ಸಿಗಲಾರೆ ಸಿಗಲಾರೆ... ಚಿಟ್ಟೆಯ ಬೆನ್ನಟ್ಟುವ ಪೆಂಗ್ವಿನ್‌ಗಳು : ವಿಡಿಯೋ ನೋಡಿ
ಹೂವಿಂದ ಹೂವಿಗೆ ಹಾರುತ್ತಾ ಕೂತಲ್ಲಿ ಕೂರದ ಈ ಚಿಟ್ಟೆಗಳ ವೈಯಾರ ಬಿಡಗು ಬಿನ್ನಾಣದಿಂದಾಗಿ ಈ ಪ್ರಾಣಿಗಳು ಅವುಗಳನ್ನು ಬೆನ್ನಟ್ಟುತ್ತವೆ. ಶ್ವಾನಗಳು, ಬೆಕ್ಕುಗಳು ಈ ಚಿಟ್ಟೆಗಳನ್ನು ಬೆನ್ನಟ್ಟುವುದನ್ನು ನೀವು ನೋಡಿರಬಹುದು. ಆದರೆ ಇಲ್ಲೊಂದು ವಿಡಿಯೋದಲ್ಲಿ ಪೆಂಗ್ವಿನ್‌ಗಳು ಚಿಟ್ಟೆಯೊಂದನ್ನು ಬೆನ್ನಟ್ಟುತ್ತಿರುವ ದೃಶ್ಯ ಸೆರೆಯಾಗಿದೆ.
ಚಿಟ್ಟೆಗಳು ನೋಡುಗರ ಕಣ್ಣು ತಂಪು ಮಾಡುವ ಅತೀ ಸುಂದರ ಕೀಟಗಳು, ತಮಗೆ ಬೇಕೆಂದಲೆಲ್ಲಾ ಸ್ವಚ್ಛಂದವಾಗಿ ಹಾರುವ ಚಿಟ್ಟೆಗಳು ಈ ಸುಂದರ ಪ್ರಕೃತಿಯ ಒಂದು ಅವಿಭಾಜ್ಯ ಅಂಗ. ಆದರೆ ಈ ಚಿಟ್ಟೆಗಳು ಬಣ್ಣ ಹಾಗೂ ತಮ್ಮ ಚೆಲ್ಲಾಟಗಳಿಂದಲೇ ನೋಡುಗರ ಹೃದಯ ಗೆಲ್ಲುತ್ತವೆ. ಮನುಷ್ಯರು ಚಿಟ್ಟೆಗಳಿಗೆ ಆಕರ್ಷಿತರಾಗುವುದು ಸಹಜ ಹಾಗೆಯೇ ಕೆಲವು ಪ್ರಾಣಿಗಳು ಕೂಡ ಚಿಟ್ಟೆಗಳತ್ತ ಆಕರ್ಷಿತರಾಗಿ ಅವುಗಳ ಹಿಂದೆಯೇ ಹಿಂಬಾಲಿಸಿ ಹೋಗುವುದನ್ನು ನೋಡಿರಬಹುದು.
ಹೂವಿಂದ ಹೂವಿಗೆ ಹಾರುತ್ತಾ ಕೂತಲ್ಲಿ ಕೂರದ ಈ ಚಿಟ್ಟೆಗಳ ವೈಯಾರ ಬಿಡಗು ಬಿನ್ನಾಣದಿಂದಾಗಿ ಈ ಪ್ರಾಣಿಗಳು ಅವುಗಳನ್ನು ಬೆನ್ನಟ್ಟುತ್ತವೆ. ಶ್ವಾನಗಳು, ಬೆಕ್ಕುಗಳು ಈ ಚಿಟ್ಟೆಗಳನ್ನು ಬೆನ್ನಟ್ಟುವುದನ್ನು ನೀವು ನೋಡಿರಬಹುದು. ಆದರೆ ಇಲ್ಲೊಂದು ವಿಡಿಯೋದಲ್ಲಿ ಪೆಂಗ್ವಿನ್‌ಗಳು ಚಿಟ್ಟೆಯೊಂದನ್ನು ಬೆನ್ನಟ್ಟುತ್ತಿರುವ ದೃಶ್ಯ ಸೆರೆಯಾಗಿದೆ. ವಿಡಿಯೋದಲ್ಲಿ ಹಳದಿ ಬಣ್ಣದ ಚಿಟ್ಟೆಯೊಂದನ್ನು ಹತ್ತರಿಂದ ಹನ್ನೆರಡರಷ್ಟಿರುವ ಪೆಂಗ್ವಿನ್‌ಗಳು ಬೆನ್ನಟ್ಟುತ್ತ ಸಾಗುತ್ತಿವೆ. ಈ ಚಿಟ್ಟೆಯೂ ಕೂಡ ಅವುಗಳಿಗೆ ಚೆನ್ನಾಗಿ ಆಟ ಆಡಿಸುತ್ತಿದ್ದು, ಸಿಗುವಷ್ಟು ಹತ್ತಿರ ಬಂದು ದೂರ ಸಾಗುತ್ತಿದೆ. ಪೆಂಗ್ವಿನ್‌ಗಳು ಕೂಡ ಗುಂಪಿನಲ್ಲಿ ನೆಗೆಯುತ್ತಾ ನೆಗೆಯುತ್ತಾ ಈ ಚಿಟ್ಟೆಯನ್ನು ಬೆನ್ನಟ್ಟುತ್ತಿವೆ.
ರೈತರಿಗೆ ಸಂತಸದ ಸುದ್ದಿ: ಚಿಟ್ಟೆ ಗುರುತು ಹೇಳಲು ಬಂದಿದೆ ಆ್ಯಪ್
ಬಿಟ್ಟಿಂಗ್ ಬಿಡ್ಡನ್ ಎಂಬ ಟ್ವಿಟ್ಟರ್ ಖಾತೆಯಿಂದ ಈ ವಿಡಿಯೋ ಅಪ್‌ಲೋಡ್ ಆಗಿದೆ. ಇಪ್ಪತ್ತು ಸೆಕೆಂಡುಗಳ ಈ ವಿಡಿಯೋ ನೋಡುಗರ ಕಣ್ಣಿಗೆ ತಂಪೆರೆಯುತ್ತಿದೆ. ಪೆಂಗ್ವಿನ್‌ಗಳು ತುಂಬಾ ಬುದ್ದಿವಂತ ಪ್ರಾಣಿಗಳು. ಅದೇ ರೀತಿ ಚಿಟ್ಟೆಗಳು, ಹಾರುವ ಹೂಗಳಿದ್ದಂತೆ. ಇವುಗಳು ನೈಸರ್ಗಿಕವಾಗಿ ಸೃಷ್ಠಿಯಾಗಿರುವ ಅದ್ಭುತ ಸುಂದರ ಗುಣಗಳನ್ನು ಹೊಂದಿದ್ದು, ಇವುಗಳನ್ನು ಮಕ್ಕಳಿಂದ ವಯಸ್ಕರವರೆಗೂ ಎಲ್ಲರೂ ಇಷ್ಟಪಡುತ್ತಾರೆ. ಚಿಟ್ಟೆಗಳ ಸೌಂದರ್ಯದಿಂದಾಗಿಯೇ ಅವುಗಳಿಗೆ ಉದ್ಯಾವನಗಳನ್ನು ಅಲ್ಲಲ್ಲಿ ನಿರ್ಮಿಸಲಾಗಿದೆ. ಚಿಟ್ಟೆಯೂ ತನ್ನ ಜೀವನ ಚಕ್ರವವನ್ಉ ನಾಲ್ಕು ಹಂತದಲ್ಲಿ ಮುಗಿಸುತ್ತದೆ. ಅವುಗಳೆಂದರೆ ಮೊಟ್ಟೆ, ಲಾರ್ವಾ, ಪ್ಯೂಪಾ ಮತ್ತು ಚಿಟ್ಟೆ. ಒಂದೊಂದು ಹಂತವು ಒಂದೊಂದು ರೂಪವನ್ನು ಹೊಂದಿರುತ್ತದೆ. ಮರಿಹುಳುಗಳು ಅತಿ ಹೆಚ್ಚು ತಿನ್ನುತ್ತವೆ ಮತ್ತು ವಯಸ್ಕ ಚಿಟ್ಟೆ ಸಂತಾನೋತ್ಪತ್ತಿ ಮಾಡುತ್ತವೆ. ಒಂದು ತಿಂಗಳಿಂದ ಒಂದು ವರ್ಷದ ತನಕ ವಿಭಿನ್ನ ತಳಿಯ ಚಿಟ್ಟೆಗಳ ಜೀವನ ಚಕ್ರಗಳು ಬದಲಾಗುತ್ತಿರುತ್ತವೆ.
ಈ ಹಕ್ಕಿಗೂ ಅದೆಂಥಾ ಜವಾಬ್ದಾರಿ: ತನ್ನ ಹೆಣ್ಣಿಗೆ ಆಹಾರ ತಂದು ತಿನ್ನಿಸುವ ಗಂಡು ಹಾರ್ನ್‌ಬಿಲ್
ನಮ್ಮ ಭೂಮಿಯ ಮೇಲೆ ಅತ್ಯಂತ ವಿಶೇಷ ಜೀವಸಂಕುಲ ವಿದ್ದು, ಅದರಲ್ಲಿ ಅಟ್ಲಾಸ್ ಮೂಸ್ ಕೂಡ ಒಂದು ಅಪರೂಪದ ಈ ಚಿಟ್ಟೆ 2020 ರಲ್ಲಿ ಉಡುಪಿಯಲ್ಲಿ ಪತ್ತೆಯಾಗಿತ್ತು. ಇಲ್ಲಿನ ಶೆಟ್ಟಿಬೆಟ್ಟು ವಾರ್ಡಿನ ಮಾರುತಿ ನಗರದಲ್ಲಿ ಭಾರೀ ಗಾತ್ರದ ಪತಂಗ (ಅಟ್ಲಾಸ್ ಮೊತ್) ವೊಂದು ಪತ್ತೆಯಾಗಿತ್ತು. ಸುಮಾರು 25 ಸೆಮೀ ಅಗಲ, 15 ಸೆಮೀ ಉದ್ದದ ಈ ಬಹಳ ಅಪರೂಪದ ಪತಂಗ ಇಲ್ಲಿನ ಅಕ್ಕು ಎಂಬವರ ಮನೆಯಂಗಳದಲ್ಲಿ ಕಾಣಸಿಕ್ಕಿತ್ತು.
ಈ ಪತಂಗ ಮೊದಲು ತೆಂಗಿನ ಮರದ ಕಾಂಡದ ಮೇಲೆ ಕುಳಿತಿದ್ದು, ಅದನ್ನು ಒಂದು ಕಾಗೆಯು ಕುಕ್ಕುವುದಕ್ಕೆ ಪ್ರಯತ್ನಿಸುತಿತ್ತು, ಅದನ್ನು ಗಮನಿಸಿದ ಸ್ಥಳೀಯ ನಿವಾಸಿ ಗಣೇಶ್ ಕುಮಾರ್ ಅವರು ತೆಂಗಿನ ಗರಿಗಳಿಂದ ಅದಕ್ಕೆ ಅಡ್ಡ ಮಾಡಿ ಕಾಗೆಯಿಂದ ರಕ್ಷಿಸಿದ್ದರು.