ಭಾರತದಲ್ಲಿ ನಡೆದ ಹಲವು ಉಗ್ರ ಕೃತ್ಯಗಳ ಸಂಚುಕೋರ ಎನ್ನಲಾದ ಲಷ್ಕರ್ ಕಮಾಂಡರ್ ಮೀರ್ ಶುಕ್ರ್ ಖಾನ್ ರೈಸಾನಿಯನ್ನು ಅನಾಮಿಕ ವ್ಯಕ್ತಿಗಳು ಪಾಕಿಸ್ತಾನದ ಖ್ವೆಟ್ಟಾದಲ್ಲಿ ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಈ ದಾಳಿಯಲ್ಲೂ ಧುರಂಧರ್‌ನ ಪಾತ್ರ ಶಂಕಿಸಲಾಗಿದೆ.
ಲಷ್ಕರ್ ಕಮಾಂಡರ್ ಶುಕ್ರ್ ಖಾನ್ ಹತ್ಯೆ
ಇಸ್ಲಾಮಾಬಾದ್: ಭಾರತದಲ್ಲಿ ನಡೆದ ಹಲವು ಉಗ್ರ ಕೃತ್ಯಗಳ ಸಂಚುಕೋರ ಎನ್ನಲಾದ ಲಷ್ಕರ್ ಕಮಾಂಡರ್ ಮೀರ್ ಶುಕ್ರ್ ಖಾನ್ ರೈಸಾನಿಯನ್ನು ಅನಾಮಿಕ ವ್ಯಕ್ತಿಗಳು ಪಾಕಿಸ್ತಾನದ ಖ್ವೆಟ್ಟಾದಲ್ಲಿ ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಈ ದಾಳಿಯಲ್ಲೂ ಧುರಂಧರ್‌ನ ಪಾತ್ರ ಶಂಕಿಸಲಾಗಿದೆ.
ಲಷ್ಕರ್ ಸಂಘಟನೆಯ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮರಳುತ್ತಿದ್ದ ವೇಳೆ ಅನಾಮಿಕ ವ್ಯಕ್ತಿಗಳು ಮೀರ್ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾರೆ. ದಾಳಿಯ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಯಾವುದೇ ಸಂಘಟನೆ ಇದುವರೆಗೆ ಘಟನೆಯ ಹೊಣೆ ಹೊತ್ತಿಲ್ಲ.
ಮೀರ್, ಬಲೂಚಿಸ್ತಾನದಲ್ಲಿ ಲಷ್ಕರ್ ಸಂಘಟನೆಯ ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಸಂಘಟನೆಗೆ ಯುವಕರನ್ನು ನೇಮಕ ಮಾಡುವ, ಭಾರತದ ಗಡಿಬಳಿಯ ಉಗ್ರ ತರಬೇತಿ ಕೇಂದ್ರಗಳ ಮೂಲಸೌಕರ್ಯಗಳ ಹೊಣೆ ಹೊತ್ತಿದ್ದ ಎನ್ನಲಾಗಿದೆ. ಕಳೆದ 2 ತಿಂಗಳ ಅವಧಿಯಲ್ಲಿ ಭಾರತಕ್ಕೆ ಬೇಕಾಗಿದ್ದ ಹಲವು ಉಗ್ರರು ಇದೇ ರೀತಿಯಲ್ಲಿ ನಿಗೂಢ ದಾಳಿಗೆ ಬಲಿಯಾಗಿದ್ದಾರೆ.


