Omicron Outbreak: ಈ ಲಸಿಕೆ ಪಡೆದವರಿಗೆ ಪಡೆದವರಿಗೆ ಮೊದಲು ಬೂಸ್ಟರ್ ಡೋಸ್!
* ಕೋವ್ಯಾಕ್ಸಿನ್ ನಿಷ್ಕಿ್ರಯಗೊಂಡ ವೈರಸ್‌ನಿಂದ ತಯಾರಿಸಲ್ಪಟ್ಟ ಲಸಿಕೆ
* ಕೋವ್ಯಾಕ್ಸಿನ್ ಪಡೆದವರಿಗೆ ಮೊದಲು ಬೂಸ್ಟರ್ ಡೋಸ್
* ಡಬ್ಲ್ಯೂಎಚ್‌ಒ ನೂತನ ಶಿಫಾರಸು ಅನ್ವಯ ಈ ನಿರ್ಣಯ ಸಾಧ್ಯತೆ
ನವದೆಹಲಿ(ಡಿ.16): ಭಾರತದಲ್ಲಿ ಬೂಸ್ಟರ್ ಡೋಸ್ ನೀಡುವ ಕುರಿತು ಚರ್ಚೆಗಳಾಗುತ್ತಿರುವ ಬೆನ್ನಲ್ಲೇ, ಕೋವ್ಯಾಕ್ಸಿನ್ ಲಸಿಕೆ ಪಡೆದವರಿಗೆ ಮೊದಲು ಬೂಸ್ಟರ್ ಡೋಸ್ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ. ಒಮಿಕ್ರೋನ್ ರೂಪಾಂತರಿ ವೈರಸ್ ಪ್ರಕರಣಗಳು ವಿಶ್ವಾದ್ಯಂತ ಹೆಚ್ಚಾಗುತ್ತಿರುವ ಬೆನ್ನಲ್ಲೇ ಬೂಸ್ಟರ್ ಡೋಸ್ ನೀಡಲು ತಜ್ಞರ ಸಮಿತಿ ಚರ್ಚೆ ನಡೆಸುತ್ತಿದೆ.
ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಮತ್ತು ನಿಷ್ಕಿ್ರಯ ವೈರಸ್‌ನಿಂದ ತಯಾರಿಸಿದ ಲಸಿಕೆ ಪಡೆದವರಿಗೆ ಮೊದಲು ಬೂಸ್ಟರ್ ಡೋಸ್ ನೀಡಬೇಕು ಎಂದು ಇತ್ತೀಚಿಗೆ ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರ ಸಮಿತಿ ಶಿಫಾರಸು ಮಾಡಿತು. ಭಾರತ್ ಬಯೋಟೆಕ್ ಉತ್ಪಾದಿಸುವ ಕೋವ್ಯಾಕ್ಸಿನ್ ಲಸಿಕೆ ನಿಷ್ಕಿ್ರಯಗೊಂಡ ವೈರಸ್‌ನಿಂದ ತಯಾರಿಸಿದ್ದಾಗಿದೆ. ಹಾಗಾಗಿ ಕೊವ್ಯಾಕ್ಸಿನ್ ಲಸಿಕೆ ಪಡೆದವರಿಗೆ ಮೊದಲು ಬೂಸ್ಟರ್ ಡೋಸ್ ನೀಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರ ಲಸಿಕಾಕರ ಸಮಿತಿಯ ಸದಸ್ಯರೊಬ್ಬರು ತಿಳಿಸಿದ್ದಾರೆ ಎಂದು ಮಾದ್ಯಮವೊಂದು ವರದಿ ಮಾಡಿದೆ.
ದೇಶದಲ್ಲಿ ಈವರೆಗೆ 135 ಕೋಟಿ ಡೋಸ್ ಲಸಿಕೆ ವಿತರಿಸಲಾಗಿದೆ. ಇದರಲ್ಲಿ ಶೇ.10.7ರಷ್ಟುಕೋವ್ಯಾಕ್ಸಿನ್ ಆಗಿದೆ. ಕಳೆದ ವಾರ ಸಹ ಅಗತ್ಯ ಬಿದ್ದರೆ ಹೆಚ್ಚುವರಿ ಡೋಸ್ ಲಸಿಕೆ ವಿತರಿಸಲು ಸಿದ್ಧವಾಗಿದ್ದೇವೆ ಎಂದು ತಜ್ಞರ ತಂಡ ಹೇಳಿತ್ತು.