ಪೆಂಗ್ವಿನ್ ಒಂದು ಅಜ್ಜಿಯೊಬ್ಬರ ಕಷ್ಟ ಸುಖ ವಿಚಾರಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಇದು ಎಲ್ಲಿ ಸೆರೆಯಾದ ದೃಶ್ಯ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.

ಪೆಂಗ್ವಿನ್ ಒಂದು ಅಜ್ಜಿಯೊಬ್ಬರ ಕಷ್ಟ ಸುಖ ವಿಚಾರಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಇದು ಎಲ್ಲಿ ಸೆರೆಯಾದ ದೃಶ್ಯ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ವಿಡಿಯೋದ ನಂತರದ ಸಂಭಾಷಣೆಯಿಂದ ಇದು ಫ್ರಾನ್ಸ್‌ನಲ್ಲಿ ಕಂಡುಬಂದ ದೃಶ್ಯ ಎಂದು ನಂಬಲಾಗಿದೆ. ಪಾರ್ಕಿಂಗ್ ಸ್ಥಳದ ಸಮೀಪ ಅಜ್ಜಿಯೊಬ್ಬರು ತಮ್ಮ ಛತ್ರಿಯನ್ನು ಊರಿಕೊಂಡು ನಡೆದುಕೊಂಡು ಹೋಗುತ್ತಿರುತ್ತಾರೆ. ಅವರ ಬಳಿ ಬರುವ ಪೆಂಗ್ವಿನ್ ಬಹಳ ದಿನಗಳ ಪರಿಚಯವೆಂಬಂತೆ ಅವರ ಹಿಂದೆ ಮುಂದೆ ಸುತ್ತುತ್ತಾ ಅದರದ್ದೇ ಭಾಷೆಯಲ್ಲಿ ಅಜ್ಜಿಯನ್ನು ಮಾತನಾಡಿಸುವ ಪ್ರಯತ್ನ ಮಾಡುತ್ತದೆ. ಇದನ್ನು ನೋಡಿದ ಅಜ್ಜಿಯೂ ಕೂಡ ಬೆನ್ನು ಬಗ್ಗಿಸಿಕೊಂಡು ಪೆಂಗ್ವಿನ್ ಬಳಿ ಮಾತನಾಡುತ್ತಾರೆ. ಇಬ್ಬರು ಬಹಳ ಕಾಲದ ಗೆಳತಿಯರಂತೆ ಸಂಭಾಷಣೆ ನಡೆಸುತ್ತಿರುವಂತೆ ವಿಡಿಯೋ ಕಾಣಿಸುತ್ತಿದೆ. ವೃದ್ಧೆ ಸಂಪೂರ್ಣವಾಗಿ ಫ್ರೆಂಚ್ ಭಾಷೆಯಲ್ಲಿ ಈ ಮೂಕ ಪಕ್ಷಿಯನ್ನು ಮಾತನಾಡಿಸುತ್ತಿದ್ದಾರೆ. 

ವಿಡಿಯೋದಲ್ಲಿ ಕಾಣಿಸುವಂತೆ ಅಜ್ಜಿ ತಮ್ಮ ಕೈಯಲ್ಲಿರುವ ಛತ್ರಿಯನ್ನು (Umbrella) ಊರಿಕೊಂಡು ದಾರಿಯಲ್ಲಿ ಸಾಗಿ ಬರುತ್ತಿದ್ದು ಇದನ್ನು ನೋಡಿದ ಪೆಂಗ್ವಿನ್ ಸೀದಾ ಅಜ್ಜಿಯ ಬಳಿ ನಡೆಯುತ್ತಾ ಬಂದು ಅಜ್ಜಿಯ ಬಳಿ ಇರುವ ಕೆಂಪು ಬಣ್ಣದ ಛತ್ರಿಯತ್ತ ತೀವ್ರ ಕುತೂಹಲದಿಂದ ನೋಡುತ್ತಿದ್ದೆ. ಈ ವೇಳೆ ಅಜ್ಜಿ ತನ್ನ ಫ್ರಾನ್ಸ್ ಭಾಷೆಯಲ್ಲಿ ಪೆಂಗ್ವಿನ್ ಅನ್ನು ನಿಮಿಷಗಳ ಕಾಲ ಮಾತನಾಡಿಸಿ ಮುಂದೆ ಹೋಗಲು ಪ್ರಯತ್ನಿಸುತ್ತಾರೆ. ಈ ವೇಳೆ ಪೆಂಗ್ವಿನ್( penguin) ಮತ್ತೆ ಅವರ ಹಿಂದೆಯೇ ಹೋಗಲು ಯತ್ನಿಸುತ್ತದೆ. 

ಸಿಗಲಾರೆ ಸಿಗಲಾರೆ... ಚಿಟ್ಟೆಯ ಬೆನ್ನಟ್ಟುವ ಪೆಂಗ್ವಿನ್‌ಗಳು : ವಿಡಿಯೋ ನೋಡಿ

'ವೃದ್ಧೆ ಹಕ್ಕಿಯನ್ನು ನೀನು ತುಂಬಾ ಚೆನ್ನಾಗಿದ್ದೀಯಾ, ನೀನು ನನ್ನ ಸ್ನೇಹಿತೆ ನೀನು ತುಂಬಾ ಸುಂದರವಾಗಿದ್ದೀಯಾ ಐ ಲವ್ ಯೂ' ಎಂದು ಹೇಳುತ್ತಾಳೆ ನಾನು ನಿನ್ನನ್ನು ತುಂಬಾ ಪ್ರೀತಿಸುತ್ತಿದ್ದೇನೆ. ಇಲ್ಲಿ ನಾನು ಹೆಚ್ಚು ಇಷ್ಟಪಡುವುದು ನಿನ್ನನ್ನು, ನನ್ನ ಕೊಡೆಯಿಂದ ನಿನಗೆ ಏನು ಬೇಕು? ನೀನು ನಾಳೆ ಇಲ್ಲಿಯೇ ಇರುತ್ತಿಯೇ ನಾನು ನಿನ್ನನ್ನು ನಾಳೆ ಮತ್ತೆ ನೋಡುತ್ತೇನೆ ಎಂದು ಅಜ್ಜಿ ಹೇಳಿದರು ಎಂದು ಅಜ್ಜಿಯ ಫ್ರೆಂಚ್ (French) ಸಂಭಾಷಣೆಯನ್ನು ಬಳಕೆದಾರನೊಬ್ಬ ಕಾಮೆಂಟ್‌ನಲ್ಲಿ ವಿವರಿಸಲು ಪ್ರಯತ್ನಿಸಿದ್ದಾನೆ. 

ಈ ವಿಡಿಯೋ ನೋಡಿದ ಜನ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದೊಂದು ಸುಂದರ ದೃಶ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಈ ದೃಶ್ಯ ತುಂಬಾ ಮುದ್ದಾಗಿದೆ. ಆದರೆ ಅಜ್ಜಿಯ ಛತ್ರಿ ನೋಡಿದ ಪೆಂಗ್ವಿನ್ ಅದನ್ನು ಪೆಂಗ್ವಿನ್ ಎಂದು ಭಾವಿಸಿರಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಮಹಿಳೆ ಹಾಗೂ ಪೆಂಗ್ವಿನ್‌ನನ್ನು ಕರೆದುಕೊಂಡು ಟಿವಿ ಶೋ ನಡೆಸಬೇಕು ಎಂದು ಕೆಲವರು ಸಲಹೆ ನೀಡಿದ್ದಾರೆ. ಪೆಂಗ್ವಿನ್‌ಗಳು ಅತ್ಯಂತ ಬುದ್ಧಿವಂತ ಜಲಚರಗಳು, ದಕ್ಷಿಣಾರ್ಧ ಗೋಳದಲ್ಲಿ, ಅದರಲ್ಲೂ ವಿಶೇಷವಾಗಿ ಅಂಟಾರ್ಟಿಕಾದಲ್ಲಿ ಪ್ರತ್ಯೇಕವಾಗಿ ಜೀವಿಸುತ್ತಿರುವ ಹಾರಲಾರದ ಉಭಯವಾಸಿ ಪಕ್ಷಿಯಾಗಿದ್ದು, ಇವುಗಳ ರೆಕ್ಕೆಗಳೆ ಈಜುಕೈಗಳಾಗಿರುತ್ತವೆ. ಕಪ್ಪು ಹಾಗೂ ಬಿಳಿ ಪುಕ್ಕಗಳನ್ನು ಹೊಂದಿರುವ ಇವುಗಳು ತಮ್ಮ ಜೀವನದ ಅರ್ಧ ಭಾಗವನ್ನು ಭೂಮಿಯ ಮೇಲೆ ಕಳೆದರೆ ಇನರ್ಧ ಭಾಗವನ್ನು ಸಾಗರದಲ್ಲಿ ಕಳೆಯುತ್ತವೆ. 

ಕೆಲ ಪೆಂಗ್ವಿನ್ ಜಾತಿಗಳು ದಕ್ಷಿಣಾರ್ಧ ಗೋಳದಲ್ಲಿ ಅಂಟಾರ್ಟಿಕಾದಲ್ಲಿ ತಂಪಾದ ಹವಾಮಾನದಲ್ಲಿಯೂ ಕಾಣಿಸುತ್ತವೆ. ಇವುಗಳ ಗುಂಪುಗಳಾಗಿ ವಾಸಿಸುವುದರಿಂದ ಇತರ ಜೀವಿಗಳ ದಾಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಚಳಿಯಿಂದ ರಕ್ಷಿಸಿಕೊಳ್ಳಲು ಪರಸ್ಪರ ನೆರವಾಗುತ್ತವೆ. 

Scroll to load tweet…

ಇಂಗ್ಲೆಂಡ್‌ನ ಅತ್ಯಂತ ಹಿರಿಯ ಪೆಂಗ್ವಿನ್‌ ನರಿ ದಾಳಿಗೆ ಬಲಿ