ವಾಷಿಂಗ್ಟನ್(ಡಿ.23): ಅಮೆರಿಕದಲ್ಲಿ ರಾಜಕೀಯ ಹಗ್ಗ ಜಗ್ಗಾಟ ಮುಂದುವರಿದಿದೆ. ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಆಯ್ಕೆಯಾಗಿದ್ದಾರೆ. ನಿರ್ಗಮಿತ ಅಧ್ಯಕ್ಷ ಪದತ್ಯಾಗ ಮಾಡಲು ಮನಸ್ಸು ಒಪ್ಪುತ್ತಿಲ್ಲ. ಇನ್ನೂ ತಾವೇ ಅಧ್ಯಕ್ಷರಾಗಿ ಮುಂದುವರಿಯುವ ಕನಸು ಕಾಣುತ್ತಿದ್ದಾರೆ ಡೊನಾಲ್ಡ್ ಟ್ರಂಪ್.

ಪ್ರಧಾನಿ ಮೋದಿಗೆ ಅಮೆರಿಕಾದ ಅತ್ಯುನ್ನತ ಪುರಸ್ಕಾರ 'ಲೀಜನ್ ಆಫ್ ಮೆರಿಟ್'​ ನೀಡಿ ಗೌರವಿಸಿದ ಟ್ರಂಪ್​!

ಟ್ರಂಪ್ ನಡೆಗೆ ಎಲ್ಲೆಡೆಯಿಂದ ವಿರೋಧ ವ್ಯಕ್ತವಾಗುತ್ತಿದೆ. ಬೈಡನ್ ಅಧಿಕಾರ ಸ್ವೀಕರಿಸಲು ಅನುವು ಮಾಡಿ ಕೊಡಬೇಕೆಂದು ಸಮಾಜದ ವಿವಿಧ ವಲಯದ ಗಣ್ಯರು ಆಗ್ರಹಿಸುತ್ತಿದ್ದಾರೆ. 

ಟ್ರಂಪ್‌ ಜಾರಿಗೊಳಿಸಿದ್ದ ಎಚ್‌1ಬಿ ವೀಸಾ ನಿರ್ಬಂಧ ರದ್ದು!

ಧರ್ಮ ಪ್ರಚಾರಕ ಪ್ಯಾಟ್ ರಾಬರ್ಟಸನ್ ಸಹ ಇದೀಗ ಟ್ರಂಪ್ ಅಧಿಕಾರ ಬಿಟ್ಟು ಕೊಡಬೇಕೆಂದು ಹೇಳಿದ್ದಾರೆ. ಈ ಮೊದಲು ಇವರು ಚುನಾವಣೆಯಲ್ಲಿ ವಂಚನೆಯಾಗಿದೆ ಎಂದಿದ್ದ ಟ್ರಂಪ್ ಅವರನ್ನು ಬೆಂಬಲಿಸಿದ್ದರು.  ಆರ್ಥಿಕ ಉತ್ತೇಜನಕ್ಕೆ ಟ್ರಂಪ್ ಕೈಗೊಂಡ ನಿರ್ಧಾರಗಳು ಅತ್ಯದ್ಭುತ ಎನ್ನುವ ಮೂಲಕ ಟ್ರಂಪ್ ಬೆಂಬಲಕ್ಕೆ ನಿಂತಿದ್ದರು ಪ್ಯಾಟ್.