Asianet Suvarna News Asianet Suvarna News

Pandemic End 2022: ಮುಂದಿನ ವರ್ಷ ಕೊರೊನಾ ಕೊನೆಗೊಳ್ಳಲಿದೆಯೆಂದು ಭವಿಷ್ಯ ನುಡಿದ WHO ವಿಜ್ಞಾನಿಗಳು

  • 2022 ರ ವೇಳೆಗೆ ಕೊರೊನಾ ಕೊನೆಗೊಳ್ಳುವ ನಿರೀಕ್ಷೆ
  • WHO ವಿಜ್ಞಾನಿಗಳ ತಂಡ ನುಡಿದ ಭವಿಷ್ಯ 
  • ಅಧ್ಯಯನ ನಡೆಸಿ ವರದಿ ತಯಾರಿಸಿದ ವಿಜ್ಞಾನಿಗಳು
     
pandemic end in 2022 says WHO experts gow
Author
Bengaluru, First Published Dec 17, 2021, 9:18 PM IST

ನ್ಯೂಯಾರ್ಕ್(ಡಿ.17): ಕಳೆದ ಎರಡು ವರ್ಷಗಳಿಂದ ಜಗತ್ತನ್ನು ಕಾಡುತ್ತಿರುವ ಮಹಾಮಾರಿ ಕೊರೊನಾ ಸಾಂಕ್ರಾಮಿಕವು 2022 ರ ವೇಳೆಗೆ ಕೊನೆಗೊಳ್ಳುವ ನಿರೀಕ್ಷೆಯಿದೆ ಎಂದು WHO ವಿಜ್ಞಾನಿಗಳು ಭವಿಷ್ಯ ನುಡಿದಿದ್ದಾರೆ. 100 ಕ್ಕೂ ಹೆಚ್ಚು ವಿಶ್ವ ಆರೋಗ್ಯ ಸಂಸ್ಥೆಯ (WHO) ವಿಜ್ಞಾನಿಗಳು ಕೊರೊನಾ ವೈರಸ್‌ನ ಭವಿಷ್ಯದ ಬಗ್ಗೆ ಪ್ರಮುಖ ಮುನ್ಸೂಚನೆಗಳನ್ನು ನೀಡಿ, ವರದಿಯೊಂದನ್ನು ತಯಾರಿಸಿದ್ದಾರೆ. 2022 ರ ವೇಳೆಗೆ ಕೊರೊನಾದಿಂದ ಸಾಯುವವರ ಸಂಖ್ಯೆ ಶೂನ್ಯವಾಗಿರುತ್ತದೆ. 2022ರ ಸಮಯದಲ್ಲಿ ಪೂರ್ತಿ ನಿರ್ಮೂಲನೆಯಾಗುವುದಿಲ್ಲ, ಆದರೆ ಸಾಂಕ್ರಾಮಿಕ ರೋಗವು ಅಂತ್ಯವಾಗುತ್ತದೆ. ನಂತರದ ದಿನಗಳಲ್ಲಿ ಸಾಂಕ್ರಾಮಿಕ ರೋಗವು ಜ್ವರ-ಶೀತ ಕಾಯಿಲೆಯಂತೆಯೇ ಇರುತ್ತದೆ ಎಂದು ತನ್ನ ವರದಿಯಲ್ಲಿ ವಿಜ್ಞಾನಿಗಳ ತಂಡ ಉಲ್ಲೇಖಿಸಿದೆ. 

2022 ರಲ್ಲಿ ಕೊರೊನಾದಂತಹ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಹಲವಾರು ಔಷಧಿಗಳನ್ನು ಅಭಿವೃದ್ಧಿಪಡಿಸಲಾಗುವುದು.ಇನ್ನು 3-4 ತಿಂಗಳಲ್ಲಿ ನೂರಾರು ಕೊರೊನಾ ಔಷಧಗಳು ಮಾರುಕಟ್ಟೆಗೆ ಬರಲಿದೆ. 2022 ರ ಅಂತ್ಯದ ವೇಳೆಗೆ ಕೋವಿಡ್-19 ಮಹಾಮಾರಿಯು 2018 ರಲ್ಲಿ ಸ್ಪ್ಯಾನಿಷ್ ಜ್ವರ ಮತ್ತು 2009 ರಲ್ಲಿ ಹಂದಿ ಜ್ವರದಂತೆಯೇ  ನಿಧಾನವಾಗಿ ಮರೆಯಾಗಲಿದೆ. 99% ರೋಗಿಗಳು ಮನೆಯಲ್ಲಿಯೇ ಔಷಧಿ ಪಡೆದು ಗುಣಮುಖರಾಗಲಿದ್ದಾರೆ. ಮುಂದಿನ ದಿನಗಳಲ್ಲಿ ಜಗತ್ತು ಮಾಸ್ಕ್ ಮುಕ್ತವಾಗಲಿದೆ, ಆದರೆ ಅನಾರೋಗ್ಯದ ಜನರು  ಮಾಸ್ಕ್ ಧರಿಸಬೇಕಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿಗಳ ತಂಡ ತಿಳಿಸಿದೆ.

ಇನ್ನು ವಿಶ್ವ ಆರೋಗ್ಯ ಸಂಸ್ಥೆಯ (World Health Organization) COVIDನ ತಾಂತ್ರಿಕ ಮುಖ್ಯಸ್ಥರಾದ ಮಾರಿಯಾ ವ್ಯಾನ್ ಕೆರ್ಕೋವ್ ಅವರು 2022 ರ ವೇಳೆಗೆ ಸಾಂಕ್ರಾಮಿಕ ರೋಗವನ್ನು ಜಾಗತಿಕವಾಗಿ ನಿರ್ಮೂಲನೆ ಮಾಡಲಾಗುವುದು. ಈ ಬಗ್ಗೆ ವಿಶ್ವಾಸವಿದೆ ಎಂದಿದ್ದಾರೆ.

Omicron Outbreak: ಈ ಲಸಿಕೆ ಪಡೆದವರಿಗೆ ಪಡೆದವರಿಗೆ ಮೊದಲು ಬೂಸ್ಟರ್‌ ಡೋಸ್‌!

ಈ ಮಧ್ಯೆ ಸ್ಪುಟ್ನಿಕ್‌ - v (Sputnik V) ಲಸಿಕೆ ರೂಪಾಂತರಿ ಕೊರೊನಾ ಒಮಿಕ್ರಾನ್ (Omicron) ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಹಾಗೂ ಒಮಿಕ್ರಾನ್ ಅನ್ನು ತಟಸ್ಥಗೊಳಿಸುತ್ತದೆ ಎಂದು  ರಷ್ಯಾದ  ನೇರ ಹೂಡಿಕೆ ನಿಧಿ( Russian Direct Investment Fund) ಹೇಳಿದೆ.  ಮಾತ್ರವಲ್ಲ 'ಸ್ಪುಟ್ನಿಕ್ ಲೈಟ್' (Sputnik Light)ಬೂಸ್ಟರ್ ಡೋಸ್ ನೀಡುವ ಮೂಲಕ ಇದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಬಹುದು ಮತ್ತು ದೇಹದಲ್ಲಿ ಶಕ್ತಿಯನ್ನು ಇದು ಹೆಚ್ಚಿಸುತ್ತದೆ ಎಂದಿದೆ. 

Omicron In Mumbai: ಕಠಿಣ ನಿರ್ಬಂಧ ಜಾರಿ: ರೈಲು, ಬಸ್ಸು, ಟ್ಯಾಕ್ಸಿ ಹತ್ತಲೂ ಲಸಿಕೆ ಕಡ್ಡಾಯ!

ಲಸಿಕೆ ಕಂಡು ಹಿಡಿದ ಗಮಾಲೆಯ ರಾಷ್ಟ್ರೀಯ ಸಂಶೋಧನಾ ಕೇಂದ್ರ ನಡೆಸಿದ ಪ್ರಾಥಮಿಕ ಅಧ್ಯಯನದಲ್ಲಿ ಈ ವಿಚಾರ ಬೆಳಕಿಗೆ ಬಂದಿದ್ದು ಸೋಂಕು ಉಲ್ಬಣಗೊಳ್ಳುವುದನ್ನು ಮತ್ತು ಆಸ್ಪತ್ರೆಗೆ ದಾಖಲಾಗುವುದನ್ನು ತಪ್ಪಿಸಬಹುದಾಗಿದೆ ಎಂದು ಹೇಳಿಕೊಂಡಿದೆ. ಮಾತ್ರವಲ್ಲ  ರಷ್ಯಾದ  ನೇರ ಹೂಡಿಕೆ ನಿಧಿ ಮುಖ್ಯಸ್ಥ ಕಿರಿಲ್ಲ್‌ ಡ್ಮಿಟ್ರಿವ್‌ ಅವರು 2022ರ ಫೆಬ್ರವರಿ 20ರ ಒಳಗಾಗಿ ನಾವು  ನೂರಾರು ಮಿಲಿಯನ್‌ ಸ್ಪುಟ್ನಿಕ್‌  ಬೂಸ್ಟರ್‌ಗಳನ್ನು ನೀಡಲಿದ್ದೇವೆ ಎಂದು ಈಗಾಗಲೇ ನವೆಂಬರ್ ನಲ್ಲಿ ಸ್ಪಷ್ಟಪಡಿಸಿದ್ದರು.

Omicron In Karnataka: 2ನೇ ಅಲೆಯಲ್ಲಿ ಸೋಂಕು ತಗಲಿತ್ತು, 2 ಡೋಸ್‌ ಲಸಿಕೆ ಪಡೆದಿದ್ದೆ. ಆದರೂ ಒಮಿಕ್ರಾನ್ ಬಂತು!

ಕಳೆದೆರಡು ವರ್ಷಗಳಿಂದ ಕೊರೊನಾ ವೈರಸ್ ಗೆ ಜಗತ್ತು ನಲುಗಿ ಹೋಗಿದೆ. ಮೊದಲ ಅಲೆ, ಎರಡನೇ ಅಲೆ ಡೆಲ್ಟಾ ಬಳಿಕ ಈಗ ಒಮಿಕ್ರಾನ್ ಭೀತಿ ಜಗತ್ತಿನಾದ್ಯಂತ ಎದುರಾಗಿದೆ. ಭಾರತದಲ್ಲಿ ಈವರೆಗೆ ಅಂದರೆ ಡಿಸೆಂಬರ್ 17ರವರೆಗೆ ಒಟ್ಟು 113 ಒಮಿಕ್ರಾನ್ (Omicron) ಪ್ರಕರಣಗಳು ಬೆಳಕಿಗೆ ಬಂದಿದೆ.  ಕರ್ನಾಟಕದಲ್ಲಿ ಪ್ರಕರಣಗಳ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.

Follow Us:
Download App:
  • android
  • ios