ಕೊರೋನಾ ನಿಯಮ ಮೀರಿ ಸೆಲ್ಫಿ; ಕ್ಷಮೆ ಕೇಳಿದ ಪ್ರಧಾನಿ!

ಕ್ಷಮೆ ಕೇಳಿದ ನ್ಯೂಜಿಲೆಂಡ್ ಪ್ರಧಾನಿ/ ಕೊರೋನಾ ಸಾಮಾಜಿಕ ಅಂತರ ಮೀರಿದ್ದಕ್ಕೆ ಕ್ಷಮೆ ಯಾಚಿಸಿದ ಜೆಸಿಂಡಾ ಅರ್ಡನ್ / ಕೊರೋನಾ ನಿಯಂತ್ರಣದಲ್ಲಿ ವಿಶ್ವದ ಮೆಚ್ಚುಗೆ ಪಡೆದುಕೊಂಡಿದ್ದ ನ್ಯೂಜಿಲೆಂಡ್

New Zealand PM Jacinda Ardern Apologises For Selfie With No Social Distancing Covid 19 mah

ನ್ಯೂಜಿಲೆಂಡ್(ಸೆ. 22)  ಕೊರೋನಾ ನಿಯಂತ್ರಣದಲ್ಲಿ ನ್ಯೂಜಿಲೆಂಡ್ ವಿಶ್ವದಲ್ಲಿಯೇ ಪ್ರಥಮ ಸ್ಥಾನ ಪಡೆದುಕೊಂಡಿತ್ತು. ಅಕ್ಲೆಂಡ್ ನಲ್ಲಿ ಲಾಕ್ ಡೌನ್ ನಿಯಮ ಸಡಿಲ ಮಾಡಿದ ನಂತರದ ಕಾರ್ಯಕ್ರಮವೊಂದರಲ್ಲಿ ನ್ಯೂಜಿಲೆಂಡ್ ಪ್ರಧಾನಿ ಜೆಸಿಂಡಾ ಅರ್ಡನ್  ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದರು. ಈ ವೇಳೆ ಕೊರೋನಾ ಸಾಮಾಜಿಕ ಅಂತರ ಮೀರಿದ್ದರು.

ಆದರೆ ಈ ವಿಚಾರ ಚರ್ಚೆಗೆ ಬರುತ್ತರಲೇ ಜಸಿಂಡಾ ಅರ್ಡನ್ ಕ್ಷಮೆ ಕೇಳಿದ್ದಾರೆ.  ಕ್ಷಮೆ ಕೇಳಿ ತಮ್ಮ ದೊಡ್ಡತನ ಮೆರೆದಿದ್ದಾರೆ. 

ಹಿಂದೂ ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ನ್ಯೂಜಿಲೆಂಡ್ ಪ್ರಧಾನಿ

ಪಾಲ್ ಮೋರ್ಸಟನ್ ಉತ್ತರದ ಪ್ರವಾಸಲ್ಲಿ ಪ್ರಧಾನಿ ಇದ್ದರು. ಈ ವೇಳೆ ಅಭಿಮಾನಿಗಳು ಮುತ್ತಿಕೊಂಡಿದ್ದು ಕೊರೋನಾದ 1.5  ಮೀಟರ್ ಅಂತರ ಮೀರಿದ್ದರು . ಈ ಕಾರಣಕ್ಕೆ ದೇಶದ ಪ್ರಧಾನಿಯೇ ಕ್ಷಮೆ ಕೇಳಿದ್ದಾರೆ.

ಇಂಥ ಬೆಳವಣಿಗೆ ನಮ್ಮ ದೇಶದಲ್ಲಿ ಎಲ್ಲ ನೋಡಲು ಅಸಾಧ್ಯ. ಪ್ರಮುಖ ನಾಯಕರು, ಸಚಿವರು ಸಾಮಾಜಿಕ ಅಂತರ ಮರೆತ ಅದೆಷ್ಟೋ ಘಟನೆಗಳು ಇವೆ. 

 

 

 

Latest Videos
Follow Us:
Download App:
  • android
  • ios