ಆಫ್ಘಾನ್ ಬಳಿಕ ಪಾಕ್‌ನಲ್ಲಿ ತಾಲಿಬಾನ್ ಸಂಘರ್ಷ, ಸೇನೆ ಸದೆಬಡಿದು ಖೈಬರ್ ಪ್ರಾಂತ್ಯ ಉಗ್ರರ ಕೈವಶ!
ಪಾಕಿಸ್ತಾನದಲ್ಲಿ ತೆಹ್ರಿಕ್ ಇ ತಾಲಿಬಾನ್ ಪಾಕಿಸ್ತಾನ ಉಗ್ರರ ದಾಳಿ ಆರಂಭಗೊಂಡಿದೆ. ಪಾಕಿಸ್ತಾನ ಸೇನೆ ಮೇಲೆ ದಾಳಿ ನಡೆಸಿರುವ ಪಾಕಿಸ್ತಾನ ತಾಲಿಬಾನ್ ಗುಂಪು, ಖೈಬರ್ ಪಖ್ತುಂಕ್ವಾ ಪ್ರಾಂತ್ಯವನ್ನು ವಶಪಡಿಸಿಕೊಂಡಿದೆ.

ಇಸ್ಲಾಮಾಬಾದ್(ಸೆ.06) ಪಾಕಿಸ್ತಾನ ಸಾಕಿ ಸಲಹಿದ ಉಗ್ರರು ಇದೀಗ ಹದ್ದಾಗಿ ಕುಕ್ಕುತ್ತಿದ್ದಾರೆ. ಪಾಕಿಸ್ತಾನದ ತಾಲಿಬಾನ್ ಉಗ್ರ ಘಟಕ ಇದೀಗ ಸರ್ಕಾರದ ವಿರುದ್ಧವೇ ಸಂಘರ್ಷ ಆರಂಭಿಸಿದ್ದಾರೆ. ಇಂದು ಏಕಾಏಕಿ ಪಾಕಿಸ್ತಾನ ಸೇನೆ ಮೇಲೆ ದಾಳಿ ಮಾಡಿರುವ ಪಾಕಿಸ್ತಾನ ತೆಹ್ರಿಕ್ ಇ ತಾಲಿಬಾನ್ ಉಗ್ರರು ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ಹಲವು ಗ್ರಾಮಗಳನ್ನು ಕೈವಶ ಮಾಡಿದ್ದಾರೆ. ಉಗ್ರರ ದಾಳಿಯಲ್ಲಿ ಹಲವು ಪಾಕಿಸ್ತಾನ ಯೋಧರು ಮೃತಪಟ್ಟಿದ್ದಾರೆ. ಚಿತ್ರಾಲ್ ಜಿಲ್ಲೆಯಲ್ಲಿ ಪಾಕಿಸ್ತಾನ ತಾಲಿಬಾನ್ ಗಂಪು ಕಾರ್ಯಾಚರಣೆ ಆರಂಭಿಸಿದೆ.
ಇಂದು ಬೆಳಗ್ಗೆ 4 ಗಂಟೆಗೆ ಹಲವು ಗ್ರಾಮಗಳನ್ನು ವಶಪಡಿಸಿಕೊಂಡಿರುವುದಾಗಿ ಪಾಕಿಸ್ತಾನ ತಾಲಿಬಾನ್ ಘೋಷಿಸಿದೆ. ಇಲ್ಲಿ ಇಂಟರ್ನೆಟ್ ಸಂಪರ್ಕ ಕಳಪೆಯಾಗಿರುವ ಕಾರಣ ಫೋಟೋಗಳನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪಾಕಿಸ್ತಾನ ತಾಲಿಬಾನ್ ಕಮಾಂಡ್ ಪ್ರಕಟಣೆ ಹೊರಡಿಸಿದ್ದಾನೆ. ಇದೇ ವೇಳೆ ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ಜನರಿಗೆ ತಾಲಿಬಾನ್ ಸೂಚನೆ ನೀಡಿದೆ. ಎಲ್ಲಾ ನಾಗರೀಕರು ಶಾಂತವಾಗಿರಬೇಕು. ನಮ್ಮ ಹೋರಾಟ ನಾಗರೀಕರ ಮೇಲಲ್ಲ. ಕೇವಲ ಸರ್ಕಾರ ಹಾಗೂ ಸೇನೆಯ ವಿರುದ್ಧ ಎಂದು ಪಾಕಿಸ್ತಾನ ತಾಲಿಬಾನ್ ಕಮಾಂಡ್ ಸೂಚಿಸಿದ್ದಾನೆ.
ಚಂದ್ರಯಾನ ಯಶಸ್ಸಿಗೆ ಭಾರತ ಹೊಗಳಿ, ತಮ್ಮ ದೇಶವನ್ನೇ ಟೀಕಿಸಿದ ಪಾಕ್ ಮಾಧ್ಯಮ!
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಹಲವು ವಿಡಿಯೋಗಳು ಹರಿದಾಡುತ್ತಿದೆ. ಆದರೆ ಪಾಕಿಸ್ತಾನ ಸೇನೆಯ ಹಿರಿಯ ಅಧಿಕಾರಿಗಳು ತಾಲಿಬಾನ್ ಪ್ರಕಟಣೆಯನ್ನು ನಿರಾಕರಿಸಿದೆ. ತಾಲಿಬಾನ್ ಉಗ್ರರು ಖೈಬರ್ ಪ್ರಾಂತ್ಯ ಪ್ರವೇಶಿಸಿಲ್ಲ. ಯಾವುದೇ ಪ್ರಾಂತ್ಯ ಉಗ್ರರ ಕೈವಶವಾಗಿಲ್ಲಎಂದು ಹೇಳಿಕೆ ನೀಡಿದೆ. ಆದರೆ ಖೈಬರ್ ಪ್ರಾಂತ್ಯದಲ್ಲಿ ಉದ್ವಿಘ್ನ ವಾತಾವರಣ ನಿರ್ಮಾಣವಾಗಿದೆ.
ಇತ್ತೀಚೆಗೆ ಅಲ್ ಖೈಜಾ ಜೊತೆ ದಾಳಿ ಸಂಘಟಿಸಿದ್ದ ತಾಲಿಬಾನ್ ಪಾಕಿಸ್ತಾನ ಆರ್ಮಿ ಮೇಜರ್ ಸೇರಿದಂತೆ ಸೈನಿಕರನ್ನು ಹತ್ಯೆ ಮಾಡಿತ್ತು. ಅಲ್ ಖೈದಾ ಸಂಘಟನೆಯಲ್ಲಿ ವಿಲೀನ ಆಗಲು ಪಾಕಿಸ್ತಾನದ ಹ್ರೀಕ್ ಎ ತಾಲಿಬಾನ್ ಪಾಕಿಸ್ತಾನ್ ( ಸಂಘಟನೆ ಉತ್ಸುಕವಾಗಿದೆ ಎಂದು ವಿಶ್ವಸಂಸ್ಥೆ ಭದ್ರತಾ ಸಮಿತಿಗೆ ಸಲ್ಲಿಕೆಯಾದ ಸಂಸ್ಥೆಯ ವರದಿಯೊಂದು ಹೇಳಿತ್ತು. ಈ ವರದಿ ಬೆನ್ನಲ್ಲೇ ಪಾಕಿಸ್ತಾನದಲ್ಲಿ ನಡೆದ ಹಲವು ತಾಲಿಬಾನ್ ದಾಳಿ ಹಿಂದೆ ಅಲ್ ಖೈದಾ ಕೈವಾಡವಿದೆ ಅನ್ನೋ ಮಾತುಗಳು ಕೇಳಿಬಂದಿದೆ.
ಕುರಾನ್‌ಗೆ ಅವಮಾನ ಮಾಡಿದ ಆರೋಪ: ಪಾಕಿಸ್ತಾನದಲ್ಲಿ 5 ಚರ್ಚ್‌ಗಳ ಮೇಲೆ ದಾಳಿ, ಧ್ವಂಸ