ಇಸ್ಲಾಮಾಬಾದ್(ನ.04) ಮೋದಿಗೆ ಬೆದರಿಕೆ ಹಾಕಿದ್ದ ಪಾಕಿಸ್ತಾನದ ಪಾಪ್ ಗಾಯಕಿ ರಾಬಿ ಪಿರ್ಝಾದ ಖಾಸಗಿ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿವೆ. ಈ ಲೀಕ್ ಹಿಂದೆ ಪಾಕಿಸ್ತಾನ ಮೆಜರ್ ಜನರಲ್ ಅಸಿಫ್ ಗಪೂರ್ ಕೈವಾಡ ಇದೆ ಎಂದು ಹಲವರು ಆರೋಪ ಮಾಡಿದ್ದಾರೆ. ಗಾಯಕಿ ಮತ್ತು ಆಸಿಫ್ ನಡುವೆ ವಿಚಾರವೊಂದಕ್ಕೆ ವಾಗ್ಯುದ್ಧ ನಡೆದಿತ್ತು.

ಆದರೆ ಈ ಪ್ರಕರಣದ ಹಿಂದೆ ಗಾಯಕಿಯ ಬಾಯ್ ಫ್ರೆಂಡ್ ಕೈವಾಡ ಇದೆ. ಆಕೆಯ ಮೊಬೈಲ್ ಪೋನ್ ಪಾಸ್ ವರ್ಡ್ ಹೊಂದಿದ್ದ ಆತನೇ ಈ ಕೆಲಸ ಮಾಡಿದ್ದಾನೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಎರಡು ದಿನದಿಂದ ಪಾಕಿಸ್ತಾನ ಮೀಡಿಯಾ ಸೇರಿದಂತೆ ಎಲ್ಲ ಕಡೆ ಇದೊಂದು ದೊಡ್ಡ ಸುದ್ದಿಯಾಗುತ್ತಿದೆ. ಆದರೆ ಇಲ್ಲಿಯವರೆಗೂ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಪೂನಂ ಪಾಂಡೆಗೆ ಏನಾಗಿದೆ.. ಖುಲ್ಲಂ ಖುಲ್ಲ ಎಲ್ಲ ಹಾಕ್ತಾಳೆ!

ಸಾಮಾಜಿಕ ಜಾಲತಾಣದಲ್ಲಿ ಪಾಕಿಸ್ತಾನದ ಮಂದಿ ಸದಾ ಒಂದಿಲ್ಲೊಂದು ಟ್ರೋಲ್‌ನಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ಇದೀಗ ಇದಕ್ಕೆ ಹೊಸ ಸೇರ್ಪಡೆಯಾಗಿ ಪಾಕಿಸ್ತಾನದ ಪಾಪ್ ಗಾಯಕಿ ಸೇರಿದ್ದಾಳೆ.

ಪಾಕಿಸ್ತಾನದ ರಾಬಿ ಪಿರ್ಝಾದ ಎನ್ನುವ ಗಾಯಕಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಬೆದರಿಸುವ ರೀತಿ ಮಾತನಾಡಿ ಸುದ್ದಿಯಾಗಿದ್ದಳು ಕಾಶ್ಮೀರದಲ್ಲಿ 370ನೇ ವಿಧಿ ರದ್ದು ವಿಚಾರಕ್ಕೆ ಸಂಬಂಧಿಸಿದಂತೆ ವಿಡಿಯೊ ಮಾಡಿರುವ ಆಕೆ, ಕೈಯಲ್ಲಿ ಹಾವುಗಳನ್ನು ಹಿಡಿದು ಮಾತನಾಡಿದ್ದಳು.

ಅದರಲ್ಲಿ ‌ತಾನು ಕಾಶ್ಮೀರ ಯುವತಿ ಎಂದು ಹೇಳಿಕೊಂಡಿರುವ‌ ಆಕೆ, ಮೋದಿ ಕಾಶ್ಮೀರಿಗರನ್ನು ಹಿಂಸಿಸುತ್ತಿದ್ದಾರೆ. ಅದಕ್ಕಾಗಿ ಅವರಿಗಾಗಿ ಇದು ಎಂದು ಹಾವನ್ನು ತೋರಿಸಿ ಬೆದರಿಕೆ ಹಾಕಿದ್ದಕ್ಕೆ ಸರಿಯಾದ ಏಟನ್ನೇ ಸೋಶಿಯಲ್ ಮೀಡಿಯಾದಲ್ಲಿ ತಿಂದಿದ್ದಳು.