Asianet Suvarna News Asianet Suvarna News

ಗಿಲಾನಿ ನಿಧನಕ್ಕೆ ಪಾಕ್‌ನಲ್ಲಿ ಶೋಕ: ತನ್ನದೇ ಮಾಜಿ ರಾಷ್ಟ್ರಪತಿ ಸಾವಿಗಿರಲಿಲ್ಲ ಈ ದುಃಖ!

* ಭಾರತ ವಿರೋಧಿ ಹೇಳಿಕೆಗಳಿಂದಲೇ ವಿವಾದಕ್ಕೀಡಾಗುತ್ತಿದ್ದ ಕಾಶ್ಮೀರ ಪ್ರತ್ಯೇಕತಾವಾದಿ ಗಿಲಾನಿ ನಿಧನ

* ಗಿಲಾನಿ ನಿಧನಕ್ಕೆ ಒಂದು ದಿನ ರಾಷ್ಟ್ರೀಯ ಶೋಕಾಚರಣೆ ಘೋಷಿಸಿ ಪಾಕಿಸ್ತಾನ

* ಮಾಜಿ ರಾಷ್ಟ್ರಪತಿ ನಿಧನಕ್ಕೂ ಇರಲಿಲ್ಲ ಇಂತಹ ಗೌರವ

Pakistan observes day of mourning over Kashmiri separatist leader Geelani demise story of hypocrisy pod
Author
Bangalore, First Published Sep 2, 2021, 2:42 PM IST

ಇಸ್ಲಮಾಬಾದ್(ಸೆ.02): ಭಾರತ ವಿರೋಧಿ ಹೇಳಿಕೆಗಳಿಂದಲೇ ವಿವಾದಕ್ಕೀಡಾಗುತ್ತಿದ್ದ ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ, 92 ವರ್ಷದ ಸೈಯದ್ ಅಲಿ ಶಾ ಗಿಲಾನಿ ದೀರ್ಘ ಕಾಲದ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಹೀಗಿರುವಾಗ ಗಿಲಾನಿ ನಿಧನಕ್ಕೆ ಪಾಕಿಸ್ತಾನ ಒಂದು ದಿನ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದೆ. ಇಷ್ಟೇ ಅಲ್ಲದೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಅಲ್ಲಿನ ಸೇನೆ ವಿವಾದಾತ್ಮಕ ಟ್ವೀಟ್ ಕೂಡಾ ಮಾಡಿದೆ. ಆದರೀಗ ಈ ಎಲ್ಲಾ ಬೆಳವಣಿಗೆಗಳ ನಡುವೆ ಪಾಕಿಸ್ತಾನದ ಮಾಜಿ ರಾಷ್ಟ್ರಪತಿ ಮಮ್‌ನೂನ್ ಹುಸೈನ್ ನಿಧನದ ಸುದ್ದಿ ಭಾರೀ ಸದ್ದು ಮಾಡಿದೆ. 

ಹುರಿಯತ್ ಮುಖಂಡ, ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ ನಿಧನ!

ಹೌದು ಪಾಕಿಸ್ತಾನದ ಮಾಜಿ ರಾಷ್ಟ್ರಪತಿ ಮಮ್‌ನೂನ್ ಹುಸೈನ್ ನಿಧನದ ವೇಳೆ, ರಾಷ್ಟ್ರೀಯ ಶೋಕಾಚರಣೆ ಘೋಷಣೆ ದೂರದ ಮಾತು, ತನ್ನ ಮಂತ್ರಿಗಳಿಗೆ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಿರಲಿಲ್ಲ. ಅವರು ವಿರೋಧ ಪಕ್ಷದ ಅಧ್ಯಕ್ಷರಾಗಿದ್ದರು ಹಾಗೂ ಉದಾರವಾದಿ ನಾಯಕ ಎಂಬವುವುದೇ ಇದಕ್ಕೆ ಕಾರಣವಾಗಿತ್ತು. ಅವರು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಬೆಂಬಲಿಗರಾಗಿದ್ದರು. ಇದು ಪಾಕಿಸ್ತಾನಕ್ಕೆ ಸಹಿಸಲಾಗುತ್ತಿರಲಿಲ್ಲ. ಈ ಸಂಬಂಧ ಮುಹಮ್ಮದ್ ಮಜೀದ್ ಶಾಫಿ, ಪಾಕಿಸ್ತಾನದ ಪ್ರಮುಖ ಪತ್ರಿಕೆ ಡಾನ್ ವೆಬ್‌ಸೈಟ್‌ನಲ್ಲಿ ಲೇಖನ ಬರೆದಿದ್ದು, ಇದು ಮಾಜಿ ರಾಷ್ಟ್ರಪತಿ ಮಮನೂನ್ ಹುಸೇನ್ ಸಾವಿನ ಕೆಲವು ದಿನಗಳ ನಂತರ ಜುಲೈ 20 ರಂದು ಪ್ರಕಟವಾಗಿತ್ತು.

ಐದು ವರ್ಷ ಪಾಕಿಸ್ತಾನದ ರಾಷ್ಟ್ರಪತಿಯಾಗಿದ್ದರು

ಒಂದೆಡೆ, ಗಿಲಾನಿಯ ಸಾವಿಗೆ ಪಾಕಿಸ್ತಾನ ಶೋಕ ವ್ಯಕ್ತಪಡಿಸುತ್ತಿದ್ದರೆ, ಮತ್ತೊಂದೆಡೆ, ತನ್ನ ಮಾಜಿ ರಾಷ್ಟ್ರಪತಿಗೆ ಕನಿಷ್ಠ ಗೌರವ ಸಲ್ಲಿಸಿರಲಿಲ್ಲ. ಹೌದು ಜುಲೈ 14, 2021 ರಂದು ನಿಧನರಾದ ಮಮ್‌ನೂನ್ ಹುಸೇನ್ 2013 ರಿಂದ 2018 ರವರೆಗೆ ಅಂದರೆ ಐದು ವರ್ಷಗಳ ಕಾಲ ಪಾಕಿಸ್ತಾನದ ಅಧ್ಯಕ್ಷರಾಗಿದ್ದರು. ಮಿಲಿಟರಿ ಸರ್ವಾಧಿಕಾರಿಗಳೇ ರಾಷ್ಟ್ರಪತಿ ಕುರ್ಚಿಯ ಮೇಲೆ ಕುಳಿತಿದ್ದ ಪಾಕಿಸ್ತಾನದಲ್ಲಿ, ಮಮ್ನೂನ್ ಒಬ್ಬ ಉದಾರವಾದಿ ನಾಯಕರಾಗಿ ಗುರುತಿಸಿಕೊಂಡವರಾಗಿದ್ದರು. ಅವರು ಪಾಕಿಸ್ತಾನ ಮುಸ್ಲಿಂ ಲೀಗ್ (ನವಾಜ್) ನೊಂದಿಗೆ ಸಂಬಂಧ ಹೊಂದಿದ್ದರು. 

ಹುರಿಯತ್‌ ಮತ್ತೊಂದು ಹೋಳು, ಸಂಘಟನೆಗೆ ಗಿಲಾನಿ ಗುಡ್‌ಬೈ!

ಅವರ ಸಾವಿಗೆ ಪಾಕಿಸ್ತಾನ ರಾಷ್ಟ್ರೀಯ ಶೋಕಾಚರಣೆ ಕೂಡ ಆಚರಿಸಿರಲಿಲ್ಲ. ಅವರ ಅಂತ್ಯಕ್ರಿಯೆಯಲ್ಲಿ ಈಗಿನ ಯಾವೊಬ್ಬ ಸಚಿವರೂ ಭಾಗವಹಿಸಲಿಲ್ಲ. ಏಕೆಂದರೆ ಅವರು ವಿರೋಧ ಪಕ್ಷದವರಾಗಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಅವರೊಬ್ಬ ಉದಾರವಾದಿ ನಾಯಕರಾಗಿದ್ದರು. ಅಲ್ಪಸಂಖ್ಯಾತರೊಂದಿಗೆ ಹೋಳಿ ಆಚರಿಸುತ್ತಿದ್ದರು. ಆದರೀಗ ಪಾಕಿಸ್ತಾನದ ಈ ನಡೆ ಅವರಿಗೇ ತಿರುಗು ಬಾಣವಾಗಿದೆ.  ರಾಷ್ಟ್ರಪತಿ ನಿಧನಕ್ಕೂ ಘೋಷಿಸದ ಶೋಕಾಚರಣೆಯನ್ನು ಗಿಲಾನಿಗೆ ನಿಧನಕ್ಕೆ ಘೋಷಿಸಿರುವುದು ಇಮ್ರಾನ್‌ ಖಾನ್‌ಗೆ ಭಾರೀ ಮುಜುಗರ ಉಂಟು ಮಾಡಿದೆ.

ಮಾಧ್ಯಮಗಳಲ್ಲೂ ಸುದ್ದಿ ಬಿತ್ತರವಾಗಿರಲಿಲ್ಲ

ಈ ಬಗ್ಗೆ ತಮ್ಮ ಲೇಖನದಲ್ಲಿ ಬರೆದಿರುವ ಮುಹಮ್ಮದ್ ಮಜೀದ್ ಶಾಫಿ ನಟ ದಿಲೀಪ್ ಕುಮಾರ್ ಸಾವಿನ ಸುದ್ದಿ ಬಂದ ಬಳಿಕ (7 ಜುಲೈ), ಾದೇ ವಿಚಾರ ವಾಹಿನಿಗಳಲ್ಲಿತ್ತು. ಪ್ರತಿಯೊಬ್ಬರೂ ದಿಲೀಪ್ ಕುಮಾರ್ ಎಲ್ಲಾ ಮಾಹಿತಿ ಓದಿ ಕಲೆ ಹಾಕುತ್ತಿದ್ದರು. ಎಲ್ಲಿ ನೋಡಿದರಲ್ಲಿ ಅದೇ ವಿಚಾರವಿತ್ತು. ಇದು ಸೂಕ್ತವಾಗಿತ್ತ ಕೂಡಾ, ಏಕೆಂದರೆ ದಿಲೀಪ್ ಕುಮಾರ್ ಒಂದು ರತ್ನದಂತಿದ್ದರು ಹಾಗೂ ಪಾಕಿಸ್ತಾನದೊಂದಿಗೆ ಸಂಬಂಧ ಹೊಂದಿದ್ದರು. ಆದ್ದರಿಂದ ಅಲ್ಲಿನ ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಸಾರ ಸಹಜ. ಆದರೆ ಇದಾದ ಒಂದು ವಾರದ ನಂತರ ಮಮ್ನೂನ್ ಹುಸೇನ್ ನಿಧನರಾದರು. ವಿಪರ್ಯಾಸವೆಂದರೆ ರಾಷ್ಟ್ರ ಮತ್ತು ರಾಷ್ಟ್ರೀಯ ಮಾಧ್ಯಮಗಳು ಈ ಬಗ್ಗೆ ಸುದ್ದಿಯನ್ನೇ ಕೊಡಲಿಲ್ಲ. ಮುಖಪುಟದಲ್ಲಿ ಸುದ್ದಿಯ ಬದಲು, ಒಳ ಪುಟಗಳಲ್ಲಿ ಒಂದು ಸಣ್ಣ ಸುದ್ದಿ ಕೊಡಲಾಗಿತ್ತು. ಹುಸೇನ್ 5 ವರ್ಷಗಳ ಕಾಲ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು. ಏನಿಲ್ಲವೆಂದರೂ ಪಾಕಿಸ್ತಾನ ಪರ ಮಾಡಿದ ಅವರ ಸೇವೆಗಾದರೂ ಗೌರವ ನೀಡಬೇಕಿತ್ತು ಎಂದು ಬರೆದಿದ್ದಾರೆ. 

Follow Us:
Download App:
  • android
  • ios