Asianet Suvarna News Asianet Suvarna News

ಕೊರೋನಾ ನಿಯಂತ್ರಣದಲ್ಲಿ ಆರೋಗ್ಯ ಸೇತು ಆ್ಯಪ್ ಪ್ರಮಖ ಪಾತ್ರ; WHO ಮೆಚ್ಚುಗೆ!

ಕೊರೋನಾ ವೈರಸ್ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡಿದೆ. ಹೀಗೆ ಆರೋಗ್ಯ ಸೇತು ಆ್ಯಪ್ ಮೂಲಕ ಕೊರೋನಾ ಹಾಟ್‌ಸ್ಪಾಟ್, ಸೇರಿದಂತೆ ಎಲ್ಲಾ ಮಾಹಿತಿಗಳನ್ನು ತಿಳಿಯಲು ಸಾಧ್ಯವಿದೆ. ಇದೀಗ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಆರೋಗ್ಯ ಸೇತು ಆ್ಯಪ್ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ.

WHO praise Indian government Aarogya Setu app to notify users about coronavirus cases ckm
Author
Bengaluru, First Published Oct 13, 2020, 7:55 PM IST

ಜಿನೆವಾ(ಅ.13): ಕೊರೋನಾ ವೈರಸ್ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಆರೋಗ್ಯ ಸೇತು ಆ್ಯಪ್‌ಗೆ ವಿಶ್ವ ಆರೋಗ್ಯ ಸಂಸ್ಥೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದೆ.  ಆರೋಗ್ಯ ಸೇತು ಆ್ಯಪ್ ಮೂಲಕ ಕೊರೋನಾ ವೈರಸ್ ಹೆಚ್ಚಾಗಿರುವ ವಲಯ, ಕೊರೋನಾ ಹಾಟ್‌ಸ್ಪಾಟ್ ಪ್ರದೇಶ, ಸೋಂಕಿತರ ಏರಿಯಾ ಸೇರಿದಂತೆ ಎಲ್ಲಾ  ಮಾಹಿತಿಗಳು ಲಭ್ಯವಾಗುವ ಕಾರಣ, ನೇರವಾಗಿ ತೆರಳಿ ಪರೀಕ್ಷೆ ಮಾಡಿಸಿ, ಇತರರಿಗೆ ಹರಡದಂತೆ ತಡೆಯಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶಕ ಟೆಡ್ರಾಸ್ ಅಧಾನಮ್ ಗೆಬ್ರೆಯೆಸಸ್ ಹೇಳಿದ್ದಾರೆ.

ಆರೋಗ್ಯ ಸೇತು ಆ್ಯಪ್‌ನಿಂದ 1.4 ಲಕ್ಷ ಜನರಿಗೆ ಅಲರ್ಟ್‌

150 ಮಿಲಿಯನ್ ಭಾರತೀಯರು ಆರೋಗ್ಯ ಸೇತು ಆ್ಯಪ್ ಡೌನ್ಲೋಡ್ ಮಾಡಿದ್ದಾರೆ. ಕೊರೋನಾ ವೈರಸ್ ಸಮೂಹ ಪ್ರದೇಶಗಳನ್ನು, ಹೆಚ್ಚಾಗಿ ಸೋಂಕಿತರು ಇರುವ ಜಾಗವನ್ನು ಗುರಿತಿಸಲು ಆ್ಯಪ್‌ನಿಂದ ಸಾಧ್ಯವಾಗುತ್ತಿದೆ. ಇದು ಆರೋಗ್ಯ ಇಲಾಖೆಗೆ ಸಹಾಯವಾಗಿದೆ ಎಂದ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಕೊರೋನಾ ವೈರಸ್ ವಕ್ಕರಿಸಿದ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೊದಲ ಹಂತದ ಲಾಕ್‌ಡೌನ್ ಘೋಷಣೆ ಮಾಡಿದ್ದರು. ಈ ವೇಳೆ ಆರೋಗ್ಯ ಸೇತು ಆ್ಯಪ್ ಲಾಂಚ್ ಮಾಡಿದ್ದರು. ಎಪ್ರಿಲ್ ತಿಂಗಳಲ್ಲಿ ಬಿಡುಗಡೆಯಾದ ಆರೋಗ್ಯ ಸೇತು ಆ್ಯಪ್‌ ಇದೀಗ ಕೊರೋನಾ ಗುರುತಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ ಎಂದು ವಿಶ್ವ ಆರೋಗ್ಯ  ಸಂಸ್ಥೆ ಹೇಳಿದೆ.

ಭಾರತದ ರೀತಿಯಲ್ಲಿ ಜರ್ಮನಿ ಸರ್ಕಾರ ಹಾಗೂ ಇಂಗ್ಲೆಂಡ್ ಸರ್ಕಾರ ಆ್ಯಪ್ ಬಿಡುಗಡೆ ಮಾಡಿ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದೆ. ಇದು ಸಾರ್ವಜನಿಕರಿಗೆ ಮಾತ್ರವಲ್ಲ ಆರೋಗ್ಯ ಅಧಿಕಾರಿಗಳಿಗೂ ಉಪಯುಕ್ತವಾಗಿದೆ ಎಂದು ಟೆಡ್ರಾಸ್ ಅಧಾನಮ್ ಗೆಬ್ರೆಯೆಸಸ್ ಹೇಳಿದ್ದಾರೆ.
 

Follow Us:
Download App:
  • android
  • ios