Asianet Suvarna News Asianet Suvarna News

ಪಾಕ್‌ನ ಅಬ್ದುಲ್ ಮಕ್ಕಿಯನ್ನು ಜಾಗತಿಕ ಉಗ್ರ ಎಂದು ಘೋಷಿಸಿದ ವಿಶ್ವಸಂಸ್ಥೆ: ಮೆತ್ತಗಾದ ಚೀನಾ, ಭಾರತಕ್ಕೆ ಗೆಲುವು..!

ಜೂನ್ 2022 ರಲ್ಲಿ, UNSC 1267 ಸಮಿತಿ ಎಂದೂ ಕರೆಯಲ್ಪಡುವ ನಿರ್ಬಂಧಗಳ ಸಮಿತಿಯ ಅಡಿಯಲ್ಲಿ ಭಯೋತ್ಪಾದಕ ಅಬ್ದುಲ್ ರೆಹಮಾನ್ ಮಕ್ಕಿಯನ್ನು ಪಟ್ಟಿ ಮಾಡುವ ಪ್ರಸ್ತಾಪವನ್ನು ತಡೆಹಿಡಿದಿದ್ದ ನಂತರ  ಭಾರತವು ಚೀನಾ ವಿರುದ್ಧ ತರಾಟೆಗೆ ತೆಗೆದುಕೊಂಡಿತ್ತು. 

pakistans abdul rehman makki named global terrorist year after china blocked attempt ash
Author
First Published Jan 17, 2023, 11:17 AM IST

ನ್ಯೂಯಾರ್ಕ್ (ಜನವರಿ 17, 2023): ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ) ಸೋಮವಾರ ಪಾಕಿಸ್ತಾನ ಮೂಲದ ಭಯೋತ್ಪಾದಕ ಅಬ್ದುಲ್ ರೆಹಮಾನ್ ಮಕ್ಕಿಯನ್ನು ತನ್ನ ಐಎಸ್‌ಐಎಲ್ (ದಾಯೀಶ್‌) ಮತ್ತು ಅಲ್-ಖೈದಾ ನಿರ್ಬಂಧಗಳ ಸಮಿತಿಯ ಅಡಿಯಲ್ಲಿ ಜಾಗತಿಕ ಭಯೋತ್ಪಾದಕ ಎಂದು ಪಟ್ಟಿ ಮಾಡಿದೆ. ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ನಾಯಕನನ್ನು ಜಾಗತಿಕ ಭಯೋತ್ಪಾದಕ ಎಂದು ಹೆಸರಿಸಲು ಭಾರತ ಕಳೆದ ವರ್ಷ ಮಾಡಿದ ಪ್ರಯತ್ನವನ್ನು ಚೀನಾ ಕಳೆದ ವರ್ಷ ತಡೆಹಿಡಿದಿತ್ತು. ಆದರೂ, ಕೊನೆಗೂ ಜಾಗತಿಕ ಭಯೋತ್ಪದಕ ಎಂದು ಪಟ್ಟಿ ಮಾಡಲಾಗಿದೆ. ಜೂನ್ 2022 ರಲ್ಲಿ, UNSC 1267 ಸಮಿತಿ ಎಂದೂ ಕರೆಯಲ್ಪಡುವ ನಿರ್ಬಂಧಗಳ ಸಮಿತಿಯ ಅಡಿಯಲ್ಲಿ ಭಯೋತ್ಪಾದಕ ಅಬ್ದುಲ್ ರೆಹಮಾನ್ ಮಕ್ಕಿಯನ್ನು ಪಟ್ಟಿ ಮಾಡುವ ಪ್ರಸ್ತಾಪವನ್ನು ತಡೆಹಿಡಿದಿದ್ದ ನಂತರ  ಭಾರತವು ಚೀನಾ ವಿರುದ್ಧ ತರಾಟೆಗೆ ತೆಗೆದುಕೊಂಡಿತ್ತು. 

"16 ಜನವರಿ 2023 ರಂದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (United Nations Security Council) ಸಮಿತಿ 1267 (1999), 1989 (2011) ಮತ್ತು 2253 (2015) ಐಎಸ್‌ಐಎಲ್ (ISIL) (ದಾಯೀಶ್‌), ಅಲ್-ಖೈದಾ (Al Qaeda) ಮತ್ತು ಸಂಬಂಧಿತ ವ್ಯಕ್ತಿಗಳು, ಗುಂಪುಗಳು, ಉದ್ಯಮಗಳು ಮತ್ತು ಘಟಕಗಳಿಗೆ ಸಂಬಂಧಿಸಿದ ನಿರ್ಣಯಗಳನ್ನು ಅನುಮೋದಿಸಿತು. ವಿಶ್ವಸಂಸ್ಥೆಯ ಸೆಕ್ಯುರಿಟಿ ಕೌನ್ಸಿಲ್ ನಿರ್ಣಯ (Resolution) 2610 (2021) ರ ಪ್ಯಾರಾಗ್ರಾಫ್ 1 ರಲ್ಲಿ ಹೊಂದಿಸಲಾದ ಸ್ವತ್ತುಗಳನ್ನು ಫ್ರೀಜ್ ಮಾಡುವುದು, ಪ್ರಯಾಣ ನಿಷೇಧ ಮತ್ತು ಶಸ್ತ್ರಾಸ್ತ್ರ ನಿರ್ಬಂಧಕ್ಕೆ ಒಳಪಟ್ಟಿರುವ ವ್ಯಕ್ತಿಗಳು ಹಾಗೂ ಘಟಕಗಳ ಐಎಸ್‌ಐಎಲ್ (ದಾಯೀಶ್‌) ಮತ್ತು ಅಲ್-ಖೈದಾ ನಿರ್ಬಂಧಗಳ ಪಟ್ಟಿಗೆ ಕೆಳಗೆ ನಿರ್ದಿಷ್ಟಪಡಿಸಿದ ಪ್ರವೇಶವನ್ನು ವಿಶ್ವಸಂಸ್ಥೆ ಚಾರ್ಟರ್‌ನ ಅಧ್ಯಾಯ VII ಅಡಿಯಲ್ಲಿ ಅಳವಡಿಸಿಕೊಳ್ಳಲಾಗಿದೆ" ಎಂದು ವಿಶ್ವಸಂಸ್ಥೆ ಅಮೆರಿಕ ಕಾಲಮಾನ ಸೋಮವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನು ಓದಿ: ಮಸೂದ್ ಅಜರ್ ಜಾಗತಿಕ ಉಗ್ರ: ಚೀನಾ ಮೆತ್ತಗಾಗಿದ್ದು ಹೇಗೆ?

ಭಾರತ (India) ಮತ್ತು ಯುಎಸ್ (United States) ಈಗಾಗಲೇ ಅಬ್ದುಲ್ ರೆಹಮಾನ್ ಮಕ್ಕಿಯನ್ನು (Abdul Rehman Makki) ತಮ್ಮ ದೇಶೀಯ ಕಾನೂನಿನ ಅಡಿಯಲ್ಲಿ ಭಯೋತ್ಪಾದಕ (Terrorist)ಎಂದು ಪಟ್ಟಿ ಮಾಡಿದೆ. ಈ ಉಗ್ರ ಭಾರತದಲ್ಲಿ ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಹಿಂಸಾಚಾರಕ್ಕೆ ಯುವಕರನ್ನು ನೇಮಿಸಿಕೊಳ್ಳುವುದು ಮತ್ತು ದಾಳಿಗಳನ್ನು ಯೋಜಿಸುವುದು ಹಾಗೂ ನಿಧಿ ಸಂಗ್ರಹಿಸುವಲ್ಲಿ ತೊಡಗಿಸಿಕೊಂಡಿದ್ದಾನೆ. ಅಬ್ದುಲ್ ರೆಹಮಾನ್ ಮಕ್ಕಿ ಲಷ್ಕರ್-ಎ-ತೈಬಾ (ಎಲ್‌ಇಟಿ) ಮುಖ್ಯಸ್ಥ ಮತ್ತು 26/11 ಮಾಸ್ಟರ್‌ಮೈಂಡ್ ಹಫೀಜ್ ಸಯೀದ್‌ನ ಸೋದರ ಮಾವ. ಇವನು ಅಮೆರಿಕ ಗೊತ್ತುಪಡಿಸಿದ ವಿದೇಶಿ ಭಯೋತ್ಪಾದಕ ಸಂಘಟನೆ (Foreign Terrorist Organization) (FTO) ಯಾದ LeT ಯಲ್ಲಿ ವಿವಿಧ ನಾಯಕತ್ವದ ಪಾತ್ರಗಳನ್ನು ವಹಿಸಿದ್ದಾನೆ. ಎಲ್‌ಇಟಿ ಕಾರ್ಯಾಚರಣೆಗಳಿಗೆ ನಿಧಿ ಸಂಗ್ರಹಿಸುವಲ್ಲಿಯೂ ಅಬ್ದುಲ್‌ ರೆಹಮಾನ್‌ ಮಕ್ಕಿ ಪಾತ್ರ ವಹಿಸಿದ್ದಾನೆ.

2020 ರಲ್ಲಿ, ಪಾಕಿಸ್ತಾನಿ ಭಯೋತ್ಪಾದನಾ-ವಿರೋಧಿ ನ್ಯಾಯಾಲಯವು ಅಬ್ದುಲ್‌ ರೆಹಮಾನ್‌ ಮಕ್ಕಿಯನ್ನು ಭಯೋತ್ಪಾದನೆಗೆ ಹಣಕಾಸು ಒದಗಿಸಿದ ಒಂದು ಪ್ರಕರಣದಲ್ಲಿ ದೋಷಿ ಎಂದು ಘೋಷಿಸಿತು ಮತ್ತು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಪ್ರಕಾರ ಜೈಲು ಶಿಕ್ಷೆ ವಿಧಿಸಿದೆ. ಈ ಹಿಂದೆ, ಅಬ್ದುಲ್‌ ರೆಹಮಾನ್‌ ಮಕ್ಕಿ ಸೇರಿದಂತೆ ಹಲವು ಪಾಕ್ ಉಗ್ರರನ್ನು ಜಾಗತಿಕ ಭಯೋತ್ಪಾದಕ ಎಂದು ಪಟ್ಟಿ ಮಾಡುವಲ್ಲಿ ಚೀನಾ ಅಡೆತಡೆಗಳನ್ನು ಹಾಕಿದೆ. ಪಾಕಿಸ್ತಾನ ಮೂಲದ ಮತ್ತು ಯುಎನ್-ನಿಷೇಧಿತ ಭಯೋತ್ಪಾದಕ ಸಂಸ್ಥೆ ಜೈಶ್-ಎ-ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಮೌಲಾನಾ ಮಸೂದ್ ಅಜರ್‌ನನ್ನು ಜಾಗತಿಕ ಉಗ್ರ ಎಂದು ಪಟ್ಟಿ ಮಾಡುವ ಪ್ರಸ್ತಾಪಗಳನ್ನು ಸಹ ಚೀನಾ ಹಲವು ಬಾರಿ ನಿರ್ಬಂಧಿಸಿದೆ.

ಇದನ್ನೂ ಓದಿ: ಲಾಡೆನ್‌ ಸ್ತುತಿ​ಸುವ ಪಾಕ್‌​ನಿಂದ ಶಾಂತಿ ಮಾತು: ಭಾರತ ಕಿಡಿ!

Follow Us:
Download App:
  • android
  • ios