Asianet Suvarna News Asianet Suvarna News

ಕಂದನಿಗೆ ಲಾಲಿ ಹಾಡಿದ ಉಕ್ರೇನ್ ಯೋಧ: ಕೇಳಿದರೆ ಎಂಥವರಿಗಾದರೂ ಕಣ್ಣಲ್ಲಿ ನೀರು ಬರುತ್ತೆ!

ಕ್ರೇನ್ ಯೋಧನೋರ್ವ ತನ್ನ ಹಾಲಗಲ್ಲದ ಕಂದನಿಗೆ ಜೋಗುಳ ಹಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೋಡುಗರ ಕಣ್ಣನ್ನು ತೇವಗೊಳಿಸುತ್ತಿದೆ. 

people crying  after watching Ukrainian soldier lullaby for his newborn baby watch viral video akb
Author
First Published Jan 3, 2023, 4:26 PM IST

ಕೀವ್ಸ್: ಉಕ್ರೇನ್ ರಷ್ಯಾ ನಡುವಿನ ಯುದ್ಧ ಹಲವರ ಬದುಕನ್ನು ಶಾಶ್ವತವಾಗಿ ಕೊನೆಗೊಳಿಸಿದೆ. ಸಾವಿರಾರು ಸಂಖ್ಯೆಯಲ್ಲಿ ಮಕ್ಕಳು ಅನಾಥರಾಗಿದ್ದಾರೆ. ಅಳಿದುಳಿದವರು ಭಯ ಭೀತಿಯಲ್ಲೇ ಬದುಕುವಷ್ಟು ಆಘಾತ ನೀಡಿದೆ ಈ ಯುದ್ಧ. ಕಳೆದ ವರ್ಷ ಫೆಬ್ರವರಿಯಲ್ಲಿ ಆರಂಭವಾದ ಈ ಯುದ್ಧ ಇನ್ನು ನಿಂತಿಲ್ಲ. ಯುದ್ಧದಿಂದಾಗಿ ಸಂತ್ರಸ್ತರಾದ ಅನೇಕರ ವಿಡಿಯೋಗಳು, ಕಣ್ ಮುಂದೆಯೇ ಸೆಲ್ ದಾಳಿಯ ದೃಶ್ಯಗಳು, ಇತ್ತ ನಿರಾಶ್ರಿತ ಕೇಂದ್ರದಲ್ಲಿ ಯುದ್ಧದ ಭೀತಿ ಮರೆತು ಆಟವಾಡುವ ಉಕ್ರೇನ್ ಮಕ್ಕಳ ಸಾಕಷ್ಟು ವಿಡಿಯೋಗಳು ಕಳೆದ ವರ್ಷ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದವು. ಈ ಮಧ್ಯೆ ಈಗ ಉಕ್ರೇನ್ ಯೋಧನೋರ್ವ ತನ್ನ ಹಾಲಗಲ್ಲದ ಕಂದನಿಗೆ ಜೋಗುಳ ಹಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೋಡುಗರ ಕಣ್ಣನ್ನು ತೇವಗೊಳಿಸುತ್ತಿದೆ. 

ಈ ವಿಡಿಯೋವನ್ನು ಉಕ್ರೇನ್‌ನ ಆಂತರಿಕ ವ್ಯವಹಾರಗಳ ಸಚಿವರ (Minister of Internal Affairs of Ukraine)  ಸಲಹೆಗಾರ ಆಂಟನ್ ಗೆರಾಶ್ಚೆಂಕೊ (Anton Gerashchenko)  ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ, ವಿಡಿಯೋದಲ್ಲಿ ಕಾಣಿಸುವಂತೆ ಒಲೆಗ್ ಬೆರೆಸ್ಟೋವಿ (Oleg Berestovyi) ಎಂಬ ಸೈನಿಕನು ಗಿಟಾರ್ ನುಡಿಸುತ್ತ ತನ್ನ ಹಸುಗೂಸಿಗೆ (Newborn) ಲಾಲಿ ಹಾಡುತ್ತಿದ್ದು, ಆತನ ಮಡಿಲಲ್ಲಿ ಮಗು ಶಾಂತವಾಗಿ ನಿದ್ರಿಸುತ್ತಿದೆ. ವಿಡಿಯೋ ಪೋಸ್ಟ್ ಮಾಡಿರುವ ಸಚಿವರ ಸಲಹೆಗಾರ, ಉಕ್ರೇನಿಯನ್ ಯೋಧ ಒಲೆಗ್ ಬೆರೆಸ್ಟೋವಿ ತನ್ನ ಮಗುವಿಗಾಗಿ ಸುಂದರವಾದ ಸಾಹಿತ್ಯ ಹೊಂದಿರುವ ಲಾಲಿ ಹಾಡನ್ನು (lullaby) ಹಾಡುತ್ತಿದ್ದಾನೆ. ನಾನಿದನ್ನು ನಿಮಗಾಗಿ ಭಾಷಾಂತರಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಮಡಿದರೂ ಮಗುವಾಗಿ ಹುಟ್ಟಿ ಬರುವೆ, ಯೋಧ ಸತ್ತರೂ ಮಕ್ಕಳಾಗಲ್ಲವೆಂಬ ಭಯವಿಲ್ಲ !

ಪ್ರಸ್ತುತ ದಿನಗಳು ಕಷ್ಟದಿಂದ ಕೂಡಿವೆ. ಪವರ್‌ಫುಲ್ ಆದ ಡ್ರೋನ್‌ಗಳು ಆಕಾಶದಲ್ಲಿ ಆಕಾಶವನ್ನು ಬೆಳಗಿಸುತ್ತಿವೆ. ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದಿಂದಾಗಿ ಜನ ಶಾಂತವಾಗಿ ಬದುಕಲಾಗುತ್ತಿಲ್ಲ. ಮಲಗು ನನ್ನ ಪ್ರೀತಿಯ ಮಗುವೇ, ಉಕ್ರೇನ್ ಯೋಧರು (Ukrainian soldier) ಕೆಲಸದಲ್ಲಿದ್ದಾರೆ ಎಂದು ಸೈನಿಕನ ಉಕ್ರೇನ್ ಭಾಷೆಯ ಲಾಲಿ ಹಾಡನ್ನು ಭಾಷಾಂತರಿಸಲಾಗಿದೆ. ಈ ವಿಡಿಯೋವನ್ನು ಸಾವಿರಾರು ಜನ ವೀಕ್ಷಿಸಿದ್ದು, ಅನೇಕರು ಈ ವಿಡಿಯೋ ನೋಡಿ ಭಾವುಕರಾಗಿದ್ದಾರೆ. ಭಾಷೆ ಅರ್ಥವಾಗದಿದ್ದರೂ ಈ ವಿಡಿಯೋ ಕಣ್ಣಲ್ಲಿ ನೀರು ತರಿಸುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. 

ರಷ್ಯಾ ಅಧ್ಯಕ್ಷರಿಗೆ ಅಂತೂ ಇಂತೂ ಬುದ್ಧಿ ಬಂತಾ..? ಯುದ್ಧ ಮುಗಿಸಲು ಬಯಸುತ್ತೇನೆ ಎಂದ ಪುಟಿನ್‌..!


ಹೊಸ ವರ್ಷವೂ ಜಗತ್ತಿನೆಲ್ಲೆಡೆ ಇರುವ ಜನರಿಗೆ ಹೊಸ ಹುರುಪು ಸಂತೋಷವನ್ನು ನೀಡಿರಬಹುದು. ಆದರೆ ಯುದ್ಧ ಪೀಡಿತ ಉಕ್ರೇನ್‌ನ ಜನರಲ್ಲಿ ಮಾತ್ರ ವಿಷಾದ ಮುಂದುವರೆದಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಪ್ರಾರಂಭವಾದ ಯುದ್ಧ ಇನ್ನು ನಿಂತಿಲ್ಲ. ಒಂದು ಅಂದಾಜಿನ ಪ್ರಕಾರ ಉಕ್ರೇನ್‌ನಲ್ಲಿ ಇದುವರೆಗೆ 42,295 ಜನ ಮೃತಪಟ್ಟಿದ್ದಾರೆ. 54,132 ಜನ ಗಾಯಗೊಂಡು ಅಂಗವಿಕಲರಾಗಿದ್ದಾರೆ. 15 ಸಾವಿರಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ. 1.4 ಕೋಟಿಗೂ ಹೆಚ್ಚು ಜನ ನೆಲೆ ಕಳೆದುಕೊಂಡಿದ್ದಾರೆ. 1,40,000 ಕ್ಕೂ ಹೆಚ್ಚು ಕಟ್ಟಡಗಳು ಧ್ವಂಸವಾಗಿವೆ. 35 ಡಾಲರ್ ಟ್ರಿಲಿಯನ್ ಕೋಟಿಯಷ್ಟು ಮೊತ್ತದ ಆಸ್ತಿ ನಷ್ಟವಾಗಿದೆ.

 

 

Follow Us:
Download App:
  • android
  • ios