ಭೂಮಿ ನಡುಗುತ್ತಿದ್ದರೂ ನ್ಯೂಸ್ ಓದುವುದು ನಿಲ್ಲಿಸದ ಪಾಕ್ ಟಿವಿ ಆ್ಯಂಕರ್!

ಭೂಕಂಪದ ಅಗಾಧತೆಯನ್ನು ತೋರಿಸುವ ಪಾಕಿಸ್ತಾನದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸುಮಾರು 30 ಸೆಕೆಂಡುಗಳ ವಿಡಿಯೋದಲ್ಲಿ ಪಾಕಿಸ್ತಾನದ ಪೇಶಾವರದಲ್ಲಿರುವ ನ್ಯೂಸ್‌ ಸ್ಟುಡಿಯೋವೊಂದು ದೇಶದಲ್ಲಿ ಭೂಕಂಪ ಸಂಭವಿಸುತ್ತಿದ್ದ ನಡುವೆಯೇ ಭೀಕರವಾಗಿ ನಡುಗುತ್ತಿರುವುದನ್ನು ತೋರಿಸುತ್ತದೆ.

pakistan tv anchor continues to deliver news as earthquake shakes entire studio ash

ಪೇಶಾವರ (ಮಾರ್ಚ್‌ 22, 2023): ಅಫ್ಘಾನಿಸ್ತಾನದ ಹಿಂದೂ ಕುಶ್ ಪ್ರದೇಶದಲ್ಲಿ ಮಂಗಳವಾರ ರಾತ್ರಿ 6.6 ತೀವ್ರತೆಯ ಭೂಕಂಪ ಸಂಭವಿಸಿದ್ದರಿಂದ ರಾಷ್ಟ್ರ ರಾಜಧಾನಿ ದೆಹಲಿ ಸೇರಿ ಉತ್ತರ ಭಾರತ ಮತ್ತು ನೆರೆಯ ಪಾಕಿಸ್ತಾನದ ಕೆಲವು ಭಾಗಗಳಲ್ಲಿ ಬಲವಾದ ಕಂಪನಗಳು ಸಂಭವಿಸಿವೆ. ಕಟ್ಟಡಗಳು ನಡುಗುತ್ತಿದ್ದಂತೆ ಭಯಭೀತರಾದ ಜನರು ತಮ್ಮ ಮನೆಗಳಿಂದ ಹೊರಗೆ ಧಾವಿಸುವ ಹಲವಾರು ವಿಡಿಯೋಗಳು ಅಂತರ್ಜಾಲದಲ್ಲಿ ವೈರಲ್‌ ಆಗುತ್ತಿವೆ. 

ಭೂಕಂಪದ ಅಗಾಧತೆಯನ್ನು ತೋರಿಸುವ ಪಾಕಿಸ್ತಾನದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸುಮಾರು 30 ಸೆಕೆಂಡುಗಳ ವಿಡಿಯೋದಲ್ಲಿ ಪಾಕಿಸ್ತಾನದ ಪೇಶಾವರದಲ್ಲಿರುವ ನ್ಯೂಸ್‌ ಸ್ಟುಡಿಯೋವೊಂದು ದೇಶದಲ್ಲಿ ಭೂಕಂಪ ಸಂಭವಿಸುತ್ತಿದ್ದ ನಡುವೆಯೇ ಭೀಕರವಾಗಿ ನಡುಗುತ್ತಿರುವುದನ್ನು ತೋರಿಸುತ್ತದೆ.

ಇದನ್ನು ಓದಿ: Gujarat Earthquake: ಕಛ್‌ನಲ್ಲಿ ಕಂಪಿಸಿದ ಭೂಮಿ, ಆತಂಕದಲ್ಲಿ ಗುಜರಾತ್‌ ಜನತೆ

ಟ್ವಿಟ್ಟರ್ ಬಳಕೆದಾರರು ಈ ವಿಡಿಯೋ ಹಂಚಿಕೊಂಡಿದ್ದು, ‘’ಭೂಕಂಪದ ಸಮಯದಲ್ಲಿ ಪಾಶ್ಟೋ ಟಿವಿ ಚಾನೆಲ್ ಮಾಶ್ರಿಕ್ ಟಿವಿ. ಭೂಮಿ ಕಂಪಿಸುತ್ತಿರುವ ನಡುವೆಯೂ ಧೈರ್ಯವಂತ ಆಂಕರ್‌ ತಮ್ಮ ಲೈವ್ ಕಾರ್ಯಕ್ರಮವನ್ನು ಮುಂದುವರೆಸಿದರು.

ಈ ವಿಡಿಯೋವನ್ನು ಕೆಳಗೆ ನೋಡಿ:

ಈ ವಿಡಿಯೋವು, ಭೂಕಂಪವು ಇಡೀ ಸ್ಟುಡಿಯೋವನ್ನು ಅಲುಗಾಡಿಸಿದಾಗಲೂ ಸ್ಥಳೀಯ ಪಾಷ್ಟೋ ಟಿವಿ ಚಾನೆಲ್ ಮಾಶ್ರಿಕ್ ಟಿವಿಯ ಸುದ್ದಿ ನಿರೂಪಕ ಏನೂ ಆಗಿಲ್ಲವೆಂಬಂತೆ ಶಾಂತತೆ ಕಾಪಾಡಿಕೊಳ್ಳುವುದನ್ನು ಕಾಣಬಹುದು. ಈ ಮಧ್ಯೆ,, ನ್ಯೂಸ್‌ರೂಮ್‌ನಲ್ಲಿ ನಿರೂಪಕನ ಹಿಂದಿರುವ ಟಿವಿ ಪರದೆಗಳು ಮತ್ತು ಇತರ ಉಪಕರಣಗಳು ತೀವ್ರವಾಗಿ ಅಲುಗಾಡುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ: ಟರ್ಕಿಗೆ ತೆರಳಿದ್ದ ಎನ್‌ಡಿಆರ್‌ಎಫ್‌ ತಂಡಕ್ಕೆ ಮೋದಿ ಮೆಚ್ಚುಗೆ: ಇನ್ನೊಬ್ಬರ ರಕ್ಷಣೆ ನಮ್ಮ ಕರ್ತವ್ಯ ಎಂದ ಪ್ರಧಾನಿ

ಗಮನಾರ್ಹವಾಗಿ, ಭೂಕಂಪದ ಕೇಂದ್ರಬಿಂದುವು ಪಾಕಿಸ್ತಾನ ಮತ್ತು ತಜಕಿಸ್ತಾನದ ಗಡಿಯ ಸಮೀಪ ಆಫ್ಘನ್ ಪಟ್ಟಣದ ಜುರ್ಮ್‌ನ ದಕ್ಷಿಣ-ಆಗ್ನೇಯಕ್ಕೆ 40 ಕಿಲೋಮೀಟರ್ ದೂರದಲ್ಲಿತ್ತು. ಈ ಭೂಕಂಪದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ 9 ಜನರು ಮೃತಪಟ್ಟಿದ್ದಾರೆ ಮತ್ತು 160 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅಲ್ಲದೆ, ಪಾಕಿಸ್ತಾನದಲ್ಲಿ ಅನೇಕ ಕಟ್ಟಡಗಳು ಕುಸಿದು ಬಿದ್ದಿವೆ ಎಂದು ಜಿಯೋ ನ್ಯೂಸ್ ವರದಿ ತಿಳಿಸಿದೆ.

ಭಾರತದಲ್ಲಿ ಸಹ ಭೂಕಂಪ ಸಂಭವಿಸಿದ ಬಳಿಕ ನಿವಾಸಿಗಳು ತಮ್ಮ ಮನೆಗಳಿಂದ ಹೊರಬಂದರು. ಒಂದು ನಿಮಿಷಕ್ಕೂ ಹೆಚ್ಚು ಕಾಲ ಭೂಮಿ ನಡುಗಿದ್ದು, ಮಂಗಳವಾರ ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ (NCR) ಭೂಮಿ ಕಂಪನ ಸಂಭವಿಸಿದೆ. ಹರಿಯಾಣ, ಪಂಜಾಬ್ ಮತ್ತು ರಾಜಸ್ಥಾನದಲ್ಲೂ ಪ್ರಬಲ ಕಂಪನದ ಅನುಭವವಾಗಿದ್ದು, ಆದರೆ ಯಾವುದೇ ಸಾವು-ನೋವು ಅಥವಾ ಆಸ್ತಿ ಹಾನಿಯ ಬಗ್ಗೆ ತಕ್ಷಣದ ವರದಿಯಾಗಿಲ್ಲ.

ಇದನ್ನೂ ಓದಿ: ಟರ್ಕಿ - ಸಿರಿಯಾ ಭೂಕಂಪ: ಪರಿಹಾರ ಕಾರ್ಯ ಸುಗಮಕ್ಕೆ ಭಾರತೀಯ ಸೇನೆಯಿಂದ ಟ್ರ್ಯಾಕಿಂಗ್ ವ್ಯವಸ್ಥೆ ಜಾರಿ

ಡೈನಿಂಗ್ ಟೇಬಲ್ ಅಲುಗಾಡುವುದನ್ನು ಮೊದಲು ಗಮನಿಸಿದ್ದೇನೆ ಎಂದು ನೋಯ್ಡಾ ನಿವಾಸಿಯೊಬ್ಬರು ಹೇಳಿದ್ದಾರೆ. "ಫ್ಯಾನ್‌ಗಳು ಸಹ ನಡುಗುತ್ತಿರುವುದನ್ನು ನಾವು ನೋಡಿದ್ದೇವೆ. ಭೂಕಂಪವು ತೀವ್ರತೆಯ ದೃಷ್ಟಿಯಿಂದ ಪ್ರಬಲವಾಗಿತ್ತು ಮತ್ತು ಹೆಚ್ಚು ಕಾಲ ಉಳಿಯಿತು" ಎಂದು ನೋಯ್ಡಾದ ಹೈಡ್ ಪಾರ್ಕ್ ಸೊಸೈಟಿಯ ನಿವಾಸಿ ಸುದ್ದಿಸಂಸ್ಥೆ ಪಿಟಿಐಗೆ ಉಲ್ಲೇಖಿಸಿದ್ದಾರೆ.
ದಕ್ಷಿಣ ಏಷ್ಯಾದ ದೊಡ್ಡ ಭಾಗಗಳು ಭೂಕಂಪನದಿಂದ ಸಕ್ರಿಯವಾಗಿವೆ. ಏಕೆಂದರೆ ಇಂಡಿಯನ್‌ ಪ್ಲೇಟ್ (ಫಲಕ) ಎಂದು ಕರೆಯಲ್ಪಡುವ ಟೆಕ್ಟೋನಿಕ್ ಪ್ಲೇಟ್ ಉತ್ತರಕ್ಕೆ ಯುರೇಷಿಯನ್ ಪ್ಲೇಟ್‌ಗೆ ಆಗಾಗ್ಗೆ ತಳ್ಳಲ್ಪಡುತ್ತಿರುತ್ತದೆ.

ಇದನ್ನೂ ಓದಿ: Turkey: 128 ಗಂಟೆ ಕಾಲ ಅವಶೇಷದಡಿ ಸಿಲುಕಿದ್ದ 2 ತಿಂಗಳ ಮಗು ಜೀವಂತವಾಗಿ ಪತ್ತೆ: ಪವಾಡ ಅಂದ್ರೆ ಇದು..!

Latest Videos
Follow Us:
Download App:
  • android
  • ios