Asianet Suvarna News Asianet Suvarna News

ಬಹುಮತವಿಲ್ಲದೆ ಚುನಾವಣೆಯಲ್ಲಿ ವಿಜಯ ಘೋಷಿಸಿದ ನವಾಜ್‌ ಷರೀಫ್‌!

ಪಾಕಿಸ್ತಾನ ಚುನಾವಣೆ 2024: 156 ರಾಷ್ಟ್ರೀಯ ಅಸೆಂಬ್ಲಿ ಸ್ಥಾನಗಳಿಗೆ ಫಲಿತಾಂಶಗಳನ್ನು ಪ್ರಕಟಿಸಲಾಗಿದೆ.

Pakistan polls Nawaz Sharif declares victory in without majority san
Author
First Published Feb 9, 2024, 10:08 PM IST

ನವದೆಹಲಿ (ಫೆ.9): ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು ರಾಷ್ಟ್ರೀಯ ಚುನಾವಣೆಯಲ್ಲಿ ತಾವು ಗೆಲುವು  ಸಾಧಿಸಿದ್ದಾಗಿ ತಿಳಿಸಿದ್ದಲ್ಲದೆ, ತಮ್ಮ ಪಕ್ಷ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಫಲಿತಾಂಶಗಳಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಹೇಳಿದ್ದಾರೆ. ಪ್ರಸ್ತುತ ಬಿಕ್ಕಟ್ಟಿನಿಂದ ಹೊರಬರಲು ಪಾಕಿಸ್ತಾನವು ಸಕ್ರಿಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ, ಇದಕ್ಕಾಗಿ ಎಲ್ಲಾ ಸಂಸ್ಥೆಗಳು ಒಟ್ಟಾಗಿ ಸಕಾರಾತ್ಮಕ ಪಾತ್ರವನ್ನು ವಹಿಸಬೇಕು ಎಂದು ಪಿಎಂಎಲ್-ಎನ್ ಮುಖ್ಯಸ್ಥರೂ ಆಗಿರುವ ನವಾಜ್‌ ಷರೀಫ್‌ ಹೇಳಿದ್ದಾರೆ. ಆದರೆ, ನವಾಜ್‌ ಷರೀಫ್‌ ಎಲ್ಲೂ ತಮ್ಮ ಪಕ್ಷವು ಎಷ್ಟು ಸ್ಥಾನಗಳನ್ನು ಗೆದ್ದಿದೆ ಎಂಬುದನ್ನು ಬಹಿರಂಗಪಡಿಸಿಲ್ಲ. ಇನ್ನೂ 265 ಸ್ಥಾನಗಳಿಗೆ ಮತ ಎಣಿಕೆ ನಡೆಯುತ್ತಿದೆ. ಸಮ್ಮಿಶ್ರ ಸರ್ಕಾರ ರಚನೆ ಕುರಿತು ಮಾತನಾಡಲು ತಮ್ಮ ಪ್ರತಿನಿಧಿಗಳು ಇತರ ರಾಜಕೀಯ ಪಕ್ಷಗಳನ್ನು ಭೇಟಿ ಮಾಡಲಿದ್ದಾರೆ ಎಂದು ನವಾಜ್ ಷರೀಫ್ ಹೇಳಿದ್ದಾರೆ. "ಇತರರ ಬೆಂಬಲವಿಲ್ಲದೆ ಸರ್ಕಾರ ರಚಿಸಲು ನಮಗೆ ಸಾಕಷ್ಟು ಬಹುಮತವಿಲ್ಲ ಮತ್ತು ಒಕ್ಕೂಟಕ್ಕೆ ಸೇರಲು ನಾವು ಮಿತ್ರಪಕ್ಷಗಳನ್ನು ಆಹ್ವಾನಿಸುತ್ತೇವೆ ಆದ್ದರಿಂದ ನಾವು ಪಾಕಿಸ್ತಾನವನ್ನು ಅದರ ಸಮಸ್ಯೆಗಳಿಂದ ಹೊರತರಲು ಜಂಟಿ ಪ್ರಯತ್ನಗಳನ್ನು ಮಾಡಬಹುದು" ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಒಕ್ಕೂಟವನ್ನು ರಚಿಸುವ ಕುರಿತು ಪ್ರತಿಸ್ಪರ್ಧಿ ಬಿಲಾವಲ್ ಭುಟ್ಟೋ ಜರ್ದಾರಿ ಅವರ ಗುಂಪಿನೊಂದಿಗೆ ಮಾತುಕತೆ ನಡೆಸುವುದಾಗಿ ಅವರ ಪಕ್ಷದ ಹಿರಿಯ ನಾಯಕ ಹೇಳಿದ ನಂತರ ನವಾಜ್‌ ಷರೀಫ್‌ ಈ ಮಾತು ಹೇಳಿದ್ದಾರೆ.  ನವಾಜ್ ಷರೀಫ್ ಅವರ ಆಪ್ತ ಸಹಾಯಕ ಇಶಾಕ್ ದಾರ್ ಅವರು ಸ್ಥಳೀಯ ಟಿವಿ ಚಾನೆಲ್ ಸಮಾ ಟಿವಿಯಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಬಗ್ಗೆ ಮಾತನಾಡಿದ್ದಾರೆ. ಪಿಎಂಎಲ್-ಎನ್ ಸರ್ಕಾರ ರಚಿಸುವ ಸ್ಥಿತಿಯಲ್ಲಿದ್ದು, 265 ಸ್ಥಾನಗಳಲ್ಲಿ 90 ಸ್ಥಾನಗಳನ್ನು ಗೆಲ್ಲಲಿದೆ ಎಂದು ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ ಇಲ್ಲಿಯವರೆಗೆ 156 ಸೀಟ್‌ಗಳಿಗೆ ಫಲಿತಾಂಶ ಪ್ರಕಟಿಸಲಾಗಿದೆ. ದೇಶದ ಚುನಾವಣಾ ಆಯೋಗದ ಪ್ರಕಾರ, ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಇಲ್ಲಿಯವರೆಗೆ 62 ಸ್ಥಾನಗಳನ್ನು ಗೆದ್ದಿದ್ದಾರೆ ಮತ್ತು ನವಾಜ್ ಷರೀಫ್ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್ 46 ಸ್ಥಾನಗಳನ್ನು ಪಡೆದುಕೊಂಡಿದೆ. ಇನ್ನೂ 110 ಸ್ಥಾನಗಳ ಫಲಿತಾಂಶಗಳು ಬಾಕಿ ಉಳಿದಿವೆ ಮತ್ತು ಯಾವುದೇ ಪಕ್ಷಕ್ಕೆ ಬಹುಮತಕ್ಕೆ 169 ಸ್ಥಾನಗಳು ಬೇಕಾಗಿವೆ.

'ಎಸ್‌ಪಿಜಿ ಬೇಡ ಅಂದ್ರು, ಆದ್ರೂ ನವಾಜ್‌ ಷರೀಫ್‌ ಮಗಳ ಮದುವೆಗೆ ಪಾಕಿಸ್ತಾನಕ್ಕೆ ಹೋಗಿದ್ದೆ..' ಸಂಸದರಿಗೆ ತಿಳಿಸಿದ ಪ್ರಧಾನಿ ಮೋದಿ!

ಮತದಾನದ ಸಮಯದಲ್ಲಿ ಸರ್ಕಾರವು ಒಂದು ದಿನದ ಮೊಬೈಲ್ ನೆಟ್‌ವರ್ಕ್ ಸ್ಥಗಿತಗೊಳಿಸಿದ್ದರಿಂದ ಫಲಿತಾಂಶ ವಿಳಂಬವಾಗಿದೆ ಎಂದು ಪಾಕಿಸ್ತಾನದ ಚುನಾವಣಾ ಆಯೋಗ (ಇಸಿಪಿ) ಹೇಳಿದೆ. ನಿಧಾನಗತಿಯ ಪ್ರಕ್ರಿಯೆಯು ಚುನಾವಣೆಯಲ್ಲಿ ನವಾಜ್ ಷರೀಫ್ ಅವರ ಗೆಲುವನ್ನು ಖಚಿತಪಡಿಸಿಕೊಳ್ಳಲು ಮತಪತ್ರಗಳನ್ನು ತಿರುಚಲಾಗಿದೆ ಎಂದು ಇಮ್ರಾನ್ ಖಾನ್ ಅವರ ಪಕ್ಷ ಆರೋಪಿಸಿದೆ.

ಪಾಕ್ ಚುನಾವಣೆ ಫಲಿತಾಂಶ, ಮುಂಬೈ ದಾಳಿಕೋರ ಹಫೀಜ್ ಸಯೀದ್ ಪುತ್ರನಿಗೆ ಹೀನಾಯ ಸೋಲು!

 

Follow Us:
Download App:
  • android
  • ios