Asianet Suvarna News Asianet Suvarna News

ಬೆಲೆ ಏರಿಕೆಯಿಂದ ಹೈರಾಣಾದ ಪಾಕ್ ಜನ: ಪೆಟ್ರೋಲ್‌ಗೆ 272, ಡೀಸೆಲ್‌ 280

ಸಾಲ ಪಡೆಯಲು ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಓಲೈಸುವ ಕಾರ್ಯವನ್ನು ಮುಂದುವರೆಸಿರುವ ಪಾಕಿಸ್ತಾನ ಸರ್ಕಾರ ಗುರುವಾರ ಪೆಟ್ರೋಲ್‌, ಡೀಸೆಲ್‌ ಬೆಲೆಯನ್ನು ದಾಖಲೆಯ ಪ್ರಮಾಣದಲ್ಲಿ ಏರಿಸಿ ಜನರಿಗೆ ಶಾಕ್‌ ನೀಡಿದೆ. 

Pakistani people suffer by High economic crisis in nation, liter petrol price in pak reached 272 pak Rupees akb
Author
First Published Feb 17, 2023, 5:59 AM IST

ಇಸ್ಲಾಮಾಬಾದ್‌: ಸಾಲ ಪಡೆಯಲು ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಓಲೈಸುವ ಕಾರ್ಯವನ್ನು ಮುಂದುವರೆಸಿರುವ ಪಾಕಿಸ್ತಾನ ಸರ್ಕಾರ ಗುರುವಾರ ಪೆಟ್ರೋಲ್‌, ಡೀಸೆಲ್‌ ಬೆಲೆಯನ್ನು ದಾಖಲೆಯ ಪ್ರಮಾಣದಲ್ಲಿ ಏರಿಸಿ ಜನರಿಗೆ ಶಾಕ್‌ ನೀಡಿದೆ. ಪೆಟ್ರೋಲ್‌ ಬೆಲೆ ಲೀಟರ್‌ಗೆ 22.20 ರು. ಹೆಚ್ಚಳ ಮಾಡಿದ್ದು, ಒಂದು ಲೀಟರ್‌ ಪೆಟ್ರೋಲ್‌ ಬೆಲೆ 272 ರು. ತಲುಪಿದೆ. ಹೈಸ್ಪಿಡ್‌ ಡಿಸೇಲ್‌ ಬೆಲೆ 17.20 ರು. ಹೆಚ್ಚಳ ಮಾಡಲಾಗಿದ್ದು, ಪ್ರತಿ ಲೀಟರ್‌ಗೆ 280 ರೂ.. ಹಾಗೂ ಸೀಮೆಎಣ್ಣೆ 12.90 ರು. 202 ರು. ಗೆ ಏರಿಕೆ ಮಾಡಲಾಗಿದೆ. ಸಾಲ ನೀಡುವ ಮುನ್ನ ಆದಾಯ ಹೆಚ್ಚಿಸುವಂತೆ ಪಾಕಿಸ್ತಾನಕ್ಕೆ ಷರತ್ತು ಹಾಕಿತ್ತು. ಪೆಟ್ರೋಲ್‌, ಡಿಸೇಲ್‌ ಬೆಲೆಏರಿಕೆಯು ಐಎಂಎಫ್‌ ಷರತ್ತಿನಲ್ಲಿ ಒಂದಾಗಿತ್ತು.

ನೈಸರ್ಗಿಕ ಅನಿಲ ಬೆಲೆ ಶೇ.96ರಷ್ಟು ಏರಿಕೆ

ಇಸ್ಲಾಮಾಬಾದ್‌: ಹಿಂದೆಂದೂ ಕಂಡಿರದ ಆರ್ಥಿಕ ದುಸ್ಥಿತಿಗೆ (Economic crisis) ತಲುಪಿರುವ ಪಾಕಿಸ್ತಾನ ಇದೀಗ ಮತ್ತೆ ನೈಸರ್ಗಿಕ ಅನಿಲದ (Natural Gas) ಮೇಲಿನ ತೆರಿಗೆಯನ್ನು ಶೇ.96ರಷ್ಟು ಹೆಚ್ಚಿಸಿದೆ. ಅಂದರೆ ತೆರಿಗೆಯನ್ನು ಶೇ.16ರಿಂದ ಶೇ.112ಕ್ಕೆ ಏರಿಕೆ ಮಾಡಲಾಗಿದೆ, ಇದು ಕೈಗಾರಿಕೆಗಳು ಸೇರಿದಂತೆ ಸಾಮಾನ್ಯ ಜನರ ಮೇಲಿನ ಹೊರೆಯನ್ನು ಮತ್ತಷ್ಟು ಹೆಚ್ಚು ಮಾಡಲಿದೆ.  ಸಾಲ ನೀಡುವುದಕ್ಕಾಗಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್‌) ವಿಧಿಸಿರುವ ಷರತ್ತುಗಳನ್ನು ಪೂರ್ಣಗೊಳಿಸುವ ಸಲುವಾಗಿ ಪಾಕಿಸ್ತಾನ ಈ ತೆರಿಗೆ ಹೆಚ್ಚಳವನ್ನು ಕೈಗೊಂಡಿದೆ. ಇದಲ್ಲದೇ ಇತರ ಇಂಧನಗಳ ಮೇಲೆ ಹೆಚ್ಚುವರಿ ತೆರಿಗೆಗಳನ್ನು ವಿಧಿಸಲು ಸಹ ನಿರ್ಧರಿಸಿದೆ. ಜೊತೆಗೆ ವಿದ್ಯುತ್‌ಗೆ ನೀಡುತ್ತಿರುವ ಸಹಾಯಧನವನ್ನು (Subsidy)ಸಹ ಕಡಿತಗೊಳಿಸಲು ತೀರ್ಮಾನಿಸಿದೆ.

Pakistan Economic Crisis: ಅಂಧಕಾರದಲ್ಲಿ ಪಾಕಿಸ್ತಾನ: ಹೊಟ್ಟೆಗೆ ಹಿಟ್ಟಿಲ್ಲ, ರಾತ್ರಿ ಕರೆಂಟ್ ಇಲ್ಲ

ಹಾಲಿನ ದರ ಲೀಟರ್‌ಗೆ 210 ರು.ಗೆ ಏರಿಕೆ!
ಪಾಕಿಸ್ತಾನದಲ್ಲಿ (Pakistan) ಕಳೆದ ಕೆಲ ದಿನಗಳಿಂದ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೆರುತ್ತಿದೆ. ಹಾಲಿನ ದರವು ಪ್ರತಿ ಲೀ.ಗೆ 190 ಪಾಕಿಸ್ತಾನಿ ರು.ಗಳಿಂದ 210 ರು.ಗೆ ಏರಿಕೆಯಾಗಿದೆ. ಜೀವಂತ ಕೋಳಿಯ ದರ ಕೇಜಿಗೆ 500 ರು.ಗೆ ಹೆಚ್ಚಿದೆ. ಕೋಳಿ ಮಾಂಸದ ದರ 780 ಪಾಕ್‌ ರೂಪಾಯಿ. ಆಗಿದ್ದು, ಮೂಳೆ ರಹಿತ ಮಾಂಸದ ದರ 1100 ಆಗಿದೆ. ಸಾಲದ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನ ಈ ತಿಂಗಳು 170 ಶತಕೋಟಿ ರು. ಗಳಷ್ಟು ಹೊಸ ತೆರಿಗೆಗಳನ್ನು ವಿಧಿಸಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಇದು ಹಣದುಬ್ಬರವನ್ನು ಮತ್ತಷ್ಟು ಹೆಚ್ಚು ಮಾಡುವ ಸಾಧ್ಯತೆಗಳಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದಲ್ಲಿ ಟೀ ಪುಡಿ ಬೆಲೆ ಕೆಜಿಗೆ 1600 ರುಪಾಯಿ

ಐಎಂಎಫ್‌ ಓಲೈಸಲು ಜನರ ಮೇಲೆ ಭಾರೀ ತೆರಿಗೆ

1 ಶತಕೋಟಿ ಡಾಲರ್‌ ತುರ್ತು ಸಾಲಕ್ಕಾಗಿ ಕಾಯುತ್ತಿರುವ ಪಾಕಿಸ್ತಾನ, ಇದೀಗ ದೇಶದ ಜನರ ಮೇಲೆ ಭರ್ಜರಿ ತೆರಿಗೆ ಹೇರಿದೆ. ಈ ಮೂಲಕ ಸಾಲ ನೀಡಲು ಷರತ್ತು ಮುಂದಿಟ್ಟಿದ್ದ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌)ಯ ಓಲೈಕೆಗೆ ಮುಂದಾಗಿದೆ. ಮುಂದಿನ ಹಂತದ ಸಾಲದ ಕಂತು ಬಿಡುಗಡೆ ಮಾಡಲು ವೆಚ್ಚ ಕಡಿತ, ಹಲವು ವಸ್ತುಗಳ ತೆರಿಗೆ ದರ (Tax Rate) ಏರಿಕೆ ಮಾಡುವಂತೆ ಐಎಂಎಫ್‌ ಷರತ್ತು ಒಡ್ಡಿತ್ತು. ಆದರೆ ಇಂಥ ಕ್ರಮಗಳು ಈಗಾಗಲೇ ಗಗನಕ್ಕೇರಿರುವ ಹಣದುಬ್ಬರವನ್ನು ಮತ್ತಷ್ಟುಏರಿಸುವ ಭೀತಿ ಪಾಕಿಸ್ತಾನವನ್ನು ಕಾಡುತ್ತಿದೆ. ಹೀಗಾಗಿಯೇ ಇನ್ನೇನು ಪಾಕ್‌ ಮತ್ತು ಐಎಂಎಫ್‌ ಅಧಿಕಾರಿಗಳ ನಡುವಿನ ಮಾತುಕತೆ ಫಲಪ್ರದವಾಯಿತು ಎನ್ನುವ ಹಂತದಲ್ಲೇ ಮುರಿದು ಬಿದ್ದಿತ್ತು. ಆದರೆ ಇದೀಗ ಸಾಲದ ಹಣದ ತೀರಾ ಅಗತ್ಯದಲ್ಲಿರುವ ಪಾಕಿಸ್ತಾನ 17000 ಕೋಟಿ ರು. ಮೊತ್ತದಷ್ಟು ತೆರಿಗೆ ಹೇರಲು ನಿರ್ಧರಿಸಿದೆ.

Follow Us:
Download App:
  • android
  • ios