ಮೂರ್ತಿ ಪೂಜೆ ಕ್ರಿಶ್ಚಿಯನ್ ಮೌಲ್ಯಗಳಿಗೆ ವಿರುದ್ಧ ದುರ್ಜಾ ಪೂಜೆಗೆ ಅನುಮತಿ ನೀಡಲು ಸಾಧ್ಯವಿಲ್ಲ ಹಿಂದೂ ಪೂಜೆಗೆ ಅನುಮತಿ ನಿರಾಸಕರಿಸಿದ ಪಪುವಾ ನ್ಯೂಗಿನಿಯಾ 

ಪಪುವಾ ನ್ಯೂಗಿನಿಯಾ(ಅ.01): ಮೂರ್ತಿ ಪೂಜೆ ಕ್ರಿಶ್ಚಿಯನ್(Christian) ಮೌಲ್ಯಗಳ ವಿರುದ್ಧವಾಗಿದೆ. ಹೀಗಾಗಿ ಹಿಂದೂಗಳ(Hindu) ದುರ್ದಾ ಪೂಜೆ(Durga Puja) ಆಚರಿಸಲು ಅವಕಾಶ ನೀಡವು ಸಾಧ್ಯವಿಲ್ಲ ಎಂದು ದ್ವೀಪ ರಾಷ್ಟ್ರ ಪಪುವಾ ನ್ಯೂಗಿನಿಯಾ(Papua New Guinea) ಆದೇಶ ಭಾರಿ ಸಂಚಲನ ಮೂಡಿಸಿದೆ. ಪರ ವಿರೋಧ ಹೆಚ್ಚಾಗುತ್ತಿದ್ದಂತೆ ಪಪುವಾ ನ್ಯೂಗಿನಿಯಾ ಕ್ಷಮೆಯಾಚಿಸಿದೆ.

ಟ್ವೆರ್ಕಿಂಗ್ ಡ್ಯಾನ್ಸ್ ವಿಡಿಯೋ ವೈರಲ್; ಕಳಚಿತು ಮಿಸ್ ಪಪುವಾ ನ್ಯೂಗಿನಿಯ ಕಿರೀಟ!

ಪಪುವಾ ನ್ಯೂಗಿನಿಯಾದ ಪೋರ್ಟ್ ಮೆರೆಸ್ಬಿ ದುರ್ಗಾ ಪೂಜಾ ಕಮಿಟಿ ಅಧ್ಯಕ್ಷ ಪುಷ್ಪೆಂದು ಮೈಟಿ, ನ್ಯೂಗಿನಿಯಾ ಸರ್ಕಾರಕ್ಕೆ ಮನವಿ ಮಾಡಿದ್ದರು. ಸಾರ್ವಜನಿಕ ದುರ್ಗಾ ಪೂಜೆಗೆ ಅನುಮತಿ ನೀಡಬೇಕು ಎಂದು ಮನವಿಯಲ್ಲಿ ಕೋರಲಾಗಿತ್ತು. ಈ ಮನವಿಯನ್ನು ಪುಪುವಾ ನ್ಯೂಗಿನಿಯಾದ ಪೊಲೀಸ್ ಕಮಿಷನರ್ ಡೇವಿಡ್ ಮ್ಯಾನಿಂಗ್(David Manning) ತಿರಸ್ಕರಿಸಿದ್ದಾರೆ.

Scroll to load tweet…

ನಿಮ್ಮ ಮನವಿಯನ್ನು ಪರಿಶೀಲಿಸಲಾಗಿದೆ. ಆದರೆ ಹಿಂದೂ ಪೂಜೆಯಾಗಿರುವ ದುರ್ಗಾ ಪೂಜೆ ಮೂರ್ತಿ ಪೂಜೆಯಾಗಿದೆ. ಇದು ಕ್ರಿಶ್ಚಿಯನ್ ಆಚರಣೆ ಹಾಗೂ ಮೌಲ್ಯಕ್ಕೆ ವಿರುದ್ಧವಾಗಿದೆ. ಕ್ರಿಶ್ಚಿಯನ್ ಧರ್ಮದಲ್ಲಿ ಮೂರ್ತಿ ಪೂಜೆಗೆ ಅವಕಾಶವಿಲ್ಲ(idol worshipping). ಹೀಗಾಗಿ ಈ ಮನವಿಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಮ್ಯಾನಿಂಗ್ ಅಧಿಸೂಚನೆ ಹೊರಡಿಸಿದ್ದಾರೆ.

46 ವರ್ಷದ ಸತತ ಹೋರಾಟದಿಂದ ವಿಶ್ವಕಪ್‌ಗೆ ಲಗ್ಗೆ ಇಟ್ಟ ಪಪುವಾ ನ್ಯೂಗಿನಿ!

ಪಪುವಾ ನ್ಯೂಗಿನಿಯಾ ತೆಗೆದುಕೊಂಡ ಒಂದು ನಿರ್ಧಾರಕ್ಕೆ ವಿಶ್ವದೆಲ್ಲೆಡೆಗಳಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ. ಆಸ್ಟ್ರೇಲಿಯಾ ವಿದೇಶಾಂಗ ವ್ಯವಹಾರ ಹಾಗೂ ರಕ್ಷಣಾ ವರದಿಗಾರ ಬೆನ್ ಪ್ಯಾಕಮ್ ಈ ಅಧಿಸೂಚನೆ ಪತ್ರವನ್ನು ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ಭಾರಿ ಆಕ್ರೋಶ ವ್ಯಕ್ತವಾಗಿದೆ. 

ತಕ್ಷಣ ಎಚ್ಚೆತ್ತುಕೊಂಡ ಪೊಲೀಸ್ ಕಮಿಷನರ್ ಅಧಿಸೂಚನೆಯಲ್ಲಿ ತಪ್ಪಾಗಿದೆ. ಅಚಾತುರ್ಯದಿಂದ ಅಧಿಸೂಚನೆ ಹೊರಡಿಸಲಾಗಿದೆ. ಪಪುವಾ ನ್ಯೂಗಿನಿಯಾ ದೇಶದ ಪ್ರತಿನಿದಿಯಾಗಿ ದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ಗೌರವಿಸುತ್ತೇನೆ ಎಲ್ಲಾ ಧರ್ಮವನ್ನು, ಎಲ್ಲಾ ಜನರನ್ನು ಗೌರವದಿಂದ ಕಾಣುತ್ತದೆ. 

Scroll to load tweet…

ಪೋರ್ಟ್ ಮೆರೆಸ್ಬಿ ದುರ್ಗಾ ಪೂಜಾ ಕಮಿಟಿ ಅಧ್ಯಕ್ಷ ಪುಷ್ಪೆಂದು ಮೈಟಿಗೆ ಪತ್ರ ಬರೆಯಲಾಗಿದ್ದು, ದುರ್ಗಾ ಪೂಜೆ ಆಯೋಜನೆ ಕುರಿತು ಹೆಚ್ಚಿನ ವಿವರ ಕೇಳಿದ್ದಾರೆ. ಇದೇ ವೇಳೆ ಪತ್ರದಲ್ಲಿ ಕೊರೋನಾ ವೈರಸ್ ಕಾರಣ ಜನರು ಸೇರುವಂತಿಲ್ಲ. ಕೊರೋನಾ ನಿಯಮ ಹಾಗೂ ಮಾರ್ಗಸೂಚಿ ಅಡಿಯಲ್ಲಿ ನಿಮ್ಮ ಮನವಿ ಪರಿಶೀಲನೆ ನಡೆಯಲಿದೆ ಎಂದು ಪೊಲೀಸ್ ಕಮಿಷನರ್ ಪತ್ರದಲ್ಲಿ ಹೇಳಿದ್ದಾರೆ.