆಂದರೆ ಭಾರತ ತನ್ನ ನಾಯಕನ ಮೇಲೆ ವಿಶ್ವಾಸವಿರಿಸಿದೆ,  ಅಲ್ಲಿನ ತಾಯಂದಿರು, ಪುತ್ರಿಯರು, ಹಾಗೂ ಮಣಿಪುರದ ಮಹಿಳೆಯರಿಗೆ ನ್ಯಾಯ ಸಿಗಲಿದೆ,  ಪ್ರಧಾನಿ ಮೋದಿ ನಿಮ್ಮ ಸ್ವಾತಂತ್ರ್ಯಕ್ಕಾಗಿ ಸದಾ ಹೋರಾಡಲಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಕಳೆದ ಜೂನ್‌ನಲ್ಲಿ ಪ್ರಧಾನಿ ಮೋದಿ ಅಮೆರಿಕಾ ಪ್ರವಾಸದ ವೇಳೆ ಈ ಗಾಯಕಿ ಮೇರಿ ಮಿಲ್ಬೆನ್ (US singer Mary Millben), ಭಾರತದ ರಾಷ್ಟ್ರಗೀತೆ ಜನಗಣಮನ ಹಾಡಿದ್ದರು. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಪಾದ ಮುಟ್ಟಿ ನಮಸ್ಕರಿಸಿದ್ದರು. 

ಭಾರತ ಮಾತೆಯನ್ನು 3 ಭಾಗ ಮಾಡಿದ್ದೇ ಕಾಂಗ್ರೆಸ್‌: ಮೋದಿ ಭಾಷಣದ ಹೈಲೈಟ್ಸ್

ಇದೇ ವೇಳೆ ಭಾರತದಲ್ಲಿರುವ ವಿರೋಧ ಪಕ್ಷದ ಬಗ್ಗೆಯೂ ಅವರು ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ವಿರುದ್ಧ ನೇರ ವಾಗ್ದಾಳಿ ನಡೆಸಿದ ಅವರು,  ಸತ್ಯವೆನೆಂದರೆ ದೇಶದ ಸಾಂಸ್ಕೃತಿಕ ಪರಂಪರೆಯನ್ನು ಅವಮಾನಿಸುವ, ಮಕ್ಕಳಿಗೆ ತನ್ನ ದೇಶದ ಗೀತೆಯನ್ನು ಹಾಡುವ ಹಕ್ಕನ್ನು ನಿರಾಕರಿಸುವ ಮತ್ತು ವಿದೇಶದಲ್ಲಿ ತನ್ನ ದೇಶವನ್ನು ಕೀಳಾಗಿಸುವಂತಹ ಪಕ್ಷದ ಸಹವಾಸ ಮಾಡುವುದು ನಾಯಕತ್ವವಲ್ಲ, ಇದು ತತ್ವವಲ್ಲ ಎಂದು ಅವರು ಟೀಕಿಸಿದ್ದಾರೆ. 

ಪ್ರಾಮಾಣಿಕತೆ ಇಲ್ಲದ ಪತ್ರಿಕೋದ್ಯಮವು ಸುಳ್ಳನ್ನು ಚಿತ್ರಿಸುತ್ತದೆ.  ಹುರುಳಿಲ್ಲದಿದ್ದರು ವಿರೋಧಿ ಧ್ವನಿಗಳು ಜೋರಾಗಿ ಕೂಗುತ್ತವೆ. ಆದರೆ ಸತ್ಯವೆನೆಂದರೆ ಸತ್ಯವು ಯಾವಾಗಲೂ ಜನರನ್ನು ಮುಕ್ತಗೊಳಿಸುತ್ತದೆ ಎಂದು ಮಿಲ್ಬೆನ್ ಬರೆದಿದ್ದಾರೆ. ಇದೇ ವೇಳೆ ಅಮೆರಿಕಾದ ಪ್ರಭಾವಿ ನಾಯಕ,  1950 ರ ದಶಕದ ಮಧ್ಯಭಾಗದಲ್ಲಿ ಅಮೆರಿಕಾದ ನಾಗರಿಕ ಹಕ್ಕುಗಳ ಚಳವಳಿಯ ನೇತೃತ್ವ ವಹಿಸಿದ್ದ, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ  ದಿವಂಗತ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ (Martin Luther King Jr)ಅವರ 'ಲೆಟ್ ಫ್ರೀಡಂ ರಿಂಗ್' (Let Freedom Ring) (ಸ್ವಾತಂತ್ರದ  ರಿಂಗಣಿಸಲು ಬಿಡೋಣ) ಎಂಬ ಮಾತುಗಳನ್ನು ಉಲ್ಲೇಖಿಸಿದ  ಗಾಯಕಿ (American singer), ನನ್ನ ಪ್ರೀತಿಯ ಭಾರತದಲ್ಲಿ ಸತ್ಯ ಪ್ರತಿಧ್ವನಿಸಲು ಬಿಡೋಣ  ಎಂದು ಹೇಳಿದರು. 

ವಿಪಕ್ಷದ ಪ್ರಶ್ನೆಗಳಿಗೆ ಮೋದಿ ಸಿಡಿಗುಂಡು: ಪ್ರತಿಪಕ್ಷಗಳ ಅವಿಶ್ವಾಸ ಗೊತ್ತುವಳಿಗೆ ಹೀನಾಯ ಸೋಲು

ಜುಲೈನಲ್ಲಿ ಲೋಕಸಭಾ ಅಧಿವೇಶನಕ್ಕೆ (Loksabha Monsoon Session) ಮೊದಲು ಹಿಂಸಾಚಾರ ಪೀಡಿತ ಮಣಿಪುರದಲ್ಲಿ (violence-hit Manipur) ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಎರಡು ತಿಂಗಳ ಹಿಂದೆ ನಡೆದಿದ್ದ ವೀಡಿಯೋ ವೈರಲ್ ಆಗಿತ್ತು.  ಇದರಿಂದ ಇಡೀ  ದೇಶವೇ ಆಘಾತಗೊಂಡಿತ್ತು.  ಈ ವಿಚಾರದ ಬಗ್ಗೆ ಅಧಿವೇಶನದ ಮೊದಲ ದಿನ ಪ್ರಸ್ತಾಪಿಸಿದ ಮೋದಿ ಈ ಘಟನೆಯು 140 ಕೋಟಿ ಭಾರತೀಯರನ್ನು ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡಿದೆ ಮತ್ತು ಯಾವುದೇ ತಪ್ಪಿತಸ್ಥರನ್ನು ಬಿಡುವುದಿಲ್ಲ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮಿಲ್ಬಿನ್,  ಮಣಿಪುರದಲ್ಲಿ ಮಹಿಳೆಯರ ವಿರುದ್ಧ ನಡೆದ ಅಮಾನವೀಯ ವರ್ತನೆಯ ಬಗ್ಗೆ ಸಾರ್ವಜನಿಕವಾಗಿ ತಿಳಿಸಿದ್ದಕ್ಕಾಗಿ ಪ್ರಧಾನ ಮಂತ್ರಿಗೆ ಧನ್ಯವಾದ ತಿಳಿಸುತ್ತೇನೆ ಎಂದಿದ್ದರು.  ಮಹಿಳೆಯರನ್ನು ದೇವರ ಮಕ್ಕಳು ಎಂದು ಕರೆದ ಮಿಲ್ಬೆನ್, ಮಣಿಪುರದಲ್ಲಿ ಹಲ್ಲೆಗೊಳಗಾದ ಮಹಿಳೆಯರಿಗಾಗಿ ನನ್ನ ಹೃದಯವು ದುಃಖಿಸುತ್ತದೆ ಎಂದು ಹೇಳಿದ್ದರು.

 

Follow Us:
Download App:
  • android
  • ios