ಪೋರ್ಟ್ ಮೊರೆಸ್ಬಿ(ಏ.08): ಮಿಸ್ ವರ್ಸ್ಡ್ ಸೇರಿದಂತೆ ಆಯಾ ದೇಶದ ಮಿಸ್ ಯೂನಿವರ್ಸ್ ಕಿರೀಟ ಗಿಟ್ಟಿಸಿಕೊಳ್ಳಲು ಸುಂದರ ಚೆಲುವೆಯರು ಪಡುವ ಪ್ರಯತ್ನ, ಅಭ್ಯಾಸ, ಆಹಾರ ಕ್ರಮ, ಶಿಸ್ತು ಅಷ್ಟಿಷ್ಟಲ್ಲ. ಹೀಗೆ ಅವಿರತ ಪ್ರಯತ್ನದಿಂದ ಮಿಸ್ ಕಿರೀಟ ಗಿಟ್ಟಿಸಿಕೊಂಡ ಪಪುವಾ ನ್ಯೂಗಿನಿಯಾ ದೇಶದ ಸುಂದರಿ ಲ್ಯೂಸಿ ಮೈನೋ ಇದೀಗ ಒಂದು ಡ್ಯಾನ್ಸ್ ವಿಡಿಯೋ ಪೋಸ್ಟ್ ಮಾಡಿ ತನ್ನ ಮಿಸ್ ಕಿರೀಟವನ್ನೇ ಕಳೆದುಕೊಂಡಿದ್ದಾರೆ.

ತರಗತಿಯ ಬಳಿಕ ವಿದ್ಯಾರ್ಥಿಗಳ ಸಖತ್ ಸ್ಟೆಪ್ಸ್, ವಿಡಿಯೋ ವೈರಲ್!.

ಲ್ಯೂಸಿ ಮೈನೋ 2019ರಲ್ಲಿ ಪಪುವಾ ನ್ಯೂಗಿನಿಯಾ ದೇಶದ ಮಿಸ್ ಕಿರೀಟ ಗೆದ್ದುಕೊಂಡಿದ್ದಳು. 25 ವರ್ಷ ಲ್ಯೂಸಿ ಮೈನೋ ಟ್ವೆರ್ಕಿಂಗ್ ಡ್ಯಾನ್ಸ್ ವಿಡಿಯೋವನ್ನು ಸಾಮಾಜಿಕ ಪೋಸ್ಟ್ ಮಾಡಿದ್ದಾರೆ. ಟಿಕ್‌ಟಾಕ್ ವಿಡಿಯೋ ಭಾರಿ ವೈರಲ್ ಆಗಿದೆ. ಈ ವಿಡಿಯೋ ವೈರಲ್ ಜೊತೆಗೆ ಅಷ್ಟೇ ಟೀಕೆಗಳು ಕೇಳಿಬಂದಿದೆ. ಈ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿದ ಮಿಸ್ ಪೆಸಿಫಿಕ್ ದ್ವೀಪಗಳ ಸ್ಪರ್ಧಾ ಸಮಿತಿ, ಲ್ಯೂಸಿ ಮೈನೋ ಅವರ ಮಿಸ್ ಕಿರೀಟವನ್ನು ವಾಪಸ್ ಪಡೆದಿದೆ.

ದೇಶದ ಇತರ ಯುವತಿಯರು, ಹೆಣ್ಣುಕ್ಕಳಿಗೆ ಸ್ಪೂರ್ತಿಯಾಗಿರುವ, ಮಾದರಿಯಾಗಿರುವ ಮಿಸ್ ಪಪುವಾ ಗಿನಿಯಾ ಸೂಕ್ತವಲ್ಲದ ಹಾಗೂ ಅನುಚಿತ ಡ್ಯಾನ್ಸ್ ವರ್ತನೆಗಳಲ್ಲಿ ಕಾಣಿಸಿಕೊಳ್ಳುವುದು ಸೂಕ್ತವಲ್ಲ. ಹೀಗಾಗಿ ಅವರ ಮಿಸ್ ಪಪುವಾ ನ್ಯೂಗಿನಿಯಾ ಕಿರೀಟ ವಾಪಸ್ ತೆಗೆದುಕೊಳ್ಳುತ್ತಿರುವುದಾಗಿ ಮಿಸ್ ಪೆಸಿಫಿಕ್ ದ್ವೀಪಗಳ ಸ್ಪರ್ಧಾ ಸಮಿತಿ ಹೇಳಿದೆ ಎಂದು ಗಾರ್ಡಿಯನ್ ವರದಿ ಮಾಡಿದೆ.

 

ನಮ್ಮ ಮುಖ್ಯ ಉದ್ದೇಶ ಮಹಿಳೆಯರ ಸಬಲೀಕರಣ. ನಮ್ಮ ದೇಶ ಮತ್ತು ಜನರ ಬಗ್ಗೆ ಸಾಂಸ್ಕೃತಿಕ ಪರಂಪರೆ, ಸಾಂಪ್ರದಾಯಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಉದ್ದೇಶದಿಂದ ಮಿಸ್ ಪಪುವಾ ನ್ಯೂಗಿನಿಯಾ ಕಿರೀಟ ನೀಡಲಾಗುತ್ತದೆ. ಆದರೆ ಇದರರಿಗೆ ಮಾದರಿಯಾಗಬೇಕಿದ್ದ ಮಿಸ್ ಲ್ಯೂಸಿ ಮೈನೋ ಎಲ್ಲೆ ಮೀರಿದ್ದಾರೆ ಎಂದು ಪೆಸಿಫಿಕ್ ದ್ವೀಪಗಳ ಸ್ಪರ್ಧಾ ಸಮಿತಿ ಹೇಳಿದೆ.