ಭಾರತಕ್ಕೆ ಕಾಶ್ಮೀರ ಸೇರಿಸಿದ ಇಬ್ಬರು ಪತ್ರಕರ್ತರ ಮನೆಗೆ ಕಳಿಸಿದ ಪಾಕ್!

ಭಾರತಕ್ಕೆ ಕಾಶ್ಮೀರ ಸೇರಿಸಿದ ಇಬ್ಬರು ಪತ್ರಕರ್ತರ ಮನೆಗೆ ಕಳಿಸಿದ ಪಾಕಿಸ್ತಾನ ಟೀವಿ| ಜೂ.6ರಂದು ಸುದ್ದಿಯೊಂದರ ಪ್ರಸಾರದ ವೇಳೆ ಕಾಶ್ಮೀರವು ಭಾರತದ ಭೂಭಾಗವೆಂದು ತೋರಿಸುವ ಭೂಪಟವನ್ನು ಪಿಟೀವಿ ವರದಿ

Pakistan news channel fires 2 journalists for showing Kashmir as part of India

ಇಸ್ಲಾಮಾಬಾದ್‌(ಜೂ.13): ಜಮ್ಮು ಮತ್ತು ಕಾಶ್ಮೀರ ಭಾರತಕ್ಕೆ ಸೇರಿದ ಭಾಗವೆಂದು ಇರುವ ಭೂಪಟವನ್ನು ಪ್ರಸಾರ ಮಾಡಿದಕ್ಕಾಗಿ ಇಬ್ಬರು ಪತ್ರಕರ್ತರನ್ನು ಪಾಕಿಸ್ತಾನದ ಸರ್ಕಾರಿ ಸ್ವಾಮ್ಯದ ಪಾಕಿಸ್ತಾನ ಟೀವಿ ಕೆಲಸದಿಂದ ವಜಾ ಮಾಡಿದೆ.

ಜೂ.6ರಂದು ಸುದ್ದಿಯೊಂದರ ಪ್ರಸಾರದ ವೇಳೆ ಕಾಶ್ಮೀರವು ಭಾರತದ ಭೂಭಾಗವೆಂದು ತೋರಿಸುವ ಭೂಪಟವನ್ನು ಪಿಟೀವಿ ವರದಿ ಮಾಡಿತ್ತು. ಆ ನಂತರ ಈ ಘಟನೆಯು ಸಂಸತ್ತಿನಲ್ಲಿ ಕೋಲಾಹಲಕ್ಕೂ ಕಾರಣವಾಗಿ, ಕೊನೆಗೆ ಈ ಕುರಿತಾದ ತನಿಖೆ ಕೈಗೊಂಡು ಕ್ರಮ ಕೈಗೊಳ್ಳಬೇಕು ಎಂದು ಕೋರಿ ಮಾಹಿತಿ ಮತ್ತು ಪ್ರಸಾರದ ಸ್ಥಾಯಿ ಸಮಿತಿಗೆ ವಹಿಸಲಾಗಿತ್ತು. ಅದರ ಬೆನ್ನಲ್ಲೇ ಇಬ್ಬರು ಪತ್ರಕರ್ತರನ್ನು ಹುದ್ದೆಯಿಂದ ತೆಗೆದುಹಾಕಿದೆ.

ಪಾಕ್‌ ಆಕ್ರಮಿತ ಕಾಶ್ಮೀರ ತನ್ನದು ಎಂಬ ಭಾರತದ ಅರ್ಹ ವಾದಕ್ಕೆ ತಿರುಗೇಟು ನೀಡುವ ನಿಟ್ಟಿನಲ್ಲಿ ಪಾಕಿಸ್ತಾನವು, ಭಾರತದ ಜಮ್ಮು ಮತ್ತು ಕಾಶ್ಮೀರ ತನಗೆ ಸೇರಿದ್ದೆಂದು ಹುಚ್ಚು ವಾದ ಮಂಡಿಸುತ್ತಿದೆ.

Latest Videos
Follow Us:
Download App:
  • android
  • ios