'ಎಸ್‌ಪಿಜಿ ಬೇಡ ಅಂದ್ರು, ಆದ್ರೂ ನವಾಜ್ ಷರೀಫ್ ಮಗಳ ಮದುವೆಗೆ ಪಾಕಿಸ್ತಾನಕ್ಕೆ ಹೋಗಿದ್ದೆ..' ಸಂಸದರಿಗೆ ತಿಳಿಸಿದ ಪ್ರಧಾನಿ ಮೋದಿ!
ಪ್ರಧಾನಿ ನರೇಂದ್ರ ಮೋದಿ ಮಧ್ಯಾಹ್ನ 2.30ಕ್ಕೆ ಸಂಸದರಿಗೆ ಕರೆ ಮಾಡಿ ಅನೌಪಚಾರಿಕ ಊಟದ ವಿಷಯ ತಿಳಿಸಿದ್ದಾರೆ. ಬನ್ನಿ ನಿಮಗೆ ಇಂದು ಶಿಕ್ಷೆ ನೀಡಬೇಕಿದೆ ಎಂದು ಪ್ರಧಾನಿ ಈ ವೇಳೆ ಹೇಳಿದ್ದಾರೆ. ಸಂಸದರೊಂದಿಗೆ ಪ್ರಧಾನಿ ಮೋದಿ ಕ್ಯಾಂಟೀನ್‌ನಲ್ಲಿ ಸಸ್ಯಾಹಾರ ಮತ್ತು ರಾಗಿ ಮುದ್ದೆ ಸೇವಿಸಿದರು.

ನವದೆಹಲಿ (ಫೆ.9): ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಎಂಟು ಮಂದಿ ಸಂಸತ್ ಸದಸ್ಯರಿಗೆ ಸಖತ್ ಅಚ್ಚರಿ ನೀಡಿದರು. ಮಧ್ಯಾಹ್ನದ ಊಟದ ಸಮಯದ ವೇಳೆ 8 ಮಂದಿ ಸಂಸತ್ ಸದಸ್ಯರಿಗೆ ಕರೆ ಮಾಡಿದ ಪ್ರಧಾನಿ ಮೋದಿ, ಎಲ್ಲಾ ಪಕ್ಷಗಳಿಂದ ಇದ್ದ ಸಂಸದರೊಂದಿಗೆ ಉಭಯಕುಶಲೋಪರಿ ಮಾತನಾಡಿದರು. ಬಿಜೆಪಿ ಸಂಸದೆ ಹೀನಾ ಗವಿತ್, ಎಸ್.ಫಂಗ್ನಾನ್ ಕೊನ್ಯಾಕ್, ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್, ಎಲ್ ಮುರುಗನ್, ಟಿಡಿಪಿ ಸಂಸದ ರಾಮಮೋಹನ್ ನಾಯ್ಡು, ಬಿಎಸ್‌ಪಿ ಸಂಸದ ರಿತೇಶ್ ಪಾಂಡೆ ಮತ್ತು ಬಿಜೆಡಿ ಸಂಸದ ಸಸ್ಮಿತ್ ಪಾತ್ರ ಅವರು ಪ್ರಧಾನಿ ಮೋದಿಯವರೊಂದಿಗೆ ಕ್ಯಾಂಟಿನ್‌ನಲ್ಲಿ ಭೋಜನ ಸೇವಿಸಿದರು. ಮೂಲಗಳ ಪ್ರಕಾರ ಮಧ್ಯಾಹ್ನ 2.30ರ ವೇಳೆಗೆ ಕರೆ ಮಾಡಿದ ಪ್ರಧಾನಿ ಮೋದಿ ಅವರೆಲ್ಲರೊಂದಿಗೆ ಭೋಜನ ಮಾಡುವುದಾಗಿ ತಿಳಿಸಿದ್ದರು. 'ನಡೆಯಿರಿ ನಿಮಗೆಲ್ಲಾ ಒಂದು ನಾನು ಶಿಕ್ಷೆ ನೀಡುತ್ತೇನೆ' ಎಂದು ಮೋದಿ ಕರೆಯಲ್ಲಿ ಹೇಳಿದ್ದರು ಎನ್ನಲಾಗಿದೆ. ಇದೇ ವೇಳೆ ಸಂಸತ್ ಭವನದ ಲಿಫ್ಟ್‌ನ ಡೋರ್ ಓಪನ್ ಆದಾಗ ಅವರಿಗೆ ಅಚ್ಚರಿ ಕಾದಿತ್ತು. ಪ್ರಧಾನಿ ಮೋದಿ ಅವರ ಎದುರುಗಡೆ ನಿಂತಿದ್ದರು. ಇದೇ ವೇಳೆ ಅವರೊಂದಿಗೆ ಮಾತುಕತೆಯ ವೇಳೆ ತಮ್ಮ ನೆಚ್ಚಿನ ಆಹಾರ ಕಿಚಡಿ ಎಂದು ಹೇಳಿದರು. ನಾನು ಯಾವಾಗಲೂ ಪಿಎಂ ಮೋಡ್‌ನಲ್ಲಿಯೇ ಇರೋದಿಲ್ಲ. ನನಗೆ ಕೆಲವೊಮ್ಮೆ ಉತ್ತಮ ಆಹಾರ ಕೂಡ ಬೇಕಾಗುತ್ತದೆ ಎಂದರು.
ಇನ್ನೂ ಸಂಸದರಿಗೂ ಕೂಡ ಪ್ರಧಾನಿ ಮೋದಿ ಅವರೊಂದಿಗೆ ಕುಳಿತು ಹರಟೆ ಹೊಡೆಯುವ ಅಪರೂಪದ ಅವಕಾಶ ಸಿಕ್ಕಿತ್ತು ಈ ವೇಳೆ ಅವರು, ಬೆನ್ನುಬೆನ್ನಿಗೆ ನಿಗದಿ ಮಾಡುವ ವೇಳಾಪಟ್ಟಿಗಳು, ವಿದೇಶ ಪ್ರಯಾಣ ಹಾಗೂ ಗುಜರಾತ್‌ನ ಬಗ್ಗೆ ಅವರು ಪ್ರಶ್ನೆಗಳನ್ನು ಕೇಳಿದ್ದಾರೆ.
ಮೂಲಕಗಳ ಪ್ರಕಾರ ಸಂಸದರೊಬ್ಬರು ನವಾಜ್ ಷರೀಫ್ ಅವರ ಮಗಳ ಮದುವೆಗೆ ಯೋಜಿತವಲ್ಲದ ಭೇಟಿಯ ಬಗ್ಗೆ ಪ್ರಧಾನಿಗೆ ಪ್ರಶ್ನೆ ಮಾಡಿದರು. ಈ ಬಗ್ಗೆ ಮಾತನಾಡಿದ ಮೋದಿ, ಅಂದು ನಾನು 2 ಗಂಟೆಯವರೆಗೆ ಸಂಸತ್ತಿನಲ್ಲಿದ್ದೆ. ಬಳಿಕ ಅಫ್ಳಾನಿಸ್ತಾನಕ್ಕೆ ತೆರಳಿದ್ದೆ. ಮರಳಿ ಬರುವ ವೇಳೆ ಪಾಕಿಸ್ತಾನಕ್ಕೆ ಹೋಗಲು ನಿರ್ಧಾರ ಮಾಡಲಾಗಿತ್ತು. ಆದರೆ, ಇದಕ್ಕೆ ಅನುಮತಿ ನೀಡಲು ಎಸ್‌ಪಿಜಿ ಮಾತ್ರ ಸಂಪೂರ್ಣವಾಗಿ ನಿರಾಕರಿಸಿದ್ದರು. ಆದರೆ, ಎಸ್‌ಪಿಜಿಯ ನಿರಾಕರಣೆಯ ನಡುವೆಯೂ, ನವಾಜ್ ಷರೀಫ್ ಅವರಿಗೆ ಕರೆ ಮಾಡಿ, ನೀವೇ ಕರೆಯಲು ಬರಬೇಕು ಎಂದು ಹೇಳಿದ್ದೆ. ಅದಾದ ಬಳಿಕವೇ ಪಾಕಿಸ್ತಾನದಲ್ಲಿ ವಿಮಾನ ಇಳಿಯಲು ತೀರ್ಮಾನವಾಗಿತ್ತು ಎಂದು ಮೋದಿ ಹೇಳಿದ್ದಾರೆ.\
ಹನಿಮೂನ್ ಫೋಟೋ ಹಂಚಿಕೊಂಡ ಸನಾ ಜಾವೇದ್, 'ಸಾನಿಯಾ ಮಿರ್ಜಾ ಜೀವನ ಹಾಳು ಮಾಡಿದ್ಯಲ್ಲ' ಎಂದ ನೆಟ್ಟಿಗರು!
ಇದೇ ವೇಳೆ ಪ್ರಯಾಣದ ಬಗ್ಗೆ ಮಾತನಾಡುತ್ತಾ ಯೋಗದ ಮಹತ್ವದ ಬಗ್ಗೆಯೂ ಮೋದಿ ಮಾತನಾಡಿದ್ದರು. ಕೆಲವೊಮ್ಮೆ ಪ್ರಯಾಣ ಎಷ್ಟಿರುತ್ತದೆ ಎಂದರೆ, ನಿದ್ರೆ ಮಾಡಿದ್ದೇನೋ ಇಲ್ಲವೋ ಎನ್ನುವುದೇ ನನಗೆ ಗೊತ್ತಿರುವುದಿಲ್ಲ ಎಂದು ಮೋದಿ ತಿಳಿಸಿದ್ದಾರೆ. ಇದೇ ವೇಳೆ ಸಂಸದ ರಿತೇಶ್ ಪಾಂಡೆ ಪ್ರಧಾನಿ ಮೋದಿ ಅವರ ಬಳಿ ಭುಜ್ ಭೂಕಂಪದ ಬಗ್ಗೆ ಪ್ರಶ್ನೆ ಮಾಡಿದರು. ಆ ವೇಳೆ ನಿಮ್ಮ ನೇತೃತ್ವದ ಗುಜರಾತ್ ಸರ್ಕಾರ ಹೇಗೆ ಪರಿಸ್ಥಿತಿ ನಿಭಾಯಿಸಿತು ಎನ್ನುವುದನ್ನು ಪ್ರಶ್ನೆ ಮಾಡಿದರು.
ಆರ್‌ಬಿಐ ಕ್ರಮದ ಬೆನ್ನಲ್ಲಿಯೇ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ನಿರ್ದೇಶಕ ಮಂಡಳಿಯ ಸದಸ್ಯ ರಾಜೀನಾಮೆ!