Asianet Suvarna News Asianet Suvarna News

ಒಮಿಕ್ರೋನ್ ಬಗ್ಗೆ ಭಯ ಬೇಡ ಎಂದ WHO ವಿಜ್ಞಾನಿ ಡಾ.ಸೌಮ್ಯ ಸ್ವಾಮಿನಾಥನ್

  • ಒಮಿಕ್ರೋನ್ ಬಗ್ಗೆ ಭಯ ಬೇಡ ಎಂದ ವಿಶ್ವ ಆರೋಗ್ಯ ಸಂಸ್ಥೆ
  • ವೈರಸ್ ವಿರುದ್ಧ ಹೋರಾಡಲು ಕೋವಿಡ್‌ ಲಸಿಕೆಗಳು ಪರಿಣಾಮಕಾರಿ ಎಂದು ಹೇಳಲಾಗುವುದಿಲ್ಲ
  • ಡೆಲ್ಟಾ ಸೋಂಕು ಮೀರಿ ಒಮಿಕ್ರೋನ್ ಹೆಚ್ಚು ಹರಡುವ  ಸಾಧ್ಯತೆ
people do not to panic over Omicron says WHO Chief Scientist Soumya Swaminathan Gow
Author
Bengaluru, First Published Dec 4, 2021, 1:24 PM IST
  • Facebook
  • Twitter
  • Whatsapp

ವಿಶ್ವಸಂಸ್ಥೆ(ಡಿ.4): ಅತ್ಯಂತ ಅಪಾಯಕಾರಿ ವೈರಸ್‌ ಎಂದು ಬಣ್ಣಿಸಲಾಗಿರುವ ಕೊರೊನಾ ವೈರಸ್ ನ ರೂಪಾಂತರದ ಒಮಿಕ್ರೋನ್ ವೈರಸ್‌ ಬಗ್ಗೆ ಜನರು ಭಯಭೀತರಾಗುವ ಅಗತ್ಯ ಇಲ್ಲ ಎಂದು  ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ (WHO Scientist) ಡಾ.ಸೌಮ್ಯ ಸ್ವಾಮಿನಾಥನ್ ( Dr Soumya Swaminathan) ಹೇಳಿದ್ದಾರೆ. 

ನವೆಂಬರ್ 3ರ ಶುಕ್ರವಾರ ಈ ಬಗ್ಗೆ ಹೇಳಿಕೆ ನೀಡಿರುವ ಅವರು.  ಒಮಿಕ್ರೋನ್(Omicron)‌ ಬಗ್ಗೆ  ಭಯ ಬೇಡ. ಈ ವೈರಸ್ ವಿರುದ್ಧ ಹೋರಾಡಲು ಕೋವಿಡ್‌-19 ಲಸಿಕೆಗಳು ಪರಿಣಾಮಕಾರಿಯಾಗಬಹುದು ಎಂದು ಇಷ್ಟು ಬೇಗ ಹೇಳಲಾಗುವುದಿಲ್ಲ. ಲಸಿಕೆಗಳನ್ನು ಅಭಿವೃದ್ಧಿ ಪಡಿಸುವ ಅಗತ್ಯತೆ ಇರಬಹುದು. ಒಮಿಕ್ರೋನ್ ವೈರಸ್ ಪ್ರಬಲವಾಗಿದ್ದರೆ ಊಹಿಸುವುದು ಕೂಡ ಕಷ್ಟ  ಎಂದಿದ್ದಾರೆ.

Omcricon ಆತಂಕ, ವಿಶೇಷ ಲಸಿಕೆ ತಯಾರಿಸುತ್ತಿದೆ ಅಮೆರಿಕ, ಜನವರಿಯಿಂದ ಲಭ್ಯ ಸಾಧ್ಯತೆ!

ಈಗಾಗಲೇ  ಒಮಿಕ್ರೋನ್  ಏಷ್ಯಾ, ಆಫ್ರಿಕಾ, ಅಮೇರಿಕಾ, ಮಧ್ಯಪ್ರಾಚ್ಯ ಮತ್ತು ಯುರೋಪ್‌ನಲ್ಲಿ ತನ್ನ ಹಿಡಿತ ಸಾಧಿಸಿದೆ. ಮಾತ್ರವಲ್ಲ ದಕ್ಷಿಣ ಆಫ್ರಿಕಾದ ಒಂಬತ್ತು ಪ್ರಾಂತ್ಯಗಳಲ್ಲಿ ಏಳು ಪ್ರಾಂತ್ಯಗಳನ್ನು ತಲುಪಿದೆ, ಅಲ್ಲಿ ಅದನ್ನು ಮೊದಲು ಗುರುತಿಸಲಾಗಿದೆ. ಈ ರೂಪಾಂತರ ವೈರಸ್ ಹರಡದಂತೆ ತಡೆಯಲು ಅನೇಕ ಸರಕಾರಗಳು ಪ್ರಯಾಣ ನಿಯಮಗಳನ್ನು ಬಿಗಿಗೊಳಿಸಿವೆ. 

Covid 19 Variant: ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್‌ ದ್ವಿಗುಣ: ಒಮಿಕ್ರೋನ್‌ಗೆ ಯುವಜನತೆಯೇ ಟಾರ್ಗೆಟ್‌?

ನಾವು ಇದಕ್ಕೆ ಚಿಂತೆ ಮಾಡುವುದನ್ನು ಬಿಡಬೇಕು. ಇಂತಹ ಪರಿಸ್ಥಿತಿಯನ್ನು ಎದುರಿಸಲು ಸಿದ್ದರಿರಬೇಕು ಮತ್ತು ಜಾಗರೂಕರಾಗಿರಬೇಕು. ಭಯಪಡುವವುದು ಸರಿಯಲ್ಲ. ಏಕೆಂದರೆ ಇಂತಹ  ವಿಭಿನ್ನ ಸ್ಥಿತಿಯಲ್ಲಿದ್ದು ಈಗ ವರುಷಗಳೇ ಕಳೆದಿವೆ ಎಂದು ಡಾ.ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.

Omicron Threat: ಮತ್ತೆ ಆಕಾರ ಬದಲಿಸಿದ ಚೀನಾ ವೈರಸ್!

ಮುಂದುವರೆದು ಮಾತನಾಡಿರುವ ಅವರು, ವಿಶ್ವದಾದ್ಯಂತ 99% ನಷ್ಟು ಡೆಲ್ಟಾ ಸೋಂಕು (delta virus) ಆವರಿಸಿದೆ. ಇದನ್ನು ಮೀರಿ ಒಮಿಕ್ರೋನ್ ಹೆಚ್ಚು ಹರಡುವ ಲಕ್ಷಣ ಕಾಣುತ್ತಿದೆ. ಇದು ಸಾಧ್ಯ, ಆದರೆ ಇದನ್ನು ಊಹಿಸಲು ಸಾಧ್ಯವಿಲ್ಲ. ಯೂರೋಪ್‌ನ ಎರಡು ಡಜನ್‌ಗಿಂತಲೂ ಹೆಚ್ಚು ಭಾಗಗಳಲ್ಲಿ ಪರಿಚಿತವಾದ ಡೆಲ್ಟಾ ರೂಪಾಂತರದ ಸೋಂಕಿನ ಅಲೆಯ ಮಾದರಿಯನ್ನು ಹೊಂದಿರುವ ಒಮಿಕ್ರೋನ್ ಬಗ್ಗೆ ಹೆಚ್ಚು ತಿಳಿದಿಲ್ಲ. ನಾವು ಸಮಚಿತ್ತದಿಂದ ಕಾಯಬೇಕು. ವೈರಸ್ ತುಂಬಾ ಪರಿಣಾಮಕಾರಿಯಾಗಿ ಇರುವುದಿಲ್ಲ ಎಂದು ಭಾವಿಸೋಣ. ಆದರೆ ವೈರಸ್ ನ ರೂಪಾಂತರದ ಬಗ್ಗೆ ಇಷ್ಟು ಬೇಗ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. 

24 ದೇಶಗಳಿಗೆ ವ್ಯಾಪಿಸಿದ Omicron, ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ವಿಶ್ವ ಆರೋಗ್ಯ ಸಂಸ್ಥೆ!

ಲಿಸಿಕೆ ತಯಾರಿಸಲು ಸಿದ್ಧತೆ: ಕೊರೋನಾ ವೈರಸ್‌ನ ಹೊಸ ರೂಪಾಂತರವಾದ ಓಮಿಕ್ರಾನ್ (Omicron) ಪ್ರಪಂಚದಾದ್ಯಂತ ಹರಡುತ್ತಿದೆ. ಇದರ ರೋಗಿಗಳು ಭಾರತದಲ್ಲಿಯೂ ಕಂಡುಬಂದಿದ್ದಾರೆ. ಕೊರೋನಾ ವೈರಸ್‌ನ (Coronavirus) ಸ್ಪೈಕ್ ಪ್ರೋಟೀನ್ ಒಮಿಕ್ರಾನ್ ರೂಪಾಂತರದಲ್ಲಿ 30 ಕ್ಕೂ ಹೆಚ್ಚು ರೂಪಾಂತರಗಳನ್ನು ಉಂಟುಮಾಡಿದೆ. ಈ ಕಾರಣದಿಂದಾಗಿ, ಪ್ರಸ್ತುತ ಬಳಸುತ್ತಿರುವ ಕೊರೋನಾ ಲಸಿಕೆಗಳು (Vaccines) ಎಷ್ಟು ಪರಿಣಾಮಕಾರಿ ಎಂಬ ಪ್ರಶ್ನೆ ಉದ್ಭವಿಸಿದೆ. ಯಾಕೆಂದರೆ ಕೊರೋನಾ ಲಸಿಕೆಯ ಎರಡೂ ಡೋಸ್‌ಗಳನ್ನು ತೆಗೆದುಕೊಂಡವರು ಓಮಿಕ್ರಾನ್ ಸೋಂಕಿಗೆ ಒಳಗಾಗಿದ್ದಾರೆ. ಏತನ್ಮಧ್ಯೆ, ಕೊರೋನಾ ಲಸಿಕೆಯನ್ನು ತಯಾರಿಸುವ ಯುಎಸ್ ಕಂಪನಿ ನೊವಾವ್ಯಾಕ್ಸ್ (Novavax ), ಓಮಿಕ್ರಾನ್ ರೂಪಾಂತರದ ವಿರುದ್ಧ ಹೋರಾಡಲು ನಿರ್ದಿಷ್ಟವಾಗಿ ಲಸಿಕೆಯನ್ನು ತಯಾರಿಸಿರುವುದಾಗಿ ಹೇಳಿಕೊಂಡಿದೆ. ಇದರ ಉತ್ಪಾದನೆಯು ಜನವರಿ 2022 ರಿಂದ ಪ್ರಾರಂಭವಾಗುವ ಸಾಧ್ಯತೆಯಿದೆ.

Omicron Cases In Karnataka: ಕರುನಾಡಿನ ಮೂಲಕ ಭಾರತಕ್ಕೆ ಕಾಲಿಟ್ಟ ಒಮಿಕ್ರಾನ್, ಇಬ್ಬರಲ್ಲಿ ಪತ್ತೆ!

ದೇಶದ ಮೊದಲ ಪ್ರಕರಣ ಕರ್ನಾಟಕದಲ್ಲಿ!: ದಕ್ಷಿಣ ಆಫ್ರಿಕಾದಿಂದ ಬಂದ ಕರ್ನಾಟಕದ ಇಬ್ಬರಲ್ಲಿ ಒಮಿಕ್ರಾನ್ (Omicron) ಪತ್ತೆಯಾಗಿದೆ ಎಂದು ಕೇಂದ್ರ ಸಚಿವಾಲಯ ಮಾಹಿತಿ ನೀಡಿದೆ. ಇದು ಭಾರತದಲ್ಲಿ ದೃಢಪಟ್ಟ ಮೊದಲ ಎರಡು ಪ್ರಕರಣಗಳು" ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಆರೋಗ್ಯ ಸಚಿವಾಲಯವು (Union Health Ministry) ಸುಮಾರು 29 ದೇಶಗಳಲ್ಲಿ ಇಲ್ಲಿಯವರೆಗೆ 373 ಒಮಿಕ್ರಾನ್ ರೂಪಾಂತರದ ಪ್ರಕರಣ ವರದಿಯಾಗಿದೆ. 

Follow Us:
Download App:
  • android
  • ios