ಇಸ್ಲಾಮಾಬಾದ್‌/ನವದæಹಲಿ(ಆ.05): 370ನೇ ವಿಧಿ ರದ್ದುಪಡಿಸಿದ ಭಾರತ ಸರ್ಕಾರದ ನಿರ್ಧಾರಕ್ಕೆ 1ವರ್ಷ ತುಂಬುವ ಮುನ್ನಾ ದಿನ ಭಾರತವನ್ನು ಕೆಣಕುವ ಯತ್ನವೊಂದನ್ನು ಪಾಕಿಸ್ತಾನ ಮಾಡಿದೆ. ಭಾರತದ ಜಮ್ಮು ಮತ್ತು ಕಾಶ್ಮೀರ ಹಾಗು ರಾಜಸ್ಥಾನದ ಕೆಲ ಭಾಗಗಳು ತನಗೆ ಸೇರಿದ್ದು ಎಂದು ಬಿಂಬಿಸುವ ರಾಜಕೀಯ ನಕ್ಷೆಯೊಂದನ್ನು ಪಾಕಿಸ್ತಾನ ಸರ್ಕಾರ ಮಂಗಳವಾರ ಅನಾವರಣಗೊಳಿಸಿದೆ.

ಪಿಎಂ ಮೋದಿಗೆ ರಾಖಿ ಉಡುಗೊರೆ ಕಳುಹಿಸಿದ ಪಾಕಿಸ್ತಾನದ ಸಹೋದರಿ!

ಈ ನಕ್ಷೆಯಲ್ಲಿ ಪಾಕ್‌ ವಶದಲ್ಲಿರುವ ಕಾಶ್ಮೀರ ಕಣಿವೆ ಮತ್ತು ಭಾರತದ ಇಡೀ ಕಾಶ್ಮೀರ ಕಣಿವೆ ಪ್ರದೇಶ ಎಂದು ಪಾಕ್‌ ಬಿಂಬಿಸಿದೆ. ಜೊತೆಗೆ ಗಡಿ ನಿಯಂತ್ರಣ ರೇಖೆಯನ್ನು ಕಾರಕೋಮ್‌ ಪಾಸ್‌ವರೆಗೂ ವಿಸ್ತರಿಸಿದೆ. ಈ ಮೂಲಕ ಸಿಯಾಚಿನ್‌ ತನ್ನದು ತಂದು ವಾದಿಸುವ ಯತ್ನ ಮಾಡಿದೆ. ಕಾಶ್ಮೀರವನ್ನು ವಿವಾದಿತ ಪ್ರದೇಶ ಎಂದು ಬಣ್ಣಿಸಲಾಗಿದೆ.

ಅಲ್ಲದೆ ಇಸ್ಲಾಮಾಬಾದ್‌ನ ಪ್ರಮುಖ ರಸ್ತೆಯೊಂದರ ಹೆಸರನ್ನು ಕಾಶ್ಮೀರ ಹೆದ್ದಾರಿ ಎಂಬುದರ ಬದಲಾಗಿ ಶ್ರೀನಗರ ಹೆದ್ದಾರಿ ಎಂದು ಬದಲಿಸುವ ನಿರ್ಧಾರಕ್ಕೂ ಪಾಕ್‌ನ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ರಾಮ ಮಂದಿರ ಶಂಕುಸ್ಥಾಪನೆ ದಿನ ದಾಳಿಗೆ ತಾಲಿಬಾನ್‌ ಸಂಚು?

ಆದರೆ ಪಾಕಿಸ್ತಾನದ ಈ ಕೃತ್ಯವು ಪ್ರಚೋದನಾತ್ಮಕವಾದದ್ದು ಎಂದು ಭಾರತ ಸರ್ಕಾರ ತೀವ್ರ ಕಿಡಿಕಾರಿದೆ. ಅಲ್ಲದೆ, ಕಾನೂನು ಸಿಂಧುತ್ವವಾಗಲೀ ಅಥವಾ ಅಂತಾರಾಷ್ಟ್ರೀಯ ವಿಶ್ವಾಸವೂ ಇಲ್ಲದ ಈ ನಕ್ಷೆಯು ಹಾಸ್ಯಾಸ್ಪದವಷ್ಟೇ ಎಂದು ಪಾಕಿಸ್ತಾನಕ್ಕೆ ಭಾರತ ತಿರುಗೇಟು ನೀಡಿದೆ.