Covid Crisis: ಚೀನಾದ ಶಾಂಘೈ ಸಂಪೂರ್ಣ ಲಾಕ್‌ಡೌನ್‌: ಎಲ್ಲ 2.6 ಕೋಟಿ ಜನಕ್ಕೆ ಕೋವಿಡ್‌ ಟೆಸ್ಟ್‌

*   ಎಲ್ಲ 2.6 ಕೋಟಿ ಜನಕ್ಕೆ ಕೋವಿಡ್‌ ಟೆಸ್ಟ್‌
*   ಕೇವಲ 47 ಕೋವಿಡ್‌ ಕೇಸು ದೃಢಪಟ್ಟರೂ ಕಠಿಣ ಕ್ರಮ ಘೋಷಿಸಿದ ಸರ್ಕಾರ
*   ಕಚೇರಿಗಳು, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸೇರಿದಂತೆ ಎಲ್ಲ ಸೇವೆಗಳು ಬಂದ್‌
 

Complete Lockdown at Shanghai in China Due to Increase Covid Cases grg

ಬೀಜಿಂಗ್‌(ಮಾ.29):  ಚೀನಾದಲ್ಲಿ(China) ಮತ್ತೆ ಕೋವಿಡ್‌ ಆರ್ಭಟ ಹೆಚ್ಚಾಗುತ್ತಿದ್ದು, ಸೋಂಕಿಗೆ ಕಡಿವಾಣ ಹಾಕಲು ಚೀನಾದ ಅತಿದೊಡ್ಡ ನಗರಗಳಲ್ಲಿ ಒಂದಾದ ಶಾಂಘೈಯಲ್ಲಿ(Shanghai) ಸೋಮವಾರ ಸಂಪೂರ್ಣ ಲಾಕ್‌ಡೌನ್‌(Lockdown) ಘೋಷಿಸಲಾಗಿದೆ. ನಗರದ ಎಲ್ಲ 2.6 ಕೋಟಿ ಜನರ ಸಾಮೂಹಿಕ ಕೋವಿಡ್‌ ಪರೀಕ್ಷೆಗೆ ನಿರ್ಧರಿಸಲಾಗಿದೆ.

ಚೀನಾದಲ್ಲಿ ಕಳೆದ ಒಂದು ತಿಂಗಳಿನಲ್ಲಿ 56,000ಕ್ಕೂ ಹೆಚ್ಚು ಕೋವಿಡ್‌(Covid-19) ಪ್ರಕರಣಗಳು ವರದಿಯಾಗಿದೆ. ಕೋವಿಡ್‌ ವಿರುದ್ಧ ಶೂನ್ಯ ಸಹನೆ ನೀತಿ ಹೊಂದಿದ ಚೀನಾ ಶನಿವಾರ ಶಾಂಘೈನಲ್ಲಿ ಕೇವಲ 47 ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಆದರೂ ಶೂನ್ಯ ಸಹಿಷ್ಣುತೆ ಕಾರಣ ನೀಡಿ ಲಾಕ್‌ಡೌನ್‌ ಘೋಷಿಸಲಾಗಿದೆ. ಈ ವೇಳೆಯಲ್ಲಿ ಶಾಂಘೈ ನಗರದಲ್ಲಿ ವಾಸವಾಗಿರುವ ಸುಮಾರು 2.6 ಕೋಟಿ ಜನರಿಗೆ ಹೊರಜಗತ್ತಿನ ಸಂಪರ್ಕವನ್ನು ನಿರಾಕರಿಸಲಾಗಿದೆ. ಇವರು ಹಲವಾರು ಬಾರಿ ಕೋವಿಡ್‌ ಪರೀಕ್ಷೆಗೆ(Covid Test) ಒಳಪಡಬೇಕಾಗಿದೆ.

Covid Crisis: ವಿದೇಶಕ್ಕೆ ಹೋಗುವವರಿಗೆ ಶೀಘ್ರ ಬೂಸ್ಟರ್‌ ಡೋಸ್‌?

‘ಶಾಂಘೈ ನಗರದ ಪುಡೋಂಗ್‌ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸೋಮವಾರದಿಂದ ಶುಕ್ರವಾರದವರೆಗೆ ಲಾಕ್‌ಡೌನ್‌ ಮಾಡಲಾಗಿದ್ದು, ಸಾಮೂಹಿಕ ಕೋವಿಡ್‌ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಈ ವೇಳೆ ನಾಗರಿಕರು ಕಡ್ಡಾಯವಾಗಿ ಮನೆಯಲ್ಲೇ ಇರಬೇಕಾಗಿದ್ದು, ಅಗತ್ಯ ವಸ್ತುಗಳನ್ನು ನಿಗದಿ ಪಡಿಸಿದ ಚೆಕ್‌ಪಾಯಿಂಟ್‌ಗಳಲ್ಲಿ ಇರಿಸಲಾಗುವುದು. ಕಚೇರಿಗಳು, ಅಗತ್ಯವಲ್ಲದ ವ್ಯವಹಾರಗಳ ಮೇಲೂ ನಿರ್ಬಂಧ ಹೇರಲಾಗಿದ್ದು, ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ. ಶಾಂಘೈ ನಗರದ ಪ್ರಮುಖ ಆಕರ್ಷಣೆಯಾಗಿದ್ದ ಡಿಸ್ನಿ ಪಾರ್ಕ್‌ ಕೂಡಾ ಈ ವೇಳೆ ಮುಚ್ಚಲಾಗುವುದು’ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದಕ್ಕೂ ಮುನ್ನ ಸುಮಾರು 15 ನಗರಗಳಲ್ಲಿ ಲಾಕ್‌ಡೌನ್‌ ಸಾರಲಾಗಿತ್ತು.

ಫ್ರಾನ್ಸ್‌, ಜರ್ಮನಿ, ಬ್ರಿಟನ್‌ನಲ್ಲಿ ಕೊರೋನಾ ಸೋಂಕು ಏರಿಕೆ

ಫ್ರಾನ್ಸ್‌ (France), ಬ್ರಿಟನ್‌ (Britain) ಸೇರಿದಂತೆ ಯುರೋಪಿನ (Europe) ಹಲವು ದೇಶಗಳಲ್ಲಿ ಹಾಗೂ ಅಮೆರಿಕದಲ್ಲಿ (America) ಬಿಎ.2 ರೂಪಾಂತರಿ ಆರ್ಭಟ ಹೆಚ್ಚುತ್ತಿದ್ದು, ಮತ್ತೊಂದು ಕೋವಿಡ್‌ (Covid19) ಅಲೆಯ ಭೀತಿ ಸೃಷ್ಟಿಯಾಗಿದೆ. ಫ್ರಾನ್ಸ್‌ನಲ್ಲಿ ಆಸ್ಪತ್ರೆ ಸೇರುವವರ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿದೆ, ಜರ್ಮನಿಯಲ್ಲಿ (Germany) ಶುಕ್ರವಾರ ಒಂದೇ ದಿನ 3 ಲಕ್ಷ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇಟಲಿಯಲ್ಲೂ (Italy) ಶುಕ್ರವಾರ ಮತ್ತು ಶನಿವಾರ ಎರಡು ದಿನದಲ್ಲಿ 1.5 ಲಕ್ಷ ಕೇಸ್‌ ದೃಢಪಟ್ಟಿವೆ. 

ಬ್ರಿಟನ್ನಿನಲ್ಲಿ ಕಳೆದ ಒಂದೇ ವಾರದಲ್ಲಿ ದಾಖಲೆಯ 42 ಲಕ್ಷ ಜನರಿಗೆ ಸೋಂಕು ತಗುಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ, ಅಮೆರಿಕದಲ್ಲಿ ಒಟ್ಟು ದೈನಂದಿನ ಸೋಂಕಿನ ಪೈಕಿ ಶೇ.33ರಷ್ಟುಪ್ರಕರಣಗಳಲ್ಲಿ ಬಿಎ-2 ಕಂಡುಬರುತ್ತಿದೆ. ಸದ್ಯ ದೇಶದಲ್ಲಿ ನಿತ್ಯ ಸರಾಸರಿ 28,600 ಪ್ರಕರಣಗಳು ಪತ್ತೆಯಾಗುತ್ತಿದ್ದು, ಇದು ಕಳೆದ ಜನವರಿಯಲ್ಲಿನ ಕೇಸುಗಳಿಗಿಂತ ಕಡಿಮೆ. ಆದರೆ ಇದು ಇನ್ನೊಂದು ಕೊರೋನಾ ಅಲೆಯ ಆರಂಭ ಎಂದು ಆರೋಗ್ಯ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಶಾಂಘೈ ಚೀನಾದ ಅತಿದೊಡ್ಡ ಕೋವಿಡ್ -19 ಹಾಟ್‌ಸ್ಪಾಟ್ ಆಗಿ ಮಾರ್ಪಾಡಾಗಿದ್ದು, ಈಶಾನ್ಯ ಪ್ರಾಂತ್ಯದ ಜಿಲಿನ್ ಅನ್ನು (Jilin) ಈ ನಿಟ್ಟಿನಲ್ಲಿ ಹಿಂದಿಕ್ಕಿದೆ. ದೇಶದ ಪೂರ್ವ ಕರಾವಳಿಯ ಹಣಕಾಸು ರಾಜಧಾನಿ ಎಂದೇ ಗುರುತಿಸಿಕೊಳ್ಳುವ ಶಾಂಘೈನಲ್ಲಿ ಶನಿವಾರ 2,676 ಹೊಸ ಪ್ರಕರಣಗಳು ವರದಿಯಾಗಿದ್ದು, ಶುಕ್ರವಾರಕ್ಕಿಂತ ಶೇ. 18ರಷ್ಟು ಏರಿಕೆಯಾಗಿದೆ ಎಂದು ವಿದೇಶಿ ಪತ್ರಿಕೆಗಳು ವರದಿ ಮಾಡಿವೆ.

Covid Compensation: ಸತ್ತವರ ಹಣ ನಮಗೆ ಬೇಡ, ಬಡವರಿಗೆ ಕೊಡಿ ಎಂದ ಕುಟುಂಬಗಳು..!

ಕಳೆದ ಮೂರು ದಿನಗಳಲ್ಲಿ 26 ಮಿಲಿಯನ್ ಜನಸಂಖ್ಯೆ ಹೊಂದಿರುವ ನಗರದಲ್ಲಿ ಪ್ರಕರಣಗಳು ತೀವ್ರವಾಗಿ ಏರಿಕೆಯಾಗಿವೆ. ಗುರುವಾರ ಅಂದಿನ ದಾಖಲೆಯ 1609 ಪ್ರಕರಣಗಳಿಂದ ಶುಕ್ರವಾರಕ್ಕೆ 2267 ಪ್ರಕರಣಕ್ಕೆ ಏರಿಕೆಯಾಗಿತ್ತು. ಶನಿವಾರ ಈ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯಾಗಿದೆ.  ಇದು ಸೋಂಕಿತ ನೆರೆಹೊರೆಗಳು ಮತ್ತು ಅಪಾರ್ಟ್ಮೆಂಟ್ ಬ್ಲಾಕ್‌ಗಳ ಕಟ್ಟುನಿಟ್ಟಾದ ರೋಲಿಂಗ್ ಲಾಕ್‌ಡೌನ್‌ಗಳನ್ನು(Lockdown) ಜಾರಿ ಮಾಡಿದ ಹೊರತಾಗಿಯೂ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. 

ಜಾಗತಿಕ ಶಿಪ್ಪಿಂಗ್ ಕೇಂದ್ರವಾಗಿರುವ (Global Shipping Centere) ಕಾರಣ 'ರಾಷ್ಟ್ರೀಯ ಮತ್ತು ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರಬಹುದು' ಎಂದು ಆತಂಕದ ಮಧ್ಯೆ ಅಧಿಕಾರಿಗಳು ಪೂರ್ಣ ನಗರ-ವ್ಯಾಪಿ ಲಾಕ್‌ಡೌನ್ ಅನ್ನು ತಳ್ಳಿಹಾಕಿದ್ದಾರೆ. ಸಾರ್ವಜನಿಕರಿಗೆ ಋಣಾತ್ಮಕ ಕೋವಿಡ್ ಪರೀಕ್ಷೆಗಳ ಅಗತ್ಯವಿದ್ದು, ಮುಕ್ತವಾಗಿ ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಮೂಲಗಳ ಪ್ರಕಾರ ಸೋಮವಾರದಿಂದ ಹಂತಹಂತದಲ್ಲಿ ಲಾಕ್ ಡೌನ್ ಅನ್ನು ಚೀನಾ ಸರ್ಕಾರ ಜಾರಿ ಮಾಡಲಿದೆ ಎನ್ನಲಾಗಿದೆ.

ಕಂಪ್ಲೀಟ್‌ ಬಂದ್‌

- ಇಡೀ ಚೀನಾದಲ್ಲಿ ಒಂದು ತಿಂಗಳಲ್ಲಿ ಸುಮಾರು 56,000 ಕೋವಿಡ್‌ ಕೇಸ್‌ ಪತ್ತೆ
- ಕೊರೋನಾ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿ ಹೊಂದಿರುವ ಚೀನಾದ ಸರ್ಕಾರ
- ಈಗಾಗಲೇ ದೇಶಾದ್ಯಂತ 15 ನಗರಗಳಲ್ಲಿ ಲಾಕ್‌ಡೌನ್‌: ಜನರಿಗೆ ನಿರ್ಬಂಧ
- ಈಗ ಶಾಂಘೈನ ಜನರಿಗೆ ಮನೆ ಬಿಟ್ಟು ಹೊರಗೆ ಹೋಗುವುದಕ್ಕೂ ಪೂರ್ತಿ ನಿಷೇಧ
- ನಿಗದಿಪಡಿಸಿ ಚೆಕ್‌ ಪಾಯಿಂಟ್‌ಗಳಲ್ಲಿ ಅಗತ್ಯ ವಸ್ತು ಇರಿಸಿ ಜನರಿಗೆ ಪೂರೈಕೆ
- ಕಚೇರಿಗಳು, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸೇರಿದಂತೆ ಎಲ್ಲ ಸೇವೆಗಳು ಬಂದ್‌
 

Latest Videos
Follow Us:
Download App:
  • android
  • ios