ಅಮೆರಿಕ ಜೊತೆ ಕ್ವಾಡ್ ಸದಸ್ಯ, ಆದರೂ ರಷ್ಯಾದಿಂದ ತೈಲ ಆಮದು ಭಾರತೀಯರ ಅಭಿವೃದ್ಧಿಗಾಗಿ ವಿದೇಶಾಂಗ ನೀತಿ ರಚಿಸಲಾಗಿದೆ ಭಾರತದ ಸ್ವತಂತ್ರ ವಿದೇಶಾಂಗ ನೀತಿಗೆ ಇಮ್ರಾನ್ ಖಾನ್ ಮೆಚ್ಚುಗೆ  

ಇಸ್ಲಾಮಾಬಾದ್(ಮಾ.20): ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತವನ್ನು ಸದಾ ತೆಗಳುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ದಿಢೀರ್ ಹೊಗಳವು ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ರಷ್ಯಾದಿಂದ ಭಾರತದ ತೈಲ ಆಮದು ನಿರ್ಧಾರವನ್ನು ಹಾಡಿ ಹೊಗಳಿದ ಇಮ್ರಾನ್ ಖಾನ್, ಭಾರತೀಯರ ಏಳಿಗೆಗಾಗಿ ವಿದೇಶಾಂಗ ನೀತಿಯನ್ನು ಭಾರತ ರಚಿಸಿದೆ ಎಂದಿದ್ದಾರೆ.

ಪಾಕಿಸ್ತಾನದ ಖೈಬರ್ ಪ್ರಾಂತ್ಯದ ಮಲ್ಕಂಡ್‌ನಲ್ಲಿ ಆಯೋಜಿಸಿದ ರ್ಯಾಲಿಯಲ್ಲಿ ಇಮ್ರಾನ್ ಖಾನ್ ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿ ನಿರ್ಧಾರಗಳನ್ನು ಶ್ಲಾಘಿಸಿದ್ದಾರೆ. ಭಾರತವೂ ಅಮೆರಿಕದ ಜೊತೆ ಕ್ವಾಡ್(Quad)ಮೈತ್ರಿಕೂಟದ ಸದಸ್ಯ ರಾಷ್ಟ್ರವಾಗಿದೆ. ಆದರೆ ರಷ್ಯಾ ಉಕ್ರೇನ್ ಯುದ್ಧದಲ್ಲಿ ಭಾರತ ತಟಸ್ಥ ನೀತಿ ಅನುಸರಿಸಿ ದಿಟ್ಟತನ ತೋರಿತ್ತು. ಇದೀಗ ಅಮೆರಿಕದ ಪ್ರಬಲ ನಿರ್ಬಂಧದ ನಡುವೆ ಭಾರತ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿದೆ. ಇದು ಸಾಧ್ಯವಾಗಿರುವುದು ಭಾರತದ ಸ್ವತಂತ್ರ ವಿದೇಶಾಂಗ ನೀತಿಯಿಂದ. ಭಾರತದ ವಿದೇಶಾಂಗ ನೀತಿ ಭಾರತೀಯರಿಗಾಗಿ ರಚಿಸಲಾಗಿದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

ಬಟಾಟೆ, ಟೊಮಾಟೋ ರೇಟ್ ನೋಡೋಕೆ ರಾಜಕೀಯಕ್ಕೆ ಬಂದಿಲ್ಲ ಎಂದ ಪಾಕ್ ಪ್ರಧಾನಿ Imran Khan!

ಭಾರತದ ಕುರಿತು ಮೆಚ್ಚುಗೆ ಮಾತುಗಳಿಗೂ ಮುನ್ನ ಜನವರಿಯಲ್ಲಿ ಇದೇ ರೀತಿ ಇಮ್ರಾನ್ ಖಾನ್ ಭಾರತವನ್ನು ಹೊಳಿದ್ದರು. ಭಾರತದ ಮಾಹಿತಿ ಮತ್ತು ತಂತ್ರಜ್ಞಾನ ವಲಯದಲ್ಲಿ ಅದ್ವೀತಿಯ ಯಶಸ್ಸು ಸಾಧಿಸಿದೆ. ಇದಕ್ಕೆ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರ ಅಳವಡಿಸಿಕೊಂಡಿರುವ ನೀತಿಗಳು ಕಾರಣಾಗಿದೆ. ಇದರಿಂದ ಭಾರತಕ್ಕೆ ಅತೀ ಹೆಚ್ಚಿನ ವಿದೇಶಿ ಬಂಡವಾಳ ಹೂಡಿಕೆ ಹರಿದು ಬರುತ್ತಿದೆ ಎಂದು ಇಮ್ರಾನ್ ಖಾನ್ ಹೇಳಿದ್ದರು.

Scroll to load tweet…

ಅವಿಶ್ವಾಸ ನಿರ್ಣಯದಿಂದ ಇಮ್ರಾನ್ ಖಾನ್ ಕುರ್ಚಿ ಅಲುಗಾಡತೊಡಗಿದೆ. ಇದರ ಬೆನ್ನಲ್ಲೇ ಭಾರತ ಹಾಗೂ ಪ್ರಧಾನಿ ಮೋದಿ ಹೊಗಳುವ ಮೂಲಕ ಕೆಲ ಪಾಕಿಸ್ತಾನಿಗಳಿಗೆ ಇರಿಸು ಮುರಿಸು ತಂದಿದ್ದಾರೆ. ಮಾರ್ಚ್ 28 ರಂದು ಇಮ್ರಾನ್ ಖಾನ್ ಸರ್ಕಾರದ ಭವಿಷ್ಯ ನಿರ್ಧಾರವಾಗಲಿದೆ. ಇದರ ಬೆನ್ನಲ್ಲೇ ಭರ್ಜರಿ ರ್ಯಾಲಿ ಹಾಗೂ ಸಮಾವೇಶಗಳಲ್ಲಿ ಪಾಲ್ಗೊಳ್ಳುತ್ತಿರುವ ಇಮ್ರಾನ್ ಖಾನ್, ಚುನಾವಣೆಗೂ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಪುಟಿನ್ ಎದುರು ಕಾಶ್ಮೀರ ವಿಚಾರ ಪ್ರಸ್ತಾಪಿಸಿದ ಪಾಕ್ ಪ್ರಧಾನಿ!

ಇಮ್ರಾನ್‌ ಸರ್ಕಾರದ ಭವಿಷ್ಯ 28ಕ್ಕೆ ನಿರ್ಧಾರ
ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ಗೆ ಸರ್ಕಾರ ಅಲ್ಲಾಡತೊಡಗಿದೆ. ವಿಪಕ್ಷಗಳು ಸಂಸತ್ತಿನಲ್ಲಿ ಮಂಡಿಸಿರುವ ಅವಿಶ್ವಾಸ ನಿರ್ಣಯದ ಮೇಲೆ ಮಾ.28ರಂದು ಮತದಾನ ನಡೆಯುವ ನಿರೀಕ್ಷೆಯಿದ್ದು, ಅಂದು ಇಮ್ರಾನ್‌ ಹಣೆಬರಹ ನಿರ್ಧಾರವಾಗಲಿದೆ. ಇತ್ತೀಚೆಗೆ ವಿಪಕ್ಷಗಳು ಒಂದಾಗಿ ಇಮ್ರಾನ್‌ ಸರ್ಕಾರದ ಪದಚ್ಯುತಿಗೆ ಅವಿಶ್ವಾಸ ನಿರ್ಣಯ ತಂದಿದ್ದವು. ಇದರ ಬೆನ್ನಲ್ಲೇ ಇಮ್ರಾನ್‌ ಪಕ್ಷದ ಸಂಸದ ರಾಜಾ ರಿಯಾಜ್‌ ಮಾತನಾಡಿ, ‘ಸುಮಾರು 23 ಸಂಸದರು ಸರ್ಕಾರದ ವಿರುದ್ಧ ಬಂಡೆದಿದ್ದಾರೆ. ಅವಿಶ್ವಾಸ ನಿರ್ಣಯದ ವೇಳೆ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಹಾಕಲಿದ್ದೇವೆ’ ಎಂದಿದ್ದಾರೆ. ಈ ಅವಿಶ್ವಾಸ ನಿರ್ಣಯದ ಮೇಲೆ ಮಾ.21ರಿಂದ ಚರ್ಚೆ ಆರಂಭವಾಗಲಿದ್ದು, ಮಾ.28ರಂದು ನಿರ್ಣಯವನ್ನು ಮತಕ್ಕೆ ಹಾಕುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

272 ಸದಸ್ಯ ಬಲದಲ್ಲಿ ಬಹುಮತಕ್ಕೆ 172 ಸಂಸದರು ಬೇಕು. ಆದರೆ ಈಗಾಗಲೇ 23 ಸಂಸದರು ಬಂಡಾಯವೆದ್ದಿದ್ದಾರೆ ಹಾಗಾಗಿ ಸರ್ಕಾರದ ಸದಸ್ಯ ಬಲ 155ಕ್ಕೆ ಕುಸಿಯಲಿದೆ ಎನ್ನಲಾಗಿದೆ. ಒಂದು ವೇಳೆ ಅವಿಶ್ವಾಸ ನಿರ್ಣಯದ ವೇಳೆ ಇದು ನಿಜವೇ ಆದರೆ ಇಮ್ರಾನ್‌ ಅವರ ಸರ್ಕಾರ ಪತನವಾಗಲಿದೆ.

ಇಮ್ರಾನ್‌ ಖಾನ್‌ ಟೀಕೆ: ಒಲಿಂಪಿಕ್ಸ್‌ ಚಿನ್ನ ವಿಜೇತ ಹಾಕಿ ಆಟಗಾರನಿಗೆ ನಿಷೇಧ
ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ರನ್ನು ಟೀಕಿಸಿದ್ದಕ್ಕಾಗಿ, 1984 ಒಲಿಂಪಿಕ್ಸ್‌ ಚಿನ್ನ ವಿಜೇತ ಪಾಕ್‌ ಹಾಕಿ ತಂಡದ ಸದಸ್ಯ ರಶೀದ್‌ ಉಲ್‌ ಹಸನ್‌ ಎಂಬವರಿಗೆ 10 ವರ್ಷಗಳ ನಿಷೇಧ ಹೇರಲಾಗಿದೆ ಎಂದು ವರದಿಯಾಗಿದೆ. 62 ವರ್ಷದ ರಶೀದ್‌, ಪ್ರಧಾನಿ ಇಮ್ರಾನ್‌ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಹಾಕಿ ಫೆಡರೇಶನ್‌ ಗುರುವಾರ ರಶೀದ್‌ರನ್ನು 10 ವರ್ಷ ನಿಷೇಧಕ್ಕೊಳಪಡಿಸಿದೆ. ಆದರೆ ಫೆಡರೇಶನ್‌ನಲ್ಲಿ ಯಾವುದೇ ಹುದ್ದೆ ಹೊಂದಿಲ್ಲದ ರಶೀದ್‌ ಅವರು ನಿಷೇಧ ಆದೇಶಕ್ಕೆ ಆಶ್ವರ್ಯ ವ್ಯಕ್ತಪಡಿಸಿದ್ದಾರೆ.