Asianet Suvarna News Asianet Suvarna News

ಆದಾಯಕ್ಕಿಂತಲೂ ಪಾಕಿಸ್ತಾನದ ಸಾಲವೇ ಹೆಚ್ಚು..!

ಪಾಕಿಸ್ತಾನದ ಸಾಲ ಏರುಗತಿಯಲ್ಲೇ ಸಾಗಿದ್ದು, ಅದರ ಒಟ್ಟು ಸಾಲವು ದೇಶದ ಒಟ್ಟು ಜಿಡಿಪಿ ಮೀರಿಸುವ ಹಂತ ತಲುಪಿದೆ. ಕೂಡಲೇ ಆರ್ಥಿಕ ಸುಧಾರಣೆ ಜಾರಿಗೆ ತರದಿದ್ದರೆ ಪಾಕಿಸ್ತಾನದ ಆರ್ಥಿಕತೆ ಮುಳುಗಿ ದಿವಾಳಿಯಾಗುವುದು ಖಚಿತ ಎಂದು ಇಸ್ಲಾಮಾಬಾದ್ ಮೂಲದ ಆರ್ಥಿಕ ವಿಶ್ಲೇಷಣಾ ಸಂಸ್ಥೆ 'ತಬದ್ಲಾಬ್' ತನ್ನ ವರದಿಯಲ್ಲಿ ಎಚ್ಚರಿಸಿದೆ.

Pakistans debt is more than income Expert advice to take revolutionary economic reforms in liquidation fast akb
Author
First Published Feb 19, 2024, 8:22 AM IST

ನವದೆಹಲಿ: ಪಾಕಿಸ್ತಾನದ ಸಾಲ ಏರುಗತಿಯಲ್ಲೇ ಸಾಗಿದ್ದು, ಅದರ ಒಟ್ಟು ಸಾಲವು ದೇಶದ ಒಟ್ಟು ಜಿಡಿಪಿ ಮೀರಿಸುವ ಹಂತ ತಲುಪಿದೆ. ಕೂಡಲೇ ಆರ್ಥಿಕ ಸುಧಾರಣೆ ಜಾರಿಗೆ ತರದಿದ್ದರೆ ಪಾಕಿಸ್ತಾನದ ಆರ್ಥಿಕತೆ ಮುಳುಗಿ ದಿವಾಳಿಯಾಗುವುದು ಖಚಿತ ಎಂದು ಇಸ್ಲಾಮಾಬಾದ್ ಮೂಲದ ಆರ್ಥಿಕ ವಿಶ್ಲೇಷಣಾ ಸಂಸ್ಥೆ 'ತಬದ್ಲಾಬ್' ತನ್ನ ವರದಿಯಲ್ಲಿ ಎಚ್ಚರಿಸಿದೆ.

ಈ ಕುರಿತು 'ಎ ರೇಜಿಂಗ್ ಫೈರ್' ಎಂಬ ಹೆಸರಿನಲ್ಲಿ ತಯಾರಿಸಿರುವ ವರದಿಯಲ್ಲಿ ಪಾಕಿಸ್ತಾನದ ಆರ್ಥಿಕತೆಯು ತೀವ್ರವಾಗಿ ಕುಸಿಯುತ್ತಿದೆ. ಪ್ರಸ್ತುತ ಆರ್ಥಿಕ ಸಾಲಿನಲ್ಲಿ ವಿಶ್ವಸಂಸ್ಥೆ ಮತ್ತು ದ್ವಿಪಕ್ಷೀಯ ಸಾಲಗಳನ್ನು ಬಿಟ್ಟು ಉಳಿದ ಸಾಲಗಳೇ 4 ಲಕ್ಷ ಕೋಟಿ ರು. ದಾಟಿದೆ. ಇದು ಪಾಕಿಸ್ತಾನದ ಒಟ್ಟು ಜಿಡಿಪಿಯನ್ನೇ ಮೀರಿಸುವ ಹಂತ ತಲುಪಿದೆ. ಹೀಗಾಗಿ ಪಾಕಿಸ್ತಾನದಲ್ಲಿ ಸಾಲ ಮರುಪಾವತಿಗೆ ಮೊದಲ ಆದ್ಯತೆಯನ್ನು ನೀಡಬೇಕಾಗಿದ್ದು, ಉತ್ಪಾದಕ ಮತ್ತು ಅಭಿ ವೃದ್ಧಿವಲಯಗಳಿಗೆ ಹಣವಿನಿಯೋಗಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದೆ.

Mani Shankar Aiyar on Pakistan: ಪಾಕಿಸ್ತಾನವನ್ನು ಹೊಗಳಿ.. ಮೋದಿಯನ್ನು ತೆಗಳಿದ ವಿವಾದ ಪುರುಷ..!

ಇದರಿಂದಾಗಿ ವಿಪರೀತವಾಗಿ ಏರುತ್ತಿ ರುವ ಜನಸಂಖ್ಯೆಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವುದನ್ನು ಕೈಬಿಟ್ಟು ಸಾಲ ಮರುಪಾವತಿಯೇ ಮೊದಲ ಆದ್ಯತೆಯಾಗಿ ಪಾಕಿಸ್ತಾನ ಪರಿಗಣಿಸಿದೆ. ಜೊತೆಗೆ 2011ಕ್ಕೆ ಹೋಲಿಸಿದರೆ ಪಾಕಿಸ್ತಾನದ ಸಾಲದ ಪ್ರಮಾಣ ಆರು ಪಟ್ಟು ಹೆಚ್ಚಾಗಿದ್ದು, ವಿದೇಶಿ ಅವಲಂಬನೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ. ಇದನ್ನು ಕಡಿಮೆ ಮಾಡಿಕೊಂಡು ತನ್ನ ದೇಶದಲ್ಲೇ ಸರಕುಗಳನ್ನು ಉತ್ಪಾದಿಸುವತ್ತ ಗಮನಹರಿಸಿದರೆ ಆರ್ಥಿಕತೆ ಪುನಶ್ವೇತನಗೊಳ್ಳಬಹುದು ಎಂದು ಸಲಹೆ ನೀಡಿದೆ.

ಇದನ್ನು ಹೀಗೆಯೇ ಬಿಟ್ಟರೆ ದೇಶದ ಆರ್ಥಿಕತೆ ದಿವಾಳಿಯಾಗಲಿದ್ದು, ಅದನ್ನು ತಪ್ಪಿಸಲು ಕ್ಷಿಪ್ರ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತರಬೇಕೆಂದು ವರದಿಯು ಸರ್ಕಾರಕ್ಕೆ ಸಲಹೆ ನೀಡಿದೆ.

ಪಾಕಿಸ್ತಾನಕ್ಕೆ ಸರ್ವಾಧಿಕಾರಿ ಆಡಳಿತ ದೇಶ ಪಟ್ಟ, ಈ ಕುಖ್ಯಾತಿಗೆ ಗುರಿಯಾದ ಏಷ್ಯಾದ ಏಕೈಕ ರಾಷ್ಟ್ರ!

Follow Us:
Download App:
  • android
  • ios