Asianet Suvarna News Asianet Suvarna News

US Drone Strike: ಐಸಿಸ್‌ ಸಿರಿಯಾ ಮುಖ್ಯಸ್ಥನ ಹತ್ಯೆ ಖಚಿತಪಡಿಸಿದ ಪೆಂಟಗನ್

ಸಿರಿಯಾದ ಜಿಂದಾಯ್ರಿಸ್ ಬಳಿ ಮೋಟಾರ್ ಸೈಕಲ್ ಸವಾರಿ ಮಾಡುತ್ತಿದ್ದಾಗ ಮಹರ್ ಅಲ್-ಅಗಲ್ ಸಾವನ್ನಪ್ಪಿದ್ದು, ಆತನ ಉನ್ನತ ಸಹಾಯಕರ ಪೈಕಿ ಒಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಪೆಂಟಗನ್ ಸೆಂಟ್ರಲ್ ಕಮಾಂಡ್ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಡೇವ್ ಈಸ್ಟ್‌ಬರ್ನ್ ತಿಳಿಸಿದ್ದಾರೆ.
 

pentagon confirms ISIS Syria Chief Maher al Agal Killed In US Drone Strike san
Author
Bengaluru, First Published Jul 12, 2022, 8:39 PM IST

ವಾಷಿಂಗ್ಟನ್ (ಜುಲೈ 12): ಅಮೆರಿಕದ ಡ್ರೋನ್ ದಾಳಿಯಲ್ಲಿ ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಗುಂಪಿನ ನಾಯಕ ಮಂಗಳವಾರ ಸಾವನ್ನಪ್ಪಿದ್ದಾನೆ ಎಂದು ಪೆಂಟಗನ್ ತಿಳಿಸಿದೆ. ಸಿರಿಯಾದ ಜಿಂದಾಯ್ರಿಸ್ ಬಳಿ ಮೋಟಾರ್ ಸೈಕಲ್ ಸವಾರಿ ಮಾಡುತ್ತಿದ್ದಾಗ ಮಹರ್ ಅಲ್-ಅಗಲ್ ಸಾವು ಕಂಡಿದ್ದು, ಆತನ ಉನ್ನತ ಸಹಾಯಕರ ಪೈಕಿ  ಒಬ್ಬ ವ್ಯಕ್ತಿ ಬಹಳ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಪೆಂಟಗನ್ ಸೆಂಟ್ರಲ್ ಕಮಾಂಡ್ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಡೇವ್ ಈಸ್ಟ್‌ಬರ್ನ್ ಸುದ್ದಿಸಂಸ್ಥೆ ಎಎಫ್‌ಪಿಗೆ ತಿಳಿಸಿದ್ದಾರೆ. ಇನ್ನು ಮಾನವ ಹಕ್ಕುಗಳ ಸಿರಿಯನ್ ವೀಕ್ಷಣಾಲಯವು ಡ್ರೋನ್ ದಾಳಿಯಲ್ಲಿ ಅಗಲ್ ಸಾವನ್ನಪ್ಪಿದ್ದಾನೆ ಎಂದು ದೃಢಪಡಿಸಿದೆ. ಅಲೆಪ್ಪೊದ ಹೊರಗೆ ಮೋಟಾರ್‌ಸೈಕಲ್ ಅನ್ನು ಗುರಿಯಾಗಿಸಿಕೊಂಡ ದಾಳಿಯಲ್ಲಿ ಒಬ್ಬ ಸಾವು ಕಂಡಿದ್ದಾನೆ ಮತ್ತು ಇನ್ನೊಬ್ಬ ಗಂಭೀರವಾಗ ಗಾಯಗೊಂಡಿದ್ದಾನೆ ಎಂದು ಸಿರಿಯನ್ ಸಿವಿಲ್ ಡಿಫೆನ್ಸ್ ಫೋರ್ಸ್ ಹೇಳಿದೆ. ಆದರೆ, ಸಾವು ಕಂಡವರು ಯಾರು ಎನ್ನುವುದನ್ನು ಇನ್ನೂ ಗುರುತಿಸಲು ಸಾಧ್ಯವಾಗಿಲ್ಲ ಎಂದು ಹೇಳಿದೆ. ಅಗಲ್‌ ಬಗ್ಗೆ ತೀರಾ ಅಲ್ಪ ಮಾಹಿತಿ ಲಭ್ಯವಿದ್ದು, ವೀಕ್ಷಣಾಲಯದ ಪ್ರಕಾರ, ಈತ ಲೆವೆಂಟ್‌ನ ಇಸ್ಲಾಮಿಕ್‌ ಸ್ಟೇಟ್ಸ್ ಗವರ್ನರ್‌ ಆಗಿದ್ದ ಎಂದು ತಿಳಿದುಬಂದಿದೆ.

ಐದು ತಿಂಗಳ ಬಳಿಕ ನಡೆದ ದಾಳಿ: ಒಟ್ಟಾರೆ ಇಸ್ಲಾಮಿಕ್ ಸ್ಟೇಟ್ (ISIS Leader) ನಾಯಕ ಅಬು ಇಬ್ರಾಹಿಂ ಅಲ್-ಖುರಾಶಿಯ (Abu Ibrahim al-Qurashi) ಸಾವಿಗೆ ಕಾರಣವಾದ ಉತ್ತರ ಸಿರಿಯಾದ ಅಟ್ಮೆ ಪಟ್ಟಣದಲ್ಲಿ ಯುಎಸ್ ನೈಟ್‌  ಸ್ಟ್ರೈಕ್‌ನ ನಂತರ ಐದು ತಿಂಗಳ ನಂತರ ಮತ್ತೊಂದು ಡ್ರೋನ್‌ ಸ್ಟ್ರೈಕ್‌ ನಡೆದಿದಿದೆ. ಸೆರೆಯಾಗುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿ ತನ್ನನ್ನು ತಾನೇ ಸ್ಫೋಟ ಮಾಡಿಕೊಂಡು ಖುರೇಶಿ ಸಾವನ್ನಪ್ಪಿದ್ದ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದರು.

ಸೆಂಟ್ರಲ್‌ ಕಮಾಂಡ್‌ನಿಂದಲೂ ಪ್ರಕಟಣೆ: ಆತನೊಂದಿಗೆ ನಿಕಟ ಸಂಬಂಧ ಹೊಂದಿರುವ ಹಿರಿಯ ಐಸಿಸ್ ಅಧಿಕಾರಿಯೊಬ್ಬರು ದಾಳಿಯ ಸಮಯದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ಹೇಳಿಕೆಯಲ್ಲಿ ತಿಳಿಸಿದೆ. ಯಾವುದೇ ನಾಗರಿಕ ಸಾವುನೋವುಗಳು ಸಂಭವಿಸಿಲ್ಲ ಎಂದು ಆರಂಭಿಕ ಪರಿಶೀಲನೆಯ ಬಳಿಕ ತಿಳಿಸಲಾಗಿದೆ. "ಈ ಐಸಿಸ್ ನಾಯಕರನ್ನು ಹತ್ಯೆ ಮಾಡುವುದರಿಂದ ಮತ್ತಷ್ಟು ಸಂಚು ರೂಪಿಸುವ ಮತ್ತು ದಾಳಿ ನಡೆಸುವ ಭಯೋತ್ಪಾದಕ ಸಂಘಟನೆಯ ಸಾಮರ್ಥ್ಯವನ್ನು ಕುಂಠಿತ ಮಾಡುತ್ತದೆ. ಎಂದು ಸೆಂಟ್ರಲ್ ಕಮಾಂಡ್‌ನ ವಕ್ತಾರ ಕರ್ನಲ್ ಜೋ ಬುಸಿನೊ ಹೇಳಿದ್ದಾರೆ.

ಈ ದಾಳಿಯು ವಾಯುವ್ಯ ಸಿರಿಯಾದ ಜಿಂಡೈರಿಸ್‌ನ ಹೊರಗೆ ನಡೆದಿದೆ ಎಂದು ಪ್ರಕಟಣೆ ತಿಳಿಸಿದೆ . ಸಿರಿಯಾ ಮತ್ತು ಇರಾಕ್‌ನ ವಿವಿಧ ಭಾಗಗಳಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಭಯೋತ್ಪಾದಕ ಗುಂಪಿನ ಪುನರುತ್ಥಾನವನ್ನು ಕಂಡಿರುವ ಕಾರಣ ಮಂಗಳವಾರದ ದಾಳಿಯು ಐಸಿಸ್ ಅನ್ನು ಮಟ್ಟಹಾಕಲು ನಡೆಯುತ್ತಿರುವ ಪ್ರಯತ್ನಗಳ ಭಾಗವಾಗಿತ್ತು. ಕಳೆದ ಸೆಪ್ಟೆಂಬರ್‌ನಲ್ಲಿ, ಸಿರಿಯಾದ ಇದ್ಲಿಬ್ ಬಳಿ ಸೇನೆಯು,  ಹಿರಿಯ ಅಲ್ ಖೈದಾ ನಾಯಕನನ್ನು ಗುರಿಯಾಗಿಸಿಕೊಂಡಿತ್ತು ಎಂದು ಸೆಂಟ್ರಲ್ ಕಮಾಂಡ್‌ ತಿಳಿಸಿತ್ಉತ. ಒಂದು ತಿಂಗಳ ನಂತರ, ಮತ್ತೊಬ್ಬ ಹಿರಿಯ ಅಲ್ ಖೈದಾ ನಾಯಕ ಅಬ್ದುಲ್ ಹಮೀದ್ ಅಲ್-ಮತಾರ್ ವಿರುದ್ಧ ಮಿಲಿಟರಿ ಡ್ರೋನ್ ದಾಳಿ ನಡೆಸಿತು ಎಂದು ಸೆಂಟ್ರಲ್ ಕಮಾಂಡ್ ತಿಳಿಸಿದೆ.

ಮತ್ತು ಡಿಸೆಂಬರ್‌ನಲ್ಲಿ, ಇದ್ಲಿಬ್ ಬಳಿ ಅಲ್ ಖೈದಾ ಅಂಗಸಂಸ್ಥೆ ಹುರಾಸ್ ಅಲ್-ದಿನ್‌ನ ಹಿರಿಯ ನಾಯಕ ಮುಸಾಬ್ ಕಿನಾನ್ ಅವರನ್ನು ಮಿಲಿಟರಿ ಗುರಿಪಡಿಸಿತು. ದಾಳಿಯಿಂದ ನಾಗರಿಕ ಸಾವುನೋವುಗಳ ಸಾಧ್ಯತೆಯ ಬಗ್ಗೆ ಕೇಂದ್ರೀಯ ಕಮಾಂಡ್ ತನಿಖೆಯನ್ನು ಆರಂಭಿಸಿತ್ತು. ಆದರೆ ತನಿಖೆಯ ವಿವರಗಳನ್ನು ಪೆಂಟಗನ್ ಆ ಸಮಯದಲ್ಲಿ ನೀಡಿರಲಿಲ್ಲ.

 

Follow Us:
Download App:
  • android
  • ios