ಇತ್ತೀಚೆಗೆ, ಪಾಕಿಸ್ತಾನದ ಯುವತಿಯೊಬ್ಬಳು ತಲೆಯ ಮೇಲೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿಕೊಂಡು ತಿರುಗಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಆಕೆಯ ತಂದೆ, ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚುತ್ತಿರುವ ಕಾರಣ ಮಗಳ ಸುರಕ್ಷತೆಗಾಗಿ ಈ ಕ್ರಮ ಕೈಗೊಂಡಿದ್ದಾರೆ. ಸಿಸಿಟಿವಿಯಿಂದ ಮಗಳ ಚಲನವಲನಗಳ ಮೇಲೆ ನಿಗಾ ಇಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಸമ്മിಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಕೆಲ ದಿನಗಳಿಂದ ಯುವತಿಯ ತಲೆಯ ಮೇಲೆ ಸಿಸಿಟಿವಿ ಇರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಹೇಳಿಕೇಳಿ ಇದು ಎಐ ಯುಗ. ಏನೇನೋ ಮಾಡುತ್ತಾರೆ, ಯಾರದ್ದೋ ತಲೆಗೆ ಇನ್ನಾರದ್ದೋ ಮುಂಡ ಜೋಡಿಸಿ ಏನೇನೋ ಮಾಡುತ್ತಾರೆ. ಇದು ಕೂಡ ಏನೋ ತಮಾಷೆ ಎಂದುಕೊಂಡವರೇ ಹೆಚ್ಚು. ಆದರೆ ಕೊನೆಗೆ ಯುವತಿಯೇ ಮಾಧ್ಯಮವೊಂದಕ್ಕೆ ಸಂದರ್ಶನ ನೀಡುವ ಮೂಲಕ ತಾವು ತಲೆಯ ಮೇಲೆ ಸಿಸಿಟಿವಿ ಹೊತ್ತುಕೊಂಡು ತಿರುಗಾಡುತ್ತಿರುವುದನ್ನು ಕನ್ಫರ್ಮ್ ಮಾಡಿದ್ದಾರೆ.
ಅಷ್ಟಕ್ಕೂ ಈ ಯುವತಿ ಭಾರತದವಳು ಅಲ್ಲ, ಬದಲಿಗೆ ಪಾಕಿಸ್ತಾನದವಳು. ಬಿಕಾರಿಯಾಗಿ ಎಲ್ಲರ ಬಳಿ ಭಿಕ್ಷೆ ಬೇಡುತ್ತಿರುವ ಪಾಕಿಸ್ತಾನದಲ್ಲಿ ಹೆಣ್ಣುಮಕ್ಕಳ ಮೇಲೆ ಕ್ರೌರ್ಯ ಅಂತೂ ನಿಂತಿಲ್ಲ. ಇದೇ ಕಾರಣಕ್ಕೆ ತಮ್ಮ ಮಗಳ ರಕ್ಷಣೆಗಾಗಿ ಅಪ್ಪನೊಂದು ಮಗಳ ತಲೆಯ ಮೇಲೆ ಸಿಸಿಟಿವಿ ಅಳವಡಿಸಿರುವುದು ತಿಳಿದುಬಂದಿದೆ. ಈಕೆ ಪಾಕಿಸ್ತಾನದ ಕರಾಚಿಯವಳು. ಇಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಮ್ಮ ತಂದೆ ಈ ಸಿಸಿಟಿವಿಯನ್ನು ತಲೆಗೆ ಕಟ್ಟಿದ್ದಾರೆ ಎಂದು ಆಕೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾಳೆ.
ಸ್ನೇಹಿತನ ಮದ್ವೆಯಾಗಿ ಕೊನೆಯುಸಿರೆಳೆದ 10 ವರ್ಷದ ಬಾಲಕಿ! ಈಕೆಯ ಕಣ್ಣೀರ ಕಥೆ ಕೇಳಿ...
ನಾನು ಹಾಗೂ ನನ್ನ ಕುಟುಂಬ ವಾಸ ಮಾಡುವ ಪಾಕಿಸ್ತಾನದಲ್ಲಿ ಹೆಣ್ಣು ಮಕ್ಕಳ ಮೇಲೆ ಅಪರಾಧ ಪ್ರಕರಣಗಳು ಹೆಚ್ಚಾಗಿವೆ. ನನ್ನ ತಂದೆ ತನ್ನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಸಿಸಿಟಿವಿಯನ್ನು ತನ್ನ ತಲೆಗೆ ಅಳವಡಿಸಿದ್ದಾರೆ. ಇದರಿಂದ ನಾನು ಎಲ್ಲಿಗೆ ಹೋಗುತ್ತೇನೆ ಏನು ಮಾಡುತ್ತೇನೆ ಯಾವಾಗ ಬರುತ್ತೇನೆ ಈ ಪ್ರತಿಯೊಂದು ನನ್ನ ತಂದೆಯ ಗಮನಕ್ಕೆ ಬರುವುದು ಎಂದು ಆಕೆ ಹೇಳಿದ್ದಾರೆ. ಇದಕ್ಕೆ ನಿಮ್ಮದೇನಾದರು ವಿರೋಧವಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆಕೆ ನನ್ನ ವಿರೋಧವೇನು ಇಲ್ಲ ಎಂದಿದ್ದಾರೆ. ಅಲ್ಲದೇ ಯಾರದರೂ ನನಗೆ ಥಳಿಸಿದರು ಈ ಸಿಸಿಟಿವಿಯಲ್ಲಿ ಸಾಕ್ಷ್ಯ ಇರುತ್ತದೆ ಎಂದು ಹೇಳಿದ್ದಾರೆ.
ಆದರೆ ಇದಕ್ಕೆ ಥಹರೇವಾರಿ ಕಮೆಂಟ್ಸ್ ಸುರಿಮಳೆಯಾಗುತ್ತಿದೆ. ಇಂಥ ಐಡಿಯಾ, ಪಾಕಿಸ್ತಾನಿಗಳಿಗೆ ಬಿಟ್ಟರೆ ಬೇರೆಯವರಿಗೆ ಬಾರಲು ಸಾಧ್ಯವೇ ಇಲ್ಲ ಎಂದು ತಮಾಷೆ ಮಾಡುತ್ತಿದ್ದಾರೆ. ಮತ್ತೆ ಕೆಲವರು ದೌರ್ಜನ್ಯ ಎಸಗುವವರಿಗೆ ಸಿಸಿಟಿವಿ ಇದ್ದರೆಷ್ಟು, ಬಿದ್ದರೆಷ್ಟು ಎಂದು ಪ್ರಶ್ನಿಸಿದರೆ, ಮತ್ತೆ ಕೆಲವರು ಇದನ್ನು ಸುಲಭದಲ್ಲಿ ಕಿತ್ತು ಎಸೆಯಬಹುದಲ್ಲಾ ಎಂದು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ಈ ಅಪ್ಪನಿಗೆ ಮಗಳ ಮೇಲೆ ಸಂದೇಹ ಇರಬೇಕು, ಹುಡುಗರ ಬಗ್ಗೆ ಅಲ್ಲ. ಅವಳೇ ಹೇಳುವಂತೆ ಅವಳು ಎಲ್ಲಿಗೆ ಹೋಗ್ತಾಳೆ ಎನ್ನೋದು ಆತನಿಗೆ ಗೊತ್ತಾಗಬೇಕಿದೆ, ಹೇಳಿಕೇಳಿ ಅದು ಪಾಕಿಸ್ತಾನ. ಹೆಣ್ಣುಮಕ್ಕಳಿಗೆ ಹೊರಗೆ ಬಿಡುವುದೇ ಹೆಚ್ಚು. ಆದ್ದರಿಂದ ಮಗಳ ಮೇಲೆ ಸಂದೇಹ ಬರಬಾರದು ಎಂದು ಮಾಡಿದ್ದಾರೆ ಎಂದೇ ಹೇಳುತ್ತಿದ್ದಾರೆ.
ಪರೀಕ್ಷೆ ಇದೆ ಅನ್ನೋದೇ ಮರೆತ ಯುವಕ ಲೇಟಾಗಿದ್ದಕ್ಕೆ ಮಾಡಿದ್ದೇನು ನೋಡಿ! ಭೇಷ್ ಭೇಷ್ ಎಂದ ನೆಟ್ಟಿಗರು
