ಇಮ್ರಾನ್ ಖಾನ್ ಗೆಲ್ಲಲು 172 ಸಂಸದರ ಬಲ ಅತ್ಯವಶ್ಯಕ ಕೇವಲ 155 ಸಂಸದರ ಬೆಂಬಲ ಹೊಂದಿರುವ ಇಮ್ರಾನ್  ಮಾ.25ರಂದು ಸಂಸತ್‌ ಅಧಿವೇಶನದಲ್ಲಿ ನಿರ್ಧಾರ

ಇಸ್ಲಾಮಾಬಾದ್‌(ಮಾ.21): ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ವಿರುದ್ಧ ವಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ ಚರ್ಚೆಗೆ ಮಾ.25ರಂದು ಸಂಸತ್‌ ಅಧಿವೇಶನ ಕರೆಯಲಾಗಿದೆ ಎಂದು ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್‌ ಅಸಾದ್‌ ಕೈಸರ್‌ ತಿಳಿಸಿದ್ದಾರೆ.

ಪಾಕಿಸ್ತಾನ ಮುಸ್ಲಿಂ ಲೀಗ್‌ ನವಾಜ್‌ (ಪಿಎಂಎಲ್‌ಎನ್‌) ಹಾಗೂ ಪಾಕಿಸ್ತಾನ್‌ ಪೀಪಲ್ಸ್‌ ಪಾರ್ಟಿಯ (ಪಿಪಿಪಿ) ಸುಮಾರು 100 ಜನ ಸಂಸತ್‌ ಸದಸ್ಯರು ಸರ್ಕಾರದ ವೈಫಲ್ಯ ಖಂಡಿಸಿ ಅವಿಶ್ವಾಸ ನಿರ್ಣಯವನ್ನು ಸಲ್ಲಿಸಿದ್ದರು. ಇದಕ್ಕೆ ಇಮ್ರಾನ್‌ರ ಪಿಟಿಐ ಪಕ್ಷದ 23 ಸಂಸದರೂ ಕೈಜೋಡಿಸಿದ್ದಾರೆ. ಹೀಗಾಗಿ ಗೆಲ್ಲಲು 172 ಸಂಸದರ ಬಲ ಇಮ್ರಾನ್‌ಗೆ ಬೇಕಿದ್ದು, ಬಂಡಾಯದ ಕಾರಣ ಕೇವಲ 155 ಸಂಸದರ ಬೆಂಬಲ ಹೊಂದಿ ಪರದಾಡುತ್ತಿದ್ದಾರೆ. ಹೀಗಾಗಿ 25ರಂದು ಅವರ ಭವಿಷ್ಯ ನಿರ್ಧಾರವಾಗಲಿದೆ.

ಪಾಕ್‌ ಇಸ್ಲಾಮಿಕ್ ಸಹಕಾರ ಸಂಘಟನೆ ಸಭೆಗೆ ಹುರಿಯತ್ ನಾಯಕರ ಆಹ್ವಾನ ಖಂಡಿಸಿದ ಭಾರತ!

ಭಾರತವನ್ನು ಹೊಗಳಿದ ಇಮ್ರಾನ್‌ ಖಾನ್‌!
ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಇದೇ ಮೊದಲ ಬಾರಿಗೆ ಭಾರತ ಸರ್ಕಾರವನ್ನು ಹೊಗಳಿದ್ದಾರೆ. ಉಕ್ರೇನ್‌-ರಷ್ಯಾ ಯುದ್ಧದ ವಿಷಯದಲ್ಲಿ ಭಾರತದ ಸ್ವತಂತ್ರ ವಿದೇಶಾಂಗ ನೀತಿ ಅನುಸರಿಸುತ್ತಿದೆ ಎಂದು ಅವರು ಪ್ರಶಂಸಿಸಿದ್ದಾರೆ.

ಖೈಬರ್‌-ಪಖ್ತುಂಖ್ವಾ ಪ್ರಾಂತ್ಯದಲ್ಲಿ ಸಾರ್ವಜನಿಕ ರಾರ‍ಯಲಿ ಉದ್ದೇಶಿಸಿ ಮಾತನಾಡಿದ ಅವರು, ‘ಭಾರತವು ರಷ್ಯಾ ವಿರೋಧಿಸುವ ಕ್ವಾಡ್‌ ದೇಶಗಳ ಸದಸ್ಯ ರಾಷ್ಟ್ರವಾಗಿದ್ದರೂ ಹಾಗೂ ಅಮೆರಿಕದ ನಿರ್ಬಂಧ ಹೇರಿದ್ದರೂ ರಷ್ಯಾದಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಇದು ಭಾರತದ ಸ್ವತಂತ್ರ ವಿದೇಶಾಂಗ ನಿಲುವಿನ ಸಂಕೇತ. ಭಾರತದ ಸ್ವತಂತ್ರ ವಿದೇಶಾಂಗ ನೀತಿ ಅತ್ಯುತ್ತಮವಾಗಿದೆ. ಪಾಕಿಸ್ತಾನವೂ ಜನ ಸ್ನೇಹಿ ಸ್ವತಂತ್ರ ವಿದೇಶಾಂಗ ನೀತಿ ಹೊಂದಿದೆ’ ಎಂದು ಹೇಳಿದರು.

ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ಗೆ ಸಂಕಷ್ಟಎದುರಾಗಿದೆ. ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಆಗಿರುವ ನಡುವೆಯೇ ಅವರದ್ದೇ ಆದ ಪಾಕಿಸ್ತಾನ್‌ ತೆಹ್ರೀಕ್‌ ಎ ಇನ್ಸಾಫ್‌ ಪಕ್ಷದ ಕೆಲವು ಸಂಸದರು ಬೆಂಬಲ ಹಿಂಪಡೆದಿದ್ದಾರೆ. ಇದರಿಂದಾಗಿ ಇಮ್ರಾನ್‌ ಸರ್ಕಾರದ ಭವಿಷ್ಯ ತೂಗುಯ್ಯಾಲೆಯಲ್ಲಿದೆ.

ಇತ್ತೀಚೆಗೆ ವಿಪಕ್ಷಗಳು ಒಂದಾಗಿ ಇಮ್ರಾನ್‌ ಸರ್ಕಾರದ ಪದಚ್ಯುತಿಗೆ ಅವಿಶ್ವಾಸ ನಿರ್ಣಯ ತಂದಿದ್ದವು. ಇದರ ಬೆನ್ನಲ್ಲೇ ಗುರುವಾರ ಇಮ್ರಾನ್‌ ಪಕ್ಷದ ಸಂಸದ ರಾಜಾ ರಿಯಾಜ್‌ ಮಾತನಾಡಿ, ‘ಸುಮಾರು 20 ಸಂಸದರು ಸರ್ಕಾರದ ವಿರುದ್ಧ ಬಂಡೆದಿದ್ದಾರೆ. ಅವಿಶ್ವಾಸ ನಿರ್ಣಯದ ವೇಳೆ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಹಾಕಲಿದ್ದೇವೆ’ ಎಂದಿದ್ದಾರೆ. ಅವರ ಹೇಳಿಕೆಯನ್ನು ಇತರ 3 ಪಿಟಿಐ ಸಂಸದರು ಮಾಧ್ಯಮಗಳಲ್ಲಿ ಅನುಮೋದಿಸಿದ್ದಾರೆ. ಆದರೆ ಈ ಪಕ್ಷಾಂತರಿಗಳ ವಿರುದ್ಧ ಸಚಿವ ಫೌಆದ್‌ ಚೌಧರಿ ಕಿಡಿಕಾರಿದ್ದಾರೆ.

ಇಮ್ರಾನ್‌ ಸರ್ಕಾರಕ್ಕೆ ಬಹುಮತಕ್ಕೆ 172 ಸಂಸದರ ಬಲ ಬೇಕು. ಆದರೆ ಬಂಡುಕೋರರು ಹಾಗೂ ಇತರ ಪಕ್ಷಗಳ ಬೆಂಬಲ ಹಿಂತೆಗೆಗದಿಂದ 155ಕ್ಕೆ ಅವರ ಬಲ ಇಳಿಯಲಿದೆ. ವಿಶ್ವಾಸಮತದ ವೇಳೆ ಇದು ನಿಜವೇ ಆದರೆ ಅವರ ಸರ್ಕಾರ ಪತನವಾಗಲಿದೆ.

Russia Oil Import ಭಾರತದ ವಿದೇಶಾಂಗ ನೀತಿ ಹಾಡಿ ಹೊಗಳಿದ ಪಾಕ್ ಪ್ರಧಾನಿ ಇಮ್ರಾನ್!

ಅಮೆರಿಕದಲ್ಲಿ ಮಸೂದ್‌ ಪಾಕ್‌ ರಾಯಭಾರಿ: ಸಂಸದ ಪೆರ್ರಿ ವಿರೋಧ
ಅಮೆರಿಕದಲ್ಲಿ ಪಾಕಿಸ್ತಾನ ರಾಯಭಾರಿಯಾಗಿ ಮಸೂದ್‌ ಖಾನ್‌ ನೇಮಕ ಮಾಡಿರುವ ಬಗ್ಗೆ ಆತಂಕ ವ್ಯಕ್ತಪಡಿಸಿ ಅಮೆರಿಕ ಸಂಸತ್‌ ಸದಸ್ಯ ಸ್ಕಾಟ್‌ ಪೆರ್ರಿ ಅಧ್ಯಕ್ಷ ಜೋ ಬೈಡೆನ್‌ ಅವರಿಗೆ ಪತ್ರ ಬರೆದಿದ್ದಾರೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಭಯೋತ್ಪಾದಕತೆ ಪರ ಇರುವ ವ್ಯಕ್ತಿಯನ್ನು ನೇಮಕ ಮಾಡಿರುವುದು ಅಮೆರಿಕ ಮತ್ತು ಮಿತ್ರರಾಷ್ಟ್ರ ಭಾರತದ ಭದ್ರತೆಗೆ ಆತಂಕ ಹುಟ್ಟಿಸುವಂತಿದೆ ಎಂದಿದ್ದಾರೆ.ಮಸೂದ್‌ ಖಾನ್‌ ಭಯೋತ್ಪಾದಕರು ಮತ್ತು ಹಿಜ್ಬುಲ್‌ ಮುಜಾಹಿದೀನ್‌ ಸೇರಿದಂತೆ ಹಲವು ವಿದೇಶಿ ಉಗ್ರ ಸಂಘಟನೆಗಳನ್ನು ಹೊಗಳಿದ್ದಾರೆ. ಮಾಜಿ ಹಿಜ್ಬುಲ್‌ ಕಮಾಂಡರ್‌ ಬುರ್ಹಾನ್‌ ವಾನಿಯನ್ನು ಹೊಗಳಿ ಯುವಕರನ್ನು ಜಿಹಾದಿ ಗುಂಪಿಗೆ ಸೇರಲು ಪ್ರೋತ್ಸಾಹಿಸಿದ್ದಾರೆ.